Saturday, July 27, 2024
spot_img
spot_img
spot_img
spot_img
spot_img
spot_img

ಆಸ್ಪತ್ರೆಯಲ್ಲಿ ಅರಳಿದ ಪ್ರತಿಭೆಗಳು : ಪೇಶೆಂಟ್ ಜಸ್ಟ್ ಮೋಯೆ, ಮೋಯೆ ; Video ನೋಡಿ.!

spot_img

ಜನಸ್ಪಂದನ ನ್ಯೂಸ್, ಗದಗ : ಗದಗನ (Gadag) ಜಿಮ್ಸ್​ ಆಸ್ಪತ್ರೆಯ (GIMS) ವೈದ್ಯಕೀಯ ವಿದ್ಯಾರ್ಥಿಗಳು (Medical Students) ಚಲಚಿತ್ರದ ಹಾಡಿಗೆ ರೀಲ್ಸ್​​ ಮಾಡುವ ಮೂಲಕ ಪೇಚಿಗೆ ಸಿಲುಕಿಕೊಂಡಿದ್ದಾರೆ.

ಹೌದು ವೈದ್ಯಕೀಯ ವಿದ್ಯಾರ್ಥಿಗಳು ಪ್ರೇಮಲೋಕ ಮೂವಿಯ “ಹಲೋ ಮೈ ಲವ್ಲಿ ಲೇಡಿ ಹೂ ಆರ್​ ಯು” ಹಾಡಿಗೆ ಮತ್ತು ಹಿಂದಿ ಚಿತ್ರದ ಹಾಡಿಗೆ ಇನ್ಸ್ಟಾಗ್ರಾಮ್​​ನಲ್ಲಿ (Instagram) ರೀಲ್ಸ್ ಮಾಡಿದ್ದಾರೆ.

ಇದನ್ನು ಓದಿ : ಫೇಸ್‌ಬುಕ್ ಲೈವ್‌ನಲ್ಲಿ ಗುಂಡಿನ ದಾಳಿ ನಡೆಸಿ ರಾಜಕೀಯ ನಾಯಕನ ಹತ್ಯೆ ; ವಿಡಿಯೋ Viral.!

ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್​​ನಲ್ಲಿ ರೀಲ್ಸ್​​ (Reels) ಮಾಡುವ ಮೂಲಕ ಸಾಕಷ್ಟು ಜನರು ಸೋಶಿಯಲ್ ಮೀಡಿಯಾ ಸ್ಟಾರ್’ಗಳಾಗುತ್ತಿದ್ದಾರೆ. ಕೆಲವರು ಟ್ರೋಲ್​ (troll) ಸಹ ಆಗುತ್ತಿದ್ದಾರೆ. ಸದ್ಯ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಆಸ್ಪತ್ರೆಯಲ್ಲಿ ಅರಳಿದ ಪ್ರತಿಭೆಗಳು, ಪೆಶೆಂಟ್ ಜಸ್ಟ್ ಮೋಯಾ.. ಮೋಯಾ..ಅಂತ ಪೋಸ್ಟ್ ಹಾಕಿ ವಿಡಿಯೋ ವೈರಲ್ ಮಾಡಲಾಗಿದೆ.

ಜಿಮ್ಸ್ ಆಸ್ಪತ್ರೆಯ ಕಾರಿಡಾರ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಇದನ್ನು ಓದಿ : Video : ಸರ್ಕಾರಿ ಆಸ್ಪತ್ರೆಯಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ; ವ್ಯಾಪಕ ಟೀಕೆ.!

ವಿದ್ಯಾರ್ಥಿಗಳು ಆಸ್ಪತ್ರೆ ಒಳಗೆ ಎಲ್ಲೆಂದರಲ್ಲಿ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್​ಗಳನ್ನು ಕಂಡ ನೆಟ್ಟಿಗರು ನಿಮ್ಮ ಹುಚ್ಚಾಟಕ್ಕೆ ಬೇರೆ ಜಾಗ ಸಿಗಲಿಲ್ವಾ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೈಕೆ (care) ಮಾಡಬೇಕಾದವರು ಈ ರೀತಿ ಆಸ್ಪತ್ರೆಯಲ್ಲಿ ರೀಲ್ಸ್​ ಮಾಡುತ್ತಾ ಕುಳಿತರೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

spot_img
spot_img
- Advertisment -spot_img