ಜನಸ್ಪಂದನ ನ್ಯೂಸ್, ಹಾಸನ : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ (Ganesh) ವಿಸರ್ಜನೆ ಮೆರವಣಿಗೆಯ ವೇಳೆ ಭೀಕರ ದುರಂತ ಸಂಭವಿಸಿದೆ.
ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದವರ ಮೇಲೆ ಕ್ಯಾಂಟರ್ ವಾಹನ ನುಗ್ಗಿದ ಪರಿಣಾಮ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Vitamin : ನಿಮ್ಗೂ ವಿಪರೀತ ಕಾಲು ಸೆಳೆತ, ನೋವಿದ್ಯಾ ̤? ಅದಕ್ಕೆ ಇದುವೇ ಕಾರಣ.!
ಹೇಗೆ ಸಂಭವಿಸಿತು ದುರಂತ?
ಸಂಭ್ರಮದಿಂದ ಸಾಗುತ್ತಿದ್ದ ಮೆರವಣಿಗೆಯ ಮಧ್ಯೆ, ಬೈಕ್ ಸವಾರನನ್ನು ತಪ್ಪಿಸಲು ಯತ್ನಿಸಿದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ವಾಹನ ಜನರತ್ತ ನುಗ್ಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ವೇಳೆ ಐವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೊಬ್ಬರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಕರಣ ದಾಖಲು :
ಘಟನೆಯ ನಂತರ ಪೊಲೀಸರು ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!
ಸ್ಥಳೀಯರ ಬೇಡಿಕೆ :
ಈ ಅಪಘಾತದ ಹಿನ್ನೆಲೆಯಲ್ಲಿ ಸ್ಥಳೀಯರು, ಮೆರವಣಿಗೆ ವೇಳೆ ವಾಹನ ಸಂಚಾರಕ್ಕೆ ಸೂಕ್ತ ನಿರ್ಬಂಧಗಳನ್ನು ವಿಧಿಸಬೇಕೆಂದು ಆಗ್ರಹಿಸಿದ್ದಾರೆ. “ಸಣ್ಣ ಮಟ್ಟಿನ ನಿರ್ಲಕ್ಷ್ಯವೂ ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ” ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಶೋಕದ ವಾತಾವರಣ :
ಹಬ್ಬದ ಸಂಭ್ರಮದ ನಡುವೆ ಸಂಭವಿಸಿದ ಈ ದುರ್ಘಟನೆಯು ಹಾಸನ ಜಿಲ್ಲೆಗೇ ಆಘಾತ ಮೂಡಿಸಿದ್ದು, ಮೃತರ ಕುಟುಂಬಗಳಲ್ಲಿ ಶೋಕದ ವಾತಾವರಣ ಆವರಿಸಿದೆ.
“‘ಹೂವಿನ ಬಾಣದಂತೆ’ ಹಾಡಿ ರಾತ್ರೋರಾತ್ರಿ ಸ್ಟಾರ್ ಆದ Girl ; ನೆಟ್ಟಿಗರಿಂದ ಭಾರೀ ಮೆಚ್ಚುಗೆ!”
ಜನಸ್ಪಂದನ ನ್ಯೂಸ್, ಬೆಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಿದ್ದು, ಸದ್ಯ ಯುವತಿ/ಹುಡುಗಿಯ (Girl) ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಈಗ ಕನ್ನಡದ ‘ಬಿರುಗಾಳಿ’ ಚಿತ್ರದ ಪ್ರಸಿದ್ಧ ಹಾಡು “ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ” ಹೊಸ ಅವತಾರದಲ್ಲಿ ಕೇಳಿ ಜನರ ಮನಸೆಳೆದಿದೆ. ಯುವತಿಯೊಬ್ಬಳು ಈ ಹಾಡನ್ನು ತನ್ನದೇ ಶೈಲಿಯಲ್ಲಿ ಹಾಡಿರುವ ವಿಡಿಯೋ ಇನ್‌ಸ್ಟಾಗ್ರಾಂ ನಲ್ಲಿ ಭಾರೀ ವೈರಲ್ ಆಗಿದೆ.
ಹಿಟ್ಟಿನ ಗಿರಣಿಯಲ್ಲಿ 11 ವರ್ಷದ ಬಾಲಕಿಯ ಮೇಲೆ Sexual-Assault ನಡೆಸಿದ ವೃದ್ದ.!
ಈ ಯುವತಿ (Girl) ಹಾಡು ಹೇಳುತ್ತಿದ್ದಂತೆ, ಅಕ್ಕಪಕ್ಕದಲ್ಲಿದ್ದ ಸ್ನೇಹಿತೆಯರು ನಗುತ್ತಾ ಆ ಕ್ಷಣವನ್ನು ಎಂಜಾಯ್ ಮಾಡುತ್ತಿರುವುದೂ ವಿಡಿಯೋದಲ್ಲಿ ಸೆರೆ ಸಿಕ್ಕಿದೆ. ಆದರೂ ಯುವತಿ (Girl) ಯಾವುದಕ್ಕೂ ಲೆಕ್ಕಿಸದೆ ಹಾಡು ಮುಗಿಸಿರುವ ಧೈರ್ಯ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದೆ.
Chest-pain : ಗ್ಯಾಸ್ ನೋವೋ ಅಥವಾ ಹೃದಯಾಘಾತವೋ? ತಿಳಿದುಕೊಳ್ಳಬೇಕಾದ ಪ್ರಮುಖ ವ್ಯತ್ಯಾಸಗಳಿವು.!
ಮೂಲ ಗೀತೆಯ ಸಾಹಿತ್ಯದಲ್ಲಿ ಪ್ರೀತಿಯ ಭಾವನೆ, ಶಾಂತವಾದ ನುಡಿಗಳು, ಹೊಸತನದ ಕವಿತ್ವ ಇದೆ. ಅದರಲ್ಲಿ ಕೆಲವೊಂದು ಸಾಲುಗಳನ್ನು ತಮ್ಮದೇ ಧ್ವನಿಯಲ್ಲಿ ಹಾಡಿದ ಈ ಯುವತಿ, ಅದಕ್ಕೆ ತಮ್ಮದೇ ಟಚ್ ನೀಡಿದ್ದು ಜನರಿಗೆ ಇಷ್ಟವಾಗಿರುವ ಪ್ರಮುಖ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದ ಶಕ್ತಿಯೇ ಇದು – ಒಂದು ಸಣ್ಣ ವಿಡಿಯೋ ಕೂಡ ಲಕ್ಷಾಂತರ ವೀಕ್ಷಣೆ ಪಡೆದು, ಸಾಮಾನ್ಯ ವ್ಯಕ್ತಿಯನ್ನು ಕೂಡ ಸ್ಟಾರ್ ಮಾಡಿ ಬಿಡುತ್ತದೆ. ಇದೇ ರೀತಿ ಈ ಯುವತಿ (Girl) ಕೂಡ ಈಗ ನೆಟ್ಟಿಗರ ಗಮನ ಸೆಳೆದಿದ್ದಾರೆ.
sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!
ನೆಟ್ಟಿಗರ ಪ್ರತಿಕ್ರಿಯೆ:
ಬಹುತೇಕರು “ಅದ್ಭುತ ಧ್ವನಿ”, “ಸರಳವಾದ ಹಾಡು, ತುಂಬಾ ಚೆನ್ನಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು “ಇಷ್ಟೊಂದು ಆತ್ಮವಿಶ್ವಾಸದಿಂದ ಹಾಡಿದ್ರೆ ಖಂಡಿತಾ ಮುಂದೆಯೂ ಹೆಸರು ಮಾಡ್ತಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರೋ ಯುವತಿಯ (Girl) ವಿಡಿಯೋ :
View this post on Instagram