ಜನಸ್ಪಂದನ ನ್ಯೂಸ್, ಮಂಡ್ಯ/ಚಿಕ್ಕಬಳ್ಳಾಪೂರ/ರಾಯಚೂರು : ರಾಜ್ಯದ ವಿವಿಧೆಡೆ ಗಣೇಶ ಹಬ್ಬದ ವಿಸರ್ಜನಾ ಮೆರವಣಿಗೆಯಲ್ಲಿ ದುರ್ಘಟನೆಗಳು ಸಂಭವಿಸಿವೆ. ಡಿಜೆ ಸೌಂಡ್ (DJ Sound) ಹಾಗೂ ವಾದ್ಯಗಳ ಸದ್ದಿಗೆ ಕುಣಿಯುತ್ತಿದ್ದ ಮೂವರು ವ್ಯಕ್ತಿಗಳು ಏಕಾಏಕಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಘಟನೆಗಳು ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ರಾಯಚೂರಿನಲ್ಲಿ ಪ್ರತ್ಯೇಕವಾಗಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮಂಡ್ಯ ಜಿಲ್ಲೆಯಲ್ಲಿ 55 ವರ್ಷದ ವ್ಯಕ್ತಿ ಸಾವು :
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಗಣೇಶ ವಿಸರ್ಜನೆ ವೇಳೆ ಮಂಜುನಾಥ್ (55) ಡ್ಯಾನ್ಸ್ ಮಾಡುತ್ತಿದ್ದಾಗ ಹಠಾತ್ ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆ ಸಿಕ್ಕಿದ್ದು, ಪ್ರಕರಣ ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಭಕ್ತನಿಗೆ ಹೃದಯಾಘಾತ :
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮದಲ್ಲಿ ಲಕ್ಷ್ಮೀಪತಿ (40) ಎಂಬ ಭಕ್ತನು ಡಿಜೆ ಸದ್ದಿ (DJ Sound) ಗೆ ಕುಣಿಯುತ್ತಿದ್ದಾಗ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಹಬ್ಬದ ಸಂಭ್ರಮ ದುಃಖಕ್ಕೆ ತಿರುಗಿದ ಘಟನೆಗೆ ಗ್ರಾಮಸ್ಥರು ಶೋಕ ವ್ಯಕ್ತಪಡಿಸಿದ್ದಾರೆ.
ರಾಯಚೂರಿನಲ್ಲಿ ಕುಸಿದು ಬಿದ್ದ ಯುವಕ :
ರಾಯಚೂರಿನ ತೀನ್ ಖಂದಿಲ್ ಸರ್ಕಲ್ ಬಳಿ ಗಣೇಶ ವಿಸರ್ಜನೆ ವೇಳೆ ಅಭಿಷೇಕ್ (24) ಡಿಜೆ ಸೌಂಡ್ (DJ Sound) ಗೆ ಕುಣಿಯುತ್ತಿದ್ದಾಗ ಏಕಾಏಕಿ ಕುಸಿದುಬಿದ್ದ. ಆಸ್ಪತ್ರೆಗೆ ದಾಖಲಿಸಿದರೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಟುಂಬದವರು ಮಗನನ್ನು ಕಳೆದುಕೊಂಡ ದುಃಖದಲ್ಲಿ ಮುಳುಗಿದ್ದಾರೆ.
https://twitter.com/i/status/1962448737965686954
ವೈದ್ಯರ ಎಚ್ಚರಿಕೆ :
ಇತ್ತೀಚೆಗೆ ಹಬ್ಬದ ಸಂಭ್ರಮದಲ್ಲಿ ನಿದ್ರಾಹೀನತೆ, ಮದ್ಯಪಾನ, ಧೂಮಪಾನ, ಆಯಾಸ ಮತ್ತು ಜೋರಾದ ಸೌಂಡ್‌ನ (DJ Sound) ಪರಿಣಾಮ ದಿಢೀರ್ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಆರೋಗ್ಯ ಸರಿಯಾಗಿಲ್ಲದಿದ್ದಾಗ ವಿಶ್ರಾಂತಿ ಪಡೆಯುವುದು ಮತ್ತು ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದ್ದಾರೆ.
Southern Railway ಯಲ್ಲಿ 3518 ಅಪ್ರೆಂಟಿಸ್ ಹುದ್ದೆಗಳ ಭರ್ತಿ.!

ಜನಸ್ಪಂದನ ನ್ಯೂಸ್, ನೌಕರಿ : ಸೌಥೆರ್ನ್ ರೈಲ್ವೆ (Southern Railway) ವತಿಯಿಂದ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ 2025 ಅಧಿಸೂಚನೆ ಪ್ರಕಟಗೊಂಡಿದೆ. ಒಟ್ಟು 3518 ಹುದ್ದೆಗಳು ಭರ್ತಿಯಾಗಲಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ Southern Railway ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
Bite : ಕಡಿದ ಹಾವನ್ನೇ ವಿಷ ಹಿರುವಂತೆ ಮಹಿಳೆಯ ಮೈ ಮೇಲೆ ಬಿಟ್ಟ ಗ್ರಾಮಸ್ಥರು.!
Southern Railway ಹುದ್ದೆಗಳ ವಿವರ :
- ಇಲಾಖೆ ಹೆಸರು : ದಕ್ಷಿಣ ರೈಲ್ವೆ (SR).
- ಹುದ್ದೆಗಳ ಸಂಖ್ಯೆ : 3518.
- ಹುದ್ದೆಗಳ ಹೆಸರು : ಅಪ್ರೆಂಟಿಸ್.
- ಉದ್ಯೋಗ ಸ್ಥಳ : ಕೇರಳ.
- ಅಪ್ಲಿಕೇಶನ್ ಮೋಡ್ : ಆನ್‌ಲೈನ್.
ಸಂಬಳ / ಸ್ಟೈಪೆಂಡ್ :
ಅಧಿಸೂಚನೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 6,000/- ರಿಂದ 7,000/- ಸ್ಟೈಪೆಂಡ್ ನೀಡಲಾಗುತ್ತದೆ.
ನಿಮ್ಮ ಹೊಟ್ಟೆಯಲ್ಲಿರುವ ಎಲ್ಲಾ Gas ಹೊರ ಹಾಕಲು ಒಮ್ಮೆ ಹೀಗೆ ಮಾಡಿ..!
ವಯೋಮಿತಿ :
- ಕನಿಷ್ಠ : 15 ವರ್ಷ.
- ಗರಿಷ್ಠ : 24 ವರ್ಷ.
ಶೈಕ್ಷಣಿಕ ಅರ್ಹತೆ :
- ಅಭ್ಯರ್ಥಿಗಳು 10ನೇ ತರಗತಿ / 12ನೇ ತರಗತಿ / ITI ಪಾಸಾಗಿರಬೇಕು.
ಅರ್ಜಿ ಶುಲ್ಕ
- SC/ST/PwBD/ಮಹಿಳಾ ಅಭ್ಯರ್ಥಿಗಳಿಗೆ : ಶುಲ್ಕ ಇಲ್ಲ.
- ಇತರ ಅಭ್ಯರ್ಥಿಗಳಿಗೆ : ರೂ.100/-
PGCIL ಯಲ್ಲಿ ಮೇಲ್ವಿಚಾರಕ & ಇತರೆ ಸೇರಿ 1543 ಹುದ್ದೆಗಳಿಗೆ ನೇಮಕಾತಿ.!
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ Southern Railway ವೆಬ್‌ಸೈಟ್‌ಗೆ ಭೇಟಿ ನೀಡಿ.
- ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಸಂಪೂರ್ಣ ಓದಿ.
- ಆನ್‌ಲೈನ್ ಅರ್ಜಿಯ ಲಿಂಕ್ ಕ್ಲಿಕ್ ಮಾಡಿ.
- ಅಗತ್ಯವಾದ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
- ಬೇಡಿಕೆಯಿದ್ದಲ್ಲಿ ಶುಲ್ಕ ಪಾವತಿಸಿ.
- ಫೋಟೋ ಹಾಗೂ ಸಹಿ ಅಪ್‌ಲೋಡ್ ಮಾಡಿ.
- ಫಾರ್ಮ್ ಪರಿಶೀಲಿಸಿ ಸಲ್ಲಿಸಿ.
- ಭವಿಷ್ಯದ ಅವಶ್ಯಕತೆಗಾಗಿ ಪ್ರಿಂಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
- ಅರ್ಜಿಯನ್ನು ಪ್ರಾರಂಭಿಸುವ ದಿನಾಂಕ : 25 ಆಗಸ್ಟ್ 2025.
- ಅರ್ಜಿಯ ಕೊನೆಯ ದಿನಾಂಕ : 25 ಸೆಪ್ಟೆಂಬರ್ 2025.
Air Show ಅಭ್ಯಾಸದ ವೇಳೆ F-16 ಯುದ್ಧ ವಿಮಾನ ಪತನ ; ಪೈಲಟ್ ಸಾವು.!
ಪ್ರಮುಖ ಲಿಂಕುಗಳು :
- ಅಧಿಕೃತ ಅಧಿಸೂಚನೆ (PDF) : [ಇಲ್ಲಿ ಕ್ಲಿಕ್ ಮಾಡಿ]
- ಅರ್ಜಿ ಸಲ್ಲಿಸಲು ಲಿಂಕ್ : [ಇಲ್ಲಿ ಕ್ಲಿಕ್ ಮಾಡಿ]
- ಅಧಿಕೃತ ವೆಬ್‌ಸೈಟ್ : sr.indianrailways.gov.in






