ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರು ನಗರದ ಹೆಚ್ಎಸ್ ಆರ್ ಲೇಔಟ್ನಲ್ಲಿ ನಿವೃತ್ತ ಡಿಜಿ- ಐಜಿಪಿ ಓಂ ಪ್ರಕಾಶ್ ಅವರ ಕಗ್ಗೊಲೆ (murder) ನಡೆದಿರುವ ಘಟನೆ ಶುಕ್ರವಾರ (ಏ. 20) ನಡೆದಿದೆ.
ಇನ್ನು ಓಂ ಪ್ರಕಾಶ್ ಅವರನ್ನು ಸ್ವತಃ ಅವರ ಮಡದಿಯೇ ಮರ್ಡರ್ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ.
ಇದನ್ನು ಓದಿ :
ಈ ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಪತ್ನಿಯೇ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಓಂ ಪ್ರಕಾಶ್ ಅವರ ಪತ್ನಿ ಹಲವು ದಿನಗಳಿಂದ ಮಾನಸಿಕ ಖಿನ್ನತೆಗೆ (Mental depression) ಒಳಗಾಗಿದ್ದು, ಅವರಿಗೆ ನಿರಂತರವಾಗಿ ಚಿಕಿತ್ಸೆ ಕೊಡಿಸಲಾಗುತಿತ್ತು ಎಂದು ತಿಳಿದು ಬಂದಿದೆ.
ಇದನ್ನು ಓದಿ :
ಇನ್ನು ಓಂ ಪ್ರಕಾಶ್ ಅವರ ಮೃತ ದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ಸಂಬಂಧ ಅವರ ಪತ್ನಿ ಪಲ್ಲವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಓಂ ಪ್ರಕಾಶ್ ಅವರು 1981ರ ಬ್ಯಾಚಿನ IPS ಅಧಿಕಾರಿಯಾಗಿದ್ದು, ಬಳಿಕ 2015ರಲ್ಲಿ ಡಿಜಿ ಮತ್ತು ಐಜಿಪಿಯಾಗಿದ್ದರು. ಅಲ್ಲದೇ ರಾಜ್ಯದ 38ನೇ ಡಿಜಿ ಮತ್ತು ಐಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ.
ಹಿಂದಿನ ಸುದ್ದಿ : Drink : ವಿದ್ಯಾರ್ಥಿಗಳಿಗೆ ಮದ್ಯ ಕುಡಿಸಿದ ಶಿಕ್ಷಕ ; ವಿಡಿಯೋ ವೈರಲ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೆ ಮದ್ಯ (Drink) ನೀಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬೆನ್ನಲ್ಲೇ ಶಿಕ್ಷಕನನ್ನು ಸಸ್ಪೆಂಡ್ ಮಾಡಿದ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ (Katni District of Madhya Pradesh) ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಬರ್ವಾರಾ ಬ್ಲಾಕ್‌ನ ಖಿರ್ಹಾನಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ (Govt Primary School Teacher) ಲಾಲ್ ನವೀನ್ ಪ್ರತಾಪ್ ಸಿಂಗ್ ಎಂಬ ಶಿಕ್ಷಕ ಅಮಾನತು ಮಾಡಲಾಗಿದೆ.
ಇದನ್ನು ಓದಿ : Astrology : ಎಪ್ರಿಲ್ 20 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ಜಿಲ್ಲಾಧಿಕಾರಿ ದಿಲೀಪ್ ಕುಮಾರ್ ಯಾದವ್ ಅವರ ಗಮನಕ್ಕೆ ಈ ವಿಡಿಯೋ ಬಂದ ಕೂಡಲೇ, ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಶಿಕ್ಷಣ ಅಧಿಕಾರಿ ಒಪಿ ಸಿಂಗ್ (District Education Officer OP Singh) ಅವರಿಗೆ ಸೂಚಿಸಿದ್ದರು.
ಮಕ್ಕಳಿಗೆ ಮದ್ಯ ಕುಡಿಯಲು ಪ್ರೋತ್ಸಾಹ ನೀಡುವುದು ಮತ್ತು ಶಿಕ್ಷಕರ ಘನತೆಗೆ ಕುಂದು ತಂದ ಆರೋಪದ ಮೇಲೆ ಶಿಕ್ಷಕನನ್ನು ಮಧ್ಯಪ್ರದೇಶ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳ ಅಡಿಯಲ್ಲಿ ತಕ್ಷಣವೇ ಅಮಾನತುಗೊಳಿಸಲಾಗಿದೆ (suspended) ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : ಕೈದಿಗಳಿಗಾಗಿ ಮೊದಲ ಬಾರಿಗೆ “Sex Room” ಪ್ರಾರಂಭ ; ಯಾವ ದೇಶದಲ್ಲಿ ಗೊತ್ತಾ.?
ವಿಡಿಯೋದಲ್ಲಿ ಶಿಕ್ಷಕ ಚಿಕ್ಕ ಹುಡುಗರಿಗೆ ಕಪ್‌ಗಳಲ್ಲಿ ಪಾನೀಯ ನೀಡುತ್ತಿರುವುದನ್ನು ಕಾಣಬಹುದು. ಪಾನೀಯ ಕುಡಿಯುವುದಕ್ಕಿಂತ ಮುಂಚೆ ನೀರನ್ನು ಬೆರೆಸಿ ಎಂದು ಹೇಳಲಾಗಿದೆ.
ವಿಡಿಯೋ ನೋಡಿ :
मध्य प्रदेश : कटनी में शिक्षक ने बच्चों को पिलाई शराब#Katni #Teacher #latestnews pic.twitter.com/RzvU8I50oS
— Bharat Raftar TV (@BharatRaftarTV) April 19, 2025