ಜನಸ್ಪಂದನ ನ್ಯೂಸ್, ಆರೋಗ್ಯ : ದೇಹವನ್ನು ಚುರುಕಾಗಿ ಉಳಿಸಲು ಕಬ್ಬಿಣಾಂಶ (Iron content) ಅತ್ಯಂತ ಅಗತ್ಯವಾದ ಪೋಷಕಾಂಶ. ವಿಶೇಷವಾಗಿ ಮಕ್ಕಳ ದೈಹಿಕ–ಮಾನಸಿಕ ಬೆಳವಣಿಗೆಗೆ, ಮಹಿಳೆಯರ ಆರೋಗ್ಯಕ್ಕೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಅಸಮರ್ಪಕ ಆಹಾರ ಪದ್ಧತಿಯ ಕಾರಣದಿಂದ ಮಕ್ಕಳು ಹಾಗೂ ವಯಸ್ಕರಲ್ಲಿ ಕಬ್ಬಿಣಾಂಶ ಕೊರತೆ ವೇಗವಾಗಿ ಹೆಚ್ಚುತ್ತಿದೆ.
ಕಬ್ಬಿಣಾಂಶ ಕೊರತೆಯ ಪ್ರಮುಖ ಲಕ್ಷಣಗಳು :
ಕಬ್ಬಿಣ (Iron) ದ ಕೊರತೆಯನ್ನು ಸಮಯಕ್ಕೆ ಸರಿಯಾಗಿ ಗುರುತಿಸದಿದ್ದರೆ ದೇಹದಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಲ್ಲಿ ಮುಖ್ಯವಾಗಿ:
ಇದನ್ನು ಓದಿ : ಚಳಿಗಾಲದಲ್ಲಿ Geyser ಬಳಸಿ ಸ್ನಾನ ಮಾಡ್ತೀರಾ? ತಪ್ಪಾಗಿ ಬಳಸಿದರೆ ಅಪಾಯ ತಪ್ಪದು ; ಓದಿ.!
- ನಿರಂತರ ದಣಿವು ಮತ್ತು ದೌರ್ಬಲ್ಯ.
- ಚರ್ಮ ಬಿಳಿವರ್ಣವಾಗುವುದು.
- ಕೂದಲು ಹೆಚ್ಚು ಉದುರುವುದು.
- ಹಸಿವು ಕಡಿಮೆಯಾಗುವುದು.
- ಅಲ್ಪ ಕಸರತ್ತಿಗೇ ಉಸಿರಾಟದ ತೊಂದರೆ.
- ಮಕ್ಕಳಲ್ಲಿ ಎತ್ತರ–ತೂಕದ ಬೆಳವಣಿಗೆ ನಿಧಾನಗೊಳ್ಳುವುದು.
ಸಾಮಾನ್ಯವಾಗಿ ಹಿಮೋಗ್ಲೋಬಿನ್ ಮಟ್ಟ 11ಕ್ಕಿಂತ ಕಡಿಮೆಯಾದರೆ ಕಬ್ಬಿಣದ ಕೊರತೆಯ ಸಾಧ್ಯತೆ ಹೆಚ್ಚಿರುತ್ತದೆ.
ಕಬ್ಬಿಣಾಂಶ ಹೆಚ್ಚಿಸಲು ಸಹಾಯಕ ಆಹಾರಗಳು :
ಆಹಾರ ಪದ್ಧತಿಯಲ್ಲಿ ಕಬ್ಬಿಣ (Iron) ಯುಕ್ತ ಪದಾರ್ಥಗಳನ್ನು ಸೇರಿಸುವುದು ಕೊರತೆಯನ್ನು ನಿವಾರಿಸಲು ಅತ್ಯಂತ ಪರಿಣಾಮಕಾರಿ.
- ಮಾಂಸಾಹಾರ : ಮಟನ್, ಚಿಕನ್, ಮೀನು.
- ಧಾನ್ಯ–ಬೇಳೆಗಳು : ರಾಗಿ, ಬೇಳೆ, ಮೊಳಕೆಕಾಳು.
- ಹಸಿರು ಸೊಪ್ಪುಗಳು : ಪಾಲಕ್, ನುಗ್ಗೆ ಸೊಪ್ಪು, ಕರಿಬೇವು.
- ಒಣಹಣ್ಣುಗಳು : ಕಪ್ಪು ಖರ್ಜೂರ, ಒಣದ್ರಾಕ್ಷಿ.
- ಕಾಯಿ–ಬೀಜಗಳು : ಗೋಡಂಬಿ, ಪಿಸ್ತಾ, ಬಾದಾಮಿ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ.
ಇದನ್ನು ಓದಿ : ಮದ್ಯಕ್ಕಿಂತಲೂ Liver ಗೆ ಹೆಚ್ಚಾಗಿ ಹಾನಿ ಮಾಡುವ ಈ ಆಹಾರ, ಮೊದಲು ತಪ್ಪಿಸಿ!
ವಿಟಮಿನ್ C ಇರುವ ಪದಾರ್ಥಗಳು (ನಿಂಬೆಹಣ್ಣು, ಕಿತ್ತಳೆ, ಟೊಮೇಟೊ) ಕಬ್ಬಿಣ ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತವೆ.
ತಪ್ಪಿಸಬೇಕಾದ ಆಹಾರಗಳು :
ಕಬ್ಬಿಣ (Iron) ಯುಕ್ತ ಆಹಾರ ಸೇವನೆಯ ಸಂದರ್ಭದಲ್ಲಿ ತಪ್ಪಿಸಬೇಕಾದ ಕೆಲವು ಪದಾರ್ಥಗಳು:
- ಚಹಾ.
- ಕಾಫಿ.
- ಕೋಕ್ ಹೋಲಿಸಿದ ಕಫೀನ್ ಪಾನೀಯಗಳು.
ಇವುಗಳು ಕಬ್ಬಿಣ (Iron) ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತವೆ.
ಕೊನೆಯ ಮಾತು :
ಸಮತೋಲನ ಆಹಾರ, ಸರಿಯಾದ ಆಹಾರ ಅಭ್ಯಾಸಗಳು ಮತ್ತು ಅಗತ್ಯವಿದ್ದಲ್ಲಿ ವೈದ್ಯರ ಸಲಹೆಯೊಂದಿಗೆ ಪೂರಕಗಳ ಬಳಕೆ ಮೂಲಕ ಕಬ್ಬಿಣಾಂಶ ಕೊರತೆಯನ್ನು ಸುಲಭವಾಗಿ ನಿಯಂತ್ರಿಸಬಹುದು.
ಇದನ್ನು ಓದಿ : Winter ದಲ್ಲಿ ಮಲಬದ್ಧತೆಯೇ? ಹೊಟ್ಟೆ ಕ್ಲೀನ್ ಮಾಡಲು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ.
Disclaimer : ಈ ಲೇಖನವು ಸಾಮಾನ್ಯ ಮಾಹಿತಿಯಾಧಾರಿತವಾಗಿದ್ದು, ವೈದ್ಯಕೀಯ ಸಲಹೆಯಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ತಜ್ಞರನ್ನು ಸಂಪರ್ಕಿಸುವುದು ಅತ್ಯಗತ್ಯ.
“ಸರ್ವ ಆರೋಗ್ಯಕ್ಕೂ ವರದಾನ ಈ Black Seed ; ತಿಂದ್ರೆ ಯಾವ ರೋಗಗಳೂ ನಿಮ್ಮ ಹತ್ತಿರ ಸುಳಿಯಲ್ಲ”.

ಜನಸ್ಪಂದನ ನ್ಯೂಸ್, ಆರೋಗ್ಯ : ಕಪ್ಪು ಎಳ್ಳ (Black sesame) ನ್ನು ನಮ್ಮ ಆಹಾರದಲ್ಲಿ ಸೇರಿಸುವುದು ದೇಹಕ್ಕೆ ಅನೇಕ ರೀತಿಯಲ್ಲಿ ಲಾಭಕರ. ಇವುಗಳಲ್ಲಿ ಪ್ರೋಟೀನ್ ಸಮೃದ್ಧವಾಗಿರುವುದರಿಂದ ದೇಹಕ್ಕೆ ಹೊಸ ಕೋಶಗಳನ್ನು ನಿರ್ಮಿಸಲು ಸಹಾಯವಾಗುತ್ತದೆ. ಜೊತೆಗೆ ಮೆಗ್ನೀಸಿಯಮ್, ಕ್ಯಾಲ್ಸಿಯಂ, ಒಮೆಗಾ-6 ಕೊಬ್ಬಿನಾಮ್ಲಗಳು, ಕಬ್ಬಿಣ, ಫೈಬರ್ ಮತ್ತು ಅನೇಕ ಪೋಷಕಾಂಶಗಳನ್ನು ಹೊಂದಿರುವ ಶಕ್ತಿ ಆಹಾರವೆಂದು ಪರಿಗಣಿಸಲಾಗುತ್ತದೆ.
ಕಪ್ಪು ಎಳ್ಳು (Black sesame) ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನ ಉತ್ತಮ ಮೂಲವಾಗಿದ್ದು, ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯಕ. ಇದರ ನಿಯಮಿತ ಸೇವನೆ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುವುದರಿಂದ ಹೃದಯದ ಆರೋಗ್ಯ ಸುಧಾರಿಸಿ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಸ್ಟ್ರೋಕ್ ಅಪಾಯ ತಗ್ಗುತ್ತದೆ.
ಇದನ್ನು ಓದಿ : ಚಳಿಗಾಲದಲ್ಲಿ Geyser ಬಳಸಿ ಸ್ನಾನ ಮಾಡ್ತೀರಾ? ತಪ್ಪಾಗಿ ಬಳಸಿದರೆ ಅಪಾಯ ತಪ್ಪದು ; ಓದಿ.!
ಮೂಳೆಗಳಿಗೆ ಉತ್ತಮ ಬೆಂಬಲ :
ಕಪ್ಪು ಎಳ್ಳು (Black sesame), ಕ್ಯಾಲ್ಸಿಯಂ ನ ಉತ್ತಮ ಮೂಲ. ಇದನ್ನು ತಿನ್ನುವುದರಿಂದ ಮೂಳೆಗಳು ಹಾಗೂ ಹಲ್ಲುಗಳು ಬಲಗೊಳ್ಳುತ್ತವೆ. ಕಪ್ಪು ಎಳ್ಳಿನಲ್ಲಿರುವ ಪೋಷಕಾಂಶಗಳು ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡುವಲ್ಲಿ ಸಹ ಸಹಕಾರಿ.
ಕಪ್ಪು ಎಳ್ಳು (Black sesame) ಜೀರ್ಣಕ್ರಿಯೆ ಸುಧಾರಣೆ :
ನಾರಿನ ಸಮೃದ್ಧ ಮೂಲವಾಗಿರುವ ಕಪ್ಪು ಎಳ್ಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಮಲಬದ್ಧತೆ, ಅಜೀರ್ಣ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳಿಂದ ಬಳಲುವವರಿಗೆ ಇದು ಉತ್ತಮ ಮನೆಮದ್ದು.
ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ :
ಎಳ್ಳಿ (Black sesame) ನಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಋತುಮಾನ ರೋಗಗಳು ತಗುಲುವ ಸಾಧ್ಯತೆ ಕಡಿಮೆ ಮಾಡುತ್ತವೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ ಮಧುಮೇಹದ ಅಪಾಯವನ್ನು ತಗ್ಗಿಸುವಲ್ಲೂ ಸಹ ಸಹಾಯಕ.
ಇದನ್ನು ಓದಿ : ಮದ್ಯಕ್ಕಿಂತಲೂ Liver ಗೆ ಹೆಚ್ಚಾಗಿ ಹಾನಿ ಮಾಡುವ ಈ ಆಹಾರ, ಮೊದಲು ತಪ್ಪಿಸಿ!
ಗಮನಿಸಿ : ಈ ಮಾಹಿತಿಯು ಸಾಮಾನ್ಯ ಆರೋಗ್ಯ ಜ್ಞಾನ ಹಾಗೂ ಮನೆಮದ್ದುಗಳನ್ನು ಆಧರಿಸಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಕ್ರಮ ಕೈಗೊಳ್ಳುವ ಮೊದಲು ತಜ್ಞರ ಸಲಹೆ ಪಡೆಯುವುದು ಅತ್ಯಗತ್ಯ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ






