ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ರೀಲ್ಸ್ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಲೈಕ್ಸ್, ಕಮೆಂಟ್ ಗಾಗಿ ಯುವ ಜನರು ಅಪಾಯಕಾರಿ ಸಾಹಸಗಳಿಗೆ (dangerous adventures) ಕೈ ಹಾಕುತ್ತಿದ್ದಾರೆ.
ಇವರ ಹುಚ್ಚುತನಕ್ಕೆ (Crazy) ಕೆಲವೊಮ್ಮೆ ಎಷ್ಟೋ ಜನರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನೂ ಅಂತದ್ದೇ ಅಪಾಯಕಾರಿ ಸ್ಟಂಟ್ ಮಾಡುವ ವಿಡಿಯೋ ವೈರಲ್ ಆಗಿದೆ.
ಇದನ್ನು ಓದಿ : ಅಪಾಯದಿಂದ ಪಾರಾಗಲು 5 ನೇ ಮಹಡಿಯಿಂದ ಜಿಗಿದ ಯುವತಿ ; ವಿಡಿಯೋ ನೋಡಿ.!
ಚಲಿಸುತ್ತಿದ್ದ ಬೈಕ್ ಮೇಲೆ ನಿಂತು ಸ್ಟಂಟ್ ಮಾಡಲು (Stunt standing on a bike) ಹೋಗಿ ಯುವಕನೋರ್ವ ಆಯತಪ್ಪಿ ಕೆಳಗೆ ಮುಗ್ಗರಿಸಿ ಬಿದ್ದ ಘಟನೆ ನಡೆದಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗುರುಗ್ರಾಮದ ದೆಹಲಿ- ಜೈಪುರ ಎಕ್ಸ್‌ಪ್ರೆಸ್‌ವೇ (Delhi- Jaipur Expressway) ನಡುವೆ ಚಲಿಸುತ್ತಿದ್ದ ಬೈಕ್ ಮೇಲೆ ನಿಂತು ಆ ಯುವಕ ಸ್ಟಂಟ್ ಮಾಡಲು ಹೋಗಿ, ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಅವನು ಬಿದ್ದ ಬಳಿಕ ಬೈಕ್ ರೋಡಿನಲ್ಲಿ ಹೋಗುತ್ತಿದೆ. ಇನ್ನೂ ಯುವಕ ಬಿದ್ದಿದ್ದನ್ನು ನೋಡಿದ ಸ್ಥಳೀಯರು ಆತನನ್ನು ಕಾಪಾಡಲು ಬಂದಿದ್ದಾರೆ.
ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!
ಈ ಕುರಿತು ಗುರುಗ್ರಾಮ್ ಪೊಲೀಸ್ ಅಧಿಕಾರಿಗಳು, ವೈರಲ್ ವಿಡಿಯೋ ಬಗ್ಗೆ ತನಿಖೆ ನಡೆಯುತ್ತಿದೆ, ಯುವಕನನ್ನು ಗುರುತಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.
ವಿಡಿಯೋ ನೋಡಿ :
https://twitter.com/i/status/1916828431213384054
ಹಿಂದಿನ ಸುದ್ದಿ : ಅಪಾಯದಿಂದ ಪಾರಾಗಲು 5 ನೇ ಮಹಡಿಯಿಂದ ಜಿಗಿದ ಯುವತಿ ; ವಿಡಿಯೋ ನೋಡಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಅಪಾರ್ಟ್‌ಮೆಂಟ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಪಾರಾಗಲು ಯುವತಿಯೋರ್ವಳು ಐದನೇ ಮಹಡಿಯಿಂದ (Fifth floor) ಜಿಗಿದ ಘಟನೆ ನಡೆದಿದೆ.
ಗುಜರಾತ್‍ನ ಅಹಮದಾಬಾದ್‍ನ (Ahmedabad, Gujarat) ಆಟ್ರೆ ಆರ್ಕಿಡ್ ಸೊಸೈಟಿಯ ಕಟ್ಟಡದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಹಠ ಮಾಡುತ್ತಾರೆ ಅಂತ ಮಕ್ಕಳ ಕೈಗೆ ಮೊಬೈಲ್ ಕೊಡುವ ಪಾಲಕರೇ ಈ Video ನಿಮಗಾಗಿ.!
ಸೊಸೈಟಿಯ ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಐದನೇ ಮಹಡಿಗೆ ಹಬ್ಬಿದೆ.
ಹೀಗಾಗಿ ಐದನೇ ಮಹಡಿಯಲ್ಲಿದ್ದ ಯುವತಿ ಬೆಂಕಿಯಿಂದ ಪಾರಾಗಲು ಕಟ್ಟಡದ ಬಾಲ್ಕನಿಯಿಂದ ಜಿಗಿಯುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈ ಭಯಾನಕ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದ್ದು, ಸದ್ಯ ಇದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಇದನ್ನು ಓದಿ : Revenue Department : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಇನ್ನೂ ಯುವತಿ ಕಟ್ಟಡದ ಐದನೇ ಮಹಡಿಯಿಂದ ಜಿಗಿಯುವಾಗ ಕೆಳಗೆ ನೆಲದ ಮೇಲೆ ಉಬ್ಬಿದ ದಿಂಬು ಮತ್ತು ಹಾಸಿಗೆಗಳನ್ನು ಹಾಕಲಾಗಿತ್ತು ಎಂದು ವರದಿಯಾಗಿದೆ.
ಅದೃಷ್ಟವಶಾತ್ ಯುವತಿ ಅದರ ಮೇಲೆ ಬಿದ್ದಿದ್ದಾಳೆ. ಇನ್ನೂ ಸ್ಥಳದಲ್ಲಿದ್ದ ಅಗ್ನಿಶಾಮಕ ದಳದವರು ಮೂವತ್ತಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ (Firefighters rescued people).
ಪ್ರಾಥಮಿಕ ತನಿಖೆಯಲ್ಲಿ ಅಪಾರ್ಟ್‌ಮೆಂಟ್‌ನ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಕೆಲವೇ ಕ್ಷಣಗಳಲ್ಲಿ, ಅದು ‘ಸಿ’ ಮತ್ತು ‘ಡಿ’ ವಿಂಗ್ಸ್‌ನಲ್ಲಿರುವ ಅಪಾರ್ಟ್‌ಮೆಂಟ್‌ಗಳಿಗೆ ಹರಡಿದೆ.
ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು, ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ವಿಡಿಯೋ :
https://twitter.com/i/status/1917276911698415857






