Thursday, July 17, 2025

Janaspandhan News

HomeGeneral Newsಮದುವೆಯ ಮೊದಲ ದಿನದಂದೇ ತಲೆತಿರುಗುವಿಕೆ ಎಂದ ಪತ್ನಿ ; Pregnancy kit ಕೊಟ್ಟ ಪತಿ.!
spot_img
spot_img

ಮದುವೆಯ ಮೊದಲ ದಿನದಂದೇ ತಲೆತಿರುಗುವಿಕೆ ಎಂದ ಪತ್ನಿ ; Pregnancy kit ಕೊಟ್ಟ ಪತಿ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ವರನೊಬ್ಬ ಮದುವೆಯಾದ ದಿನವೇ ವಧುವಿಗೆ ಗರ್ಭಧಾರಣೆ ಪರೀಕ್ಷಾ ಕಿಟ್ (Pregnancy kit) ನೀಡಿ ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ನಡೆದಿದೆ. ಮದುವೆಯ ಮೊದಲ ದಿನವೇ ಇಂತಹ ಅಸಾಧಾರಣ ಘಟನೆ ರಾಮ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದ್ದು, ಸದ್ಯ ಈ ಘಟನೆ ಎರಡು ಕುಟುಂಬಗಳ ನಡುವೆ ಗಲಾಟೆಗೆ ಕಾರಣವಾಗಿದೆ.

ಆಗಿದ್ದೇನು.?

ಮದುವೆಯ ಶಾಸ್ತ್ರ ಎಲ್ಲ ಮುಗಿದ ನಂತರ ನವ ವಧುವಿಗೆ ತಲೆತಿರುಗುವಿಕೆ ಹಾಗೂ ಆಯಾಸದ ಲಕ್ಷಣಗಳು ಕಾಣಿಸಿಕೊಂಡವು. ಇದರಿಂದ ಗಾಬರಿಗೊಂಡ ವರ ಕೂಡಲೇ ಈ ವಿಷಯವನ್ನು ತನ್ನ ಸ್ನೇಹಿತನ್ನೊಬ್ಬನಿಗೆ ತಿಳಿಸಿದ್ದಾನೆ.

ಆಗ ಸ್ನೇಹಿತ ತಮಾಷೆಗಾಗಿ ಹೌದಾ, ಹಾಗಾದ್ರೆ ಅದು ಗರ್ಭಧಾರಣೆಯ ಸೂಚನೆಯಾಗಿರಬಹುದು ಎಂದು ಕಡ್ಡಿ ಮುರಿದ ಹಾಗೆ ಹೇಳಿಯೇ ಬಿಟ್ಟಿದ್ದಾನೆ. ಸ್ನೇಹಿತನ ಈ ಮಾತನ್ನು ಗಂಭೀರವಾಗಿ ತೆಗೆದುಕೊಂಡ ವರ, ತಕ್ಷಣವೇ ಸ್ಥಳೀಯ ಮೆಡಿಕಲ್ ಅಂಗಡಿಗೆ ಹೋಗಿ ಗರ್ಭಧಾರಣೆ ಪರೀಕ್ಷಾ ಕಿಟ್ (Pregnancy kit) ಖರೀದಿಸಿ ತಂದಿದ್ದಾನೆ.

ನೇರವಾಗಿ ವಧುವಿನ ಹತ್ತಿರ ಬಂದ ವರ, ಗರ್ಭಧಾರಣೆ ಪರೀಕ್ಷಾ ಕಿಟ್ (Pregnancy kit) ನೀಡಿ ಪರೀಕ್ಷೆ ಮಾಡಿಕೊಳ್ಳುವಂತೆ ಸೂಚಿಸಿದ್ದಾನೆ. ಇದರಿಂದ ತೀವ್ರ ಅಸಮಾಧಾನಗೊಂಡ ವಧು, ಕೂಡಲೇ ಈ ವಿಷಯವನ್ನು ತನ್ನ ಕುಟುಂಬದವರಿಗೆ ತಿಳಿಸಿದ್ದಾಳೆ.

ಕುಟುಂಬಗಳ ಮಧ್ಯೆ ಗಲಾಟೆ :

ವಿಷಯ ತಿಳಿದ ವಧುವಿನ ಕುಟುಂಬಸ್ಥರು ಕೂಡಲೇ ವಧುವಿನ ಕುಟುಂಬಸ್ಥರ ಮನೆಗೆ ಆಗಮಿಸಿ, ವರನ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಗರ್ಭಧಾರಣೆ ಪರೀಕ್ಷಾ ಕಿಟ್ (Pregnancy kit) ವಿಷಯ ಕ್ಷಣ ಕ್ಷಣಕ್ಕೂ ಗಂಭೀರವಾಗುತ್ತಿದ್ದಂತೆಯೇ, ಗ್ರಾಮಸ್ಥರು ಮಧ್ಯ ಪ್ರವೇಶ ಮಾಡಿದ್ದಾರೆ.

ಗರ್ಭಧಾರಣೆ ಪರೀಕ್ಷಾ ಕಿಟ್ (Pregnancy kit) ವಿಷಯ ಸುಮಾರು ಎರಡು ಗಂಟೆಗಳ ಕಾಲ ಗ್ರಾಮಸ್ಥರು ಸ್ಥಳೀಯ ಪಂಚಾಯಿತಿಯಲ್ಲಿ ಚರ್ಚೆ ನಡೆಸಿದ್ದಾರೆ.

ತಪ್ಪಿನ ಅರಿವು ಪಡೆದ ವರ ಕ್ಷಮೆ ಕೇಳಿದ :

ಗ್ರಾಮಸ್ಥರ ಹಸ್ತಕ್ಷೇಪದಿಂದ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ವಧುವಿಗೆ ಹೀಗೆ ಗರ್ಭಧಾರಣೆ ಪರೀಕ್ಷಾ ಕಿಟ್ (Pregnancy kit) ಕೊಟ್ಟದ್ದು ನನ್ನದೆ ತಪ್ಪು ಎಂದು ತಿಳಿದು ತನ್ನ ನಡೆಗೆ ವರ ಕ್ಷಮೆ ಕೋರಿದ್ದಾನೆ. ಅಲ್ಲದೆ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾನೆ.

ಸಾರಾಂಶ :

ಹೊಸ ಜೀವನ ಪ್ರಾರಂಭಿಸಿದ ಮೊದಲ ದಿನವೇ Pregnancy kit ನೀಡಿದ ವಿಚಿತ್ರ ಘಟನೆ ಉಂಟಾದ ಈ ಪ್ರಕರಣ, ಅಸಮಂಜಸತೆಯಿಂದಾಗಿ ಕುಟುಂಬಗಳ ನಡುವೆ ಅಸಹಜ ವಾತಾವರಣ ನಿರ್ಮಾಣಗೊಳ್ಳುವ ಸಾಧ್ಯತೆಯಿತ್ತು. ಆದರೆ ಗ್ರಾಮಸ್ಥರ ಸಮಯೋಚಿತ ದೌತ್ಯದಿಂದ ಬಿಕ್ಕಟ್ಟನ್ನು ತಡೆಯಲು ಸಾಧ್ಯವಾಯಿತು. ಘಟನೆ ಎಲ್ಲರಿಗೂ ಜಾಗೃತಿಯಂತೆ ಪರಿಣಮಿಸಲಿ ಎಂಬುದೇ ಆಶಯ.

(Disclaimer : ಈ ಲೇಖನವು ವ್ಯಕ್ತಿಗಳ ಖಾಸಗಿ ಜೀವನವನ್ನು ಅವಹೇಳನ ಮಾಡುವ ಉದ್ದೇಶವಿಲ್ಲ. ಸುದ್ದಿಯ ಮೂಲವಿಚಾರಗಳನ್ನು ಆಧರಿಸಿ ನಿರಪರಾಧ ರೀತಿಯಲ್ಲಿ ಪ್ರಸ್ತುತಪಡಿಸಲಾಗಿದೆ.)



IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!

IB

ಜನಸ್ಪಂದನ ನ್ಯೂಸ್‌, ನೌಕರಿ : ಭಾರತ ಸರ್ಕಾರದ ಗೃಹ ಸಚಿವಾಲಯವು ಗುಪ್ತಚರ ಬ್ಯೂರೋ (Intelligence Bureau – IB) ನಲ್ಲಿ ಅಸಿಸ್ಟೆಂಟ್ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್ (ACIO) ಗ್ರೇಡ್-II/ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 15 ರ ದ್ವಾದಶ ರಾಶಿಗಳ ಫಲಾಫಲ.!
ಹುದ್ದೆಗಳ ವಿಭಾಗವಾರು ವಿವರಗಳು:
ವರ್ಗ ಹುದ್ದೆಗಳ ಸಂಖ್ಯೆ
ಸಾಮಾನ್ಯ (UR) 1,537
ಆರ್ಥಿಕವಾಗಿ ಹಿಂದುಳಿದ (EWS) 442
ಇತರೆ ಹಿಂದುಳಿದ ವರ್ಗಗಳು (OBC) 946
ಪರಿಶಿಷ್ಟ ಜಾತಿ (SC) 566
ಪರಿಶಿಷ್ಟ ಪಂಗಡ (ST) 226

ಈ IB ಅಧಿಸೂಚನೆಯಡಿ ಒಟ್ಟು 3,717 ಹುದ್ದೆಗಳನ್ನು ಭರ್ತಿ ಮಾಡಲಾಗಲಿದೆ.

ಅರ್ಹತಾ ಮಾನದಂಡಗಳು :
ಶೈಕ್ಷಣಿಕ ಅರ್ಹತೆ :
  • ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಹೊಂದಿರಬೇಕು. ಕಂಪ್ಯೂಟರ್ ಪ್ರಾವೀಣ್ಯತೆ ಕಡ್ಡಾಯವಲ್ಲ, ಆದರೂ ಆದ್ಯತೆ ನೀಡಲಾಗುತ್ತದೆ.
ಇದನ್ನು ಓದಿ : Gorilla :ಕಾಡಿನಲ್ಲಿ ಮಹಿಳೆಯ ಜುಟ್ಟನ್ನು ಹಿಡಿದೆಳೆದ ಗಂಡು ಗೊರಿಲ್ಲಾ ; ಮುಂದೆ.?
ವಯೋಮಿತಿ :
  • ನಿಷ್ಠ ವಯಸ್ಸಿನ ಮಿತಿ : 18 ವರ್ಷಗಳು.
  • ಗರಿಷ್ಠ ವಯಸ್ಸಿನ ಮಿತಿ : 27 ವರ್ಷಗಳು.

NOTE : IB ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಹುದ್ದೆಯ ಹೆಸರು ಮತ್ತು ಸಂಬಳ ಶ್ರೇಣಿ (7ನೇ ವೇತನ ಆಯೋಗದ ಪ್ರಕಾರ) :
ಹುದ್ದೆಯ ಹೆಸರು ವೇತನ ಶ್ರೇಣಿ (ರೂ.ಗಳಲ್ಲಿ)
ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ- I/ಕಾರ್ಯನಿರ್ವಾಹಕ (ಗ್ರೂಪ್-A) : ರೂ.47,600 – ರೂ.1,51,100 (ಮ್ಯಾಟ್ರಿಕ್ಸ್ ಪದವಿ 8)
ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-II/ಕಾರ್ಯನಿರ್ವಾಹಕ : ರೂ.44,900 –ರೂ.1,42,400 (ಮ್ಯಾಟ್ರಿಕ್ಸ್ ಪದವಿ 7)
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್- I/ಕಾರ್ಯನಿರ್ವಾಹಕ : ರೂ.29,200 – ರೂ.92,300 (ಮ್ಯಾಟ್ರಿಕ್ಸ್ ಪದವಿ 5)
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್- II/ಕಾರ್ಯನಿರ್ವಾಹಕ : ರೂ.25,500 – ರೂ.81,100 (ಮ್ಯಾಟ್ರಿಕ್ಸ್ ಪದವಿ 4)
ಭದ್ರತಾ ಸಹಾಯಕ/ಕಾರ್ಯನಿರ್ವಾಹಕ : ರೂ.21,700 – ರೂ.69,100 (ಮ್ಯಾಟ್ರಿಕ್ಸ್ ಪದವಿ 3)
ಸಹಾಯಕ ಇಂಟೆಲಿಜೆನ್ಸ್ ಆಫೀಸರ್-I (ಮೊಟಾರ್ ಸಾರಿಗೆ) : ರೂ.25,500 – ರೂ.81,100 (ಮ್ಯಾಟ್ರಿಕ್ಸ್ ಪದವಿ 4)
ಸಹಾಯಕ ಇಂಟೆಲಿಜೆನ್ಸ್ ಆಫೀಸರ್-II (ಮೊಟಾರ್ ಸಾರಿಗೆ) : ರೂ.21,700 – ರೂ.69,100 (ಮ್ಯಾಟ್ರಿಕ್ಸ್ ಪದವಿ 3)
ಭದ್ರತಾ ಸಹಾಯಕ (ಮೊಟಾರ್ ಸಾರಿಗೆ) : ರೂ.21,700 – ರೂ.69,100 (ಮ್ಯಾಟ್ರಿಕ್ಸ್ ಪದವಿ 3)
ಹಲ್ಲೆಯ ತಾಂತ್ರಿಕ ಕಮ್ : ರೂ.29,200 – ರೂ.92,300 (ಮ್ಯಾಟ್ರಿಕ್ಸ್ ಪದವಿ 5)
ಎಂಜಿನ್ಮನ್ : ರೂ.25,500 – ರೂ.81,100 (ಮ್ಯಾಟ್ರಿಕ್ಸ್ ಪದವಿ 4)
ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್-II/ಟೆಕ್ : ರೂ.25,500 – ರೂ.81,100 (ಮ್ಯಾಟ್ರಿಕ್ಸ್ ಪದವಿ 4)
ಅರ್ಜಿ ಶುಲ್ಕ :
ವರ್ಗ ಶುಲ್ಕ (ರೂ.)
ಸಾಮಾನ್ಯ / OBC / EWS : ರೂ. 650/-
SC / ST / PwD : ರೂ. 550/-
  • ಆನ್‌ಲೈನ್ ಪಾವತಿಯ ಮೂಲಕ ಮಾತ್ರ ಅರ್ಜಿ ಶುಲ್ಕವನ್ನು ಪಾವತಿಸಬಹುದಾಗಿದೆ.
ಇದನ್ನು ಓದಿ : RRB Recruitment : 6,238 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನ.!
ಅರ್ಜಿ ಸಲ್ಲಿಸುವ ವಿಧಾನ :
  • ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ.
  • “IB ACIO Recruitment 2025” ಲಿಂಕ್ ಕ್ಲಿಕ್ ಮಾಡಿ.
  • ನಿಮ್ಮ ವೈಯಕ್ತಿಕ, ಶೈಕ್ಷಣಿಕ ಮತ್ತು ಇತರೆ ವಿವರಗಳೊಂದಿಗೆ ಅರ್ಜಿ ನಮೂನೆ ಭರ್ತಿ ಮಾಡಿ.
  • ಛಾಯಾಚಿತ್ರ, ಸಹಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಪಾವತಿ ಗೇಟ್‌ವೇ ಮೂಲಕ ಶುಲ್ಕ ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ.

ಇದನ್ನು ಓದಿ : KRCL-2025 : ಪಾಯಿಂಟ್ಸ್ ಮ್ಯಾನ್ & ಟ್ರ್ಯಾಕ್ ಮೇಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಅಂತಿಮ ಆಯ್ಕೆ :

ಲಿಖಿತ, ವಿವರಣಾತ್ಮಕ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯ ಆಧಾರದಲ್ಲಿ ನಡೆಯುತ್ತದೆ.

ಪ್ರಮುಖ ದಿನಾಂಕ :
  • ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ : ಜುಲೈ 19, 2025.
  • ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ : ಆಗಸ್ಟ್ 10, 2025
ಪ್ರಮುಖ ಲಿಂಕ್‌ :
  • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್ mha.gov.in ಮೂಲಕ ಅರ್ಜಿ ಸಲ್ಲಿಸಬಹುದು.
- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments