ಜನಸ್ಪಂದನ ನ್ಯೂಸ್, ವಿಜಯನಗರ : ವಿವಾಹಿತೆ (married-woman) ಯೋರ್ವಳು ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಗೆಳೆಯನ ಪ್ರೀತಿ-ಪ್ರೇಮ ಅಂತ ಮೋಸ ಹೋಗಿ, ಕೊನೆಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ಹೌದು, ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕನ ಮೋಹಕ್ಕೆ ಒಳಗಾದ ವಿವಾಹಿತೆ (married-woman), ಸುಂದರ ಸಂಸಾರವಿದ್ದರೂ ಪ್ರಿಯಕರನೊಂದಿಗೆ ಲವ್ ಹೆಸರಿನಲ್ಲಿ ಸುತ್ತಾಡಿದ್ದಳು. ಅಲ್ಲದೇ ಮದುವೆಯ ಭರವಸೆ ನೀಡಿದ್ದ ಯುವಕ, ವಿವಾಹಿತ ಮಹಿಳೆಯೊಂದಿಗೆ ಸಾಕಷ್ಟು ಬಾರಿ ಲೈಂಗಿಕ ಕ್ರಿಯೆ ಕೂಡ ನಡೆಸಿದ್ದಾರೆ.
ಇದನ್ನು ಓದಿ : ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ambulance ನಲ್ಲಿ ಯುವತಿಯ ಮೇಲೆ ದೌರ್ಜನ್ಯ ; ಇಬ್ಬರ ಬಂಧನ.!
ಮಹಿಳೆ (married-woman) ಗೆ ಆದಷ್ಟು ಬೇಗ ಮದುವೆಯಾಗೋಣ ಎಂದು ಹೇಳಿದ್ದ, ಯಾವಾಗ ಆತ ಮದುವೆಗೆ ನಿರಾಕರಣೆ ಮಾಡಿದನೋ ಆಗ ಬೇರೆ ದಾರಿಕಾಣದೇ ಕೊನೆಗೆ ಮಹಿಳೆ (married-woman) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೇತುವೆಯ ಮೇಲಿನಿಂದ ನದಿಗೆ ಹಾರಿದ್ದನ್ನು ದಾರಿಹೋಕರು ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಮೀನುಗಾರರು ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ, ಆದರೆ ಮಹಿಳೆ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಮಹಿಳೆಯ ಶವವನ್ನು ನದಿಯಿಂದ ತೆಗೆದಿದ್ದಾರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 27 ರ ದ್ವಾದಶ ರಾಶಿಗಳ ಫಲಾಫಲ.!
ಈ ಘಟನೆ ಹಡಗಲಿ ತಾಲ್ಲೂಕಿನ ಮದಲಗಟ್ಟಿ ಗ್ರಾಮದಲ್ಲಿ ನಡೆದಿದ್ದು, ಆತ್ಮಹತ್ಯೆಗೆ ಶರಣಾದ ವಿವಾಹಿತೆ (married-woman) ಯನ್ನು ಎಂಬ 27 ವರ್ಷದ ಮಹಿಳೆ ಎಂದು ತಿಳಿದು ಬಂದಿದೆ. ಈ ವಿವಾಹಿತೆ ತುಂಗಭದ್ರಾ ನದಿಯ ಸೇತುವೆಯಿಂದ ಹಾರಿ ಜೀವ ಬಿಟ್ಟಿದ್ದಾರೆ. ಆಕೆಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಸುಗೂರು ಮೂಲದ ಬಸವರಾಜ (ವಿನಯ್) ಎಂಬಾತನೇ ತನ್ನ ಸಾವಿಗೆ ಕಾರಣವೆಂದು ಮಹಿಳೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಪ್ರಾರಂಭವಾದ ಪ್ರೀತಿ :
ಇನ್ ಸ್ಟಾಗ್ರಾಂನಲ್ಲಿ ಯುವಕನೋರ್ವ ವಿವಾಹಿತ ಮಹಿಳೆಗೆ ಮೊದಲು ಮೆಸೇಜ್ ಮಾಡಿದ್ದ. ಹೀಗೆ ಮೆಸೇಜ್ ಮೂಲಕ ಪರಿಚಯವಾಗಿದ್ದ ಯುವಕ ಮಹಿಳೆ (married-woman) ಯ ಹಿಂದೆ ಬಿದ್ದಿದ್ದ. ಪ್ರೀತಿಯ ಹೆಸರಲ್ಲಿ ಮಹಿಳೆಗೆ ಸುಂದರ ಸಂಸಾರವಿದ್ದರೂ ಕೂಡ ಅವರನ್ನು ಪ್ರೀತಿಸುತ್ತಿದ್ದೆನೆಂದು ಭರವಸೆ ನೀಡಿದ್ದ. ಕಳೆದ 2024 ರ ಆಗಸ್ಟ್‌ನಿಂದ ಪ್ರೀತಿಯ ಆರಂಭವಾಗಿತ್ತು ಎನ್ನಲಾಗಿದೆ.
ಇದನ್ನು ಓದಿ : Plane AA3023 : ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ಬೆಂಕಿ : ವಿಡಿಯೋ.!
ದೋಖಾ ಮತ್ತು ಡೆತ್ ನೋಟ್ :
ಡೆತ್ ನೋಟ್ ಪ್ರಕಾರ, ಆತನಿಗೆ ನಂಬಿಕೆ ಇಟ್ಟುಕೊಂಡ ಮಹಿಳೆ, ಆತ ಮತ್ತೆ ಬೇರೆ ಹುಡುಗಿಯರೊಂದಿಗೆ ಸಂಪರ್ಕದಲ್ಲಿದ್ದ ವಿಷಯ ತಿಳಿದು ನಿರಾಸೆಗೊಂಡಿದ್ದರು. ಮಹಿಳೆ ಆತನ ಸಾಮಾಜಿಕ ಜಾಲತಾಣಗಳ ಖಾತೆಗಳನ್ನೇ ಹ್ಯಾಕ್ ಮಾಡಿ ದೃಢಪಡಿಸಿದ್ದರು. ಮದುವೆಗೆ ಯುವಕ ನಿರಾಕರಣೆ ನೀಡಿದ ಪರಿಣಾಮವಾಗಿ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
Married-woman ಡೆತ್ ನೋಟ್‌ನಲ್ಲಿರುವ ಪ್ರಮುಖ ವಿಷಯಗಳು :
– ಇಬ್ಬರೂ ಹಲವಾರು ಬಾರಿ ಲಾಡ್ಜ್‌ಗಳಿಗೆ ಭೇಟಿ ನೀಡಿದ ವಿಚಾರವನ್ನು ಅವರು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
– ಆತ ತನ್ನ ಪತಿಯನ್ನೂ ಸಾಯಿಸಿ ಆಕೆಯ ಹೆಸರಿನಲ್ಲಿ ಆಸ್ತಿಯನ್ನು ಪಡೆಯುವ ಯೋಜನೆ ಕೂಡ ಒತ್ತಿಸಿದ್ದೆಂದು ಆರೋಪಿಸಿದ್ದಾರೆ.
– ತಾವು ಮಾಡಿದ ರೆಕಾರ್ಡಿಂಗ್‌ಗಳು, ಫೋಟೋಗಳು, ಮೆಸೇಜ್‌ಗಳು ಮೊಬೈಲ್‌ನಲ್ಲಿ ಸಂಗ್ರಹವಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ : Schoolನ 4ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ.!
ಪೊಲೀಸರ ಕ್ರಮ :
ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಸಂಬಂಧಿತ ಡೆತ್ ನೋಟ್ ಹಾಗೂ ಮೊಬೈಲ್‌ನಲ್ಲಿ ಇದ್ದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
BSNL ಹೊಸ ಪ್ರಿಪೇಯ್ಡ್ ಪ್ಲ್ಯಾನ್ : 897 ರೂ.ಗೆ 180 ದಿನಗಳ ಮಾನ್ಯತೆ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ (BSNL) ಇದೀಗ ಖಾಸಗಿ ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧಾತ್ಮಕತೆಯನ್ನು ಕಾಯ್ದುಕೊಳ್ಳಲು ತಮ್ಮ ಲೋ-ಕಾಸ್ಟ್ ಯೋಜನೆಗಳನ್ನು ಮುಂದಿಟ್ಟು, ಆ ಮೂಲಕ ಸಾಮಾನ್ಯ ಚಂದಾದಾರರನ್ನು ತಮ್ಮೊಂದಿಗೆ ಉಳಿಸಿಕೊಳ್ಳಲು ಮುಂದಾಗಿದೆ.
ಇತ್ತೀಚೆಗೆ BSNL ಸಂಸ್ಥೆ ತನ್ನ 897 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದ್ದು, ಇದು ಆರ್ಥಿಕವಾಗಿ ಲಾಭದಾಯಕ ಹಾಗೂ ದೀರ್ಘಾವಧಿಯ ಮಾನ್ಯತೆ ಹೊಂದಿದೆ. BSNL ತನ್ನ ಹೊಸ ಯೋಜನೆಯನ್ನು ವಿವರಿಸಿದ್ದು, ಮಾಸಿಕ ರೀಚಾರ್ಜ್ ಯೋಜನೆಗಳನ್ನು ತಪ್ಪಿಸಿ ಬದಲಿಗೆ 897 ರೂ. ಯೋಜನೆಯಂತಹ ಯೋಜನೆಗಳನ್ನು ಬಳಸುವಂತೆ ಗ್ರಾಹಕರಿಗೆ ಮನವಿ ಮಾಡಿದೆ.
ಇದನ್ನು ಓದಿ : ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ambulance ನಲ್ಲಿ ಯುವತಿಯ ಮೇಲೆ ದೌರ್ಜನ್ಯ ; ಇಬ್ಬರ ಬಂಧನ.!
BSNL ಯೋಜನೆಯ ಪ್ರಮುಖ ಅಂಶಗಳು :
- 📞 ಅನಿಯಮಿತ ವಾಯ್ಸ್ ಕಾಲ್‌ಗಳು
- 🌐 ಒಟ್ಟು 90GB ಡೇಟಾ (ಬಲ್ಕ್ ಡೇಟಾ ರೂಪದಲ್ಲಿ)
- 📩 ದಿನಕ್ಕೆ 100 SMS
- 📆 180 ದಿನಗಳ ಮಾನ್ಯತೆ
ಈ ಯೋಜನೆಯನ್ನು ಬಳಸಿ ಗ್ರಾಹಕರು ಅರ್ಧ ವರ್ಷವರೆಗೆ ನಿರಂತರ ಸೇವೆಯನ್ನು ಹೊಂದಬಹುದು, ಮತ್ತು ಪ್ರತಿ ತಿಂಗಳು ಪುನಃ ರೀಚಾರ್ಜ್ ಮಾಡಬೇಕಾದ ತೊಂದರೆಯಿಂದ ಮುಕ್ತರಾಗಬಹುದು. ದೈನಂದಿನ ವೆಚ್ಚ ಕೇವಲ ರೂ.4.98 ಆಗಿದ್ದು, ಇದು ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆ ಪಡೆಯಲು ಇಚ್ಛಿಸುವವರಿಗೆ ಆದರ್ಶ ಆಯ್ಕೆಯಾಗಿದೆ ಎಂದು BSNL ಅಧಿಕೃತ ಟ್ವಿಟರ್ ಖಾತೆ ಹಾಗೂ Selfcare App ಮೂಲಕ ತಿಳಿಸಿದೆ.
ಇದನ್ನು ಓದಿ : heart-attack ವಾದ ಕೂಡಲೇ ತಕ್ಷಣದ ಪರಿಹಾರಕ್ಕೆ ನಾಲಿಗೆ ಮೇಲೆ ಈ ಎಲೆಯ ರಸ ಹಿಂಡಿ.!
ಇದನ್ನು ಓದಿ : RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈ ಪ್ಲ್ಯಾನ್‌ನ್ನು ಏಕೆ ಆಯ್ಕೆಮಾಡಬೇಕು?
BSNL ಇನ್ನೂ 5G ಸೇವೆಗಳನ್ನು ಪ್ರಾರಂಭಿಸದಿದ್ದರೂ ಸಹ, ಈ ತರಹದ ಯೋಜನೆಗಳ ಮೂಲಕ ತನ್ನ ಬಳಕೆದಾರರನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದೆ. ಜಿಯೋ, ಏರ್‌ಟೆಲ್ ಮುಂತಾದ ಖಾಸಗಿ ಸಂಸ್ಥೆಗಳ ಜಾಹೀರಾತು ಬಲದ ನಡುವೆ, ಬಿಎಸ್‌ಎನ್‌ಎಲ್ ತನ್ನ ಯೋಜನೆಗಳ ಹಾಸುಹೊಕ್ಕಾಗಿ ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದೆ.
Why recharge every month? BSNL ₹897 keeps you connected for straight 180 days with unlimited calls, 90GB data, and 100 SMS/day.
Stay worry-free for half a year with BSNL ₹897 Plan!
Recharge Now : https://t.co/yDeFrwKDl1#BSNL #BSNLOffer #BSNLPlan #DigitalIndia #PrepaidPlan… pic.twitter.com/HrC1RAP112
— BSNL India (@BSNLCorporate) July 25, 2025
ಸೂಚನೆ : ಈ ಯೋಜನೆ BSNL ಅಧಿಕೃತ ವೆಬ್‌ಸೈಟ್ ಅಥವಾ Selfcare App ಮೂಲಕ ಲಭ್ಯವಿದೆ. ಗ್ರಾಹಕರು ತಾವು ಬಯಸುವ ದೀರ್ಘಾವಧಿಯ ಯೋಜನೆ ಆಯ್ಕೆಮಾಡಿಕೊಳ್ಳಿ ಮತ್ತು ನಿರಂತರ ಸೇವೆಯಿಂದ ಪ್ರಯೋಜನ ಪಡೆಯಿರಿ.