ಜನಸ್ಪಂದನ ನ್ಯೂಸ್, ಬೆಂಗಳೂರು : ನಗರದಲ್ಲಿ ನಡೆದಿರುವ ಒಂದು ಹೃದಯವಿದ್ರಾವಕ ಘಟನೆ ಇದೀಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಸುಬ್ರಹ್ಮಣ್ಯಪುರ ಸರ್ಕಲ್ ಬಳಿ ವಾಸಿಸುತ್ತಿದ್ದ 35 ವರ್ಷದ ತಾಯಿ (Mother) ನೇತ್ರಾವತಿ ಕೊ*ಲೆಯಾಗಿದ್ದಾರೆ. ಮನೆಯೊಳಗೆ ಉಂಟಾದ ವಿವಾದವೇ ಈ ದುರಂತಕ್ಕೆ ಕಾರಣವೆಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ.
ಮೃತ ನೇತ್ರಾವತಿ ತಮ್ಮ ಅಪ್ರಾಪ್ತ ಮಗಳೊಂದಿಗೆ ವಾಸಿಸುತ್ತಿದ್ದರು. ಅವರ ಪತಿ ಹಲವು ವರ್ಷಗಳಿಂದ ಬೇರೆ ಇದ್ದ ಕಾರಣ, ಮಗಳು ಮತ್ತು ತಾಯಿ (Mother) ಇಬ್ಬರೂ ಪರಸ್ಪರರ ಆರೈಕೆಯಲ್ಲಿ ಜೀವನ ಸಾಗಿಸುತ್ತಿದ್ದರು.
Fight : ತಿಲಕಕ್ಕಾಗಿ ಮಹಿಳೆಯರ ನಡುವೆ ಜಡೆ ಹಿಡಿದು ಕಿತ್ತಾಟ ; ವಿಡಿಯೋ ವೈರಲ್.!
ಆದರೆ ಇತ್ತೀಚಿನ ದಿನಗಳಲ್ಲಿ ಮಗಳ ವರ್ತನೆಗೆ ಸಂಬಂಧಿಸಿದ ಕೆಲವು ವಿಚಾರಗಳಲ್ಲಿ ತಾಯಿ (Mother) ಮತ್ತು ಮಗಳ ನಡುವೆ ಅಸಮ್ಮತಿ ಉಂಟಾಗಿತ್ತು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ನೇತ್ರಾವತಿ ದಾರಿ ತಪ್ಪುತ್ತಿದ್ದ ತಮ್ಮ ಮಗಳನ್ನು ಸರಿಯಾದ ದಾರಿಯಲ್ಲಿ ನಡೆಸಲು ಹಲವಾರು ಬಾರಿ ತಿಳಿ ಹೇಳಿದ್ದರು.
ಘಟನೆಯ ದಿನವಾದ ಅಕ್ಟೋಬರ್ 25ರ ರಾತ್ರಿ, ಮನೆಯಲ್ಲಿ ಸಣ್ಣ ವಾಗ್ವಾದ ಉಂಟಾದ ನಂತರ ನೇತ್ರಾವತಿ ಸಾವನ್ನಪ್ಪಿದ್ದರು. ಫೋನ್ ಕರೆಗೆ ತಾಯಿ (Mother) ಮತ್ತು ಪುತ್ರಿ ಪ್ರತಿಕ್ರಿಯಿಸದೆ ಇದ್ದ ಹಿನ್ನಲೆಯಲ್ಲಿ ಮೃತರ ಅಕ್ಕ ಮನೆಗೆ ಭೇಟಿ ನೀಡಲು ಬಂದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ.
Teacher : ಶಿಕ್ಷಕಿಯ ಮೇಲೆ ಅಮಾನವೀಯ ಕೃತ್ಯ : ಆರೋಪಿ ಪೊಲೀಸ್ ವಶಕ್ಕೆ.!
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿಯಿತು. ಮಾಹಿತಿ ಸಿಕ್ಕ ಕೂಡಲೇ ಬ್ರಹ್ಮಣ್ಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಪ್ರಾರಂಭಿಸಿದರು.
ನೇತ್ರಾವತಿ ಅಂತ್ಯಸಂಸ್ಕಾರಕ್ಕೂ ಪುತ್ರಿಯ ಸುಳಿಯಲಿಲ್ಲ. ಹೀಗಾಗಿ ನೇತ್ರಾವತಿ ಅಕ್ಕ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಅಷ್ಟೆ ಅಲ್ಲರೆ ತಂಗಿ ನೇತ್ರಾವತಿ ಕೊಲೆ ಹಿಂದೆ ಆಕೆಯ ಪುತ್ರಿ ಮೇಲೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.
BSNL ನಲ್ಲಿ ಖಾಲಿ ಇರುವ 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ತಾಯಿ (Mother) ಹತ್ಯೆಯ ಹಿನ್ನಲೆ :
ಕೊ*ಲೆಯಾದ ನೇತ್ರಾವತಿಯ ಅಪ್ರಾಪ್ತ ಪುತ್ರಿ, ಓರ್ವ ಯುವಕನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಪದೇ ಪದೇ ಪ್ರಿಯಕರನ್ನು ಪುತ್ರಿ ಮನೆಗೆ ಕರೆದುಕೊಂಡು ಬರುತ್ತಿದ್ದಳು. ಶನಿವಾರ (ಅ.25) ರಾತ್ರಿ ಪ್ರಿಯಕರ ಜೊತೆಗೆ ನೇತ್ರಾವತಿ ಪುತ್ರಿ ಮನೆಗೆ ಬಂದಿದ್ದಳು.
ಆದರೆ ಶನಿವಾರ ದಿನ ರಾತ್ರಿ ತಾಯಿ ಮಲಗಿದ್ದ ವೇಳೆ ಪುತ್ರಿ ತನ್ನ ಪ್ರಿಯಕರ ಜೊತೆಗೆ ಮೂವರು ಸ್ನೇಹಿತರು ಮನೆಗೆ ಕರೆ ತಂದಿದ್ದಳು. ಮಲಗಿದ್ದ ತಾಯಿ (Mother) ಗೆ ಎಚ್ಚರಗೊಂಡಾಗ ಮಗಳ ಜೊತೆ ನಾಲ್ವರು ಸ್ನೇಹಿತರು ಒಂದೇ ಕೋಣೆಯಲ್ಲಿರುವುದು ಗೊತ್ತಾಗಿದೆ.
Fight : ತಿಲಕಕ್ಕಾಗಿ ಮಹಿಳೆಯರ ನಡುವೆ ಜಡೆ ಹಿಡಿದು ಕಿತ್ತಾಟ ; ವಿಡಿಯೋ ವೈರಲ್.!
ಈ ಹಿನ್ನಲೆಯಲ್ಲಿ ಮಗಳನ್ನು ಬೈದು ಜಗಳವಾಡಿ, ತಕ್ಷಣವೇ ನಾಲ್ವರನ್ನು ಮನೆಯಿಂದ ಹೊರಗೆ ಹೋಗುವಂತೆ ಎಚ್ಚರಿಸಿದ್ದಾರೆ. ಒಂದು ವೇಳೆ ಹೋಗದಿದ್ದರೆ ಪೊಲೀಸರಿಗೆ ಕರೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ತನ್ನ ತಾಯಿ ರಾತ್ರಿ ಪಾರ್ಟಿ (Party) ಗೆ ಅಡ್ಡಿ ಮಾಡಿದಳು ಎಂದು ಪುತ್ರಿ ಕೋಪಗೊಂಡಿದ್ದಾಳೆ. ಆಗ ಪುತ್ರಿಯ ಪ್ರಿಯಕರ ಹಾಗು ಸ್ನೇಹಿತರು ಆಕ್ರೋಶಗೊಂಡಿದ್ದಾರೆ. ಪರಿಣಾಮ ಪುತ್ರಿ ಸೇರಿ ಎಲ್ಲರೂ ತಾಯಿ ನೇತ್ರಾವತಿ ಬಾಯಿಯನ್ನು ಬಲವಂತವಾಗಿ ಮುಚ್ಚಿದ್ದಾರೆ.
Rules ಉಲ್ಲಂಘನೆ ಮಾಡಿದ ವಿದ್ಯಾರ್ಥಿಗೆ ದಂಡ ವಿಧಿಸಿ, ತಾವೇ ನಿಯಮ ಮುರಿದ ಟ್ರಾಫಿಕ್ ಪೊಲೀಸ್ ; ವಿಡಿಯೋ ವೈರಲ್.!
ನಂತರ ಟವಲ್ ಮೂಲಕ ನೇತ್ರಾವತಿಯ ಕುತ್ತಿಗೆಯನ್ನು ಬಿಗಿ ಮಾಡಿ ಕೊ*ಲೆ (Mu*der) ಮಾಡಿದ್ದಾರೆ. ಬಳಿಕ ನೇತ್ರಾವತಿ ಕತ್ತಿಗೆ ಸೀರೆ ಬಿಗಿದು ಫ್ಯಾನ್‌ಗೆ ಕಟ್ಟಿ ಆತ್ಮಹ*ತ್ಯೆ ಎಂದು ಬಿಂಬಿಸಿದ್ದಾರೆ. ಇಷ್ಟೇಲ್ಲ ಬಳಿಕ ನೇತ್ರಾವತಿ ಪುತ್ರಿ ಸೇರಿದಂತೆ ನಾಲ್ವರು ಎಸ್ಕೇಪ್ ಆಗಿದ್ದಾರೆ.
ಇಲ್ಲಿ ಕೊಲೆ ಮಾಡಿದ ಎಲ್ಲರೂ ಅಪ್ರಾಪ್ತರೇ (Minors) ಅನ್ನುವುದು ಗಮನಾರ್ಹ ಸಂಗತಿ. ನೇತ್ರಾವತಿಯ ಅಪ್ರಾಪ್ತ ಮಗಳು ಮತ್ತು ಆಕೆಯ ಕೆಲವು ಸ್ನೇಹಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಇಲಾಖೆ ಎಲ್ಲಾ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಘಟನೆಯ ನಿಖರ ಕಾರಣ ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿದೆ. ತನಿಖೆಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸತ್ಯಾಂಶ ಬಹಿರಂಗಗೊಳ್ಳಲಿದೆ.
ರೆಸ್ಟೋರೆಂಟ್‌ನಲ್ಲಿ ಅಣ್ಣ-ತಂಗಿಯ ಮೇಲೆ Police ದರ್ಪ ; ಸಿಸಿಟಿವಿ ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಪಟನಾ : ಬಿಹಾರ ರಾಜ್ಯದ ಕತಿಹಾರ್ ಜಿಲ್ಲೆಯಲ್ಲಿ ನಡೆದ ಪೊಲೀಸ್ (Police) ದರ್ಪದ ಘಟನೆತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬರ್ಸೋಯ್ ಪೊಲೀಸ್ (Police) ಠಾಣೆಯ ಇನ್‌ಚಾರ್ಜ್ ಅಧಿಕಾರಿಯೋರ್ವ ರೆಸ್ಟೋರೆಂಟ್‌ನಲ್ಲಿ ಸಹೋದರ ಮತ್ತು ಸಹೋದರಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಬಹಿರಂಗವಾದ ಹಿನ್ನಲೆಯಲ್ಲಿ ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಘಟನೆ ಅಕ್ಟೋಬರ್ 24 ರಂದು ಕತಿಹಾರ್ ಜಿಲ್ಲೆಯ ಬರ್ಸೋಯ್ ಪ್ರದೇಶದಲ್ಲಿರುವ ಬಿಆರ್–11 ರೆಸ್ಟೋರೆಂಟ್‌ನಲ್ಲಿ ನಡೆದಿದೆ.
ಘಟನೆಯ ವಿಡಿಯೋ ವೈರಲ್ ಆದ ಬಳಿಕ, ಕತಿಹಾರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (SP) ಶಿಖರ್ ಚೌಧರಿ ಅವರು ಬರ್ಸೋಯ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ರಾಮಚಂದ್ರ ಮಂಡಲ್ ಅವರನ್ನು ಅಮಾನತು ಮಾಡುವ ಆದೇಶ ಹೊರಡಿಸಿದರು.
ಪೊಲೀಸ್ (Police) ಇಲಾಖೆಯ ಪ್ರಕಾರ, SHO ರಾಮಚಂದ್ರ ಮಂಡಲ್ ಅವರು ಚುನಾವಣಾ ಪರಿಶೀಲನೆಗಾಗಿ ಸ್ಥಳೀಯ ರೆಸ್ಟೋರೆಂಟ್‌ಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅವರು ರೆಸ್ಟೋರೆಂಟ್‌ಗೆ ಇತರ ಪೊಲೀಸ್ ಸಿಬ್ಬಂದಿಗಳೊಂದಿಗೆ ಪ್ರವೇಶಿಸಿ ಅಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿಯ ಬಳಿ ತೆರಳಿ ಪ್ರಶ್ನೆ ಮಾಡಿದ್ದಾರೆ.
ಯುವಕ ತನ್ನ ಜೊತೆ ಕುಳಿತಿದ್ದವರು ತಂಗಿಯೇ ಎಂದು ಸ್ಪಷ್ಟಪಡಿಸಿದರೂ, SHO ಆ ವಿವರಣೆಯನ್ನು ನಂಬದೇ ಅತಿಯಾದ ಶಬ್ದದಲ್ಲಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಸಮಯದಲ್ಲಿ ರೆಸ್ಟೋರೆಂಟ್‌ನಲ್ಲಿ ಇದ್ದ ಗ್ರಾಹಕರು ಅಸಹಜ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಬಳಿಕ ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾನೆ ಎಂದು ಸಾಕ್ಷಿಗಳು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಸ್ಥಳೀಯ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.
ಕತಿಹಾರ್ ಪೊಲೀಸ್ (Police) ಇಲಾಖೆ ಪ್ರಕಟಿಸಿದ ಅಧಿಕೃತ ಪ್ರಕಟಣೆಯಲ್ಲಿ, “ತನಿಖೆಯ ವೇಳೆ SHO ರಾಮಚಂದ್ರ ಮಂಡಲ್ ಅವರು ಕರ್ತವ್ಯ ನಿರ್ಲಕ್ಷ್ಯ ಮತ್ತು ಅಸಭ್ಯ ನಡವಳಿಕೆಗೆ ಒಳಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ. ಇಂತಹ ವರ್ತನೆ ಪೊಲೀಸರ ಶಿಸ್ತು ಮತ್ತು ಗೌರವಕ್ಕೆ ಧಕ್ಕೆ ತರುತ್ತದೆ” ಎಂದು ತಿಳಿಸಲಾಗಿದೆ.
ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಕತಿಹಾರ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಪ್ರಧಾನ ಕಚೇರಿ) ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಬಳಿಕ ಪೂರ್ಣ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಪೊಲೀಸ್ (Police) ಇಲಾಖೆ ಎಲ್ಲ ಅಧಿಕಾರಿಗಳಿಗೆ ಕರ್ತವ್ಯ ಸಮಯದಲ್ಲಿ ಶಿಸ್ತು, ನೈತಿಕತೆ ಮತ್ತು ಸಾರ್ವಜನಿಕರೊಂದಿಗೆ ಗೌರವಯುತ ನಡವಳಿಕೆಯನ್ನು ಪಾಲಿಸುವಂತೆ ಸೂಚಿಸಿದೆ.
ಪೊಲೀಸ್ (Police) ದರ್ಪದ ವಿಡಿಯೋ
https://twitter.com/i/status/1982712167918182539






