Friday, October 4, 2024
spot_img
spot_img
spot_img
spot_img
spot_img
spot_img
spot_img

ರೈಲು ಚಾಲಕನ ಬರುವಿಕೆಗಾಗಿ ಕಾಯುತ್ತಿರುವ ಬೀದಿ ನಾಯಿ ; ಯಾಕಂತೀರಾ ಈ Video ನೋಡಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಕಾಲದಲ್ಲಿ ಸಂಬಂಧಗಳು, ಮನುಷ್ಯತ್ವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಆದರೆ ಮನುಷ್ಯನಿಗೆ ಇಲ್ಲದ ಮಾನವೀಯತೆ (Humanity), ಸ್ನೇಹ ಮನೋಭಾವವನ್ನು ನಾವು ಪ್ರಾಣಿಗಳಲ್ಲಿ ಕಾಣಬಹುದು.

ಅದರಲ್ಲೂ ಶ್ವಾನಗಳು ನಿಯತ್ತಿಗೆ ಹೆಸರಾಗಿವೆ. ಅವುಗಳಿಗೆ ಒಂದು ತುತ್ತು ಅನ್ನ ನೀಡಿದರೆ ಸಾಕು ಅದರ ಕೊನೆಯುಸಿರು ಇರುವವವರೆಗೂ ಅನ್ನ ಹಾಕಿದವರಿಗೆ ನಿಯತ್ತಿನಿಂದ (the term) ಇರುತ್ತದೆ. ಜೊತೆಗೆ ಅನ್ನ ಹಾಕಿದವರೊಂದಿಗೆ ಸ್ನೇಹಪೂರ್ವಕವಾಗಿಗೂ ಇರುತ್ತವೆ.

ಇದನ್ನು ಓದಿ : ಹೀಗೆ ಮಾಡಿದರೆ ಸಾಕು ನಿಮ್ಮ ಮುಖದ ಸುಕ್ಕು ಮಟಮಾಯವಾಗಿ ನೈಸರ್ಗಿಕ ಹೊಳಪು ಸಿಗುತ್ತದೆ.!

ಅಂತಹದ್ದೇ ಸುಂದರ ಸ್ನೇಹ ಬಾಂಧವ್ಯದ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಲೋಕೋ ಪೈಲಟ್ ಮತ್ತು ಬೀದಿ ನಾಯಿಯ ಸುಂದರ ಸ್ನೇಹವನ್ನು (friendship) ಕಂಡು ನೋಡುಗರು ಭಾವುಕರಾಗಿದ್ದಾರೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಬೀದಿ ನಾಯಿಯೊಂದು ರೈಲ್ವೆ ನಿಲ್ದಾಣದಲ್ಲಿ ತನಗೆ ಪ್ರತಿನಿತ್ಯ ಊಟ ಹಾಕುವ ಲೋಕೋ ಪೈಲಟ್ ಗಾಗಿ ಕಾದು ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ರೈಲು ಬರುತ್ತಿದ್ದಂತೆಯೇ ಆ ನಾಯಿಯ ಖುಷಿಗೆ ಪಾರವೇ ಇಲ್ಲ. ಅರೇ ನನ್ನ ಸ್ನೇಹಿತ ನನಗಾಗಿ ಊಟವನ್ನು ತಂದ ಎಂದು ಶ್ವಾನವು ರೈಲಿನ ಜೊತೆ ಜೊತೆಗೆ ಓಡಿಕೊಂಡು ಹೋಗುತ್ತದೆ. ನಂತರ ರೈಲು ನಿಲ್ಲಿಸಿ ಆ ಲೋಕೋ ಪೈಲಟ್ ಶ್ವಾನಕ್ಕೆ ತಾನು ತಂದಿರುವ ಊಟವನ್ನು (lunch) ಹಾಕ್ತಾನೆ. ಆ ಸಂದರ್ಭದಲ್ಲಿ ಶ್ವಾನ ತನ್ನ ಸ್ನೇಹಿತನನ್ನು ಕಂಡು ಖುಷಿಯಿಂದ ಕುಣಿದಾಡಿದೆ.

ಇದನ್ನು ಓದಿ : Double murder : ಪ್ರೀತಿಸುವಂತೆ ಪುತ್ರಿಯ ಹಿಂದೆ ಬಿದ್ದ ಯುವಕ ಹಾಗೂ ಆತನ ಸಹೋದರನ ಬರ್ಬರ ಹತ್ಯೆಗೈದ ತಂದೆ.!

ಸದ್ಯ ಈ ಹೃದಯಸ್ಪರ್ಶಿ ವಿಡಿಯೋವನ್ನು @1hakankapucu ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ರೈಲು ಚಾಲಕ ನೀಡುವ ಆಹಾರಕ್ಕಾಗಿ ಪ್ರತಿನಿತ್ಯ ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತಿರುವ ಶ್ವಾನ. ಸ್ನೇಹಿತನ ರೈಲು ಬರುವಾಗ ಶ್ವಾನದ ಸಂತೋಷವನ್ನು ನೋಡುವುದೇ ನಮಗೊಂದು ಭಾಗ್ಯ” ಎಂಬ ಶೀರ್ಷಿಕೆ ನೀಡಲಾಗಿದೆ.

ಮೇ 01 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಲೋಕೋ ಪೈಲಟ್ ಮತ್ತು ಬೀದಿ ನಾಯಿಯ ನಿಸ್ವಾರ್ಥ ಸ್ನೇಹವನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img