ಜನಸ್ಪಂದನ ನ್ಯೂಸ್, ಆರೋಗ್ಯ : ಮಧುಮೇಹವನ್ನು ನಿಯಂತ್ರಣಕ್ಕೆ ತರಲು ಹಲವಾರು ವಿಧಾನಗಳಿವೆ, ಅವುಗಳಲ್ಲಿ ಈ “ವಾಟರ್ ಆಪಲ್ – Water Apple” ಎಂಬ ಹಣ್ಣು ಬ್ಲಡ್ ಶುಗರ್ (Blood Sugar) ನಿಯಂತ್ರಿಸಬಹುದು. ಬನ್ನಿ ಇಂದು ಆ ಹಣ್ಣಿನ ಬಗ್ಗೆ ತಿಳಿಯೋಣ.!
ಮಧುಮೇಹವು ಇಂದಿನ ಜೀವನಶೈಲಿಯಲ್ಲಿ ವೇಗವಾಗಿ ಹರಡುತ್ತಿರುವ ಒಂದು ಗಂಭೀರ ಕಾಯಿಲೆ. ಇದ ಒಮ್ಮೆ ಬಂದರೆ ಸಂಪೂರ್ಣ ಗುಣಪಡಿಸುವುದು ಸಾಧ್ಯವಿಲ್ಲ. ಆದರೆ ಸರಿಯಾದ ಆಹಾರ ಪದ್ಧತಿ ಮತ್ತು ಜೀವನಶೈಲಿ ಬದಲಾವಣೆಯ ಮೂಲಕ ಮಧುಮೇಹ (Blood Sugar) ವನ್ನು ನಿಯಂತ್ರಿಸಬಹುದು.
Heart Attack ಬರುವ ಮುನ್ನ ಕಾಣಿಸುವ 7 ಪ್ರಮುಖ ಎಚ್ಚರಿಕೆ ಲಕ್ಷಣಗಳು.!
ವೈದ್ಯರು ಮಧುಮೇಹಿಗಳಿಗೆ ವಿಶೇಷವಾಗಿ ಕೆಲವು ಹಣ್ಣು-ತರಕಾರಿಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಸಾಮಾನ್ಯವಾಗಿ ಮಧುಮೇಹಿಗಳಿಗೆ ಸಿಹಿ ಹಣ್ಣುಗಳನ್ನು ತಿನ್ನಬಾರದೆಂದು ಹೇಳಲಾಗುತ್ತದೆ. ಆದರೆ “ವಾಟರ್ ಆಪಲ್” ಎಂಬ ಹಣ್ಣು ಬ್ಲಡ್ ಶುಗರ್ (Blood Sugar) ಏರಿಳಿಕೆಗೆ ಕಾರಣವಾಗದೇ, ಬದಲಾಗಿ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.
ವಾಟರ್ ಆಪಲ್ ಎಲ್ಲೆಲ್ಲಿ ಸಿಗುತ್ತದೆ?
ವಾಟರ್ ಆಪಲ್ ಹಣ್ಣುಗಳನ್ನು ಪಶ್ಚಿಮ ಬಂಗಾಳ, ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದು. ಈ ಹಣ್ಣು ನೀರು ಸಮೃದ್ಧವಾಗಿರುವುದರಿಂದ ಇದನ್ನು “ವಾಟರ್ ಆಪಲ್” ಎಂದು ಕರೆಯಲಾಗುತ್ತದೆ.
15 ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ : Swamiji ವಿರುದ್ಧ FIR ದಾಖಲು.!
ಮಧುಮೇಹ (Blood Sugar) ದ ಮೇಲೆ ಪರಿಣಾಮ :
ವಾಟರ್ ಆಪಲ್‌ನಲ್ಲಿ ಶಕ್ತಿಶಾಲಿ ಆಂಟಿ-ಹೈಪರ್ಗ್ಲೈಸೆಮಿಕ್ ಗುಣಗಳು ಇವೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಈ ಹಣ್ಣಿನಲ್ಲಿರುವ ಜಾಂಬೊಸಿನ್ ಎಂಬ ಆಲ್ಕಲಾಯ್ಡ್ ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುವ ಕ್ರಿಯೆಯನ್ನು ತಡೆಯುತ್ತದೆ. ಇದರಿಂದ ಮಧುಮೇಹಿಗಳಿಗೆ ಸಹಜವಾಗಿ ಬ್ಲಡ್ ಶುಗರ್ (Blood Sugar) ನಿಯಂತ್ರಣ ಸಾಧ್ಯವಾಗುತ್ತದೆ.
ವಾಟರ್ ಆಪಲ್‌ನ ಇತರೆ ಆರೋಗ್ಯ ಲಾಭಗಳು :
- ಜೀರ್ಣಕ್ರಿಯೆ ಸುಧಾರಣೆ : ವಾಟರ್ ಆಪಲ್‌ನಲ್ಲಿ ಇರುವ ಫೈಬರ್ ಜೀರ್ಣಾಂಗದ ಆರೋಗ್ಯಕ್ಕೆ ಬಹಳ ಮುಖ್ಯ. ಫೈಬರ್‌ಯುಕ್ತ ಆಹಾರಗಳು ನಿಧಾನವಾಗಿ ಜೀರ್ಣವಾಗುವುದರಿಂದ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ ಮತ್ತು ಮೆಟಾಬಾಲಿಸಂ ಉತ್ತಮಗೊಳ್ಳುತ್ತದೆ.
- ಹೃದಯದ ಆರೋಗ್ಯ : ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಉತ್ತಮ ಪ್ರಮಾಣದಲ್ಲಿ ದೊರೆಯುತ್ತದೆ. ಪೊಟ್ಯಾಸಿಯಮ್ ಸೇವನೆಯು ಹೃದಯದ ಆರೋಗ್ಯವನ್ನು ಕಾಪಾಡಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
- ಹಲ್ಲು ಮತ್ತು ಮೂಳೆಗಳ ಬಲವರ್ಧನೆ : ಕ್ಯಾಲ್ಸಿಯಮ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿರುವ ವಾಟರ್ ಆಪಲ್ ಹಲ್ಲುಗಳನ್ನು ಬಲಪಡಿಸುವುದರ ಜೊತೆಗೆ ಮೂಳೆಗಳನ್ನು ಗಟ್ಟಿಯಾಗಿಸುತ್ತದೆ.
- ಕಣ್ಣಿನ ದೃಷ್ಟಿ ಸುಧಾರಣೆ : ವಿಟಮಿನ್ A ಮತ್ತು ವಿಟಮಿನ್ C ಸಮೃದ್ಧವಾಗಿರುವುದರಿಂದ ವಾಟರ್ ಆಪಲ್ ದೃಷ್ಟಿ ಶಕ್ತಿ ವೃದ್ಧಿಸಲು ಸಹಕಾರಿಯಾಗಿದೆ. ಕಣ್ಣಿನ ಆರೋಗ್ಯ ಕಾಪಾಡಲು ಇದು ಒಳ್ಳೆಯ ಹಣ್ಣು.
ಗರ್ಭಪಾತ Pill ಸೇವಿಸಿದ ನಂತರ ಅಪ್ರಾಪ್ತೆಯ ಸಾವು ; ಟ್ಯೂಷನ್ ಶಿಕ್ಷಕನ ಬಂಧನ.!
ತಜ್ಞರ ಸಲಹೆ :
ಮಧುಮೇಹಿಗಳು ಆಹಾರದಲ್ಲಿ ವಾಟರ್ ಆಪಲ್ ಸೇರಿಸಿಕೊಳ್ಳುವುದು ಉತ್ತಮ. ಆದರೆ ಪ್ರತಿಯೊಬ್ಬರ ದೇಹದ ಸ್ಥಿತಿಗನುಸಾರ ಪರಿಣಾಮ ಬದಲಾಗಬಹುದಾದ ಕಾರಣ, ಈ ಹಣ್ಣನ್ನು ನಿಯಮಿತವಾಗಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಂತ ಮುಖ್ಯ.
👉 ಸಾರಾಂಶ : ಮಧುಮೇಹವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲವಾದರೂ, ನಿಯಂತ್ರಣ ಸಾಧಿಸಲು “ವಾಟರ್ ಆಪಲ್” ಹಣ್ಣು ಸಹಾಯಕ. ಇದರಿಂದ ಬ್ಲಡ್ ಶುಗರ್ (Blood Sugar) ನಿಯಂತ್ರಣ ಮಾತ್ರವಲ್ಲದೆ, ಹೃದಯ, ಜೀರ್ಣಕ್ರಿಯೆ, ಮೂಳೆ ಮತ್ತು ಕಣ್ಣಿನ ಆರೋಗ್ಯಕ್ಕೂ ಪ್ರಯೋಜನ ಸಿಗುತ್ತದೆ.
Disclaimer: ಇಲ್ಲಿ ನೀಡಿರುವ ಮಾಹಿತಿಗಳು ಸಾಮಾನ್ಯ ಆರೋಗ್ಯ ಸಲಹೆಗಳಾಗಿದ್ದು, ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ರೀತಿಯ ಚಿಕಿತ್ಸೆಗೆ ಮೊದಲು ತಜ್ಞರ ಸಲಹೆ ಅವಶ್ಯಕ.
Meal : ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಕುಳಿತ ಕ್ಷಣವೇ ಹೃದಯಾಘಾತ ; ವ್ಯಕ್ತಿ ಸಾವನ್ನಪ್ಪಿದ ದೃಶ್ಯ ವೈರಲ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದಕ್ಕೆ ಸಾಕ್ಷಿಯಾಗುವಂತೆ, ಮಧ್ಯಪ್ರದೇಶದ ಇಂದೋರ್ ನಗರದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಊಟಕ್ಕೆ (Meal) ಕುಳಿತ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ನಡೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಆಘಾತಕ್ಕೊಳಗಾಗಿದ್ದಾರೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ರೆಸ್ಟೋರೆಂಟ್‌ನಲ್ಲಿ ಜನರು ಸಾಮಾನ್ಯವಾಗಿ ಊಟ (Meal) ಮಾಡುತ್ತಿದ್ದರು. ಅಷ್ಟರಲ್ಲೇ, ಕನ್ನಡಕ ಧರಿಸಿದ್ದ ವ್ಯಕ್ತಿಯೊಬ್ಬರು ತಮ್ಮ ಕುರ್ಚಿಯಲ್ಲಿ ಕುಳಿತು ಫೋನ್ ನೋಡುತ್ತಾ ಇದ್ದರು.
Heart Attack ಬರುವ ಮುನ್ನ ಕಾಣಿಸುವ 7 ಪ್ರಮುಖ ಎಚ್ಚರಿಕೆ ಲಕ್ಷಣಗಳು.!
ಕೆಲವೇ ಕ್ಷಣಗಳಲ್ಲಿ ಅವರು ತೀವ್ರ ಅಸ್ವಸ್ಥತೆಯಿಂದ ಎದೆ ಹಿಡಿದುಊಟ (Meal) ದ ಮೇಜಿನ ಮೇಲೆ ಬಿದ್ದು ಬಿಟ್ಟಿದ್ದಾರೆ. ಕುಟುಂಬ ಸದಸ್ಯರು ಹಾಗೂ ಹತ್ತಿರ ಕುಳಿತವರು ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳದೆ ಪ್ರಜ್ಞಾಹೀನಗೊಂಡಿದ್ದರು. ಬಳಿಕ ಅವರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಹಲವರು ಈ ರೀತಿಯ ಹಠಾತ್ ಸಾವುಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
LIC : 5 ವರ್ಷ ಹೂಡಿದ್ರೆ ಸಾಕು, ಜೀವನಪರ್ಯಂತ ತಿಂಗಳಿಗೆ 15 ಸಾವಿರ ರೂ. ಲಭ್ಯ.
ಕೆಲವು ಬಳಕೆದಾರರು, “ಇತ್ತೀಚೆಗೆ ಹೃದಯಾಘಾತದಿಂದ ಹಠಾತ್ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಿಜವಾದ ಕಾರಣ ಪತ್ತೆಹಚ್ಚಲು ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವೈದ್ಯರ ಪ್ರಕಾರ, ಅನಿಯಮಿತ ಜೀವನಶೈಲಿ, ಒತ್ತಡ, ಒಳ್ಳೆಯ ಊಟ (Meal)ದ ಬದಲಾಗಿ ಅತಿಯಾದ ಫಾಸ್ಟ್ ಫುಡ್ ಸೇವನೆ ಹಾಗೂ ವ್ಯಾಯಾಮದ ಕೊರತೆ ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಬಹುದು. ತೀವ್ರ ಎದೆನೋವು, ಉಸಿರಾಟದ ತೊಂದರೆ, ಬೆವರು ಇವು ಹೃದಯಾಘಾತದ ಆರಂಭಿಕ ಎಚ್ಚರಿಕೆ ಲಕ್ಷಣಗಳಾಗಿದ್ದು, ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಜೀವ ಉಳಿಸಲು ಸಹಾಯಕ.
ಗರ್ಭಪಾತ Pill ಸೇವಿಸಿದ ನಂತರ ಅಪ್ರಾಪ್ತೆಯ ಸಾವು ; ಟ್ಯೂಷನ್ ಶಿಕ್ಷಕನ ಬಂಧನ.!
ಊಟಕ್ಕೆ (Meal) ಕುಳಿತ ವ್ಯಕ್ತಿಯ ಹೃದಯಾಘಾತದ ವಿಡಿಯೋ :
इंदौर का एक रेस्टोरेंट – दोपहर 2 बजे…
फ़ोन पर बात हो रही है, खाने का आर्डर दिया गया, थाली तो आई लेकिन खाने से पहले मौत आ गई।
केवल 30 सेकंड में सब ख़त्म..
ज़िंदगी इतनी अनिश्चित है कि पता नहीं किस पल ऊपरवाले का बुलावा आ जाए।🥺 pic.twitter.com/5BrVuSkl3a— 𝙼𝚛 𝚃𝚢𝚊𝚐𝚒 (@mktyaggi) September 22, 2025