Sunday, September 8, 2024
spot_img
spot_img
spot_img
spot_img
spot_img
spot_img
spot_img

ವಂದೇ ಭಾರತ್ Express ರೈಲಿನಡಿ ಸಿಲುಕಿದ ಹಸು ಬದುಕಿದ್ದಾದರೂ ಹೇಗೆ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್ : ವೇಗವಾಗಿ ಓಡುತ್ತಿರುವ ರೈಲುಗೆ ಸಿಲುಕಿ ಅದೆಷ್ಟೋ ಪ್ರಾಣಗಳು ಹಾರಿ ಹೋಗಿರುವ ಆಘಾತಕಾರಿ ಘಟನೆಗಳನ್ನು ಕೇಳಿದ್ದೇವೆ ಮತ್ತು ನೋಡಿದೇವೆ. ಇಲ್ಲಿ ಇದೀಗ ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಅದೃಷ್ಟವಶಾತ್‌ ಜೀವಿಯು ರೈಲುಗೆ ಸಿಲುಕಿದರು ಪ್ರಾಣಾಪಾಯದಿಂದ ಪಾರಾಗಿದೆ.

ಹೌದು, ರೈಲ್ವೆ ಹಳಿಯ ಪಕ್ಕದಲ್ಲಿ ಮೇಯಲು‌ ಬಿಟ್ಟ ಹಸುವಿನ ಪ್ರಾಣವನ್ನು ಲೋಕೋ ಪೈಲೆಟ್‌ ಉಳಿಸಿರುವ ಘಟನೆ ನಡೆದಿದೆ.

Special news : ಎಡಗೈ ಬಿಟ್ಟು ಬಲಗೈಯಲ್ಲೇ ಯಾಕೆ ಊಟ ಮಾಡಲಾಗುತ್ತದೆ ಗೊತ್ತಾ.?

ವೇಗವಾಗಿ ಬರುತ್ತಿದ್ದಂತ ವಂದೇ ಭಾರತ್‌ ರೈಲಿನಡಿ ಹಸುವೊಂದು ಸಿಕ್ಕಿಹಾಕಿಕೊಂಡಿದೆ. ಆದರೆ ಲೋಕೋ ಪೈಲೆಟ್‌ ಬುದ್ಧಿವಂತಿಕೆಯಿಂದ ಅದೃಷ್ಟವಶಾತ್‌ ಹಸು ಪ್ರಾಣಾಪಾಯದಿಂದ ಪಾರಾಗಿದೆ. ಈ ಮನಕಲಕುವ ವಿಡಿಯೋ ದೃಶ್ಯಾವಳಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಹುಝೈಫಾ ಅನ್ಸಾರಿ (@huzaifa4625) ಎಂಬವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಆರು ದಿನಗಳ ಹಿಂದೆ ಹಂಚಿಕೊಳ್ಳಲಾದ್ದು, ಈಗಾಗಲೇ ಈ ವಿಡಿಯೋ 28.8 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ 1 ಮಿಲಿಯನ್‌ ಲೈಕ್ಸ್‌ಗಳನ್ನು ಪಡೆದುಕೊಂಡಿದೆ.

ವೈರಲ್‌ ವಿಡಿಯೋದಲ್ಲಿ ವಂದೇ ಭಾರತ್‌ ರೈಲಿನಡಿ ಹಸುವೊಂದು ಸಿಕ್ಕಿಹಾಕಿಕೊಂಡು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ರೈಲಿನ ಹಳಿಯ ಮೇಲೆ ಹಸು ಇರುವುದನ್ನು ಗಮನಿಸಿದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಲೋಕೋ ಪೈಲೆಟ್‌ ಹಸುವನ್ನು ರಕ್ಷಿಸಲು ತುರ್ತು ಬ್ರೇಕ್‌ ಹಾಕಿದ್ದಾರೆ.

ನೀವು ಪ್ರಕೃತಿ ಪ್ರೇಮಿಗಳೇ ; ಕರ್ನಾಟಕ ಅರಣ್ಯ ಇಲಾಖೆಯಲ್ಲಿ 1000+ ಹುದ್ದೆಗಳ ನೇಮಕಾತಿ.!

ಹಸು ಹತ್ತಿರದಲ್ಲಿಯೇ ಇದ್ದ ಕಾರಣ ದುರಾದೃಷ್ಟವಶಾತ್‌ ಅದು  ರೈಲಿನಡಿ ಸಿಕ್ಕಿ ಹಾಕಿಕೊಂಡು ಸಾವಿನ ಕೂಪದಿಂದ ಹೊರಬರಲು ಪ್ರಯತ್ನಿಸುತ್ತದೆ.‌ ಬಳಿಕ ಲೋಕೋ ಪೈಲೆಟ್‌ ರೈಲನ್ನು ನಿಧಾನವಾಗಿ ಹಿಂದಕ್ಕೆ ತೆಗೆದು ಹಸುವನ್ನು ರಕ್ಷಿಸಿದ್ದಾರೆ.

ನಂತರ ಹಸು ಬದುಕಿತು ಬಡ ಜೀವ ಎನ್ನುತ್ತಾ ಹಳಿಯಿಂದ ಎದ್ದು ಹೋಗಿದೆ. ಮುಗ್ಧ ಹಸುವನ್ನು ರಕ್ಷಣೆ ಮಾಡಿದ ಲೋಕೋ ಪೈಲೆಟ್‌ ಕಾರ್ಯವನ್ನು ನೆಟ್ಟಿಗರು ಕೊಂಡಾಡಿದ್ದಾರೆ.

 

View this post on Instagram

 

A post shared by Huzaifa Ansari (@huzaifa4625)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img