ಜನಸ್ಪಂದನ ನ್ಯೂಸ್, ಡೆಸ್ಕ್ : ಪೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಅಂಗಳದಲ್ಲಿ ಬೆಳೆದಿದ್ದ ಕಣಗಿಲೆ ಹೂವನ್ನು ಕಿತ್ತು ತಿಂದ ಪರಿಣಾಮ ಯುವತಿಯೊಬ್ಬಳು ಕೊನೆಯುಸಿರೆಳೆದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಕೇರಳದ ಹರಿಪತ್ ಮೂಲದವರಾದ ನರ್ಸ್ ಸೂರ್ಯ ಸುರೇಂದ್ರನ್ ಎಂಬ ಯುವತಿ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡಿನಲ್ಲಿ (England) ಕೆಲಸ ಸಿಕ್ಕಿದ್ದರಿಂದ ಅಕ್ಕಪಕ್ಕದವರಿಗೆ ವಿಷಯ ತಿಳಿಸಿ ವಿಮಾನ ನಿಲ್ದಾಣಕ್ಕೆ (Airport) ಹೋಗಲು ತಯಾರಿ ನಡೆಸಿದ್ದರು.
ಇದನ್ನು ಓದಿ : Double murder : ಪ್ರೀತಿಸುವಂತೆ ಪುತ್ರಿಯ ಹಿಂದೆ ಬಿದ್ದ ಯುವಕ ಹಾಗೂ ಆತನ ಸಹೋದರನ ಬರ್ಬರ ಹತ್ಯೆಗೈದ ತಂದೆ.!
ಆದರೆ ಪ್ರಯಾಣಕ್ಕೂ ಮುನ್ನ ಪೋನ್ ನಲ್ಲಿ ಮಾತನಾಡುತ್ತಾ ಗಿಡದಲ್ಲಿದ್ದ ಕಣಗಿಲೆ ಹೂವನ್ನು (Indian Oleander) ಅರಿವಿಲ್ಲದೆ ತಿಂದಿದ್ದಾರೆ ಎನ್ನಲಾಗಿದೆ.
ಇನ್ನು, ಮನೆಯಿಂದ ಕೇರಳದ ನೆಡುಂಬಚೇರಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅವರಿಗೆ ಅಲಪ್ಪುಳದಲ್ಲಿ ವಾಂತಿ ಆಗಿದೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು ಚಿಕಿತ್ಸೆ ಕೊಡಿಸಿ ಬಳಿಕ ಮನೆಗೆ ವಾಪಸ್ ಕರೆತಂದಿದ್ದಾರೆ.
ಆದರೆ ಮನೆಗೆ ಬರುತ್ತಿದ್ದಂತೆ ಅವರ ಸ್ಥಿತಿ ಮತ್ತಷ್ಟು ಬಿಗಾಡಿಯಿಸಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪರುಮಲೈ ಆಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನು ಓದಿ : ನಮ್ಮ ಮೆಟ್ರೋದಲ್ಲಿ ಎಲ್ಲರ ಮುಂದೆಯೇ ತಬ್ಬಿಕೊಂಡು ಕಿಸ್ ಮಾಡಿದ ಪ್ರೇಮಿಗಳು ; Video Viral.!
ಯುವತಿಯ ಸಾವಿನ ಬಗ್ಗೆ ಅನುಮಾನಗೊಂಡು ಪ್ರಕರಣ ದಾಖಲಾಗಿದ್ದು, ಆ ಬಳಿಕ ಮತದೇಹ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಕಣಗಿಲೆ ಹೂವಿನಲ್ಲಿರುವ ವಿಷವೇ ಯುವತಿಯ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನೂ ಕಣಗಿಲೆ ಹೂವಿನ ಬಗ್ಗೆ ಹೇಳಬೇಕೆಂದರೆ ಆರ್ಯವೇದದಲ್ಲಿ ಕಣಗಿಲೆ ಹೂವನ್ನು ಅತ್ಯಂತ ವಿಷಕಾರಿ ಸಸ್ಯ ಅಂತಲೇ ಎಂದು ಹೇಳಲಾಗಿದೆ. ಈ ಸಸ್ಯ ಇಡೀ ಭಾರತದಲ್ಲಿ ಎಲ್ಲಾ ಕಡೆಯೂ ಕಾಣಸಿಗುತ್ತದೆ. ಇದಕ್ಕೆ ಕನ್ನಡದಲ್ಲಿ ಈ ಹೂವಿಗೆ ಕಸ್ತೂರಿ ಪಟ್ಟಿ, ಕಣಗಿಲೆ ಹಾಗೂ ಕುದುರೆ ವಿಷದ ಗಿಡ ಅಂತಲೂ ಕರೆಯುತ್ತಾರೆ. ಈ ಗಿಡದ ಬೇರು, ತೊಗಟೆ, ಬೀಜ ಮತ್ತು ಇತರ ಭಾಗಗಳೂ ವಿಷಕಾರಿಯಾದವು.