Wednesday, September 17, 2025

Janaspandhan News

HomeGeneral Newsವಸತಿ ನಿಲಯದ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ 9ನೇ ತರಗತಿ Student.!
spot_img
spot_img
spot_img

ವಸತಿ ನಿಲಯದ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ 9ನೇ ತರಗತಿ Student.!

- Advertisement -

ಜನಸ್ಪಂದನ ನ್ಯೂಸ್‌, ಕಲಬುರಗಿ : ಕಲಬುರಗಿ ಜಿಲ್ಲೆಯ ಶಹಪುರ ಪಟ್ಟಣದ ವಸತಿ ನಿಲಯವೊಂದರಲ್ಲಿ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಅಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ (Student) ಬುಧವಾರ ಮಧ್ಯಾಹ್ನ 2:30ರ ಹೊತ್ತಿಗೆ ಶೌಚಾಲಯದಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಈ ಬೆಳವಣಿಗೆ ತಡವಾಗಿ ಹೊರಬಂದಿದ್ದು, ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಸಮಾಜದಲ್ಲಿ ಆಘಾತ ಮೂಡಿಸಿದೆ. ವಸತಿ ನಿಲಯದಲ್ಲಿ ಉಳಿಯುತ್ತಿರುವ ಇತರ ವಿದ್ಯಾರ್ಥಿನಿ (Student) ಯರ ಪಾಲಕರಲ್ಲಿಯೂ ಈ ಘಟನೆ ಆತಂಕ ಹೆಚ್ಚಿಸಿದೆ.

ತಾಯಿ ಮತ್ತು ಮಗು ಸುರಕ್ಷಿತ :

ಘಟನೆ ತಿಳಿದು ತಕ್ಷಣವೇ ವಿದ್ಯಾರ್ಥಿನಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಆಡಳಿತದ ನಿರ್ಲಕ್ಷ್ಯ?

ವಸತಿ ನಿಲಯದ ಮೇಲ್ವಿಚಾರಕಿ ಗೀತಾ, “ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ” ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಶಾಲೆಯ ಪ್ರಾಂಶುಪಾಲ ಬಸ್ಸಮ್ಮ ಅವರು, “ವಿದ್ಯಾರ್ಥಿನಿ (Student) ಗರ್ಭಿಣಿಯಾಗಿದ್ದ ಲಕ್ಷಣವೂ ನಮಗೆ ಕಾಣಿಸಿರಲಿಲ್ಲ. ಈ ಘಟನೆ ನಮಗೂ ಆಘಾತ ಉಂಟುಮಾಡಿದೆ. ವಿದ್ಯಾರ್ಥಿನಿಯ ಮದುವೆ ಆಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಪೋಷಕರು ನಮಗೆ ತಿಳಿಸಿರಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಮಕ್ಕಳ ಹಕ್ಕುಗಳ ಆಯೋಗದ ಕ್ರಮ :

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸುಂಬೆ ಅವರು, “ಘಟನೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ” ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿನಿ (Student) ಗರ್ಭಧಾರಣೆಗೆ ಕಾರಣ ಯಾರು?

ವಿದ್ಯಾರ್ಥಿನಿ (Student) ಗರ್ಭಿಣಿಯಾಗಲು ಕಾರಣ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿದ್ಯಾರ್ಥಿನಿ ಈ ಬಗ್ಗೆ ಮೌನವಾಗಿದ್ದಾಳೆಂದು ವಸತಿ ನಿಲಯದ ಆಡಳಿತ ವರ್ಗ ಹೇಳಿದೆ. ಸಂಬಂಧಿಕರು ಕಾರಣವಾ, ನಿಲಯದ ಸಿಬ್ಬಂದಿ ಕಾರಣವಾ ಅಥವಾ ಹೊರಗಿನವರು ಕಾರಣವಾ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಘಟನೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವನ್ನು ಬಯಲಿಗೆಳೆದು, ಪೋಷಕರಲ್ಲಿ ಗಂಭೀರ ಆತಂಕ ಹುಟ್ಟಿಸಿದೆ.


ಸೆಪ್ಟೆಂಬರ್ 1 ರಿಂದ ಈ Health Insurance ಕಂಪನಿಗಳ ವಿಮೆ ಕೊಂಡವರಿಗೆ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಇಲ್ಲ.!

Health Insurance

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಸೆಪ್ಟೆಂಬರ್ 1 ರಿಂದ ಈ ಆರೋಗ್ಯ ವಿಮಾ (Health Insurance) ಕಂಪನಿಗಳ ವಿಮೆ ಕೊಂಡವರಿಗೆ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಇಲ್ಲ ಎಂದು ಮುಖ ಆರೋಗ್ಯ ವಿಮಾ ಕಂಪನಿಗಳು ತಿಳಿಸಿವೆ. ಬನ್ನಿ. ಅದರ ಬಗ್ಗೆ ತಿಳಿಯೋಣ.!

ಹೌದು, ಪ್ರಮುಖ ಆರೋಗ್ಯ ವಿಮಾ ಕಂಪನಿಗಳಾದ ಬಜಾಜ್ ಅಲಯನ್ಸ್ ಜನರಲ್ ಇನ್ಶೂರೆನ್ಸ್ ಹಾಗೂ ಕೇರ್ ಹೆಲ್ತ್ ಇನ್ಶೂರೆನ್ಸ್ (Health Insurance) ಸೇವೆಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಹೊಸ ಸೂಚನೆ ಜಾರಿಯಾಗಲಿದೆ.

36 ಜನರಿದ್ದ ಇಲಕಲ್‌ ಮಂಗಳೂರ KSRTC ಬಸ್‌ ಅಪಘಾತ.!

ಆರೋಗ್ಯ ವಿಮಾ (Health Insurance) ಸೇವಾದಾರರ ಸಂಸ್ಥೆ (Association of Healthcare Providers of India – AHPI) ತನ್ನ ನೆಟ್‌ವರ್ಕ್‌ನಲ್ಲಿರುವ ದೇಶದ 20,000ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಸೆಪ್ಟೆಂಬರ್ 1ರಿಂದ ಕ್ಯಾಶ್‌ಲೆಸ್ ಸೌಲಭ್ಯ ನಿಲ್ಲಿಸಲು ನಿರ್ಧರಿಸಿದೆ.

Health Insurance 1

ಇದರ ಪರಿಣಾಮ ಏನು?

➡️ ಈ ಬದಲಾವಣೆಯಿಂದ ಬಜಾಜ್ ಅಲಯನ್ಸ್ ಮತ್ತು ಕೇರ್ ಹೆಲ್ತ್ ಇನ್ಶೂರೆನ್ಸ್ (Health Insurance) ಪಾಲಿಸೀ ಹೊಂದಿರುವವರಿಗೆ ಕ್ಯಾಶ್‌ಲೆಸ್ ಚಿಕಿತ್ಸೆ ಸಿಗುವುದಿಲ್ಲ.

➡️ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದಲ್ಲಿ ಮೊದಲು ಸ್ವಂತವಾಗಿ ಹಣ ಪಾವತಿಸಿ, ನಂತರ ವಿಮಾ ಕ್ಲೇಮ್ ಸಲ್ಲಿಸಬೇಕಾಗುತ್ತದೆ.

Vicky ತಂಡದಿಂದ ಹೊಸ ಗಾರೆ ಕೆಲ್ಸದ ನಿಂಗಿ ಹಾಡು ಬಿಡುಗಡೆ – ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್.!
ಯಾವ ಆಸ್ಪತ್ರೆಗಳು ಒಳಗೊಂಡಿವೆ?

AHPI ನೆಟ್‌ವರ್ಕ್‌ನಡಿ ದೇಶದ ಅನೇಕ ಪ್ರಮುಖ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.

  • ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.
  • ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆ.
  • ಹಲವಾರು ಖಾಸಗಿ ಹಾಗೂ ಸ್ಥಳೀಯ ಆಸ್ಪತ್ರೆಗಳು.

ಇವೆಲ್ಲವೂ ಈ ಆದೇಶದ ವ್ಯಾಪ್ತಿಗೆ ಒಳಪಡುತ್ತವೆ.

Udupi : ಲಾಡ್ಜ್ ಮೇಲೆ ಪೊಲೀಸರು ದಾಳಿ ; ಮಹಿಳೆ ರಕ್ಷಣೆ, ಓರ್ವ ವ್ಯಕ್ತಿ ಬಂಧನ.!
ದಕ್ಷಿಣ ಭಾರತಕ್ಕೂ ಅನ್ವಯವಾಗುತ್ತದೆಯೇ?

ಪ್ರಸ್ತುತ ಮಾಹಿತಿ ಪ್ರಕಾರ, ಈ ನಿಯಮವು ಕೇವಲ ಉತ್ತರ ಭಾರತದಲ್ಲಿ ಮಾತ್ರ ಜಾರಿಯಾಗುತ್ತದೆ. ದಕ್ಷಿಣ ಭಾರತದ ಆಸ್ಪತ್ರೆಗಳ ಕುರಿತು ಇನ್ನೂ ಯಾವುದೇ ಸ್ಪಷ್ಟನೆ ನೀಡಲಾಗಿಲ್ಲ.

ವಿದೇಶಗಳಲ್ಲಿ ಭಾರತೀಯರಿಗೆ ಆರೋಗ್ಯ ವಿಮೆ (Health Insurance) ಯ ಮಹತ್ವ :

ಯುಕೆ, ಅಮೆರಿಕಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುವ ಅನೇಕ ಭಾರತೀಯರು ಸ್ಥಳೀಯ ಆರೋಗ್ಯ ಸೇವೆಯಿಂದ ಅಸಮಾಧಾನಗೊಂಡಿದ್ದಾರೆ.

ಹೆಚ್ಚಿನ ವೆಚ್ಚ, ಚಿಕಿತ್ಸೆಗಾಗಿ ಉದ್ದವಾದ ನಿರೀಕ್ಷೆ ಹಾಗೂ ಅಪಾಯಿಂಟ್‌ಮೆಂಟ್ ಸಮಸ್ಯೆಯಿಂದ ಬಳಲುವ ಕಾರಣ, ಅನೇಕರು ಭಾರತದಲ್ಲಿ ಚಿಕಿತ್ಸೆ ಪಡೆಯುವುದನ್ನೇ ಆಯ್ಕೆಮಾಡುತ್ತಾರೆ. ಇದರ ಜೊತೆಗೆ, ಎನ್‌ಆರ್‌ಐ ಸಮುದಾಯದಲ್ಲಿ ಭಾರತದಲ್ಲೇ ಆರೋಗ್ಯ ವಿಮೆ ಖರೀದಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments