Friday, June 14, 2024
spot_img
spot_img
spot_img
spot_img
spot_img
spot_img

ನಡು ರಸ್ತೆಯಲ್ಲಿ ಗ್ಯಾಂಗ್ ವಾರ್ : ಇಬ್ಬರು ಆರೋಪಿಗಳ ಬಂಧನ ; ವಿಡಿಯೋ Virul.!

spot_img

ಜನಸ್ಪಂದನ ನ್ಯೂಸ್, ಉಡುಪಿ : ಉಡುಪಿ ಪೊಲೀಸರು, ನಡು ರಸ್ತೆಯಲ್ಲೇ ಗ್ಯಾಂಗ್ ವಾರ್ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ (arrested) ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಪುವಿನ ಗರುಡ ಗ್ಯಾಂಗಿನ ಆಶಿಕ್ ಮತ್ತು ರಕೀಬ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

Belagavi : ಯುವತಿಯ ಮನೆಯ ಮೇಲೆ ಕಲ್ಲು ತೂರಿ ಹುಚ್ಚಾಟ ಮೆರೆದ ಯುವಕ.!

ಮೇ 18ರಂದು ಈ ಘಟನೆ ನಡೆದಿದ್ದು, ಇದರ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ಸಾಕಷ್ಟು ವೈರಲ್ ಆಗಿತ್ತು. ಇದರ ಆಧಾರದ ಮೇಲೆ ಪೊಲೀಸರು ಮೇ 20ರಂದು ಪ್ರಕರಣ ದಾಖಲಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಆರೋಪಿಗಳನ್ನು ಕಾಪು ಮೂಲದವನು ಮತ್ತು ಗುಜ್ಜರಬೆಟ್ಟದವನೆಂದು ಪೊಲೀಸರು ಹೇಳಿದ್ದಾರೆ. ಈ ಗ್ಯಾಂಗ್ ನಲ್ಲಿದ್ದ ಉಳಿದವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಳಿ ಬಣ್ಣದ ಕಾರಲ್ಲಿರುವವರು ಕಪ್ಪುಬಣ್ಣದ ಕಾರನಲ್ಲಿದ್ದ ವ್ಯಕ್ತಿ ಲಾಂಗ್ ಹಿಡಿದು ದಾಳಿ ಮಾಡಲು ಬಂದಾಗ ಅವನ ಮೇಲೆ ವಾಹನ ಹರಿಸುವುದನ್ನು ಮತ್ತು ಅವನು ಅಂಗಾತ ನೆಲಕ್ಕೆ ಬೀಳುವುದು ಕಾಣಿಸುತ್ತದೆ. ಬಿಳಿಕಾರಲ್ಲಿದ್ದ ಇಬ್ಬರು ಯುವಕರು ಓಡಿಬಂದು ನೆಲಕ್ಕೆ ಬಿದ್ದವನ ಮೇಲೆ ಆಯುಧಗಳಿಂದ ಪ್ರಹಾರ ನಡೆಸುತ್ತಾರೆ.

Health : ಸ್ಕೀಪಿಂಗ್ ಮಾಡುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

ಕಪ್ಪು ಬಣ್ಣದ ಕಾರಲ್ಲಿದ್ದ ಯುವಕರು ಹೊರ ಬರುತ್ತಿದ್ದಂತೆಯೇ ಅವರಿಬ್ಬರು ಪರಾರಿಯಾಗುತ್ತಾರೆ. ಒಬ್ಬ ಓಡಿ ಹೋಗಿ ಬಿಳಿ ಕಾರು ಹತ್ತುತ್ತಾನೆ ಮತ್ತೊಬ್ಬ ಫೆನ್ಸಿಂಗ್ ಹಾರಿ ಕೆಮೆರಾ ಇರುವ ಕಡೆ ಓಡಿ ಬರುತ್ತಾನೆ. ನಂತರ ಕಪ್ಪು ಕಾರಿನಲಿದ್ದ ಗ್ಯಾಂಗ್ ಕೆಳಗೆ ಬಿದ್ದವನನ್ನು ಕಾರಲ್ಲಿ ಎಳೆದುಕೊಂಡು ಅಲ್ಲಿಂದ ಕಣ್ಮರೆಯಾಗುತ್ತಾರೆ.

ಕೃತ್ಯಕ್ಕೆ ಬಳಸಿದ ಎರಡು ಸ್ವಿಫ್ಟ್ ಕಾರುಗಳು ಮತ್ತು ಎರಡು ಬೈಕ್‌ಗಳು, ಒಂದು ತಲ್ವಾರ್ ಮತ್ತು ಒಂದು ಡ್ರ್ಯಾಗರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

*** ಸಾರ್ವಜನಿಕರ ಹಿತ ದೃಷ್ಟಿಯಿಂದ ವಿಡಿಯೋ ತೋರಿಸುತ್ತಿಲ್ಲ.

spot_img
spot_img
- Advertisment -spot_img