Friday, May 9, 2025
HomeGeneral Newsಯುವತಿಯ Private ಅಂಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಿರಾತಕ.!
spot_img
spot_img
spot_img

ಯುವತಿಯ Private ಅಂಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಿರಾತಕ.!

ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ಮಾರತ್‌ಹಳ್ಳಿ ಪೊಲೀಸ್‌ ಠಾಣಾ (Marathihalli Police Station Bangalore) ವ್ಯಾಪ್ತಿಯಲ್ಲಿ ಯುವಕನೋರ್ವ ನಡೆದುಕೊಂಡು ಹೋಗುತ್ತಿದ್ದ ಯುವತಿ ಹಿಂಭಾಗವನ್ನು ಸ್ಪರ್ಶಿಸಿ ಓಡಿಹೋದ ಘಟನೆ ನಡೆದಿದೆ.

ಯುವತಿಯೋರ್ವಳು ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಕಿರಾತಕನೋರ್ವ ಯುವತಿಯ ಹಿಂಭಾಗವನ್ನು ಮುಟ್ಟಿ ಲೈಂಗಿಕ ದೌರ್ಜನ್ಯ (Sexual assault by touching the back) ಎಸಗಿ ಅಲ್ಲಿಂದ ಪರಾರಿಯಾದ ಘಟನೆ ನಡೆದಿದೆ.‌

ಇದನ್ನು ಓದಿ : ನೀವು Night ಊಟ ಮಾಡಿ ಪಾತ್ರೆ ತೊಳೆಯದೇ ಮಲಗುತ್ತೀರಾ.? ಈ ಸುದ್ದಿ ಓದಿ.!

ಮಾರತ್‌ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಎಕೋ ವರ್ಲ್ಡ್‌ ಟೆಕ್‌ಪಾರ್ಕ್‌ ಗೇಟ್‌ ಈ ಘಟನೆ ಸಂಭವಿಸಿದೆ.

ಯುವತಿಯು ಹೊರ ರಾಜ್ಯದವರಾಗಿದ್ದು, ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಜೋರಾಗಿ ಚೀರಾಡಿದ್ದಾರೆ. ಆಗ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!

ಘಟನೆ ನಡೆದ ಸ್ಥಳದ ಸುತ್ತಮುತ್ತ ಅಳವಡಿಸಿದ್ದ CCTV ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ನಡೆಸಲಾಗಿದ್ದು, ಆರೋಪಿಯ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಆರೋಪಿಯನ್ನು ಅರೆಸ್ಟ್ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದರು.

ಸಧ್ಯ ಯುವತಿ ದೂರು ನೀಡಿದ್ದು, FIR ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಇದನ್ನು ಓದಿ : Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್​​ಫೋನ್ ಬ್ಲಾಸ್ಟ್ ಆಗಬಹುದು.?

ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನಲ್ಲಿ ತೆರಳುತ್ತಿದ್ದ ಯುವತಿಯನ್ನು ತಬ್ಬಿಕೊಂಡು ಲೈಂಗಿಕ ದೌರ್ಜನ್ಯ (Sexual assault) ಎಸಗಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೆ ಅಂತದ್ದೆ ಪ್ರಕರಣ ಮರುಕಳಿಸಿದೆ.

ಇದನ್ನು ಓದಿ : ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕುರಿತು ಅಶ್ಲೀಲ ಪೋಸ್ಟ್ ಮಾಡಿದ ಮಹಿಳಾ Influencer.!

ಹಿಂದಿನ ಸುದ್ದಿ : Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಾಸ್ತಿ ನೀರು ಕುಡಿದರೆ ಏನಾಗುತ್ತದೆ.?

ಜನಸ್ಪಂದನ ನ್ಯೂಸ್, ಡೆಸ್ಕ್ : ನೀರು ಮಾನವನಿಗೆ ಪ್ರಕೃತಿ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಹಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಾಸ್ತಿ ನೀರು ಕುಡಿದರೆ ಏನಾಗುತ್ತದೆ ಅಂತ ಗೊತ್ತಾ.? ಮುಂದೆ ತಿಳಿಯೋಣ ಬನ್ನಿ.

ಬಹಳಷ್ಟು ಮಂದಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆರೋಗ್ಯದ ವಿಷಯಕ್ಕೆ ಬಂದರೆ ಇದು ಚಮತ್ಕಾರ ಮಾಡುತ್ತದೆ ಎಂದು ಹೇಳುತ್ತಾರೆ ತಜ್ಞರು.

ಹಾಗಾದರೆ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯ ಪ್ರಯೋಜನಗಳನ್ನು ನೀಡುತ್ತದೆಯೇ.?

ಇದನ್ನು ಓದಿ : ಗರ್ಭಿಣಿಯಾಗದ ಅತ್ತಿಗೆಯನ್ನು ನಿಂದಿಸುವುದು ಕ್ರೌರ್ಯಕ್ಕೆ ಸಮವಲ್ಲ : Highcourt.!

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು :

* ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮವಾಗಿರುತ್ತದೆ.

* ಖಾಲಿ ಹೊಟ್ಟೆಯಲ್ಲಿ, ನೈಸರ್ಗಿಕವಾಗಿ ತಲೆನೋವು ಕಡಿಮೆಯಾಗಲು ಕಾರಣವಾಗಬಹುದು.

* ದೀರ್ಘಾವಧಿಯಲ್ಲಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

* ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಸ್ವಚ್ಛ ಮತ್ತು ಹೊಳೆಯುವ ಚರ್ಮವನ್ನು ಪಡೆಯಬಹುದು.

ಇದನ್ನು ಓದಿ : ಕರ್ನಾಟಕ AYUSH ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

* ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

* ಪೋಷಕಾಂಶಗಳನ್ನು ವೇಗವಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ.

* ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ನೀರು ಕುಡಿಯುವ ಅಭ್ಯಾಸವನ್ನು ಮಾಡುವುದರಿಂದ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ಪುನಃಸ್ಥಾಪನೆ ಹಾಗೂ ಹೆಚ್ಚಿದ ಶಕ್ತಿಯ ಮಟ್ಟಗಳೊಂದಿಗೆ ಪ್ರಯೋಜನಕಾರಿ ಎಂದು ಸಾಬೀತು ಪಡಿಸಬಹುದು.

* ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು ನೋಡಿ.!

* ಸಾಕಷ್ಟು ನೀರು ಕುಡಿಯುವುದರಿಂದ ಬಾಯಿಯ ಅಥವಾ ಹಲ್ಲಿನ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

* ಸುಧಾರಿತ ಕರುಳಿನ ಚಲನೆ ಮತ್ತು ಉಬ್ಬುವುದು ಕಡಿಮೆಯಾಗುತ್ತದೆ.

* ದೇಹದಿಂದ ತ್ಯಾಜ್ಯವನ್ನು ತೊಡೆದು‌ ಹಾಕಲು ಸಹ ಉಪಯುಕ್ತವಾಗಿದೆ.

* ಕೆಟ್ಟ ಕ್ಯಾಲೊರಿಗಳನ್ನು ವೇಗವಾಗಿ ಸುಡುವಲ್ಲಿ ಸಹಾಯ ಮಾಡುತ್ತದೆ.

ಇದನ್ನು ಓದಿ : Belagavi : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ.!

* ನಿದ್ದೆ ಅಥವಾ ಆಲಸ್ಯ ತೊಂದರೆಗಳಿದ್ದರೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನೀವು ತಕ್ಷಣವೇ ಸಕ್ರಿಯರಾಗಬಹುದು.

* ಇದು ಕೆಂಪು ರಕ್ತ ಕಣಗಳನ್ನು ವೇಗವಾಗಿ ಬೆಳೆಯಲು ಉತ್ತೇಜಿಸುತ್ತದೆ.

* ಇದು ಹೆಚ್ಚು ಆಮ್ಲಜನಕ ಮತ್ತು ಶಕ್ತಿಯನ್ನು ನೀಡುತ್ತದೆ.

* ಮೂತ್ರ ಪಿಂಡದ ಕಲ್ಲುಗಳನ್ನು ಹೊರ ಹಾಕುವುದು

* ಕೂದಲಿನ ಆರೋಗ್ಯವನ್ನು ಸುಧಾರಿಸುವುದು.

ಇದನ್ನು ಓದಿ : Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್​​ಫೋನ್ ಬ್ಲಾಸ್ಟ್ ಆಗಬಹುದು.?

ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವುದರಿಂದ ನಾವು ಇಷ್ಟೊಂದು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಆದರೆ ಆರಾಮವಾಗಿರ್ತಿವಿ ಎಂದು ಜಾಸ್ತಿ ನೀರು ಕುಡಿಯಬಾರದು.

ಅತಿಯಾಗಿ ನೀರು ಕುಡಿಯುವುದರಿಂದ ದೇಹದ ಮೇಲೆ ಕೆಲವು ಋಣಾತ್ಮಕ ಪರಿಣಾಮಗಳು ಉಂಟಾಗಬಹುದು.

* ಮೂತ್ರಪಿಂಡಗಳು ದೇಹದಿಂದ ಹೆಚ್ಚುವರಿ ನೀರನ್ನು ಫಿಲ್ಟರ್ ಮಾಡಬೇಕಾಗುತ್ತದೆ. ಆದರೆ ಏಕಾಏಕಿ ಹೆಚ್ಚು ನೀರು ಕುಡಿದರೆ ಮೂತ್ರಪಿಂಡಗಳಿಗೆ ಒತ್ತಡ ಹೆಚ್ಚಾಗಿ, ದೀರ್ಘಕಾಲದಲ್ಲಿ ಹಾನಿಯಾಗಬಹುದು.

ಇದನ್ನು ಓದಿ : Special news : ಪ್ರೀತಿಸಿದವರಿಗೆ ಮೋಸ ಮಾಡ್ತಾರಂತೆ ಈ 5 ರಾಶಿಯವರು.!

* ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಹೆಚ್ಚು ಕುಡಿಯುವುದರಿಂದ ರಕ್ತದಲ್ಲಿ ಸೋಡಿಯಂ ಮಟ್ಟ ಕಡಿಮೆಯಾಗಿ, ಹೈಪೊನಾಟ್ರೇಮಿಯಾ ಎಂಬ ಸ್ಥಿತಿ ಉಂಟಾಗಲು ಕಾರಣವಾಗಬಹುದು. ಇದರಿಂದ ವಾಕರಿಕೆ, ಆಯಾಸ, ತಲೆನೋವು ಮತ್ತು ಗಂಭೀರ ಸಂದರ್ಭಗಳಲ್ಲಿ ಮೂರ್ಛೆಯಂತಹ ಲಕ್ಷಣಗಳು ಕಾಣಿಸಬಹುದು.

* ಖಾಲಿ ಹೊಟ್ಟೆಯಲ್ಲಿ ಒಮ್ಮೆಲೆ ಜಾಸ್ತಿ ನೀರು ಕುಡಿದರೆ ಹೊಟ್ಟೆ ಉಬ್ಬಿದಂತಾಗಬಹುದು. ಇದರಿಂದ ಅಸ್ವಸ್ಥತೆ ಉಂಟಾಗುವ ಸಾಧ್ಯತೆ ಇದೆ.

* ಅತಿಯಾದ ನೀರು ಜೀರ್ಣರಸಗಳನ್ನು ದುರ್ಬಲಗೊಳಿಸುತ್ತದೆ. ಇದರಿಂದ ಜೀರ್ಣಕ್ರಿಯೆಯ ಸಾಮರ್ಥ್ಯ ಕಡಿಮೆಯಾಗಿ, ಆಮ್ಲೀಯತೆ ಅಥವಾ ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.

ಈ ರೀತಿ ಪಾಲಿಸುವುದು ಒಳ್ಳೆಯದು :
ಬೆಳಗ್ಗೆ 1-2 ಗ್ಲಾಸ್ (250-500 ಮಿಲಿ) ನೀರು ಕುಡಿಯುವುದು ಉತ್ತಮ.

ಇದನ್ನು ಓದಿ : ಮದ್ಯದ ನಿಶೆ, ಕೈಯಲ್ಲಿ ರೈಫಲ್ : ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪನ ವಿಡಿಯೋ ವೈರಲ್.!

ದಿನವಿಡೀ ಸಣ್ಣ ಸಣ್ಣ ಪ್ರಮಾಣದಲ್ಲಿ ನೀರು ಕುಡಿಯುವುದು ಒಳ್ಳೆಯದು.

ದೇಹದ ತೂಕ, ಚಟುವಟಿಕೆ ಮಟ್ಟ ಮತ್ತು ಹವಾಮಾನಕ್ಕೆ ತಕ್ಕಂತೆ 2.5-3.5 ಲೀಟರ್ ನೀರನ್ನು ದಿನವಿಡೀ ಸೇವಿಸಬಹುದು.

ನೀರಿನೊಂದಿಗೆ ನಿಂಬೆ, ಜೇನುತುಪ್ಪ ಅಥವಾ ಉಪ್ಪು ಸೇರಿಸಿದರೆ ಎಲೆಕ್ಟ್ರೋಲೈಟ್ ಸಮತೋಲನ ಕಾಯ್ದುಕೊಳ್ಳಲು ಸಹಾಯವಾಗುವುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments