Wednesday, May 22, 2024
spot_img
spot_img
spot_img
spot_img
spot_img
spot_img

State news : ಅನೈತಿಕ ಸಂಬಂಧ ಹಿನ್ನೆಲೆ ; ಭೀಮಾ ತೀರದಲ್ಲಿ ಯುವಕನ ಬರ್ಬರ ಹತ್ಯೆ.!

spot_img

ಜನಸ್ಪಂದನ ನ್ಯೂಸ್, ಕಲಬುರಗಿ : ಕಲಬುರಗಿ ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಹತ್ಯೆಯಾದ ಯುವಕ ರಮಜಾನ್ ಮೆಹಬೂಬ್ ತಾರಾ (24) ಎಂದು ತಿಳಿದು ಬಂದಿದೆ.

ಇದನ್ನು ಓದಿ : ಲಾಡ್ಜ್’ನಲ್ಲಿ ಇಬ್ಬರೊಂದಿಗೆ ರೊಮ್ಯಾನ್ಸ್ ಮಾಡುವಾಗ ಪತಿಯ ಕೈಗೆ ಸಿಕ್ಕಿಬಿದ್ದ ವೈದ್ಯೆ ; ಮುಂದೆನಾಯ್ತು ಈ Video ನೋಡಿ.!

ಸದ್ಯ ಕೊಲೆಗೈದ (murdered) ಆರೋಪಿ ಸಂತೋಷ್, ರಾಕೇಶ್, ಆಕಾಶ್, ಪ್ರದೀಪ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಆರೋಪಿ ಸಂತೋಷನ ಅತ್ತಿಗೆಯ ಜೊತೆ ಈ ರಂಜಾನ್ ಅನೈತಿಕ ಸಂಬಂಧ ಹೊಂದಿದ್ದು, ಅದಕ್ಕಾಗಿಯೇ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಕೊಲೆಯಾದ ಯುವಕ ಅದೇ ಗ್ರಾಮದ ವಿವಾಹಿತ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ (immoral relationship) ಇಟ್ಟುಕೊಂಡಿದ್ದ. ಆಕೆ ಗಂಡ ದುಬೈನಲ್ಲಿ ಇರುವುದರಿಂದ ಈ ರಂಜಾನ್ ಜೊತೆ ಕದ್ದು ಮುಚ್ಚಿ ಇಬ್ಬರು ಸೇರುತ್ತಿದ್ದರಂತೆ. ಇದನ್ನ ನೋಡಿದ್ದ ಮಹಿಳೆ ಕುಟುಂಬಸ್ಥರು ಹತ್ತಾರು ಭಾರಿ ಕರೆದು ರಾಜಿ ಪಂಚಾಯಿತಿ ಮಾಡಿದ್ದಾರೆ. ಈತ ಮಾತ್ರ ಕ್ಯಾರೆ ಎನ್ನದೇ ತನ್ನ ಚಟ ಮುಂದುವರೆಸಿದ್ದ.

ಹೀಗಾಗಿ ಸಂಜೆ ಆತ ಬೈಕ್ ಮೇಲೆ ಹೊಲಕ್ಕೆ ಹೋಗಿ ಮರಳಿ ಬರುತ್ತಿದ್ದ ವೇಳೆ ಅಟ್ಯಾಕ್ ಮಾಡಿ, ಗ್ರಾಮದ ಹೊರವಲಯದಲ್ಲಿ ಮನಬಂದಂತೆ ಚಾಕುವಿನಿಂದ ಇರಿದು ಕೊಂದಿದ್ದಾರೆ.

ಇದನ್ನು ಓದಿ : ರೈಲು ಚಾಲಕನ ಬರುವಿಕೆಗಾಗಿ ಕಾಯುತ್ತಿರುವ ಬೀದಿ ನಾಯಿ ; ಯಾಕಂತೀರಾ ಈ Video ನೋಡಿ.!

ಯಾವಾಗ ಭೀಮಾ ತೀರದಲ್ಲಿ ನೆತ್ತರು ಹರಿದಿದೆ ಎನ್ನುವ ವಿಷಯ ತಿಳಿದ ತಕ್ಷಣವೇ ಅಲರ್ಟ್​ ಆದ ಎಸ್ಪಿ ಅಕ್ಷಯ್, ಹಾಗೂ ತಂಡ ಸ್ಥಳಕ್ಕೆ ಧಾವಿಸಿ ಪರೀಶಿಲನೆ ನಡೆಸುತ್ತಿದ್ದರೆ, ಅತ್ತ ಮತ್ತೊಂದು ತಂಡ ಹಂತಕರನ್ನ ವಶಕ್ಕೆ ಪಡೆದಿತ್ತು.

ಸಧ್ಯ‌ ಪ್ರಕರಣ ದಾಖಲಿಸಿಕೊಂಡಿರುವ ಅಫಜಲಪುರ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

 

 

spot_img
spot_img
spot_img
- Advertisment -spot_img