ಜನಸ್ಪಂದನ ನ್ಯೂಸ್, ಡೆಸ್ಕ್ : ಓರ್ವ ಖ್ಯಾತ ನಟಿಯ (mahirakhan) ಖಾಸಗಿ ಅಂಗಕ್ಕೆ ಭದ್ರತಾ ಸಿಬ್ಬಂದಿಯೋರ್ವ ಕೈ ಹಾಕಿದ ಘಟನೆ ನಡೆದಿದೆ. ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸೆಲೆಬ್ರಿಟಿಗಳ ಜೀವನವೇ ಹೀಗೆ, ಈ ಸಿಲೆಬ್ರಿಟಿಗಳು ಹಾಯಾಗಿ ಸಾರ್ವಜನಿಕವಾಗಿ ಓಡಾಡುವುದು ತುಂಬಾ ಕಷ್ಟಸಾದ್ಯ. ಏಕೆಂದರೆ, ಇವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸೋದು ಸರ್ವೇ ಸಾಮಾನ್ಯ.
ಇದನ್ನು ಓದಿ : Sexual harassment : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ; ಡ್ಯಾನ್ಸ್ ಮಾಸ್ಟರ್ ಅರೆಸ್ಟ್.!
ಆದರೆ ಕೆಲ ಸಮಯ ಈ ಕಾಮನ್ ಪರಸನ್ (Common Person) ಕಾಮನ್ ಆಗಿ ಇರದೇ ಒಮ್ಮೋಮ್ಮೆ ಅತೀರೇಕದ ವರ್ತನೆ ತೋರುವುದು ಆಗಾಗ ಕೇಳಿ ಬರುತ್ತಿದೆ. ಇದು ಅಭಿಮಾನ ಅನ್ನೋದುಕ್ಕಿಂತ ಹುಚ್ಚಾಟ ಅಂದರೆ ತಪ್ಪಲ್ಲ.
ಇಂತಹದೇ ಘಟನೆಯೊಂದು ಲಂಡನ್‌ನ ಇಂಡೋ-ಪಾಕ್ ಸೂಪರ್ ಮಾರ್ಕೆಟ್‌ನಲ್ಲಿ ನಡೆದಿರುವ ಬಗ್ಗೆ ತಿಳಿದು ಬಂದಿದ್ದು, ಅದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ : Fire : ಯುವತಿಯ ಮನೆ ಎದುರೇ ಬೆಂಕಿ ಹಚ್ಚಿಕೊಂಡ ಯುವಕ ; ಮುಂದೆನಾಯ್ತು.? ವಿಡಿಯೋ ನೋಡಿ.
ಸಿಲೆಬ್ರಿಟಿಗಳು ಇಂತಹ ಕಿರಿಕಿರಿಯಿಂದ ಪಾರಾಗಲು ಕೆಲವರು ಬಾಡಿಗಾರ್ಡ್‌ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ.
ಆದರೆ ಸಿಲೆಬ್ರಿಟಿಗಳನ್ನು ರಕ್ಷಿಸಬೇಕಾದ ಈ ಬಾಡಿಗಾರ್ಡ್ ಕಿರುಕುಳ ನೀಡಿದರೆ.? ಸದ್ಯ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಇದಕ್ಕೆ ಲಂಡನ್‌ನಲ್ಲಿ ನಡೆದ ಮಹಿರಾ ಖಾನ್ ಅವರ ಪ್ರಕರಣವೇ ಸದ್ಯಕ್ಕೆ ಉತ್ತಮ ಉದಾಹರಣೆ.
ಇದನ್ನು ಓದಿ : Yadagiri : ಫೋನ್ ಪೇ ಮೂಲಕ ಲಂಚ ; ಲೋಕಾಯುಕ್ತ ಬಲೆಗೆ ಅಧಿಕಾರಿ.!
ಮಹಿರಾ ಖಾನ್/Mahirakhan :

ಹೌದು, ಖ್ಯಾತ ನಾಯಕಿ, ಪಾಕಿಸ್ತಾನದ ಚೆಲುವೆ ಹಾಗು ಬಾಲಿವುಡ್ ನಟಿ ಮಹಿರಾ ಖಾನ್ ಇಂತಹ ಒಂದು ಘಟನೆಗೆ ಒಳಗಾಗಿದ್ದಾರೆ. ನಟಿ ಮಹಿರಾ ಖಾನ್, ಸದ್ಯ ಲವ್ ಗುರು ಎಂಬ ಚಿತ್ರವನ್ನು ಮಾಡಿದ್ದಾರೆ. ಈ ಚಿತ್ರದ ಪ್ರಚಾರಾರ್ಥವಾಗಿ ಲಂಡನ್‌ಗೆ ತೆರಳಿದ್ದರು. ಆದರೆ ಅಲ್ಲಿ ಮರೆಯಲಾರದ ಘಟನೆಯೊಂದು ಮಹಿರಾ ಖಾನ್ ಅನುಭವಿಸಿದ್ದಾರೆ.
ಮಹಿರಾ ಖಾನ್ ತಮ್ಮ ‘ಲವ್ ಗುರು’ ಚಿತ್ರದ ಪ್ರಚಾರಕ್ಕೆ ಲಂಡನ್‌ನ ಇಂಡೋ-ಪಾಕ್ ಸೂಪರ್ ಮಾರ್ಕೆಟ್‌ನಲ್ಲಿ ಚಿತ್ರದ ನಾಯಕ ಹುಮಾಯೂನ್ ಸಹೀದ್ ಜೊತೆ ಹೋಗಿದ್ದರು. ‘ಲವ್ ಗುರು’ ಚಿತ್ರದ ಪ್ರಚಾರ ಮಾಡಲು ಮಹಿರಾ ಬರುತ್ತಿರುವ ವಿಚಾರವನ್ನು ತಿಳಿದು ಅದಾಗಲೇ ಅಲ್ಲಿ ಸಾಕಷ್ಟು ಜನ ಸೇರಿದ್ದ ಹಿನ್ನಲೆಯಲ್ಲಿ ನೂಕು ನುಗ್ಗಲಿನ ವಾತಾವರಣ ಇತ್ತು.
ಇದನ್ನು ಓದಿ : Belagavi : ನನ್ನ ಸಾವಿಗೆ ಹೆಂಡತಿಯೇ ಕಾರಣ ; ಡೆತ್ ನೋಟ್ ಬರೆದಿಟ್ಟು ಪತಿ ಸಾವು.!
ಸೂಪರ್ ಮಾರ್ಕೆಟ್‌ನತ್ತ ಹೋಗಲು ಮಹಿರಾ ಮುನ್ನಡೆಯುತ್ತಿದಂತೆಯೇ ಅನೇಕರು ಮಹಿರಾ ಖಾನ್ ಅವರನ್ನು ಸುತ್ತುವರೆದಿದ್ದಾರೆ. ಅಷ್ಟೆ ಅಲ್ಲ, ಅಭಿಮಾನಿ ಸೋಗಿನಲ್ಲಿದ್ದ ಕೆಲವರು ನಟಿಯ ಮೈ ಮುಟ್ಟುವ ಪ್ರಯತ್ನ ಮಾಡಿದ್ದಾರೆ.
ಆಗ ಭದ್ರತಾ ಸಿಬ್ಬಂದಿ ಇದನ್ನೇ ಬಂಡವಾಳವಾಗಿಸಿಕೊಂಡ ಮಹಿರಾ ಮೈಗೆ ಮೈ ತಾಗಿಸಿ ಮಹಿರಾ ಅವರನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಅಲ್ಲದೇ ನಟಿ ಮಹಿರಾ ಅವರ ಮೈ ಮತ್ತು ಖಾಸಗಿ ಭಾಗಗಳನ್ನು ಮುಟ್ಟಿ ವಿಕೃತಿ ಮೆರೆದಿದ್ದಾನೆ.
ಇದನ್ನು ಓದಿ : Dharawad : ಲಾರಿಗೆ ಗುದ್ದಿದ ಕಾರು ; ಸ್ಥಳದಲ್ಲಿಯೇ 3 ಸಾವು.!
ಭದ್ರತಾ ಸಿಬ್ಬಂದಿಯ ಈ ವರ್ತನೆ ಕಂಡು ಬೆಚ್ಚಿ ಬಿದ್ದ ಮಹಿರಾ ಖಾನ್, ಕೂಡಲೇ ಹುಮಾಯೂನ್ ಸಹೀದ್ ಆ ಬಾಡಿಗಾರ್ಡ್‌ಗೆ ಮಹಿರಾ ಅವರನ್ನು ಬಿಡುವಂತೆ ಹೇಳಿದ್ದಾರೆ. ಇದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಭದ್ರತಾ ಸಿಬ್ಬಂದಿ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಚಿತ್ರಪ್ರೇಮಿಗಳು ಘಟನೆಯನ್ನು ಖಂಡಿಸುತ್ತಿದ್ದಾರೆ.
ವೈರಲ್ ವಿಡಿಯೋ ನೋಡಿ :
https://twitter.com/i/status/1927847438125256901
ನನ್ನ ಸಾವಿಗೆ ಹೆಂಡತಿಯೇ ಕಾರಣ ; ಡೆತ್ ನೋಟ್ ಬರೆದಿಟ್ಟು ಪತಿ ಸಾವು.!
ಜನಸ್ಪಂದನ ನ್ಯೂಸ್, ಬೆಳಗಾವಿ : Belagaviಯಲ್ಲಿ ನನ್ನ ಸಾವಿಗೆ ಹೆಂಡತಿಯೇ ಕಾರಣ ; ಡೆತ್ ನೋಟ್ ಬರೆದಿಟ್ಟು ಪತಿ ಸಾವು ಕಂಡ ಘಟನೆ ನಡೆದಿದೆ.
ಬೆಳಗಾವಿಯ ನಗರದ ಅನಗೋಳದ (Anagol, Belagavi city) ದುರ್ಗಾ ಕಾಲೋನಿಯಲ್ಲಿ ಪತಿಯೋರ್ವ ಹೆಂಡತಿ ಕಾಟಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ಸುನೀಲ್ ಮೂಲಿಮನಿ (33) ಎಂಬ ಯುವಕ ಸಾವಿಗೀಡಾಗಿದ್ದು, ತನ್ನದೇ ಕಂಪ್ಯೂಟರ್ ಶಾಪ್ನಲ್ಲಿ ವೈಯರ್ದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ (Committed suicide by hanging himself) ಎನ್ನಲಾಗಿದೆ.
ಇದನ್ನು ಓದಿ : Fire : ಯುವತಿಯ ಮನೆ ಎದುರೇ ಬೆಂಕಿ ಹಚ್ಚಿಕೊಂಡ ಯುವಕ ; ಮುಂದೆನಾಯ್ತು.? ವಿಡಿಯೋ ನೋಡಿ.
ಆತ್ಮಹತ್ಯೆಗೂ ಮುಂಚೆ ತನ್ನ ಸಾವಿಗೆ ಪತ್ನಿಯೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.
ನಾಲ್ಕು ವರ್ಷದ ಹಿಂದೆ ಪೂಜಾ ಎಂಬುವವರನ್ನು ಸುನೀಲ್ ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಮಗು ಕೂಡ ಇದೆ.
ಇದನ್ನು ಓದಿ : Bengaluru : ಮದ್ಯದ ನಶೆಯಲ್ಲಿ ಪೊಲೀಸರ ಮೇಲೆಯೇ ಕಾರು ಹರಿಸಿದ ಆಸಾಮಿ ; ಮುಂದೇನಾಯ್ತು.?
ಸುನೀಲ್ ಡೆತ್ ನೋಟ್ ನಲ್ಲಿ, ನನ್ನ ಸಾವಿಗೆ ನನ್ನ ಪತ್ನಿಯೇ ಕಾರಣ ಎಂದು ಬರೆದಿಟ್ಟಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗೆ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಮೃತದೇಹ ಶಿಫ್ಟ್ ಮಾಡಲಾಗಿದೆ.
ಸದ್ಯ ಉದ್ಯಮಬಾಗ ಠಾಣೆಯಲ್ಲಿ 108 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ.







