ಜನಸ್ಪಂದನ ನ್ಯೂಸ್, ವಿಜಯಪುರ : ವಿಜಯಪುರ ಜಿಲ್ಲೆಯ ಪಟ್ಟಣವೊಂದರಲ್ಲಿ ತನ್ನ ಅನೈತಿಕ ಸಂಬಂಧ (Illicit relationship) ಕ್ಕೆ ಅಡ್ಡಿಯಾಗಿದ್ದಾನೆಂದು ಕೊಲೆ (Murder) ಗೆ ಯತ್ನಿಸಿದ ಪತ್ನಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಸುನಂದಾ ಎಂಬ ಮಹಿಳೆಯೇ ತನ್ನ ಪ್ರಿಯಕರ ಸಿದ್ದಪ್ಪನ ಜೊತೆ ಸೇರಿ ಪತಿ ಭೀರಪ್ಪನ ಹತ್ಯೆಗೆ ಪ್ಲಾನ್ ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”
ಸೆಪ್ಟೆಂಬರ್ 1ರ ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪತಿ ಮಲಗಿದ್ದ ವೇಳೆ ಸುನಂದಾ ಮತ್ತು ಆಕೆಯ ಪ್ರಿಯಕರ ಕೊಲೆ (Murder) ಪ್ರಯತ್ನ ನಡೆಸಿದ್ದಾರೆ. ಭೀರಪ್ಪನ ಎದೆಯ ಮೇಲೆ ಕುಳಿತು ಕತ್ತು ಮತ್ತು ಮರ್ಮಾಂಗ ಒತ್ತಿ ಹತ್ಯೆ ಮಾಡಲು ಯತ್ನಿಸಿದಾಗ, ಶಬ್ದಕ್ಕೆ ಮನೆಯವರು ಎಚ್ಚರಗೊಂಡಿದ್ದಾರೆ. ಅದೃಷ್ಟವಶಾತ್ ಭೀರಪ್ಪ ಪಾರಾಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಸೂತ್ರಗಳ ಪ್ರಕಾರ, ಸುನಂದಾ ತನ್ನ ಪ್ರಿಯಕರ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಕರೆದು ಕೊಲೆ (Murder) ಗೆ ಯತ್ನಿಸಿದ್ದಾಳೆ. ಈ ವೇಳೆ ಪತ್ನಿಯೇ ಪ್ರಿಯಕರನಿಗೆ “ಸಿದ್ದು, ಬಿಡಬೇಡ, ಖಲಾಸ್ ಮಾಡು” ಎಂದು ಪ್ರೋತ್ಸಾಹಿಸಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ.
Lung cancer : ಕ್ಷೀಣಿಸುತ್ತಿರುವ ಯುವಜನರ ಶ್ವಾಸಕೋಶ ಆರೋಗ್ಯ ; ತಪಾಸಣೆಗಳ ಅಗತ್ಯತೆ.!
ಈ ವೇಳೆ ಭೀರಪ್ಪ ಎಚ್ಚರಗೊಂಡು ಕಾಲಿನಿಂದ ಕೂಲರ್ ಒದ್ದ ಪರಿಣಾಮ ಶಬ್ದವಾಗಿದ್ದು, ಮನೆಯ ಮಾಲೀಕರು ಬಾಗಿಲು ತಟ್ಟಿದ ಹಿನ್ನಲೆಯಲ್ಲಿ ಬೀರಪ್ಪನ 8 ವರ್ಷದ ಮಗ ಎದ್ದು ಬಾಗಿಲು ತೆರೆದಿದ್ದಾನೆ. ಆಗ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಭೀರಪ್ಪ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪತ್ನಿ ಸುನಂದಾಳನ್ನು ಕೊಲೆ (Murder) ಆರೋಪದಲ್ಲಿ ಬಂಧಿಸಿದ್ದಾರೆ. ಆದರೆ ಪ್ರಿಯಕರ ಸಿದ್ದಪ್ಪ ಇನ್ನೂ ಪರಾರಿಯಾಗಿದ್ದು, ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿ ಪತ್ನಿಯ ಮೇಲೆಯೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
RBI ನೇಮಕಾತಿ : 120 ಅಧಿಕಾರಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.!
ಸಿದ್ದಪ್ಪ ಬಿಡುಗಡೆ ಮಾಡಿದ ವಿಡಿಯೋದಲ್ಲಿ, “ಹತ್ಯೆ (Murder) ಯ ಸ್ಕೆಚ್ ಹಾಕಿದ್ದು ಸುನಂದಾ, ಆದರೆ ಈಗ ನನ್ನನ್ನ ಮಾತ್ರ Murder ಕೇಸ್‌ನಲ್ಲಿ ಫಿಟ್ ಮಾಡೋಕೆ ಪ್ಲಾನ್ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪೂರ್ಣ ತನಿಖೆಯ ಬಳಿಕ ಘಟನೆಗೆ ಸಂಬಂಧಿಸಿದ ನಿಜಾಂಶಗಳು ಹೊರ ಬರಲಿವೆ.
“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.
ಜನಸ್ಪಂದನ ನ್ಯೂಸ್, ಡೆಸ್ಕ್ : ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ದಾರುಣ ಘಟನೆಯೊಂದು ಈಗ ದೇಶದಾದ್ಯಂತ ಚರ್ಚೆಯಾಗುತ್ತಿದೆ. ಹಲವು ವರ್ಷಗಳಿಂದ ಗಂಡನ ಮನೆಯಲ್ಲಿ ಸಂತೋಷದಿಂದ ಬದುಕುತ್ತಿದ್ದ 30 ವರ್ಷದ ಮಹಿಳೆ, ಇತ್ತೀಚೆಗೆ 17 ವರ್ಷದ ಅಪ್ರಾಪ್ತ (Minor) ಹುಡುಗನ ಜೊತೆ ಸಂಬಂಧ ಬೆಳೆಸಿಕೊಂಡಿದ್ದಳು.
ಸದ್ಯ ಈ ಅಕ್ರಮ ಸಂಬಂಧದ ಹಿನ್ನಲೆಯಲ್ಲಿ 6 ವರ್ಷದ ಬಾಲಕಿ ಹತ್ಯೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮಾಹಿತಿಗಳು ಬೆಳಕಿಗೆ ಬಂದಿವೆ. ಬುಧವಾರ ಬೆಳಿಗ್ಗೆ ಮನೆಯಿಂದ ಕಾಣೆಯಾಗಿದ್ದ ಬಾಲಕಿಯ ಶವ ಮಧ್ಯಾಹ್ನದ ಹೊತ್ತಿಗೆ ಬಾವಿಯಲ್ಲಿ ಪತ್ತೆಯಾದಿತ್ತು.
ವರ್ಷಕ್ಕೆ ಕೇವಲ ರೂ.520 ಕಟ್ಟಿದರೆ 10 ಲಕ್ಷ Insurance cover ; ಪೋಸ್ಟ್ ಆಫೀಸ್‌ನ ವಿಶೇಷ ಯೋಜನೆ.!
ಕೊಲೆ (Murder) :
ಗೋಣಿಚೀಲದಲ್ಲಿ ತುಂಬಿಸಲ್ಪಟ್ಟಿದ್ದ ಶವದ ಕುತ್ತಿಗೆಗೆ ಬಟ್ಟೆ ಕಟ್ಟಲಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕುವ ಮೂಲಕ ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 30 ವರ್ಷದ ಮಹಿಳೆ ಕಳೆದ ಮೂರು ತಿಂಗಳಿಂದ 17 ವರ್ಷದ ಅಪ್ರಾಪ್ತ (Minor) ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ. ಆರಂಭದಲ್ಲಿ ಅಪ್ರಾಪ್ತ (Minor) ನೊಂದಿಗೆ ಫೋನ್ ಮೂಲಕ ಆರಂಭವಾದ ಈ ಸಂಬಂಧ, ನಂತರ ಕದ್ದು ಮುಚ್ಚಿ ಭೇಟಿಯಾಗುವ ಮಟ್ಟಿಗೆ ತಲುಪಿತ್ತು.
Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”
ಒಂದು ದಿನ ಗಂಡ ಮತ್ತು ಅತ್ತೆ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ, ಆಕೆ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಸಂಬಂಧಿಕರ ಮನೆಯಲ್ಲಿ ಆಟವಾಡುತ್ತಿದ್ದ 6 ವರ್ಷದ ಮಗಳು ಮನೆಗೆ ಬಂದು ಬಿಟ್ಟಿದ್ದಾಳೆ.
ಈ ಸಂದರ್ಭದಲ್ಲಿ ಬಾಲಕಿ ಮನೆಗೆ ಬಂದಾಗ ತನ್ನ ತಾಯಿಯೇ ಮತ್ತೊಬ್ಬ ಅಪ್ರಾಪ್ತ (Minor) ನ ಜೊತೆ ಆಪ್ತ ಸ್ಥಿತಿಯಲ್ಲಿ (sexual) ಇರುವುದನ್ನು ನೋಡಿ ಬಿಟ್ಟಿದ್ದಾಳೆ. ಈ ದೃಶ್ಯ ನೋಡಿ ಕಂಗಾಲಾದ ಬಾಲಕಿ “ನಾನು ಅಪ್ಪನಿಗೆ ಹೇಳುತ್ತೇನೆ” ಎಂದು ಅಳಲು ಆರಂಭಿಸಿದ್ದಾಳೆ.
Belagavi : ಗಣೇಶ ವಿಸರ್ಜನೆ ವೇಳೆ ದುರ್ಘಟನೆ : ಬೆಳಗಾವಿಯಲ್ಲಿ ಇಬ್ಬರ ದುರ್ಮರಣ.!
ಅಪ್ರಾಪ್ತ (Minor) ಬಾಲಕಿಯ ಮೇಲೆ ಅಮಾವೀಯ ಕೃತ್ಯ :
ಮಗಳ ಮಾತುಗಳಿಂದ ಭಯಗೊಂಡ ಮಹಿಳೆ ಹಾಗೂ ಆಕೆಯ 17 ವರ್ಷದ ಅಪ್ರಾಪ್ತ (Minor) ಪ್ರಿಯಕರ ಬಾಲಕಿಯ ಕತ್ತು ಹಿಸುಕಿ ಕೊಂದು, ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಪಾಳು ಬಿದ್ದ ಬಾವಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸತ್ಯ ಬಯಲಾಗಿದ್ದು ಹೇಗೆ?
ಮಗಳ ನಾಪತ್ತೆ ವಿಚಾರವನ್ನು ಗಂಡ ಪೊಲೀಸರಿಗೆ ತಿಳಿಸಿದ್ದ. ಹುಡುಕಾಟದ ವೇಳೆ ಬಾಲಕಿಯ ಶವ ಪತ್ತೆಯಾಗಿದ್ದು, ಪೋಸ್ಟ್‌ಮಾರ್ಟಂನಲ್ಲಿ ಇದು ಕೊಲೆ ಎಂದು ದೃಢಪಟ್ಟಿತು. ಬಳಿಕ ತೀವ್ರ ವಿಚಾರಣೆಯ ವೇಳೆ ತಾಯಿ ಮತ್ತು ಆಕೆಯ ಪ್ರೇಮಿಯ ಕುಕೃತ್ಯ ಬಯಲಾಗಿದೆ.
ಮದುವೆ ಭರವಸೆ ನೀಡಿ ವಕೀಲೆ ಮೇಲೆ ದುರುಳತನ : Police ಕಾನ್ಸ್‌ಟೇಬಲ್ ಅರೆಸ್ಟ್.!
ಪ್ರಸ್ತುತ ಮಹಿಳೆ ಬಂಧನಕ್ಕೊಳಗಾಗಿದ್ದು, 17 ವರ್ಷದ ಅಪ್ರಾಪ್ತ (Minor) ನನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಈ ಘಟನೆ ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ.