Thursday, April 24, 2025
spot_img
HomeHealth & FitnessHealth : ಕಪ್ಪು ಕಲೆ ಇರುವ ಈರುಳ್ಳಿಯನ್ನು ತಿನ್ನಬಹುದೇ.?
spot_img
spot_img
spot_img

Health : ಕಪ್ಪು ಕಲೆ ಇರುವ ಈರುಳ್ಳಿಯನ್ನು ತಿನ್ನಬಹುದೇ.?

- Advertisement -
WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಒಗ್ಗರಣೆ ಹಾಕುವಾಗ ಈರುಳ್ಳಿ (Onion) ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈರುಳ್ಳಿ ಮೇಲೆ ಕಪ್ಪು ಬಣ್ಣ ಇದ್ದರೆ ಅದನ್ನು ತಿನ್ನಬಹುದೇ.? ಎಂದು ಬಹಳಷ್ಟು ಜನರಿಗೆ ಗೊತ್ತಿಲ್ಲ.

ಈರುಳ್ಳಿ ಇಲ್ಲದೆ ಬಹುತೇಕ ಆಹಾರಗಳು ಅಪೂರ್ಣ. ಈರುಳ್ಳಿಯನ್ನು ಬೇಯಿಸಿ ಅಥವಾ ಹಸಿಯಾಗಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನ ಪಡೆಯಬಹುದು.

ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!

ಈರುಳ್ಳಿಯಲ್ಲಿ‌ ನಮ್ಮ ದೇಹಕ್ಕೆ ಬೇಕಾದ ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್ಗಳು, ಸೋಡಿಯಂ, ವಿಟಮಿನ್ ಸಿ, ಬಿ 6, ವಿಟಮಿನ್ ಡಿ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣದಂಥ ವಿವಿಧ ಉಪಯುಕ್ತ ಪೋಷಕಾಂಶಗಳು ಇವೆ.

ಈರುಳ್ಳಿಯನ್ನು ಕತ್ತರಿಸುವಾಗ ನಮಗೆ ಹಲವು ಬಾರಿ ಅದರ ಮೇಲ್ಭಾಗದಲ್ಲಿ ಕಪ್ಪು ಬಣ್ಣ (Black color on top of onion) ಕಾಣಿಸುತ್ತದೆ. ಇದನ್ನು ಕೆಲವರು ಕತ್ತರಿಸುತ್ತಾರೆ. ಮತ್ತೊಂದಿಷ್ಟು ಜನರು ತೊಳೆದು ತಿನ್ನುತ್ತಾರೆ.

ಇದನ್ನು ಓದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!

ಆದರೆ ನಿಮಗೆ ಗೊತ್ತಾ.? ಉಳ್ಳಾಗಡ್ಡಿ ಮೇಲೆ ಕಾಣುವ ಈ ಕಪ್ಪು ಬಣ್ಣವನ್ನು ಆಸ್ಪರ್ಜಿಲಸ್ ನೈಗರ್ (Aspergillus niger) ಎಂದು ಕರೆಯಲಾಗುತ್ತದೆ.

ಆದರೆ ಈ ರೀತಿಯ ಕಪ್ಪು ಬಣ್ಣದ ಶಿಲೀಂದ್ರವು ಹೆಚ್ಚಾಗಿ ಮಣ್ಣಿನಲ್ಲಿ ಕಂಡು ಬರುತ್ತದೆ. ಇದು ಒಂದು ರೀತಿಯ ವಿಷವನ್ನು ಬಿಡುಗಡೆ ಮಾಡುತ್ತದೆ (Releases poison) ಎಂದು ಸಂಶೋಧನೆಯು ಹೇಳಿದೆ.

ಇದನ್ನು ಓದಿ : ಲಂಚ ಪಡೆಯುತ್ತಿದ್ದ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ Lokayukta ಬಲೆಗೆ.!

ನೀವು ಖರೀದಿಸಿದ ಈರುಳ್ಳಿಯ ಮೇಲೆ ಕಪ್ಪು ಬಣ್ಣವಿದ್ದರೆ ಅದನ್ನು ನೀವು ತೆಗೆದು ಹಾಕಿ ಸ್ವಚ್ಛವಾಗಿ ತೊಳೆದು ಬಳಸಿದರೆ ಇದರಿಂದ ಯಾವುದೇ ಅಪಾಯವಿಲ್ಲ.

ಆದರೆ, ಅಲರ್ಜಿ ಇರುವವರಿಗೆ ಇದು ಅಪಾಯಕಾರಿ (Dangerous for people with allergies) ಎಂದು ಹೇಳಬಹುದು. ಅದೇ ರೀತಿ ನಿಮಗೆ ಅಸ್ತಮಾ ಇದ್ದರೂ ಕೂಡ ಇದು ಅಪಾಯಕಾರಿ. ಒಂದು ವೇಳೆ ಈರುಳ್ಳಿಯ ಒಳಭಾಗವೂ ಕೂಡ ಕಪ್ಪು ಬಣ್ಣವಿದ್ದರೆ ಅದನ್ನು ತಿನ್ನಬಾರದಂತೆ.

ಹಿಂದಿನ ಸುದ್ದಿ : ಮನೆ ಬಿಟ್ಟು ಓಡಿಹೋಗಿ ಮದುವೆಯಾದ ಸರಿಗಮಪ ಖ್ಯಾತಿಯ Singer ಪೃಥ್ವಿ ಭಟ್.!

ಜನಸ್ಪಂದನ ನ್ಯೂಸ್, ಬೆಂಗಳೂರು : ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮನೆ ಬಿಟ್ಟು ಓಡಿಹೋಗಿ ಮದುವೆಯಾಗಿದ್ದಾರೆ ಎಂದು ಆಕೆಯ ಮನೆಯವರು ಗಂಭೀರ ಆರೋಪ ಮಾಡಿದ್ದಾರೆ.

ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ (Sarigamapa reality show) ಮೂಲಕ ಪೃಥ್ವಿ ಭಟ್ ಬೆಳಕಿಗೆ ಬಂದ ಗಾಯಕಿಯಾಗಿದ್ದು, ಇವರು ಗಡಿನಾಡು ಕಾಸರಗೋಡು ಮೂಲದವರು.

ಇದನ್ನು ಓದಿ : Ex ಲವರ್‌ನಿಂದ ಬ್ಲ್ಯಾಕ್‌ಮೇಲ್‌ ; ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ.!

ಕನ್ನಡ ಸಿನಿಮಾಗಳು, ಸಾಕಷ್ಟು ಸ್ಟೇಜ್ ಶೋಗಳಲ್ಲಿ ಹಾಡಿರುವ ಪೃಥ್ವಿ ಭಟ್ ಈಗ ದಿಢೀರ್ ಆಗಿ ಮದುವೆಯಾಗಿದ್ದಾರೆ.

ಗಾಯಕಿ ಪೃಥ್ವಿ ಭಟ್, ಅಭಿಷೇಕ್ ಎನ್ನುವ ಯುವಕನೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ (Married in a temple) ಎಂದು ತಿಳಿದುಬಂದಿದೆ. ಮಗಳ ಮದುವೆ ವಿಚಾರ ತಿಳಿದು ಪೋಷಕರು ಆಘಾತಗೊಂಡಿದ್ದಾರೆ.

ಇದನ್ನು ಓದಿ : Special news : ಪ್ರೀತಿಸಿದವರಿಗೆ ಮೋಸ ಮಾಡ್ತಾರಂತೆ ಈ 5 ರಾಶಿಯವರು.!

ಆ ಹುಡುಗನನ್ನು ಮದುವೆಯಾಗುವುದಿಲ್ಲ ಎಂದು ದೇವರ ಮುಂದೆ ನಿಂತು ಪ್ರಮಾಣ ಮಾಡಿದ್ದ ಮಗಳು, ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ನನ್ನ ಮಗಳ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಲಾಗಿದೆ (Vashikaran Vidya Experiment). ಇದರ ಹಿಂದೆ ಜೀ ಕನ್ನಡ ರಿಯಾಲಿಟಿ ಜ್ಯೂರಿ ನರಹರಿ ದೀಕ್ಷಿತ್ ಕೈವಾಡವಿದೆ ಎಂದು ಪೃಥ್ವಿ ಭಟ್ ತಂದೆ ಆರೋಪ ಮಾಡಿದ್ದಾರೆ.

ಮಾರ್ಚ್ 27 ರಂದು ಇಬ್ಬರ ವಿವಾಹವಾಗಿದೆ. ಮದುವೆಯಾಗಿ 20 ದಿನಗಳಾಗಿದ್ದು, ಇಲ್ಲಿಯವರೆಗೆ ಅವಳಿಗೆ ನಮ್ಮ ನೆನಪಾಗಲಿಲ್ಲ. ರೆಕಾರ್ಡಿಂಗ್ ಗೆ ಅಂತ ನಾನೇ ಅವಳನ್ನು ಸ್ಟುಡಿಯೋಗೆ ಬಿಟ್ಟು ಬಂದಿದ್ದೆ. ಮಧ್ಯಾಹ್ನದ ಹೊತ್ತಿಗೆ ಪೊಲೀಸರು ಕಾಲ್ ಮಾಡಿ ಹೇಳಿದ್ರು ಪೃಥ್ವಿ ಭಟ್ ನಿಮ್ಮ ಮಗಳಾ? ಅವಳು ಅಭಿಷೇಕ್ ಎನ್ನುವವರನ್ನು ಮದುವೆಯಾಗಿ ಇಲ್ಲಿಗೆ ಬಂದಿದ್ದಾರೆ. ನಿಮ್ಮ ಮನೆಗೆ ಬರ್ತಾರಂತೆ ಅಂತ ಹೇಳಿದ್ರು. ಆಗ ನಾವು ಮನೆಗೆ ಬರುವುದು ಬೇಡ. ಇಲ್ಲಿಗೆ ಬಂದರೆ ಗಲಾಟೆಯಾಗುತ್ತದೆ ಎಂದೆವು.

ಇದನ್ನು ಓದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!

ಅದಾದ ಬಳಿಕ ಒಂದೆರಡು ಸಲ ಕಾಲ್ ಮಾಡಿ ತಪ್ಪಾಯ್ತು ಅಪ್ಪ, ಅಮ್ಮ ಎಂದು ಹೇಳಿದ್ದಳು. ಅದು ಬಿಟ್ಟರೆ ಆಕೆ ನಮ್ಮ ಸಂಪರ್ಕದಲ್ಲಿಲ್ಲ ಎಂದು ಪೃಥ್ವಿ ಭಟ್ ತಂದೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.

WhatsApp Channel Join Now
Telegram Group Join Now
Instagram Account Follow Now
- Advertisement -
spot_img
spot_img
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments