Sunday, October 26, 2025

Janaspandhan News

HomeCrime NewsHospital ಶವಾಗಾರದಲ್ಲಿ ಮಹಿಳೆಯ ಶವದ ಮೇಲೆ ಅನಾಚಾರ ; ಆರೋಪಿಯ ಬಂಧನ.!
spot_img
spot_img
spot_img

Hospital ಶವಾಗಾರದಲ್ಲಿ ಮಹಿಳೆಯ ಶವದ ಮೇಲೆ ಅನಾಚಾರ ; ಆರೋಪಿಯ ಬಂಧನ.!

- Advertisement -

ಜನಸ್ಪಂದನ ನ್ಯೂಸ್‌, ನವದೆಹಲಿ/ಬುರ್ಹಾನ್ಪುರ (ಮಧ್ಯಪ್ರದೇಶ) : ದೇಶದ ಮಧ್ಯಪ್ರದೇಶ ರಾಜ್ಯದಲ್ಲಿ ನಡುಕ ಉಂಟುಮಾಡುವ ಘಟನೆ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯ (Hospital) ಶವಾಗಾರದಲ್ಲಿ ಮಹಿಳೆಯ ಶವದ ಮೇಲೆ ಅನಾಚಾರ (ಅತ್ಯಾಚಾರ) ಕೃತ್ಯ ನಡೆದಿರುವುದು ಇದೀಗ ಬಹಿರಂಗಗೊಂಡಿದೆ.

ಘಟನೆಯು ಸುಮಾರು ಒಂದು ವರ್ಷದ ಹಿಂದಿನದ್ದಾಗಿದ್ದರೂ, ಸಿಸಿಟಿವಿ ದೃಶ್ಯಾವಳಿಗಳು ಹೊರಬಂದ ನಂತರ ಈ ಘಟನೆ ಮತ್ತೆ ಚರ್ಚೆಯ ಕೇಂದ್ರವಾಗಿಯಾಗಿದೆ.

ಪೊಲೀಸ್ Training Centre ಮೇಲೆ ಉಗ್ರರ ದಾಳಿ ; 7 ಪೊಲೀಸ್ ಸಿಬ್ಬಂದಿ ಸೇರಿ 13 ಮಂದಿ ಬಲಿ.!

ಮಾಹಿತಿ ಪ್ರಕಾರ, 2024ರ ಏಪ್ರಿಲ್ 18ರಂದು ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯ ಖಕ್ನರ್ ಸಮುದಾಯ ಆರೋಗ್ಯ ಕೇಂದ್ರ (CHC) ಕ್ಕೆ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತರಲಾಗಿತ್ತು. ಅದೇ ಸಮಯದಲ್ಲಿ ಆಸ್ಪತ್ರೆ (Hospital) ಯಲ್ಲಿದ್ದ ವ್ಯಕ್ತಿಯೊಬ್ಬರು ಅಕ್ರಮವಾಗಿ ಶವಾಗಾರ ಕೋಣೆಗೆ ನುಗ್ಗಿ ಅಸಭ್ಯ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಆಸ್ಪತ್ರೆ (Hospital) ಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸಂಜೆ 6.45ರ ಸುಮಾರಿಗೆ ಶವಾಗಾರದಲ್ಲಿರುವ ವ್ಯಕ್ತಿಯು ಶವವನ್ನು ಸ್ಟ್ರೆಚರ್‌ನಿಂದ ಪಕ್ಕಕ್ಕೆ ಸರಿಸಿ ಅನಾಚಾರ ಕೃತ್ಯ ನಡೆಸುತ್ತಿರುವುದು ದಾಖಲಾಗಿದೆ. ಘಟನೆ ನಡೆದ ಸಮಯದಲ್ಲಿ ಯಾರಿಗೂ ವಿಷಯ ತಿಳಿಯದೇ ಹೋದರೂ, ಇತ್ತೀಚೆಗೆ ಆಸ್ಪತ್ರೆ (Hospital) ಯ ಹಳೆಯ ದೃಶ್ಯಾವಳಿಗಳ ಪರಿಶೀಲನೆಯ ವೇಳೆ ಈ ಆಘಾತಕಾರಿ ಘಟನೆ ಬಹಿರಂಗವಾಗಿದೆ.

ದೀಪಾವಳಿ ಕ್ಲೀನಿಂಗ್ ಟಿಪ್ಸ್ : ಮನೆಯ Switch Board ಹೊಳೆಯುವಂತೆ ಮಾಡಲು ಸರಳ ಮನೆಮದ್ದುಗಳು.!

ಸರ್ಕಾರಿ ಆಸ್ಪತ್ರೆಯ (Hospital) ವೈದ್ಯಾಧಿಕಾರಿ ಡಾ. ಆದಿಯಾ ದಾವರ್ ಅವರು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಪೊಲೀಸರು ಆರೋಪಿಯನ್ನು ನೀಲೇಶ್ ಭಿಲಾಲ (25), ತಂಗಿಯಪತ್ ಗ್ರಾಮ, ಭೌರಘಾಟ್ ಪ್ರದೇಶ ಎಂದು ಗುರುತಿಸಿದ್ದು, ಅವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆಯ ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

NWKRTC ನಲ್ಲಿ ಸಹಾಯಕ ಸಂಚಾರ ನಿರೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಘಟನೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಪೊಲೀಸರ ತಂಡವು ಆಸ್ಪತ್ರೆಯ (Hospital) ಶವಾಗಾರದಲ್ಲಿ ಭದ್ರತಾ ವ್ಯವಸ್ಥೆ ಹೇಗೆ ದುರ್ಬಲವಾಯಿತು ಹಾಗೂ ಆರೋಪಿ ಅಲ್ಲಿ ಹೇಗೆ ಪ್ರವೇಶಿಸಿದ ಎಂಬುದರ ಕುರಿತು ತನಿಖೆ ಆರಂಭಿಸಿದೆ.

ಪ್ರಾಥಮಿಕ ವರದಿ ಪ್ರಕಾರ, ಆಸ್ಪತ್ರೆಯ ಒಳಭಾಗದ ಭದ್ರತಾ ಕ್ರಮಗಳಲ್ಲಿ ಹಲವು ಲೋಪಗಳಿವೆ ಎಂಬುದು ಶಂಕೆ ಮೂಡಿಸಿದೆ.

ಈ ಮಧ್ಯೆ, ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆಕ್ರೋಶ ಉಂಟಾಗಿದೆ. ನಾಗರಿಕರು ಮತ್ತು ಮಹಿಳಾ ಸಂಘಟನೆಗಳು ಇಂತಹ ಕೃತ್ಯಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

Police ಹಲ್ಲೆಯಿಂದ 22 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ ಆರೋಪ ; ಸಿಸಿಟಿವಿ ದೃಶ್ಯ ವೈರಲ್‌

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ಮುಂದುವರಿಸಿದ್ದಾರೆ. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯು ಕೂಡ ಘಟನೆಯ ಬಗ್ಗೆ ವರದಿ ಕೇಳಿರುವುದಾಗಿ ಮೂಲಗಳು ತಿಳಿಸಿವೆ.

ವಿಡಿಯೋ :

A morgue or mortuary (in a hospital or elsewhere) is a place used for the storage of human corpses awaiting identification (ID), removal for autopsy, respectful burial, cremation or other methods of disposal. In modern times, corpses have customarily been refrigerated to delay decomposition.


Police ಹಲ್ಲೆಯಿಂದ 22 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ ಆರೋಪ ; ಸಿಸಿಟಿವಿ ದೃಶ್ಯ ವೈರಲ್‌

Police

ಜನಸ್ಪಂದನ ನ್ಯೂಸ್‌, ಭೋಪಾಲ್‌ : ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಸಂಭವಿಸಿರುವ ದುಃಖದ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ಪೊಲೀಸರ (Police) ಲಾಠಿ ಏಟಿನಿಂದ 22 ವರ್ಷದ ಬಿ.ಟೆಕ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಮೃತ ಯುವಕನನ್ನು ಉದಿತ್ ಗಾಯ್ಕೆ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಡುತ್ತಿದ್ದು, ಪೊಲೀಸರ (Police) ವರ್ತನೆಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.

ಪೊಲೀಸ್ Training Centre ಮೇಲೆ ಉಗ್ರರ ದಾಳಿ ; 7 ಪೊಲೀಸ್ ಸಿಬ್ಬಂದಿ ಸೇರಿ 13 ಮಂದಿ ಬಲಿ.!

ಪೊಲೀಸರು (Police) ಉದಿತ್ ಮೇಲೆ ನಡೆಸಿದ ಹಲ್ಲೆಯ ದೃಶ್ಯದಲ್ಲಿ ಸೆರೆಯಾಗಿದ್ದು, ಅದರಲ್ಲಿ ಇಬ್ಬರು ಕಾನ್‌ಸ್ಟೆಬಲ್‌ಗಳು ಯುವಕನನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಲಾಠಿಯಿಂದ ಹೊಡೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಒಬ್ಬ ಪೊಲೀಸ್ (Police) ಉದಿತ್‌ನ ಕೈಗಳನ್ನು ಬಿಗಿಯಾಗಿ ಹಿಡಿದಿದ್ದರೆ, ಮತ್ತೊಬ್ಬನು ನಿರಂತರವಾಗಿ ಹೊಡೆದಿರುವುದು ದೃಶ್ಯದಲ್ಲಿ ದಾಖಲಾಗಿದೆ.

ಈ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಉದಿತ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆಂದು ವೈದ್ಯರು ದೃಢಪಡಿಸಿದ್ದಾರೆ.

Khanapur : ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡಿದ ಆರೋಪ ; ಖಾನಾಪುರದಲ್ಲಿ ಬಾಲಕಿಯ ಆತ್ಮಹತ್ಯೆ.!

ಘಟನೆಯ ಪ್ರಾಥಮಿಕ ತನಿಖೆ ಪ್ರಕಾರ, ಉದಿತ್ ತನ್ನ ಸ್ನೇಹಿತರೊಂದಿಗೆ ರಾತ್ರಿ ಪಾರ್ಟಿ ಮಾಡಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ. ಆರೋಪಗಳ ಪ್ರಕಾರ, ಪೊಲೀಸರು ಉದಿತ್‌ನಿಂದ ಹಣ ಬೇಡಿಕೆ ಇಟ್ಟಿದ್ದು, ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಮೃತ ಯುವಕನ ಮೈಮೇಲೆ ಹಲವು ಗಾಯದ ಗುರುತುಗಳು ಹಾಗೂ ಹರಿದ ಬಟ್ಟೆಗಳೂ ಪತ್ತೆಯಾದ ಹಿನ್ನೆಲೆ, ಕುಟುಂಬದವರು ಹಾಗೂ ಸ್ಥಳೀಯರು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ದೀಪಾವಳಿ ಕ್ಲೀನಿಂಗ್ ಟಿಪ್ಸ್ : ಮನೆಯ Switch Board ಹೊಳೆಯುವಂತೆ ಮಾಡಲು ಸರಳ ಮನೆಮದ್ದುಗಳು.!

ಈ ಘಟನೆಯ ನಂತರ, ಭೋಪಾಲ್ ವಲಯ-2ರ ಉಪ ಪೊಲೀಸ್ ಆಯುಕ್ತ (DCP) ವಿವೇಕ್ ಸಿಂಗ್ ಅವರು, ಹಲ್ಲೆಗೆ ಸಂಬಂಧಿಸಿದಂತೆ ಕಾನ್‌ಸ್ಟೆಬಲ್ ಸಂತೋಷ್ ಬಮಾನಿಯಾ ಮತ್ತು ಸೌರಭ್ ಆರ್ಯ ಎಂಬ ಇಬ್ಬರನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ. ಅವರು ಮುಂದಿನ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿರುವುದೂ ತಿಳಿಸಿದ್ದಾರೆ.

ಉದಿತ್‌ನ ಪೋಷಕರು ಭೋಪಾಲ್‌ನಲ್ಲಿಯೇ ಸರ್ಕಾರಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸೋದರಮಾವ ಬಾಲಘಾಟ್ ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

NWKRTC ನಲ್ಲಿ ಸಹಾಯಕ ಸಂಚಾರ ನಿರೀಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಮರಣೋತ್ತರ ವರದಿ ಬಂದ ನಂತರ, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 103 (ಕೊಲೆ ಆರೋಪ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಪ್ರಸ್ತುತ ಇಬ್ಬರು ಕಾನ್‌ಸ್ಟೆಬಲ್‌ಗಳು ಪರಾರಿಯಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು DCP ವಿವೇಕ್ ಸಿಂಗ್ ತಿಳಿಸಿದ್ದಾರೆ.

ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಯುವಜನರು ಪೊಲೀಸರ ವಿರುದ್ಧ ಕೋಪ ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯಕ್ಕಾಗಿ ಉದಿತ್‌ನ ಕುಟುಂಬವು ರಾಜ್ಯ ಸರ್ಕಾರದ ಹಸ್ತಕ್ಷೇಪವನ್ನು ಬೇಡಿದೆ.

ಹಲ್ಲೆ ಮಾಡುತ್ತಿರುವ ಪೊಲೀಸರ (Police) ವಿಡಿಯೋ :

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments