ಜನಸ್ಪಂದನ ನ್ಯೂಸ್, ಕೊಚ್ಚಿ (ಕೇರಳ) : 2024 ರಲ್ಲಿ ನಡೆದ ಒಂದು ಘಟನೆ ಇದೀಗ ಬೆಳಕಿಗೆ ಬಂದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ರಾಜ್ಯದಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಪ್ರತಾಪ್ ಚಂದ್ರನ್ ಎಂಬ HSO ಗರ್ಭಿಣಿ ಮಹಿಳೆಯೊಬ್ಬರಿಗೆ ಕಪಾಳಕ್ಕೆ ಹೊಡೆದ ದೃಶ್ಯಗಳು ಕಾಣಿಸುತ್ತಿವೆ.
ಸ್ಥಳೀಯ ವರದಿಗಳ ಪ್ರಕಾರ, ಆರೋಪಿತ ಪೊಲೀಸ್ ಅಧಿಕಾರಿ ಯಾವುದೇ ಆಧಾರವಿಲ್ಲದೇ ಸುಳ್ಳು ಪ್ರಕರಣ ದಾಖಲಿಸಿ ಮಹಿಳೆಯ ಪತಿಯನ್ನು ಠಾಣೆಗೆ ಕರೆತಂದಿದ್ದರು. ಆಗ ತನ್ನ ಮಗುವಿನೊಂದಿಗೆ ಪತ್ನಿ ಠಾಣೆಗೆ ಆಗಮಿಸಿದ್ದರು ಎನ್ನಲಾಗಿದೆ
ಪತಿ ಬಂಧನದ ಬಗ್ಗೆ ಪ್ರಶ್ನಿಸಲು ಬಂದ ಎನ್.ಜೆ. ಶೈಮೋಲ್ ಎಂಬ ಗರ್ಭಿಣಿ ಮಹಿಳೆಗೆ ಅಧಿಕಾರಿ ಕಪಾಳಿಗೆ ಹೊಡೆದಿದ್ದಾರೆ ಎಂದು ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ. ಸದ್ಯ ಈ ಅಧಿಕಾರಿ ಅರೂರ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ ಎಂದು ತಿಳಿಸಲಾಗಿದೆ.
ವಿಡಿಯೋ ವೈರಲ್ ಆದ ಕೆಲವೇ ಹೊತ್ತಿನಲ್ಲಿ, ಕೇರಳ ಮುಖ್ಯಮಂತ್ರಿ ಈ ಘಟನೆಗೆ ಗಂಭೀರತೆಯನ್ನು ನೀಡಿದ್ದು, ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ, ಶೈಮೋಲ್ ಅವರ ಪತಿ ಬೆನ್ ಜೋ ಅವರು ಈ ಘಟನೆ ಬಗ್ಗೆ ವಿವರಿಸಿ, ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಹಲ್ಲೆ ನಡೆಸಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮೂಲ ವರದಿಗಳ ಪ್ರಕಾರ, ಬೆನ್ ಜೋ ಅವರು ಕಳ್ಳತನದ ಆರೋಪದ ಮೇಲೆ ಇಬ್ಬರು ಯುವಕರನ್ನು ಪೊಲೀಸರು ಬಲವಂತವಾಗಿ ಬಂಧಿಸುತ್ತಿದ್ದ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ಕಾರಣ, “ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ್ದಾರೆ” ಎಂಬ ಆರೋಪದಡಿ ಮೂರನೇ ಆರೋಪಿಯಾಗಿ ಸೇರಿಸಲಾಗಿತ್ತು.
ಮೀಡಿಯಾ ವರದಿಗಳ ಪ್ರಕಾರ, ಈ ಘಟನೆ ಪೊಲೀಸ್ ದೌರ್ಜನ್ಯದ ಮತ್ತೊಂದು ಉದಾಹರಣೆಯಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸ್ಥಳೀಯರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಘಟನೆ ಕುರಿತು ಗಂಭೀರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಅಧಿಕಾರಿ ಹಲ್ಲೆ ಮಾಡಿದರೆ ಏನು ಮಾಡಬೇಕು?
ಒಬ್ಬ ಪೊಲೀಸ್ ಅಧಿಕಾರಿ ನಿಮಗೆ ಕಿರುಕುಳ ನೀಡಿದರೆ, ಶಾಂತವಾಗಿರಿ, ಎಲ್ಲವನ್ನೂ ದಾಖಲಿಸಿ (ವಿಡಿಯೋ, ಅಧಿಕಾರಿ ವಿವರಗಳು, ಸಾಕ್ಷಿಗಳು), ಮತ್ತು ಅದನ್ನು ಅವರ ಮೇಲಧಿಕಾರಿಗಳಿಗೆ, ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಥವಾ FBI/DOJ (ಯುಎಸ್‌ನಲ್ಲಿ) ಗೆ ವರದಿ ಮಾಡಿ.
ನಿಮ್ಮ ಹಕ್ಕುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಔಪಚಾರಿಕ ದೂರುಗಳನ್ನು ಸಲ್ಲಿಸಲು ವಕೀಲರಿಂದ ಕಾನೂನು ಸಹಾಯವನ್ನು ಪಡೆಯಿರಿ, ಅಗತ್ಯವಿದ್ದರೆ ರಿಟ್ ಅರ್ಜಿಯನ್ನು ಸಹ ಪರಿಗಣಿಸಿ.
ಇದನ್ನು ಓದಿ : ಕಿರುಕುಳ ನೀಡಿದ Police ನಿಗೆ ಮಧ್ಯರಸ್ತೆಯಲ್ಲೇ ಎಳೆದು ಯುವತಿಯಿಂದ ಏಟು ; ವಿಡಿಯೋ.!
Disclaimer : ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಆಧಾರದಲ್ಲಿದೆ.
ಜನಸ್ಪಂದನ ನ್ಯೂಸ್ ಯಾವುದೇ ದಾವೆ ಅಥವಾ ದೃಢೀಕರಣ ಮಾಡುವುದಿಲ್ಲ.






