ಜನಸ್ಪಂದನ ನ್ಯೂಸ್, ಡೆಸ್ಕ್ : ‘ನಾನು ನಂದಿನಿ’ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ವಿಕ್ಕಿ (Vicky), ಇದೀಗ ತನ್ನ ತಂಡದೊಂದಿಗೆ ಮತ್ತೊಂದು ಹೊಸ ಹಾಡು ಬಿಡುಗಡೆ ಮಾಡಿದ್ದಾರೆ.
ಈ ಬಾರಿ ಅವರು ಗಾರೆ ಕೆಲ್ಸದ ನಿಂಗಿ ಎನ್ನುವ ವಿಭಿನ್ನ ಕಾನ್ಸೆಪ್ಟ್ ಸಾಂಗ್ ಅನ್ನು ಪ್ರಸ್ತುತಪಡಿಸಿದ್ದು, ಗಣೇಶೋತ್ಸವದ ಸಂಭ್ರಮಕ್ಕೆ ಟ್ರೆಂಡ್ ಆಗುವ ಸಾಧ್ಯತೆ ಹೆಚ್ಚು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
Women : 25 ವರ್ಷದ ಯುವತಿ ಜೊತೆ ಓಡಿ ಹೋದ 16 ರ ಅಪ್ರಾಪ್ತ ; ಮುಂದೆನಾಯ್ತು.?
ಹೊಸತನವನ್ನು ಹುಡುಕುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ವಿಕ್ಕಿ ಟೀಮ್, ಈ ಹಾಡಿನಲ್ಲಿ ಹಾಸ್ಯ, ನೃತ್ಯ ಮತ್ತು ಎಂಟರ್‌ಟೈನ್‌ಮೆಂಟ್ ಅಂಶಗಳನ್ನು ಸಮರ್ಪಕವಾಗಿ ಬೆರೆಸಿದೆ.
ಸೀರೆ ಶೈಲಿ, ಕೆಂಪು ಬಣ್ಣದ ವಿಗ್ ಹಾಗೂ ನೈಜ ಜೀವನದ ಗಾರೆ ಕೆಲಸದ ನಿಂಗಿ ಪಾತ್ರಕ್ಕೆ ಹತ್ತಿರವಾಗಿರುವ ವಿಕ್ಕಿಯ ಅವತಾರ ಗಮನ ಸೆಳೆಯುತ್ತಿದೆ. ಗಾನದಲ್ಲಿ ವಿಶೇಷ ನೃತ್ಯ ಹಂತಗಳು ಹಾಗೂ ಹಾಸ್ಯದ ಅಂಶಗಳು ಸೇರಿ ಪ್ರೇಕ್ಷಕರ ಮನರಂಜನೆಯನ್ನು ಹೆಚ್ಚಿಸಿವೆ.
ಈ ಹಾಡಿಗೆ ವಿಕಿಪೀಡಿಯಾ ಮತ್ತು ಅನೂಪ್ ಸುಧೀಂದ್ರ ಸಾಹಿತ್ಯ, ಸಚಿತ್ ಕ್ಲೇರ್ ಮ್ಯೂಸಿಕ್, ಆಶಿತ್ ನೃತ್ಯ ಸಂಯೋಜನೆ, ಹಾಗೂ ವಿವೇಕ್ ವೀಡಿಯೊ ನಿರ್ದೇಶನ ನೀಡಿದ್ದಾರೆ.
Cruel : ಈ 4 ರಾಶಿಯವರು ಕ್ರೌರ್ಯಕ್ಕೆ ಹೆಸರುವಾಸಿ ; ಕೋಪ ಬಂದರೆ ಕರುಣೆ ತೋರದವರು.!
ಸಂಪೂರ್ಣ ತಂಡದ ಶ್ರಮದಿಂದ ಹಾಡು ಭರ್ಜರಿಯಾಗಿ ಮೂಡಿ ಬಂದಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ವಿಕ್ಕಿ ಇಂಜಿನಿಯರಿಂಗ್ ಪೂರ್ಣಗೊಳಿಸಿ ಒಂದು ವರ್ಷ ಉದ್ಯೋಗ ಮಾಡಿದ ಬಳಿಕ ಸೋಶಿಯಲ್ ಮೀಡಿಯಾದತ್ತ ತಿರುಗಿಕೊಂಡು, ತನ್ನ ವಿಶಿಷ್ಟ ಶೈಲಿಯಿಂದ ಜನಮನ ಗೆದ್ದಿದ್ದಾರೆ.
ವಿಶೇಷವಾಗಿ ‘ನಾನು ನಂದಿನಿ’ ಹಾಡು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಬಾಯಲ್ಲಿ ಕೇಳಿಸಿಕೊಂಡಿತ್ತು. ಅದರ ನಂತರವೂ ಹಲವು ಹಾಡುಗಳು ಹಾಗೂ ಮನರಂಜನಾ ವೀಡಿಯೊಗಳನ್ನು ನೀಡಿದ್ದರೂ, ಈ ಬಾರಿ ಗಾರೆ ಕೆಲ್ಸದ ನಿಂಗಿ ಹಾಡು ಮತ್ತೆ ಸೂಪರ್ ಹಿಟ್ ಆಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
benefits-of-climbing-stairs : ಮೆಟ್ಟಿಲು ಹತ್ತುವ ಅಥವಾ ಇಳಿಯುವ ಅವಕಾಶ ಸಿಕ್ಕರೆ ಖಂಡಿತಾ ಮಿಸ್ ಮಾಡ್ಕೋಬೇಡಿ.!
ಇದೀಗ ಇನ್‌ಸ್ಟಾಗ್ರಾಂನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹಾಡಿಗೆ ಲಕ್ಷಾಂತರ ವೀಕ್ಷಣೆಗಳು ದೊರೆತಿವೆ. ಸಾಂಗ್‌ನ ಕೊನೆಯಲ್ಲಿ ನೀಡಿರುವ ಟ್ವಿಸ್ಟ್ ಪ್ರೇಕ್ಷಕರಿಗೆ ಇನ್ನಷ್ಟು ಮನರಂಜನೆ ನೀಡುತ್ತಿದೆ.
ಅಭಿಮಾನಿಗಳು “ಇದೀಗಿನ ಹೊಸ ಟ್ರೆಂಡ್ ಸಾಂಗ್”, “ಡಿಜೆ ಪ್ಲೇ ಲಿಸ್ಟ್‌ಗೆ ಪಕ್ಕಾ ಸೇರುತ್ತದೆ”, “ಲಿರಿಕ್ಸ್ ಭರ್ಜರಿ”, “ಡಾನ್ಸ್ ಸ್ಟೆಪ್ಸ್ ಸೂಪರ್” ಎಂದು ಕಮೆಂಟ್ ಮಾಡುತ್ತಿದ್ದಾರೆ.
ವಿಕ್ಕಿ (Vicky) ವಿಡಿಯೋ :
View this post on Instagram
KSCCF : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತದಲ್ಲಿ ಉದ್ಯೋಗವಕಾಶ.!
ಜನಸ್ಪಂದನ ನ್ಯೂಸ್, ನೌಕರಿ : ಬೆಂಗಳೂರು ಮೂಲದ ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತ (KSCCF) 2025ರ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಭರ್ತಿ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ KSCCF ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ KSCCF ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
Tests : 40 ವರ್ಷದ ನಂತರ ಪುರುಷರು ಮಾಡಿಸಿಕೊಳ್ಳಲೇ ಬೇಕಾದ ಪ್ರಮುಖ ಆರೋಗ್ಯ ತಪಾಸಣೆಗಳಿವು.!
ನೇಮಕಾತಿ ವಿವರಗಳು :
- ಇಲಾಖೆ ಹೆಸರು : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತ (KSCCF).
- ಒಟ್ಟು ಹುದ್ದೆಗಳು : 34.
- ಹುದ್ದೆಗಳ ಹೆಸರು : ಮಾರಾಟ ಸಹಾಯಕ ಮತ್ತು ಇತರೆ ಹುದ್ದೆಗಳು.
- ಉದ್ಯೋಗ ಸ್ಥಳ : ಬೆಂಗಳೂರು, ಕರ್ನಾಟಕ.
- ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್.
ವೇತನ ಶ್ರೇಣಿ :
- ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.12,500 ರಿಂದ ರೂ.29,600/- ವರೆಗೆ ಪ್ರತಿ ತಿಂಗಳು ಸಂಬಳ ನೀಡಲಾಗುತ್ತದೆ.
ವಯೋಮಿತಿ :
- ಕನಿಷ್ಠ ವಯಸ್ಸು : 18 ವರ್ಷ.
- ಗರಿಷ್ಠ ವಯಸ್ಸು : 35 ವರ್ಷ.
KSP : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 15000+ ಹುದ್ದೆಗಳ ನೇಮಕಾತಿ.!
ಅರ್ಜಿ ಶುಲ್ಕ :
- SC/ST/ಪ್ರವರ್ಗ-I/PWD ಅಭ್ಯರ್ಥಿಗಳು : ರೂ.500/-
- ಇತರೆ ಎಲ್ಲಾ ಅಭ್ಯರ್ಥಿಗಳು : ರೂ.1000/-
ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ SSLC / 10ನೇ ತರಗತಿ, ಫಾರ್ಮಸಿಯಲ್ಲಿ ಡಿಪ್ಲೊಮಾ ಅಥವಾ ಪದವಿ ಪೂರೈಸಿರಬೇಕು.
ಆಯ್ಕೆ ವಿಧಾನ :
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ KSCCF ಅಧಿಕೃತ ಅಧಿಸೂಚನೆಯ ಪ್ರಕಾರ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ KSCCF ವೆಬ್‌ಸೈಟ್‌ಗೆ ಭೇಟಿ ನೀಡಿ.
- ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಹಾಗೂ ಎಚ್ಚರಿಕೆಯಿಂದ ಓದಿ.
- ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
- ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ.
- ಅರ್ಜಿ ಶುಲ್ಕವನ್ನು ಪಾವತಿಸಿ (ಅವಶ್ಯವಿದ್ದರೆ ಮಾತ್ರ).
- ಸಲ್ಲಿಸಿದ ಅರ್ಜಿಯ ಪ್ರಿಂಟ್‌ಔಟ್ (Printout) ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
- ಅರ್ಜಿ ಪ್ರಾರಂಭ ದಿನಾಂಕ : 16 ಆಗಸ್ಟ್ 2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14 ಸೆಪ್ಟೆಂಬರ್ 2025.
- ಶುಲ್ಕ ಪಾವತಿಸಲು ಕೊನೆಯ ದಿನಾಂಕ : 14 ಸೆಪ್ಟೆಂಬರ್ 2025.
Women : 25 ವರ್ಷದ ಯುವತಿ ಜೊತೆ ಓಡಿ ಹೋದ 16 ರ ಅಪ್ರಾಪ್ತ ; ಮುಂದೆನಾಯ್ತು.?
ಪ್ರಮುಖ ಲಿಂಕ್‌ಗಳು :
- ಅಧಿಸೂಚನೆ (PDF) : [ಇಲ್ಲಿ ಕ್ಲಿಕ್ ಮಾಡಿ]
- ಅರ್ಜಿಗಾಗಿ ಲಿಂಕ್ : [ಇಲ್ಲಿ ಕ್ಲಿಕ್ ಮಾಡಿ]
- ಅಧಿಕೃತ KSCCF ವೆಬ್‌ಸೈಟ್ : virtualofficeerp.com
👉 Disclaimer : The above given information is available On online, candidates should check it properly before applying. This is for information only.