ಜನಸ್ಪಂದನ ನ್ಯೂಸ್, ಆರೋಗ್ಯ : ವಯಸ್ಸು ಹೆಚ್ಚಾಗುತ್ತಿದ್ದಂತೆ ದೇಹದಲ್ಲಿ ವಿವಿಧ ರೀತಿಯ ಆರೋಗ್ಯ (Health) ಸಮಸ್ಯೆಗಳು ಮೂಡುತ್ತವೆ ಎಂಬುದು ವೈದ್ಯರ ಅಭಿಪ್ರಾಯ. ಯಾವುದೇ ಕಾಯಿಲೆ ಬಂದ ನಂತರ ಚಿಕಿತ್ಸೆ ಮಾಡುವದಕ್ಕಿಂತ ಅದನ್ನು ತಡೆಗಟ್ಟುವುದು ಉತ್ತಮ. ಈ ಕಾರಣದಿಂದಲೇ ನಿಯಮಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯಕ.
ವಿಶೇಷವಾಗಿ 40 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ತಮ್ಮ ಆರೋಗ್ಯ (Health) ದ ಮೇಲೆ ಇನ್ನೂ ಹೆಚ್ಚು ಗಮನಹರಿಸಬೇಕು. ಕೆಲವೊಂದು ಪರೀಕ್ಷೆಗಳು ವರ್ಷಕ್ಕೆ ಒಮ್ಮೆ ಮಾಡಿಸಿಕೊಂಡರೆ, ಹಲವಾರು ಗಂಭೀರ ರೋಗಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚಿ ತಡೆಗಟ್ಟಬಹುದಾಗಿದೆ.
ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!
ವರ್ಷಕ್ಕೆ ಒಮ್ಮೆ ಮಾಡಿಸಬೇಕಾದ ಮುಖ್ಯ ವೈದ್ಯಕೀಯ (Health) ತಪಾಸಣೆಗಳ ಪಟ್ಟಿಯು ಇಲ್ಲಿದೆ :
1. ರಕ್ತದೊತ್ತಡ ಪರೀಕ್ಷೆ (Blood Pressure Check) :
ಅಧಿಕ ರಕ್ತದೊತ್ತಡ (Hypertension) ಸಾಮಾನ್ಯವಾಗಿ ಯಾವುದೇ ಲಕ್ಷಣಗಳಿಲ್ಲದೆ ಬರುತ್ತದೆ. ಇದು ಹೃದಯಾಘಾತ, ಪಾರ್ಶ್ವವಾಯು ಹಾಗೂ ಮೂತ್ರಪಿಂಡದ ವೈಫಲ್ಯಕ್ಕೆ ಕಾರಣವಾಗಬಹುದು. ಪ್ರತಿ ಪುರುಷನು ವರ್ಷಕ್ಕೆ ಒಂದುವಾರಿ ರಕ್ತದೊತ್ತಡವನ್ನು ಪರೀಕ್ಷಿಸಿಸಿಕೊಳ್ಳುವುದು ಅತ್ಯಂತ ಅಗತ್ಯ.
2. ಕೊಲೆಸ್ಟ್ರಾಲ್ ತಪಾಸಣೆ (Lipid Profile) :
ಈ ಪರೀಕ್ಷೆಯು LDL (ಕೆಟ್ಟ ಕೊಲೆಸ್ಟ್ರಾಲ್), HDL (ಉತ್ತಮ ಕೊಲೆಸ್ಟ್ರಾಲ್) ಹಾಗೂ ಟ್ರೈಗ್ಲಿಸರೈಡ್ ಮಟ್ಟವನ್ನು ತೋರಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ಇದೊಂದು ಪ್ರಮುಖ Health ತಪಾಸಣೆ. ಆಹಾರ ಹಾಗೂ ಜೀವನಶೈಲಿ ಬದಲಾವಣೆ ಮೂಲಕ ಈ ಮಟ್ಟವನ್ನು ನಿಯಂತ್ರಿಸಬಹುದು.
3. ಮಧುಮೇಹ ತಪಾಸಣೆ (Blood Sugar Test / HbA1c) :
ಟೈಪ್ 2 ಡಯಾಬಿಟಿಸ್ ಮೌನಘಾತಿಯಂತೆ ಬೆಳೆಯುತ್ತದೆ. ಉಪವಾಸದ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಥವಾ HbA1c ಪರೀಕ್ಷೆ ಮೂಲಕ ಶೀಘ್ರ ಪತ್ತೆಹಚ್ಚಬಹುದಾಗಿದೆ. ಸಮಯಕ್ಕೆ ಚಿಕಿತ್ಸೆ ನೀಡಿದರೆ ಗಂಭೀರ ತೊಂದರೆಗಳನ್ನು ತಡೆಯಬಹುದು.
ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!
4. ಪ್ರಾಸ್ಟೇಟ್ ಕ್ಯಾನ್ಸರ್ ತಪಾಸಣೆ (PSA Test) :
ವಯಸ್ಸಾದ ಪುರುಷರಲ್ಲಿ ಕಂಡುಬರುವ ಪ್ರಮುಖ ಕ್ಯಾನ್ಸರ್‌ಗಳಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಕೂಡ ಒಂದು. PSA ರಕ್ತ ಪರೀಕ್ಷೆ ಮೂಲಕ ಇದರ ಆರಂಭಿಕ ಹಂತದಲ್ಲಿ ಪತ್ತೆ ಮಾಡಬಹುದು. ಕುಟುಂಬ ಇತಿಹಾಸವಿರುವವರಿಗೆ ಈ ತಪಾಸಣೆ ಹೆಚ್ಚು ಅಗತ್ಯ.
5. ಲಿವರ್ ಫಂಕ್ಷನ್ ಟೆಸ್ಟ್ (LFT) :
ಯಕೃತ್ತಿನ ಕಾರ್ಯಕ್ಷಮತೆಯನ್ನು ಅಳೆಯುವ ಈ ಪರೀಕ್ಷೆ, ಫ್ಯಾಟಿ ಲಿವರ್, ಮದ್ಯಪಾನದಿಂದ ಉಂಟಾಗುವ ಹಾನಿ ಅಥವಾ ಔಷಧ ಪ್ರಭಾವದಿಂದ ದೇಹದಲ್ಲಿ ಏನೇನಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಆರಂಭದಲ್ಲಿಯೇ ತೊಂದರೆ ಪತ್ತೆ ಹಚ್ಚಲು ಇದು ನೆರವಾಗುತ್ತದೆ.
6. ಕೊಲೊನ್ ಕ್ಯಾನ್ಸರ್ ತಪಾಸಣೆ (Colon Cancer Screening) :
ಪುರುಷರಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಇನ್ನೊಂದು ಕ್ಯಾನ್ಸರ್ ಈದು. ವಾರ್ಷಿಕ ಮಲದ ಪರೀಕ್ಷೆ (FIT / gFOBT) ಅಥವಾ 10 ವರ್ಷಕ್ಕೊಮ್ಮೆ ಮಾಡಿಸಬಹುದಾದ ಕೊಲೊನೋಸ್ಕೋಪಿ ಮೂಲಕ ಪತ್ತೆಹಚ್ಚಬಹುದು. ಯಾವುದೇ ಗುಪ್ತ ರಕ್ತವಿದ್ದರೂ ಇದರಿಂದಲೇ ಪತ್ತೆ ಮಾಡಬಹುದು.
7. ಕಣ್ಣಿನ ಪರೀಕ್ಷೆ (Eye Checkup) :
ವಯಸ್ಸಿನ ಜೊತೆಗೆ ದೃಷ್ಟಿದೋಷಗಳು, ಗ್ಲುಕೋಮಾ, ಕ್ಯಾಟರಾಕ್ಟ್ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸ್ಪಷ್ಟ ದೃಷ್ಟಿಗಾಗಿ ವರ್ಷಕ್ಕೊಮ್ಮೆ ಕಣ್ಣಿನ ಆರೋಗ್ಯ (Health) ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಉಪಯುಕ್ತ.
ಸಂಪಾದಕೀಯ :
ಆರೋಗ್ಯ (Health) ದ ಕುರಿತು ಮುಂಚಿತ ಜಾಗ್ರತೆ ಮುಖ್ಯ. ಯಾವುದೇ ರೋಗ ತೀವ್ರಗೊಂಡ ನಂತರ ಚಿಕಿತ್ಸೆ ಮಾಡುವ ಬದಲು ಆರಂಭದಲ್ಲಿಯೇ ಪತ್ತೆಹಚ್ಚಿ ತಡೆಗಟ್ಟುವುದು ಹೆಚ್ಚು ಪರಿಣಾಮಕಾರಿ. ಆದ್ದರಿಂದ 40 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರು ಈ ಪರೀಕ್ಷೆಗಳನ್ನು ವರ್ಷಕ್ಕೊಮ್ಮೆ ಮಾಡಿಸಿಕೊಂಡು ಆರೋಗ್ಯ (Health) ವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ.
“ಈ ಲಕ್ಷಣಗಳು ಕಂಡುಬಂದರೆ ನಿಮ್ಮ Kidney ಅಪಾಯದಲ್ಲಿದೆ ಎಂದೇ ಅರ್ಥ.!”
ಜನಸ್ಪಂದನ ನ್ಯೂಸ್, ಆರೋಗ್ಯ : ಮೂತ್ರಪಿಂಡ (Kidney) ಗಳು ನಮ್ಮ ದೇಹದಲ್ಲಿ ಉಂಟಾಗುವ ಕಶ್ಮಲಗಳನ್ನು ಶೋಧಿಸುವ ಪ್ರಮುಖ ಅಂಗಾಂಗಗಳಲ್ಲೊಂದು. ರಕ್ತದಲ್ಲಿರುವ ತ್ಯಾಜ್ಯಗಳನ್ನು ಮತ್ತು ಅಗತ್ಯವಿಲ್ಲದ ದ್ರವಗಳನ್ನು ಶುದ್ಧಗೊಳಿಸಿ, ಅವುಗಳನ್ನು ಮೂತ್ರದ ಮೂಲಕ ಹೊರಹಾಕುವ ಕಾರ್ಯ ಈ ಅಂಗಾಂಗ (Kidney) ಗಳು ನಿರ್ವಹಿಸುತ್ತವೆ.
ಒಂದು ವೇಳೆ ಮೂತ್ರಪಿಂಡ (Kidney) ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ದೇಹದಲ್ಲಿ ಕಶ್ಮಲಗಳು ಸಂಗ್ರಹವಾಗಲು ಆರಂಭವಾಗುತ್ತವೆ. ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.
ಇದನ್ನು ಓದಿ : Girl : ಶಾಲೆಯಿಂದ ಮನೆಗೆ ಹೊರಟ 10 ವರ್ಷದ ಬಾಲಕಿ ಅಪಹರಿಸಿ ದೌರ್ಜನ್ಯಕ್ಕೆ ಯತ್ನ.!
ಈ ರೀತಿಯ ಸ್ಥಿತಿಯನ್ನು ದೀರ್ಘಕಾಲದ ಮೂತ್ರಪಿಂಡ (Kidney) ಕಾಯಿಲೆ ಅಥವಾ ಕ್ರೋನಿಕ್ ಕಿಡ್ನಿ ಡಿಸೀಸ್ (CKD) ಎಂದು ಕರೆಯಲಾಗುತ್ತದೆ.
ಇದು ನಿಧಾನವಾಗಿ ಬೆಳೆಯುವ ರೋಗವಾಗಿದ್ದು, ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾದ್ಯವಾಗಬಹುದು.
ಇದನ್ನು ಓದಿ : DRDO ನೇಮಕಾತಿ 2025 : 148 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಇವು ಮೂತ್ರಪಿಂಡ (Kidney) ವೈಫಲ್ಯವನ್ನು ಸೂಚಿಸಬಹುದಾದ ಕೆಲವು ಪ್ರಮುಖ ಸಂಕೇತಗಳು :
1. ಮೂತ್ರದಲ್ಲಿ ಬದಲಾವಣೆಗಳು :
- ಸಾಮಾನ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ.
- ರಾತ್ರಿಯ ವೇಳೆ ಮಿಕ್ಕಷ್ಟು ಬಾರಿ ಮೂತ್ರದ ಅವಶ್ಯಕತೆ.
- ಮೂತ್ರದಲ್ಲಿ ನೊರೆ, ರಕ್ತ ಅಥವಾ ಬದಲಾಗಿದ ಬಣ್ಣ.
- ಮೂತ್ರ ವಿಸರ್ಜನೆ ವೇಳೆ ಗಂಭೀರ ತೊಂದರೆ.
2. ದೇಹದ ಅವಯವಗಳಲ್ಲಿ ಊತ :
- ಕಾಲುಗಳು, ಪಾದಗಳು, ಕೈಗಳು ಮತ್ತು ಕಣ್ಣುಗಳ ಸುತ್ತಲೂ ಉಂಟಾಗುವ ಊತ.
- ದೇಹದಲ್ಲಿ ನೀರಿನ ಶೇಖರಣೆಯಿಂದ ಉಂಟಾಗುವ ಶ್ವಾಸದ ತೊಂದರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 20 ರ ದ್ವಾದಶ ರಾಶಿಗಳ ಫಲಾಫಲ.!
3. ದಣಿವು ಮತ್ತು ಅಶಕ್ತತತೆ :
- ಮೂತ್ರಪಿಂಡಗಳ ಕಾರ್ಯ ಕ್ಷೀಣಗೊಂಡಾಗ, ರಕ್ತಹೀನತೆ ಉಂಟಾಗಬಹುದು.
- ಕಡಿಮೆ ಶ್ರಮದಲ್ಲಿಯೇ ದಣಿವು ಅನುಭವಿಸುವುದು.
4. ತುರಿಕೆ ಮತ್ತು ಸ್ನಾಯು ಸೆಳೆತ :
- ರಕ್ತದಲ್ಲಿ ತ್ಯಾಜ್ಯ ಪದಾರ್ಥಗಳು ಮತ್ತು ಖನಿಜಗಳ ಅಸಮತೋಲನದಿಂದ ತುರಿಕೆ.
- ವಿಶೇಷವಾಗಿ ರಾತ್ರಿ ವೇಳೆ ಹೆಚ್ಚು ಕಿರಿಕಿರಿ.
- ಕಾಲುಗಳಲ್ಲಿ ಸ್ನಾಯು ಸೆಳೆತ ಮತ್ತು ನೋವು.
5. ಇತರ ಲಕ್ಷಣಗಳು :
- ಊಟದ ಮೇಲೆ ಆಸೆ ಕಡಿಮೆಯಾಗುವುದು.
- ವಾಕರಿಕೆ ಅಥವಾ ಒಮ್ಮೆ ಎದೆಯಲ್ಲಿ ತೀವ್ರ ಒತ್ತಡ.
- ಏಕಾಏಕಿ ತೂಕ ಇಳಿಕೆ ಅಥವಾ ಹೆಚ್ಚಳ.
ಇದನ್ನು ಓದಿ : ಕೋರ್ಟ್ ಆವರಣದಲ್ಲೇ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡ ಮಹಿಳಾ Lawyers ; ವಿಡಿಯೋ.!
ಆರೋಗ್ಯ ಸಲಹೆ : ಮೇಲ್ಕಂಡ ಲಕ್ಷಣಗಳಲ್ಲಿ ಯಾವುದಾದರೂ ಕಾಣಿಸಿದರೆ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಅಗತ್ಯ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪ್ರಾರಂಭಿಸಿದರೆ, ಮೂತ್ರಪಿಂಡ (Kidney) ದ ಸಮಸ್ಯೆಗಳನ್ನು ನಿಯಂತ್ರಣದಲ್ಲಿರಿಸಬಹುದು.
Kidney : In humans, the kidneys are two reddish-brown bean-shaped blood-filtering organs that are a multilobar, multipapillary form of mammalian kidneys, usually without signs of external lobulation.
> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.