Saturday, July 27, 2024
spot_img
spot_img
spot_img
spot_img
spot_img
spot_img

Health : ಸ್ಕೀಪಿಂಗ್ ಮಾಡುವುದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಕ್ಕಳು ಹಲವು ತರಹದ ದೈಹಿಕ ವ್ಯಾಯಾಮ (physical exercise) ನೀಡುವ ಆಟಗಳನ್ನು ಆಡುತ್ತಾರೆ. ಇವುಗಳಲ್ಲಿ ಒಂದು ಹಗ್ಗದಾಟ.

ಕೇವಲ ಹಗ್ಗ ನೆಗೆಯುವುದು ದೈಹಿಕ ವ್ಯಾಯಾಮಕ್ಕೆ ಮಾತ್ರವಲ್ಲದೇ ಅದೊಂದು ಮನರಂಜನೆಯ ಆಟ. ಇನ್ನು ಹಗ್ಗದಲ್ಲಿ ಜಂಪಿಂಗ್ ಮಾಡುವುದು ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನ ನೀಡುತ್ತದೆ.

ಇದನ್ನು ಓದಿ : ಮೊಬೈಲ್ ಚಾರ್ಜ್ ಬೇಗನೆ ಖಾಲಿಯಾಗ್ತಿದೆಯಾ? ಈ ರೀತಿ ಸೆಟ್ಟಿಂಗ್ಸ್ ಚೇಂಜ್ ಮಾಡಿ.!

ಚರ್ಮದ ಆರೋಗ್ಯ :
ಚರ್ಮದ ಮೇಲೆ ಧೂಳು, ಮಾಲಿನ್ಯ ಮತ್ತು ಸೂಕ್ಷ್ಮಜೀವಿಯ (microorganism) ಬೆಳವಣಿಗೆಯನ್ನು ತಡೆಯಲು ಸ್ಕಿಪ್ಪಿಂಗ್ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ.

ಮಾನಸಿಕ ಕಾಯಿಲೆಗೆ ಉತ್ತಮ :
ಸ್ಕಿಪ್ಪಿಂಗ್ ಸಿರೊಟೋನಿನ್ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಇದರಿಂದ ನಿಮ್ಮಲ್ಲಿ ಉತ್ತಮ ಭಾವನೆ ಮೂಡುತ್ತದೆ. ಖಿನ್ನತೆ ಮತ್ತು ಆತಂಕದಂತಹ (depression and anxiety) ಮಾನಸಿಕ ಅಸ್ವಸ್ಥತೆಗಳನ್ನು ಸುಧಾರಿಸುತ್ತದೆ.

ರೋಗ ನಿರೋಧಕ ಶಕ್ತಿ :
ರೋಗ ನಿರೋಧಕ ಶಕ್ತಿ (immunity), ಟಿ-ಕೋಶಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ನ್ಯಾಚುರಲ್ ಕಿಲ್ಲರ್ ಕೋಶಗಳ ಕಾರ್ಯವನ್ನು ಸುಧಾರಿಸುತ್ತದೆ.

ಕೊಬ್ಬನ್ನು ಹೋಗಲಾಡಿಸುವುದು :
ರೋಪ್ ಜಂಪಿಂಗ್ ಇಡೀ ದೇಹಕ್ಕೆ ವ್ಯಾಯಾಮ ಕೊಡುತ್ತದೆ. ದೇಹದ ಎಲ್ಲಾ ಭಾಗಗಳಿಂದ ಕೊಬ್ಬನ್ನು (cholesterol) ಹೊರತೆಗೆಯಲು ಸಹಾಯ ಮಾಡುತ್ತದೆ. ಪ್ರತಿದಿನ 2-3 ನಿಮಿಷದಿಂದ ಜಂಪಿಂಗ್ ಪ್ರಾರಂಭಿಸಿ. ರೂಢಿಯಾದ ಮೇಲೆ 30 ನಿಮಿಷದವರೆಗೂ ಮಾಡಬಹುದು.

ಹೃದಯದ ಆರೋಗ್ಯ ಸುಧಾರಣೆ :
ಹೃದಯಾಘಾತ (heart attack), ಹೃದಯಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯ ಬೆಳವಣಿಗೆಯನ್ನು ತಡೆಯುತ್ತದೆ.

ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ತೂಕದಂತಹ (weight gain) ಹೃದಯದ ಹಲವಾರು ಕಾಯಿಲೆಗಳನ್ನು ನಿಯಂತ್ರಿಸಲು ಸ್ಕಿಪ್ಪಿಂಗ್ ಸಹಾಯ ಮಾಡುತ್ತದೆ.

ನೆನಪಿರಲಿ :
ಯಾವುದೇ ವ್ಯಕ್ತಿ ಖಾಲಿ ಹೊಟ್ಟೆಯಲ್ಲಿ ಹಗ್ಗದ ಜಂಪಿಂಗ್ ಮಾಡಬಾರದು. ಹಾಗೆ ಮಾಡುವುದರಿಂದ ಸೆಪ್ಟಮ್ನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ.

ಆಹಾರವನ್ನು ಸೇವಿಸಿದ ನಂತರವೂ ಹಗ್ಗದಲ್ಲಿ ಜಂಪಿಂಗ್ ಮಾಡುವುದನ್ನು ತಪ್ಪಿಸಬೇಕು. ಊಟದ ನಂತರ ಕನಿಷ್ಠ ಒಂದು ಗಂಟೆ (one hour) ಅಂತರವಿರುವುದು ಒಳ್ಳೆದು.

ಹಗ್ಗವನ್ನು ಜಂಪಿಂಗ್ ಮಾಡುವ ಮೊದಲು ಲಘು ವ್ಯಾಯಾಮ ಮಾಡಿ, ಇದು ಹಗ್ಗವನ್ನು ಜಂಪಿಂಗ್ನಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ.

ತೂಕ ನಷ್ಟಕ್ಕೆ ದಿನಕ್ಕೆ ಎರಡು ಬಾರಿ 10 ನಿಮಿಷದವರೆಗೂ ಸ್ಕಿಪ್ಪಿಂಗ್ ಮಾಡಬೇಕು.

1 ನಿಮಿಷದವರೆಗೂ ರೋಪ್‌ ಜಂಪ್‌ ಮಾಡಿ. ನೀವು ಆರೋಗ್ಯವಾಗಿದ್ದರೆ ನಂತರ ವೇಗದ ತೀವ್ರತೆ ಮತ್ತು ಸಮಯವನ್ನು (Speed intensity and time) ಹೆಚ್ಚಿಸಿ.

ಇದನ್ನು ಓದಿ : ಇನ್ಸ್‌ಪೆಕ್ಟರ್ ಹಾಗೂ ACPಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಕಾನ್ಸ್‌ಟೇಬಲ್.!

ಪ್ರತಿ ವಾರ ಸಮಯವನ್ನು ಕನಿಷ್ಠ 1-2 ನಿಮಿಷ ಹೆಚ್ಚಿಸಿ. ವಿರಾಮ ತೆಗೆದುಕೊಳ್ಳಿ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img