ಜನಸ್ಪಂದನ ನ್ಯೂಸ್, ಕೂಡ್ಲಿಗಿ : ಬಸ್ ಚಾಲಕ (Driver) ನೋರ್ವನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಹೆಡ್ ಕಾನ್ಸ್‌ಟೆಬಲ್ ವಿರುದ್ಧ FIR ದಾಖಲಾಗಿರುವ ಘಟನೆ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹರಿಹರ ಡಿಪೋಗೆ ಸೇರಿದ ಸಾರಿಗೆ ಬಸ್ ಬಳ್ಳಾರಿಗೆ ಹೋಗುತ್ತಿದ್ದ ವೇಳೆ ಕೊಟ್ಟೂರಿನಿಂದ ಕೂಡ್ಲಿಗಿ ಬರುವ ರಸ್ತೆಯಲ್ಲಿನ ಮಲ್ಲನಾಯಕಹಳ್ಳಿ ಬಳಿ ಬಂದಾಗ ಬಸ್ ಚಾಲಕ (Driver) ರಾಮಲಿಂಗಪ್ಪ ಕೂಡ್ಲಿಗಿ ಠಾಣೆಯ ಹೆಡ್ ಕಾನ್ಸ್ಟೆಬಲ್ ಮಂಜುನಾಥ ಹಾಗೂ ಇನ್ನೊಬ್ಬ ಕಾನ್‌ಸ್ಟೆಬಲ್ ಇದ್ದ ಬೈಕ್‌ನ್ನು ಹಿಂದಿಕ್ಕಲು ಪ್ರಯತ್ನಿಸಿದ್ದಾರೆ.
ಇದನ್ನು ಓದಿ : Affair : ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆ ಹತ್ಯೆ : ಬಳಿಕ ಆರೋಪಿ ನೇಣಿಗೆ ಶರಣು.!
ಆಗ ಇನ್ನೇನು ಬೈಕ್ ಹಿಂದಿಕ್ಕಬೇಕು ಅನ್ನುವಷ್ಟರಲ್ಲಿ ಎದುರಿನಿಂದ ಕಾರೊಂದು ಬಂದಿದೆ. ಕೂಡಲೇ ಗಮನಿಸಿದ ಬಸ್ ಚಾಲಕ (Driver) ರಾಮಲಿಂಗಪ್ಪ ಬಸ್‌ನ್ನು ಎಡಕ್ಕೆ ಎಳೆದುಕೊಂಡಿದ್ದಾರೆ. ಈ ವೇಳೆ ಬಸ್‌ನ ಹಿಂಭಾಗ ಬೈಕ್‌ನ ಹ್ಯಾಂಡಲ್‌ಗೆ ಸ್ವಲ್ಪ ತಾಗಿದಂತೆ ಆಯಿತು.
ಆಗ ಚಾಲಕ (Driver) ಮಿರರ್‌ನಲ್ಲಿ ಪರಿಶೀಲಿಸಿದರೂ ಅಂತಹ ಅವಘಡದ ಲಕ್ಷಣ ಕಾಣದೇ ಇದ್ದ ಕಾರಣ ಬಸ್ ಮುಂದುವರಿಸಿದರು. ಕೆಲವೇ ಹೊತ್ತಿನಲ್ಲಿ ಗಜಾಪೂರ ಹತ್ತಿರ ಮಂಜುನಾಥ ಬಸ್ ನಿಲ್ಲಿಸಿ ಒಳಗೆ ಬಂದು, ಚಾಲಕನಿಗೆ ಪ್ರಶ್ನೆ ಮಾಡದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದರು. ನಂತರ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಚಾಲಕ (Driver) ನ ಮೇಲೆ ಹಲ್ಲೆ ನಡೆಸಿ, ಜೇಬಿನಲ್ಲಿದ್ದ ಮೊಬೈಲ್‌ನ್ನು ಕಿತ್ತುಕೊಂಡು “ಸ್ಟೇಷನ್‌ಗೆ ಬಾ” ಎಂದು ಹೇಳಿ ಇಳಿದು ಹೋದರು.
ಇದನ್ನು ಓದಿ : ಬೆಳಗಾವಿಯಲ್ಲಿ 5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ; maulvi ಬಂಧನ.!
ಚಾಲಕ (Driver) ಮೊಬೈಲ್ ಮರಳಿಸುವಂತೆ ವಿನಂತಿಸಿದಾಗ, ಮಂಜುನಾಥ ಮತ್ತಷ್ಟು ಆಕ್ರೋಶಗೊಂಡು ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಈ ಘಟನೆ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಡ್ ಕಾನ್ಸ್ಟೆಬಲ್ ಮಂಜುನಾಥ ವಿರುದ್ಧ ಎಫ್‌ಐಆರ್ ನೋಂದಾಯಿಸಲಾಗಿದೆ.
ಮಾಹಿತಿಯ ಪ್ರಕಾರ, ಘಟನೆಯ ಸಮಯದಲ್ಲಿ ಮಂಜುನಾಥ ಕರ್ತವ್ಯದಲ್ಲಿರಲಿಲ್ಲ. ಕರ್ತವ್ಯ ನಿರತ ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರಿಗೆ ನೌಕರರು, ಆರೋಪಿಯನ್ನು ತಕ್ಷಣ ಬಂಧಿಸಿ ಸೇವೆಯಿಂದ ವಜಾ ಮಾಡುವಂತೆ ಆಗ್ರಹಿಸಿದ್ದಾರೆ.
ಬೆಳಿಗ್ಗೆ 1 ಗ್ಲಾಸ್ ABC ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಸಿಗುವ ಅದ್ಭುತ ಪ್ರಯೋಜನಗಳು.!

ಜನಸ್ಪಂದನ ನ್ಯೂಸ್, ಆರೋಗ್ಯ : ಬೆಳಿಗ್ಗೆ ಒಂದು ಗ್ಲಾಸ್ ABC ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಎಷ್ಟೊಂದು ಅದ್ಭುತ ಪ್ರಯೋಜನಗಳು ಸಿಗುತ್ತವೇ ಗೊತ್ತಾ.?. ಬನ್ನಿ ಆ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯೋಣ.!
ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರಿಂದ ABC ಜ್ಯೂಸ್ (Apple, Beetroot, Carrot) ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೇಬು, ಬೀಟ್‌ರೂಟ್ ಮತ್ತು ಕ್ಯಾರೆಟ್ ಮಿಶ್ರಣದಿಂದ ತಯಾರಾಗುವ ಈ ಪಾನೀಯವು ರುಚಿಕರವಾಗಿರುವುದರ ಜೊತೆಗೆ ಪೋಷಕಾಂಶಗಳಿಂದ ಕೂಡಿದೆ.
ಇದನ್ನು ಓದಿ : ISRO (LPSC) ದಲ್ಲಿ 10ನೇ ತರಗತಿಯಿಂದ ಡಿಪ್ಲೊಮಾ/ಬಿ.ಎಸ್ಸಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗವಕಾಶ.!
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ABC ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಹಲವು ರೀತಿಯ ಆರೋಗ್ಯ ಲಾಭಗಳು ದೊರೆಯುತ್ತವೆ ಎಂದು ತಜ್ಞರು ಹೇಳುತ್ತಾರೆ. ಹಾಗಾದ್ರೆ ಯಾವ್ಯಾವ ಪ್ರಯೋಜಗಳು ಸಿಗುತ್ತವೆ ಅಂತ ತಿಳಿಯೋಣ.
ರೋಗನಿರೋಧಕ ಶಕ್ತಿ :
ಸೇಬು ಮತ್ತು ಬೀಟ್‌ರೂಟ್‌ನಲ್ಲಿರುವ ವಿಟಮಿನ್ C ಹಾಗೂ ಕ್ಯಾರೆಟ್‌ನಲ್ಲಿನ ಬೇಟಾ-ಕ್ಯಾರೋಟಿನ್ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನು ಓದಿ : ಪತಿ ಇಲ್ಲದ ವೇಳೆ ಅತ್ತೆ ಮೇಲೆ ಅಮಾನುಷ ಹಲ್ಲೆ ನಡೆಸಿದ ಸೊಸೆ : CCTV ದೃಶ್ಯ ವೈರಲ್.!
ಜೀರ್ಣಕ್ರಿಯೆ ಸುಧಾರಣೆ :
ABC ಜ್ಯೂಸ್‌ನಲ್ಲಿ ಇರುವ ಹೆಚ್ಚಿನ ಫೈಬರ್ ಜೀರ್ಣಾಂಗದ ಚಟುವಟಿಕೆಯನ್ನು ಉತ್ತೇಜಿಸಿ ಮಲಬದ್ಧತೆ ಸಮಸ್ಯೆಯನ್ನು ತಡೆಗಟ್ಟುತ್ತದೆ. ನಿಯಮಿತ ಸೇವನೆ ಕರುಳಿನ ಚಲನೆ ಸುಗಮಗೊಳಿಸುತ್ತದೆ.
ಚರ್ಮದ ಆರೋಗ್ಯಕ್ಕೆ ಲಾಭಕಾರಿ :
ವಿಟಮಿನ್ A ಮತ್ತು C ಜೊತೆಗೆ ಆಂಟಿ-ಆಕ್ಸಿಡೆಂಟ್‌ಗಳು ಚರ್ಮಕ್ಕೆ ಹೊಳಪು ನೀಡುತ್ತವೆ, ವಯಸ್ಸಿನ ಲಕ್ಷಣಗಳನ್ನು ತಗ್ಗಿಸುತ್ತವೆ ಹಾಗೂ ಮೊಡವೆ-ಸುಕ್ಕುಗಳನ್ನು ಕಡಿಮೆ ಮಾಡುತ್ತವೆ.
ಇದನ್ನು ಓದಿ : Saliva : ಮೊಡವೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ; ಬೆಳಗಿನ ಎಂಜಲಿನಿಂದ ನಿಜವಾಗಿಯೂ ಪರಿಹಾರ ಸಿಗುತ್ತಾ.?
ದೇಹದ ನಿರ್ವಿಷೀಕರಣ :
ABC ಜ್ಯೂಸ್ ಯಕೃತ್ತಿನ ಕಾರ್ಯವನ್ನು ಬೆಂಬಲಿಸಿ ಜೀರ್ಣಾಂಗ ವ್ಯವಸ್ಥೆಯಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕರಿಸುತ್ತದೆ. ಇದರಿಂದ ದೇಹ ಶುದ್ಧವಾಗಿರಲು ಸಹಾಯವಾಗುತ್ತದೆ.
ತೂಕ ನಿಯಂತ್ರಣ :
ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುವುದರಿಂದ ಹೊಟ್ಟೆ ತುಂಬಿದ ಭಾವನೆ ದೀರ್ಘಕಾಲ ಉಳಿಯುತ್ತದೆ. ಇದು ಕ್ಯಾಲೋರಿ ಸೇವನೆಯನ್ನು ಕಡಿಮೆಮಾಡಿ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಿ ತೂಕ ಇಳಿಕೆಗೆ ನೆರವಾಗುತ್ತದೆ.
ಇದನ್ನು ಓದಿ : “ಕಾಲಿನ ನೋವಿನ ಜೊತೆ ಈ 5 ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ ; ಅದು Kidney ಫೆಲ್ಯೂರ್‌ನ ಸೂಚನೆ ಆಗಿರಬಹುದು”
ಆರೋಗ್ಯ ತಜ್ಞರ ಸಲಹೆ ಪ್ರಕಾರ, ಪ್ರತಿದಿನ ಬೆಳಿಗ್ಗೆ ಒಂದು ಗ್ಲಾಸ್ ABC ಜ್ಯೂಸ್ ಕುಡಿಯುವುದರಿಂದ ದೇಹದ ಸಮಗ್ರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಬಹುದು.
ABC juice : ABC juice is a simple yet effective way to infuse nutrients into your diet. Although it is not new to the market, it has recently gained popularity, mainly because it may help fight cancer.
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.





