ಜನಸ್ಪಂದನ ನ್ಯೂಸ್, ಗದಗ : ಕರ್ನಾಟಕದಾದ್ಯಂತ ಇಂದು 70ನೇ ಕನ್ನಡ (Kannada) ರಾಜ್ಯೋತ್ಸವವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಜ್ಯದ ಎಲ್ಲೆಡೆ ಕೆಂಪು-ಹಳದಿ ಬಾವುಟಗಳು ಹಾರಾಡುತ್ತಿದ್ದು, ಕನ್ನಡ ನಾಡಿನ ಗೌರವ, ಸಂಸ್ಕೃತಿ, ಹಾಗೂ ಗರ್ವವನ್ನು ಜನರು ಸಂಭ್ರಮದಿಂದ ಹಂಚಿಕೊಳ್ಳುತ್ತಿದ್ದಾರೆ.
ಇದೇ ವೇಳೆ ಗದಗ ಜಿಲ್ಲೆಯಲ್ಲಿ ನಡೆದ ಕನ್ನಡ (Kannada) ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಒಂದು ವಿಚಿತ್ರ ಆದರೆ ನಗೆಮಯ ಘಟನೆಯೊಂದು ಸಂಭವಿಸಿದೆ.
School ಗೆ ಹೋಗಲ್ಲ ಎಂದ ಬಾಲಕನ ಹಠ ; ಮಂಚದ ಸಹಿತ ಶಾಲೆಗೆ ಕರೆತಂದ ಮನೆಯವರು ; ವಿಡಿಯೋ ವೈರಲ್.!
ಕ್ರೀಡಾಂಗಣದಲ್ಲಿ ಕೋತಿಯ ಅಪ್ರತೀಕ್ಷಿತ ಪ್ರವೇಶ :
ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ (Kannada) ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತಿತ್ತು. ಸಚಿವ ಎಚ್.ಕೆ. ಪಾಟೀಲ ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು ಹಾಗೂ ನೂರಾರು ಜನರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಒಂದು ಕೋತಿ ಕ್ರೀಡಾಂಗಣದೊಳಗೆ ನುಗ್ಗಿ ಎಲ್ಲರ ಗಮನ ಸೆಳೆಯಿತು.
ಕೋತಿಯ ಕಿಕ್‌ಗೆ ನೆಲಕ್ಕುರುಳಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ :
ಕಾರ್ಯಕ್ರಮದ ಭದ್ರತಾ ಕರ್ತವ್ಯದಲ್ಲಿದ್ದ ಕೆಎಸ್‌ಆರ್‌ಟಿಸಿ ಸಿಬ್ಬಂದಿಯೋರ್ವರತ್ತ ಆ ಕೋತಿ ಹಾರಿ ಬಂದು ಕಾಲಿನಿಂದ (Back Kick) ಹೊಡೆದು ಬಿಟ್ಟಿತು. ಅಚ್ಚರಿಗೊಳಗಾದ ಸಿಬ್ಬಂದಿ ನೆಲಕ್ಕೆ ಬಿದ್ದ ಹಿನ್ನಲೆಯಲ್ಲಿ ಕ್ಷಣಕಾಲ ಎಲ್ಲರೂ ಬೆಚ್ಚಿಬಿದ್ದರು. ಬಳಿಕ ಕೋತಿ ವೇಗವಾಗಿ ಓಡಿ ಮಕ್ಕಳಿದ್ದ ಗ್ಯಾಲರಿಯತ್ತ ಏರಿ ಕೂತಿತು.
Digital trend : ಮದುವೆಯಲ್ಲಿ ಶರ್ಟ್ ಮೇಲೆ ಕ್ಯುಆರ್ ಕೋಡ್ ಧರಿಸಿ ಉಡುಗೊರೆ ವಸೂಲಿ ; ವಿಡಿಯೋ ವೈರಲ್.!
ಜನರ ನಗು-ಆಶ್ಚರ್ಯ ಮಿಶ್ರ ಪ್ರತಿಕ್ರಿಯೆ :
ಘಟನೆ ಕ್ಷಣ ಮಾತ್ರದಲ್ಲಿ ನಡೆಯುತ್ತಿದ್ದರೂ, ಅದು ಎಲ್ಲರ ಮುಖದಲ್ಲಿ ನಗು ತರಿಸಿತು. ಕೆಲವರು ಮೊಬೈಲ್ ತೆಗೆದು ವಿಡಿಯೊ ಚಿತ್ರೀಕರಿಸಲು ಯತ್ನಿಸಿದರೆ, ಕೆಲವರು ಆತಂಕಗೊಂಡು ಹಿಂದೆ ಸರಿದರು. ಪೊಲೀಸರ ಹಾಗೂ ಸಿಬ್ಬಂದಿಯವರು ಕೋತಿಯನ್ನು ಕ್ರೀಡಾಂಗಣದಿಂದ ಹೊರಹಾಕಲು ಹರಸಾಹಸಪಟ್ಟರು.
ಸಂಭ್ರಮದ ನಡುವೆ ನಗೆಮಯ ಕ್ಷಣ :
ರಾಜ್ಯೋತ್ಸವದ ಗಂಭೀರ ಹಾಗೂ ಗೌರವಯುತ ವಾತಾವರಣದಲ್ಲಿ ನಡೆದ ಈ ಅಪ್ರತೀಕ್ಷಿತ ಘಟನೆ ಕ್ಷಣಕಾಲ ನಗೆಮಯ ವಾತಾವರಣ ಸೃಷ್ಟಿಸಿತು. ಕೋತಿಯಾಟದಿಂದ ಕನ್ನಡ (Kannada) ರಾಜ್ಯೋತ್ಸವದ ಸಂಭ್ರಮಕ್ಕೇ ಹೊಸ ರಂಗು ಸೇರಿದ್ದು, ಈ ವಿಡಿಯೋಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಬೆಂಗಳೂರು Rave Party ಮೇಲೆ ಪೊಲೀಸರು ದಾಳಿ ; 35 ಯುವತಿಯರು ಸೇರಿದಂತೆ 115 ಮಂದಿ ವಶಕ್ಕೆ.!
ಮಕ್ಕಳು ಕೂತಿದ್ದ ಗ್ಯಾಲರಿಯತ್ತ ಓಡಿಹೋಗಿ ಗಾಬರಿ ಮೂಡಿಸಿದೆ. ಮಂಗನಾಟಕ್ಕೆ ಕ್ರೀಡಾಂಗಣದ ಕಾರ್ಯಕ್ರಮಕ್ಕೆ ಬಂದಿದ್ದ ಜನರು ಭಯಬೀತರಾಗಿದ್ದರು. ಕಾಟ ಕೊಡುತ್ತಿದ್ದ ಕೋತಿಯನ್ನು ಓಡಿಸಲು ಸಿಬ್ಬಂದಿಗಳು ಹೈರಾಣಾದರೆ.
ವಿಡಿಯೋ :
ರೆಸ್ಟೋರೆಂಟ್‌ನಲ್ಲಿ ಅಣ್ಣ-ತಂಗಿಯ ಮೇಲೆ Police ದರ್ಪ ; ಸಿಸಿಟಿವಿ ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಪಟನಾ : ಬಿಹಾರ ರಾಜ್ಯದ ಕತಿಹಾರ್ ಜಿಲ್ಲೆಯಲ್ಲಿ ನಡೆದ ಪೊಲೀಸ್ (Police) ದರ್ಪದ ಘಟನೆತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬರ್ಸೋಯ್ ಪೊಲೀಸ್ (Police) ಠಾಣೆಯ ಇನ್‌ಚಾರ್ಜ್ ಅಧಿಕಾರಿಯೋರ್ವ ರೆಸ್ಟೋರೆಂಟ್‌ನಲ್ಲಿ ಸಹೋದರ ಮತ್ತು ಸಹೋದರಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಬಹಿರಂಗವಾದ ಹಿನ್ನಲೆಯಲ್ಲಿ ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಘಟನೆ ಅಕ್ಟೋಬರ್ 24 ರಂದು ಕತಿಹಾರ್ ಜಿಲ್ಲೆಯ ಬರ್ಸೋಯ್ ಪ್ರದೇಶದಲ್ಲಿರುವ ಬಿಆರ್–11 ರೆಸ್ಟೋರೆಂಟ್‌ನಲ್ಲಿ ನಡೆದಿದೆ.
ಘಟನೆಯ ವಿಡಿಯೋ ವೈರಲ್ ಆದ ಬಳಿಕ, ಕತಿಹಾರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (SP) ಶಿಖರ್ ಚೌಧರಿ ಅವರು ಬರ್ಸೋಯ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ರಾಮಚಂದ್ರ ಮಂಡಲ್ ಅವರನ್ನು ಅಮಾನತು ಮಾಡುವ ಆದೇಶ ಹೊರಡಿಸಿದರು.
ಪೊಲೀಸ್ (Police) ಇಲಾಖೆಯ ಪ್ರಕಾರ, SHO ರಾಮಚಂದ್ರ ಮಂಡಲ್ ಅವರು ಚುನಾವಣಾ ಪರಿಶೀಲನೆಗಾಗಿ ಸ್ಥಳೀಯ ರೆಸ್ಟೋರೆಂಟ್‌ಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅವರು ರೆಸ್ಟೋರೆಂಟ್‌ಗೆ ಇತರ ಪೊಲೀಸ್ ಸಿಬ್ಬಂದಿಗಳೊಂದಿಗೆ ಪ್ರವೇಶಿಸಿ ಅಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿಯ ಬಳಿ ತೆರಳಿ ಪ್ರಶ್ನೆ ಮಾಡಿದ್ದಾರೆ.
ಯುವಕ ತನ್ನ ಜೊತೆ ಕುಳಿತಿದ್ದವರು ತಂಗಿಯೇ ಎಂದು ಸ್ಪಷ್ಟಪಡಿಸಿದರೂ, SHO ಆ ವಿವರಣೆಯನ್ನು ನಂಬದೇ ಅತಿಯಾದ ಶಬ್ದದಲ್ಲಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಸಮಯದಲ್ಲಿ ರೆಸ್ಟೋರೆಂಟ್‌ನಲ್ಲಿ ಇದ್ದ ಗ್ರಾಹಕರು ಅಸಹಜ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಬಳಿಕ ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾನೆ ಎಂದು ಸಾಕ್ಷಿಗಳು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಸ್ಥಳೀಯ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.
ಕತಿಹಾರ್ ಪೊಲೀಸ್ (Police) ಇಲಾಖೆ ಪ್ರಕಟಿಸಿದ ಅಧಿಕೃತ ಪ್ರಕಟಣೆಯಲ್ಲಿ, “ತನಿಖೆಯ ವೇಳೆ SHO ರಾಮಚಂದ್ರ ಮಂಡಲ್ ಅವರು ಕರ್ತವ್ಯ ನಿರ್ಲಕ್ಷ್ಯ ಮತ್ತು ಅಸಭ್ಯ ನಡವಳಿಕೆಗೆ ಒಳಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ. ಇಂತಹ ವರ್ತನೆ ಪೊಲೀಸರ ಶಿಸ್ತು ಮತ್ತು ಗೌರವಕ್ಕೆ ಧಕ್ಕೆ ತರುತ್ತದೆ” ಎಂದು ತಿಳಿಸಲಾಗಿದೆ.
ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಕತಿಹಾರ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಪ್ರಧಾನ ಕಚೇರಿ) ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಬಳಿಕ ಪೂರ್ಣ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಪೊಲೀಸ್ (Police) ಇಲಾಖೆ ಎಲ್ಲ ಅಧಿಕಾರಿಗಳಿಗೆ ಕರ್ತವ್ಯ ಸಮಯದಲ್ಲಿ ಶಿಸ್ತು, ನೈತಿಕತೆ ಮತ್ತು ಸಾರ್ವಜನಿಕರೊಂದಿಗೆ ಗೌರವಯುತ ನಡವಳಿಕೆಯನ್ನು ಪಾಲಿಸುವಂತೆ ಸೂಚಿಸಿದೆ.
ಪೊಲೀಸ್ (Police) ದರ್ಪದ ವಿಡಿಯೋ :
https://twitter.com/i/status/1982712167918182539





