ಜನಸ್ಪಂದನ ನ್ಯೂಸ್, ಕೊಪ್ಪಳ : ಕೊಪ್ಪಳ ನಗರದಲ್ಲಿ ಭಾನುವಾರ ರಾತ್ರಿ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಪ್ರೀತಿ ಸಂಬಂಧಿತ ವಿಚಾರವೇ ಈ ಕೊಲೆ (Murder) ಗೆ ಕಾರಣ ಎನ್ನಲಾಗುತ್ತಿದ್ದು, ಪ್ರಕರಣದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ಗವಿಸಿದ್ದಪ್ಪ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಸಾದಿಕ್ ಎನ್ನಲಾಗುತ್ತಿದೆ. ಮೂಲ ಮಾಹಿತಿಯಂತೆ, ಗವಿಸಿದ್ದಪ್ಪ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದನಂತೆ, ಈ ಹಿನ್ನಲೆಯಲ್ಲಿ ಕೊಲೆ (Murder) ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಇದನ್ನು ಓದಿ : KFD : “ಕರ್ನಾಟಕ ಅರಣ್ಯ ಇಲಾಖೆಯಲ್ಲಿ 6,000 ಹೊಸ ಹುದ್ದೆಗಳ ನೇಮಕಾತಿಗೆ ಸಿದ್ಧತೆ”.!
ಪ್ರೀತಿ ವಿಚಾರಕ್ಕೆ ಕೊಲೆ (Murder) .?
ಪ್ರೀತಿಯ ವಿಚಾರಕ್ಕೆ ಉಂಟಾದ ವೈಷಮ್ಯದಿಂದಾಗಿ ಸಾದಿಕ್, ಗವಿಸಿದ್ದಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದಾಗಿ ತಿಳಿದು ಬಂದಿದೆ. ಘಟನೆ (Murder) ಯ ನಂತರ ಆರೋಪಿ ಸಾದಿಕ್ ನೇರವಾಗಿ ನಗರ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣದ ಸಂಬಂಧ ಪೊಲೀಸರು ಸಾದಿಕ್ ಸೇರಿ ನಾಲ್ವರು ವಿರುದ್ಧ ದೂರು ದಾಖಲಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಂಜೆ 7.30ರ ಸುಮಾರಿಗೆ ಗವಿಸಿದ್ದಪ್ಪನನ್ನು ನಡುರಸ್ತೆಯಲ್ಲಿ ಹಲ್ಲೆ ಮಾಡಿ ಕೊಲೆ (Murder) ಮಾಡಿದನೆಂದು ಶಂಕಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದ್ದು, ಇನ್ನೂ ಮೂವರು ವ್ಯಕ್ತಿಗಳ ಭಾಗವಹಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಇದನ್ನು ಓದಿ : Girlfriend ಜೊತೆ ಪತಿಯನ್ನು ರೆಸ್ಟೋರೆಂಟ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ : ಮುಂದೆ ಏನಾಯಿತು.?
ಈ ಘಟನೆ ಸ್ಥಳೀಯವಾಗಿ ಉದ್ವೇಗ ಮೂಡಿಸಿರುವುದರ ಜೊತೆಗೆ, ಸಾಮಾಜಿಕ ಮಾಧ್ಯಮ ಬಳಕೆಯ ಅಪಾಯಗಳ ಕುರಿತ ಚರ್ಚೆಗೂ ಕಾರಣವಾಗಿದೆ.
Rape ಪ್ರಕರಣದ ಸಂತ್ರಸ್ತೆ ಮೇಲೆ ಗುಂಡು ಹಾರಿಸಿದ ಬೇಲ್ ಮೇಲೆ ಹೊರ ಬಂದ ಆರೋಪಿ.!

ಜನಸ್ಪಂದನ ನ್ಯೂಸ್, ಡೆಸ್ಕ್ : ಬೇಲ್ ಮೇಲೆ ಹೊರ ಬಂದ ಆರೋಪಿನೋರ್ವ ಅತ್ಯಾಚಾರ (Rape) ಪ್ರಕರಣದ ಸಂತ್ರಸ್ತೆ ಮೇಲೆ ಗುಂಡು ಹಾರಿಸಿದ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.
ಹೌದು, ದೆಹಲಿಯ ವಸಂತ್ ವಿಹಾರ್ ಪ್ರದೇಶದಲ್ಲಿ ಅತ್ಯಾಚಾರ (Rape) ಪ್ರಕರಣ ದಾಖಲಿಸಿದ್ದ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿರುವ ಘಟನೆ ನಡೆದಿದೆ. ಗುಂಡು ಹಾರಿಸಿದ ಆರೋಪದ ಮೇಲೆ ಪ್ರಕರಣದ ಮುಖ್ಯ ಆರೋಪಿ ಅಬುಜೈರ್ ಸಫಿ (30) ಮತ್ತು ಆತನ ಸಹಚರ ಅಮನ್ ಸುಖ್ಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : Luteri Dulhan : 8 ಮದುವೆ, ರೂ.50 ಲಕ್ಷ ವಂಚನೆ : 9ನೇ ಶಿಕಾರಕ್ಕೂ ಮುನ್ನ ಬಂಧನ”.!
Rape ಸಂತ್ರಸ್ತೆ ಮಹಿಳೆಯ ಸ್ಥಿತಿ ಸ್ಥಿರ :
ಸಲೂನ್‌ವೊಂದರಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯ ಎದೆಗೆ ಗುಂಡು ತಗುಲಿದ್ದು, ಅವರನ್ನು ತಕ್ಷಣವೇ ಪಿಸಿಆರ್ ವ್ಯಾನ್ ಮೂಲಕ ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು. ಪ್ರಸ್ತುತ ಅವರು ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.
ತನಿಖೆ :
ಸಂತ್ರಸ್ತೆ ಮಹಿಳೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಪ್ಪು ಬಣ್ಣದ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಆರೋಪಿಗಳು ಮಹಿಳೆ ಮೇಲೆ ಗುಂಡು ಹಾರಿಸಿದರು. ಈ ವೇಳೆ ಆಟೋ ಚಾಲಕ ರಂಜೀತ್ ಯಾದವ್ ತನ್ನ ಮಹಿಳಾ ಪ್ರಯಾಣಿಕರಿಗೆ ಗುಂಡು ತಗುಲಿದೆ ಎಂದು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.
ಇದನ್ನು ಓದಿ : KFD : “ಕರ್ನಾಟಕ ಅರಣ್ಯ ಇಲಾಖೆಯಲ್ಲಿ 6,000 ಹೊಸ ಹುದ್ದೆಗಳ ನೇಮಕಾತಿಗೆ ಸಿದ್ಧತೆ”.!
ಪೊಲೀಸರ ಪ್ರಕಾರ, ಅತ್ಯಾಚಾರ (Rape) ಪ್ರಕರಣದಲ್ಲಿ ಬಂಧಿತನಾಗಿದ್ದ ಸಫಿ, ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಸಂತ್ರಸ್ತೆ ಜೊತೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದ. ಆದರೆ, ಆಕೆ (Rape Victim) ಯಾವುದೇ ಪ್ರತಿಕ್ರಿಯೆ ನೀಡದೆ ನಿರಾಕರಿಸಿದ ಹಿನ್ನೆಲೆಯಲ್ಲಿ, ಆತ ಕೋಪಗೊಂಡು ಈ ಕೃತ್ಯವೆಸಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯ ಮಾಹಿತಿ.
ಪೊಲೀಸರ ಕ್ರಮ ಮತ್ತು ಪ್ರಕರಣ ದಾಖಲೆ :
ಮಹಿಳೆಯ ದೂರು ಆಧಾರದಲ್ಲಿ, ವಸಂತ್ ವಿಹಾರ್ ಪೊಲೀಸ್ ಠಾಣೆಯಲ್ಲಿ IPC ಸೆಕ್ಷನ್ 109(1) (ಕೊಲೆ ಯತ್ನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪರಾಧಕ್ಕೆ ಬಳಸಲಾದ ಮೋಟಾರ್‌ಸೈಕಲ್ ಹಾಗೂ ಬಂದೂಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ : Itching : ಗುಪ್ತಾಂಗದಲ್ಲಿ ತುರಿಕೆಯೇ? ಇಲ್ಲಿದೆ ಪ್ರಮುಖ ಕಾರಣಗಳು ಮತ್ತು ಮನೆಮದ್ದುಗಳು.!
ಹೆಚ್ಚಿನ ತನಿಖೆ ಮುಂದುವರಿದಿದೆ :
“ಆರೋಪಿಗಳ ಹಿನ್ನೆಲೆಯ ಪರಿಶೀಲನೆ ಮತ್ತು ಅಪರಾಧದಲ್ಲಿ ಇನ್ನಷ್ಟು ಜನರ ಭಾಗವಹಿಸುವಿಕೆ ಕುರಿತು ತನಿಖೆ ನಡೆಯುತ್ತಿದೆ,” ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.






