ಜನಸ್ಪಂದನ ನ್ಯೂಸ್, ನೌಕರಿ : ಉದ್ಯೋಗ ಹುಡಕುತ್ತಿರುವವರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸುದ್ದಿಯೊಂದು ಸಿಕ್ಕಿದೆ. ಭಾರತೀಯ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದಲ್ಲಿ (IRCTC) ಭರ್ಜರಿ ಉದ್ಯೋಗ ನೇಮಕಾತಿ ನಡೆಯುತ್ತಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : Health : ಕಲ್ಲಂಗಡಿ ತಿಂದ ಬಳಿಕ ಇವುಗಳನ್ನು ಸೇವಿಸಲೇಬೇಡಿ.!
ಹುದ್ದೆಗಳ ಬಗ್ಗೆ ಮಾಹಿತಿ :
- ನೇಮಕಾತಿ ಪ್ರಾಧಿಕಾರ : IRCTC.
- ಹುದ್ದೆಗಳ ಹೆಸರು : ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಮತ್ತು ಇತರ ಖಾಲಿ ಹುದ್ದೆ.
- ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್ (Online).
ವಿದ್ಯಾರ್ಹತೆ :
- ಯಾವುದೇ ವಿಶ್ವವಿದ್ಯಾಲಯ, ಶೈಕ್ಷಣಿಕ ಸಂಸ್ಥೆಗಳಲ್ಲಿ Degree, B.Sc, B.Tech ಅಥವಾ B,E ಪದವಿ ಪಡೆದಿರಬೇಕು.
ವೇತನ :
- ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 67,000/- ರೂಪಾಯಿ ವೇತನ ನೀಡಲಾಗುವುದು.
ಇದನ್ನು ಓದಿ : Astrology : ಎಪ್ರಿಲ್ 22 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!
ವಯೋಮಿತಿ :
- ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 55 ವರ್ಷ.
ವಯೋಮಿತಿ ಸಡಿಲಿಕೆ :
- ನಿಯಮಾನುಸಾರ ಜಾತಿ ಮೀಸಲಾತಿಗೆ ಅನುಗುಣವಾಗಿ ಆಯಾ ಜಾತಿ ಅಭ್ಯರ್ಥಿಗಳಿಗೆ ಒಂದಷ್ಟು ಸಡಿಲಿಕೆ ಸಿಗಲಿದೆ.
ಪ್ರಮುಖ ದಿನಾಂಕ :
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 25, 2025.
Note : ಈಗಾಗಲೇ ಬೇರೆ ಬೇರೆ ರಂಗದಲ್ಲಿ ಕೆಲಸ ಮಾಡಿದ ಅರ್ಹರು ಸಹ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನು ಓದಿ : Video : ಶ್ರೀಕೃಷ್ಣ ದೇವರಾಯನ ಸಮಾಧಿಯ ಮೇಲೆ ಮಾಂಸ ಕಟ್ ; ಭಾರೀ ಆಕ್ರೋಶ.!
ಪ್ರಮುಖ ಲಿಂಕ್ :
- ಆಸಕ್ತ ಅಭ್ಯರ್ಥಿಗಳು ಕೂಡಲೇ ನೀವು IRCTC ಯ ಅಧಿಕೃತ ವೆಬ್‌ಸೈಟ್ https://irctc.com/ ಗೆ ಭೇಟಿ ನೀಡಬೇಕು.
ಅಭ್ಯರ್ಥಿಗಳ ಆಯ್ಕೆ ಹೇಗೆ.?
- ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ನಡೆಸುವುದಿಲ್ಲ.
- ಬದಲಾಗಿ ಅರ್ಜಿ ಸಲ್ಲಿಸಿದವರ ಅರ್ಹತೆಯನ್ನು ಮತ್ತು ದಾಖಲೆಗಳ ಪರಿಶೀಲನೆ ಮತ್ತು
- ಸಂದರ್ಶನ ಮೂಲಕ ನೇರವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಇದನ್ನು ಓದಿ : Ex ಲವರ್‌ನಿಂದ ಬ್ಲ್ಯಾಕ್‌ಮೇಲ್ ; ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ.!
Note : ದಾಖಲಾತಿ ಪರಿಶೀಲನೆ ವೇಳೆ ಒಂದು ಪಟ್ಟಿ ಸಿದ್ದಪಡಿಸಲಾಗುತ್ತದೆ. ಇದರಲ್ಲಿ ಆಯ್ಕೆ ಆದವರಿಗೆ ನೇರ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
Disclaimer : The above given information is available On online, candidates should check it properly before applying. This is for information only.
ಹಿಂದಿನ ಸುದ್ದಿ : 500 ರೂ. ನೋಟಿನ ಕುರಿತು ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಗೃಹ ವ್ಯವಹಾರಗಳ ಸಚಿವಾಲಯವು (Ministry of Home Affairs) ಮಾರುಕಟ್ಟೆಯಲ್ಲಿ ಈಗಾಗಲೇ ಚಲಾವಣೆಯಲ್ಲಿರುವ ಹೊಸ ನಕಲಿ ರೂ. 500 ನೋಟಿನ ಬಗ್ಗೆ ಹೈ ಅಲರ್ಟ್ ನೀಡಿದೆ.
ಅಲ್ಲದೇ ರಿಯಲ್ ನೋಟುಗಳು ಮತ್ತು ಫೇಕ್ ನೋಟುಗಳು ನಡುವಿನ ಹೋಲಿಕೆ, ವ್ಯತ್ಯಾಸದ (Comparison between fake notes and real notes) ಕುರಿತು ಎಚ್ಚರಿಕೆ ನೀಡಿದೆ.
ಇದನ್ನು ಓದಿ : ಮನೆ ಬಿಟ್ಟು ಓಡಿಹೋಗಿ ಮದುವೆಯಾದ ಸರಿಗಮಪ ಖ್ಯಾತಿಯ Singer ಪೃಥ್ವಿ ಭಟ್
ಅಧಿಕೃತ ನೋಟುಗಳ ಗುಣಮಟ್ಟ ಮತ್ತು ಮುದ್ರಣವನ್ನು (Quality and printing of official banknotes) ನಕಲಿ 500 ರೂ. ನೋಟುಗಳಲ್ಲಿ ಬಹುತೇಕ ಹೋಲಿಕೆ ಇದೆ. ಆದ್ದರಿಂದ ಯಾವುದೇ ಸಾಮಾನ್ಯ ವ್ಯಕ್ತಿಗೆ ಅದನ್ನು ಕಂಡು ಹಿಡಿಯುವುದು ತುಂಬಾ ಕಷ್ಟ.
ವಿಶೇಷವಾಗಿ ನೋಟುಗಳ ಸತ್ಯಾಸತ್ಯತೆಯ ಬಗ್ಗೆ ಹೆಚ್ಚು ಗಮನ ಹರಿಸದಿದ್ದಾಗ, ಸರ್ಕಾರಕ್ಕೆ ಇಂತಹ ನೋಟುಗಳನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಆದರೂ ಈ ನಕಲಿ ನೋಟಿನಲ್ಲಿ ಒಂದು ದೋಷವಿದೆ, ಹೀಗಾಗಿ ನೀವು ಅವುಗಳನ್ನು ಗುರುತಿಸಲು ಸಾಧ್ಯವಾಗಬಹುದು.
ಇದನ್ನು ಓದಿ : Special news : ಪ್ರೀತಿಸಿದವರಿಗೆ ಮೋಸ ಮಾಡ್ತಾರಂತೆ ಈ 5 ರಾಶಿಯವರು.!
‘RESERVE BANK OF INDIA’ ಎಂಬ ಪದಗಳಲ್ಲಿ, ‘RESERVE’ ಎಂಬ ಪದದ ‘E’ ಅಕ್ಷರವನ್ನು ‘A’ ಅಕ್ಷರದಿಂದ ತಪ್ಪಾಗಿ ಬದಲಾಯಿಸಲಾಗಿದೆ. ಈ ಸಣ್ಣ ದೋಷವು ನಿಮ್ಮನ್ನು ನಕಲಿ ನೋಟಿನ ನಷ್ಟದಿಂದ ರಕ್ಷಿಸುವುದಲ್ಲದೆ, ನಕಲಿ ನೋಟುಗಳನ್ನು ಹುಡುಕಲು ಇದು ಒಂದು ಉತ್ತಮ ಮಾರ್ಗವಾಗಿದೆ.
ಈಗಾಗಲೇ ಮಾರುಕಟ್ಟೆಗೆ ನಕಲಿ ನೋಟುಗಳು ಬೃಹತ್ ಪ್ರಮಾಣದಲ್ಲಿ ಪ್ರವೇಶಿಸಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಹಣಕಾಸು ಸಂಸ್ಥೆಗಳು, ಬ್ಯಾಂಕ್ ಗಳು ಹಾಗೂ ಸಂಬಂಧಿತ ಸಂಸ್ಥೆಗಳನ್ನು ತೀವ್ರ ಕಟ್ಟೆಚ್ಚರದಲ್ಲಿಡಲಾಗಿದೆ.
ಇದನ್ನು ಓದಿ : ಮದ್ಯದ ನಿಶೆ, ಕೈಯಲ್ಲಿ ರೈಫಲ್ : ರಸ್ತೆಯಲ್ಲಿ ಉರುಳಾಡಿದ ಪೊಲೀಸಪ್ಪನ ವಿಡಿಯೋ ವೈರಲ್.!
ಇನ್ನೂ ಈ ನಕಲಿ ನೋಟುಗಳನ್ನು ಗುರುತಿಸಲು ಅಥವಾ ಪತ್ತೆಗೆ ನೆರವು ನೀಡಲು ಈ ನಕಲಿ ನೋಟಿನ ಚಿತ್ರವನ್ನೂ ಕೂಡ ಹಂಚಿಕೊಳ್ಳಲಾಗಿದೆ.
ಈ ಕುರಿತು ಎಚ್ಚರ ವಹಿಸಬೇಕು ಎಂದು ನಾಗರಿಕರು ಹಾಗೂ ಹಣಕಾಸು ಸಂಸ್ಥೆಗಳಿಗೆ ಸೂಚಿಸಿರುವ ಪ್ರಾಧಿಕಾರಗಳು, ಯಾವುದೇ ಬಗೆಯ ಸಂಶಯಾಸ್ಪದ ನೋಟುಗಳ ಕುರಿತು ವರದಿ ಮಾಡುವಂತೆ ನಿರ್ದೇಶನ ನೀಡಿವೆ.