ಜನಸ್ಪಂದನ ನ್ಯೂಸ್, ಡೆಸ್ಕ್ : ಬೆಳಗ್ಗೆ ನಾವು ಉಪಾಹಾರ ಸೇವಿಸಿದರೆ ಹೊಟ್ಟೆಗೆ ಖುಷಿಯಾಗುತ್ತದೆ. ನಮ್ಮ ದೇಹದ ಎಲ್ಲಾ ಅಂಗಾಂಗಗಳು ಚೆನ್ನಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.
ಆದರೆ ಖಾಲಿ ಹೊಟ್ಟೆಗೆ (empty stomach) ಕೊಡುವ ಆಹಾರ ಆರೋಗ್ಯಕರವಾಗಿರಬೇಕು.
ಇನ್ನೂ ಪ್ರತಿ ದಿನ ಬೆಳಗ್ಗೆ ಬ್ರೇಕ್ ಫಾಸ್ಟ್ ಬದಲು ನೀರು ಕುಡಿದು ಸುಮ್ಮನಾಗಲು ಸಾಧ್ಯವಿಲ್ಲ. ಹೀಗಾಗಿ ಬೆಳಗಿನ ಸಮಯದಲ್ಲಿ ತಿಂಡಿ ತಿನ್ನುವುದು ಅವಶ್ಯಕ. ತಿಂಡಿ ತಿನ್ನದೇ ಬಿಟ್ಟರೆ ಏನಾಗುತ್ತದೆ, ಮಧ್ಯಾಹ್ನ ಒಂದೇ ಸರಿ ಊಟ ಮಾಡಿದರಾಯಿತು ಅಂತ ಪ್ರತಿದಿನ (everyday) ಇದೇ ಅಭ್ಯಾಸ ಮಾಡಿಕೊಂಡು ಮುಂದುವರೆದರೆ ಅನಾರೋಗ್ಯ ಕಾಡಬಹುದು.
* ಸಮತೋಲನವಾದ ಆಹಾರ ಸೇವಿಸಿದರೆ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಬಗೆಯ ಪೌಷ್ಟಿಕಾಂಶಗಳು ಸುಲಭವಾಗಿ ಸಿಗುತ್ತವೆ.
ಆದರೆ ಬೆಳಗ್ಗೆ ತಿಂಡಿ ತಿನ್ನುವುದನ್ನು ಬಿಡುವುದರಿಂದ ಇವೆಲ್ಲವೂ ನಮಗೆ ಮಿಸ್ ಆಗುತ್ತವೆ. ಇದರಿಂದ ನಮ್ಮ ಶುಗರ್ ಲೆವೆಲ್ (sugar level) ತುಂಬಾ ಕಡಿಮೆಯಾಗಿ ಬಿಡುತ್ತದೆ. ಸಂಶೋಧನೆ ಹೇಳುವಂತೆ ಶುಗರ್ ಇಲ್ಲದೇ ಇರುವವರಿಗೂ ಕೂಡ ಇದರಿಂದ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ.
* ಬೆಳಗಿನ ಸಮಯದ ಬ್ರೇಕ್ ಫಾಸ್ಟ್ ನಿರಂತರವಾಗಿ ಮಿಸ್ ಮಾಡುವವರಲ್ಲಿ ಮಾನಸಿಕವಾಗಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ.
ಇದು ನಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಕಡಿಮೆ ಮಾಡು ವುದು ಮಾತ್ರವಲ್ಲದೆ ಇಡೀ ದಿನ ಮಾನಸಿಕ ಬದಲಾವಣೆ ಗಳನ್ನು ತರುತ್ತದೆ. ಮೆದುಳಿನ ಕಾರ್ಯ ಚಟುವಟಿಕೆಯ (Brain function activity) ಮೇಲೆ ಕೂಡ ಅಡ್ಡ ಪರಿಣಾಮ ಬೀರುತ್ತದೆ.
* ಹಲವರು ತೂಕ ಹೆಚ್ಚಾಗುತ್ತದೆ ಎಂದು ಬೆಳಗ್ಗೆ ತಿಂಡಿ ತಿನ್ನುವುದೆ ಇಲ್ಲ. ಆದರೆ ನಿಮ್ಮ ದೇಹವು ಈಗಾಗಲೇ ರಾತ್ರಿಯಿಡೀ ಹಸಿವಿನಿಂದ ಬಳಲುತ್ತಿರುತ್ತದೆ. ಆದ ಕಾರಣ ಬೆಳಗ್ಗೆಯೂ ಆಹಾರ ತ್ಯಜಿಸಿದಾಗ, ದೇಹವು ಸಕ್ಕರೆ ಮತ್ತು ಕೊಬ್ಬಿನ ಆಹಾರಕ್ಕಾಗಿ ಹಂಬಲಿಸಲು ಪ್ರಾರಂಭಿಸುತ್ತದೆ.
ಜಾಸ್ತಿ ಹಸಿವು ಉಂಟಾದಾಗ, ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆಯನ್ನು ಗಮನಿಸದೆ ನೀವು ಕಂಡುಕೊಂಡದ್ದನ್ನು ತಿನ್ನುವ ಸಾಧ್ಯತೆ ಹೆಚ್ಚು. ಆದ್ದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
* ಬೆಳಗಿನ ಸಮಯ ಉಪಹಾರ ಸೇವಿಸುವುದರಿಂದ ಕೂದಲು ಕಿರುಚೀಲಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ವಿಮರ್ಶಾತ್ಮಕವಾಗಿ (Critically) ಕಡಿಮೆ ಮಟ್ಟದ ಪ್ರೋಟೀನ್ ಹೊಂದಿರುವ ಆಹಾರ ಸೇವಿಸುವುದರಿಂದ ದೇಹದಲ್ಲಿ ಕೆರಾಟಿನ್ ಮಟ್ಟಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ಕೆರಾಟಿನ್ ಒಂದು ಪ್ರಮುಖ ಅಂಶವಾಗಿದ್ದು ಅದು ಕೂದಲು ಉದುರುವಿಕೆಯನ್ನು ಪ್ರಚೋದಿಸುತ್ತದೆ. ಕೂದಲಿನ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಆದ್ದರಿಂದ, ಕೂದಲು ಉದುರುವುದನ್ನು (hair fall) ತಪ್ಪಿಸಲು ನೀವು ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಆರೋಗ್ಯಕರ ಉಪಹಾರವನ್ನು ಪ್ರತಿದಿನ ಸೇವಿಸುವುದು ಒಳ್ಳೆಯದು.
* ಬೆಳಗ್ಗಿನ ಉಪಹಾರ ಬಿಡುವುದರಿಂದ ಚಯಾಪಚಯ ಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮ ದೇಹವು ಬೆಳಿಗ್ಗೆ ಕಾರ್ಯನಿರ್ವಹಿಸಲು ಶಕ್ತಿ ಅಗತ್ಯವಿದೆ. ಹಾಗಾಗಿ ದಿನದ ಮೊದಲ ಆಹಾರ ಬಿಟ್ಟುಬಿಟ್ಟರೆ, ಅದು ಚಯಾಪಚಯ (Metabolism) ಚಟುವಟಿಕೆಯನ್ನು ತಡೆಯುತ್ತದೆ ಹಾಗೂ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.