HomeHealth & Fitnessಫ್ರಿಡ್ಜ್‌ನಲ್ಲಿಟ್ಟ ಕಲ್ಲಂಗಡಿ ತಿನ್ನುವವರೇ ಎಚ್ಚರ..! ಈ ಮಾಹಿತಿ ತಪ್ಪದೇ ಓದಿ.
spot_img
spot_img

ಫ್ರಿಡ್ಜ್‌ನಲ್ಲಿಟ್ಟ ಕಲ್ಲಂಗಡಿ ತಿನ್ನುವವರೇ ಎಚ್ಚರ..! ಈ ಮಾಹಿತಿ ತಪ್ಪದೇ ಓದಿ.

ಜನಸ್ಪಂದನ ನ್ಯೂಸ್‌, ಆರೋಗ್ಯ : ಬೇಸಿಗೆ ಕಾಲದಲ್ಲಿ ದಾಹ ನೀಗಿಸಲು ಮತ್ತು ತಂಪನ್ನು ಅನುಭವಿಸಲು ಹಲವರು ಕಲ್ಲಂಗಡಿ (Watermelon) ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಆದರೆ ತುಂಬಾ ತಣ್ಣಗಿರುವ ಈ ಹಣ್ಣನ್ನು ನೇರವಾಗಿ ಫ್ರಿಡ್ಜ್‌ನಿಂದ ತೆಗೆದು ತಿನ್ನುವುದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಮಾಹಿತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ರಿಡ್ಜ್‌ನಲ್ಲಿಟ್ಟ ಕಲ್ಲಂಗಡಿ ತಿಂದರೆ ಏನಾಗುತ್ತೇ?

ದೇಹದ ಉಷ್ಣತೆಗೆ ಹೋಲಿಸಿದರೆ ತುಂಬಾ ಕಡಿಮೆ ತಾಪಮಾನ ಹೊಂದಿರುವ ಆಹಾರವನ್ನು ಸೇವಿಸಿದಾಗ, ದೇಹವು ಅದನ್ನು ತನ್ನ ಸಾಮಾನ್ಯ ಮಟ್ಟಕ್ಕೆ ತರುವುದಕ್ಕಾಗಿ ಹೆಚ್ಚುವರಿ ಶಕ್ತಿಯನ್ನು ಬಳಕೆ ಮಾಡಬೇಕಾಗುತ್ತದೆ. ಇದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳುವ ಸಾಧ್ಯತೆ ಇದೆ.

ಪರಿಣಾಮವಾಗಿ ಹೊಟ್ಟೆ ಉಬ್ಬುವುದು, ಭಾರವಾದ ಅನುಭವ ಅಥವಾ ಅಸಹಜತೆ ಕಾಣಿಸಬಹುದು. ವಿಶೇಷವಾಗಿ ಜೀರ್ಣಾಂಗ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ತಕ್ಷಣದ ಅಸ್ವಸ್ಥತೆಗೆ ಕಾರಣವಾಗಬಹುದು.

ಇದೇ ಸಂದರ್ಭದಲ್ಲಿ ಅತಿಯಾದ ತಣ್ಣನೆಯ ಹಣ್ಣುಗಳನ್ನು ಸೇವಿಸುವುದರಿಂದ ಗಂಟಲಿನಲ್ಲಿ ಕಿರಿಕಿರಿ ಉಂಟಾಗಬಹುದು. ಇದು ಮುಂದುವರಿದರೆ ಗಂಟಲು ನೋವು, ಕೆಮ್ಮು ಅಥವಾ ಶೀತದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

 ಈ ಕ್ರೈಂ ಸುದ್ದಿ ಓದಿ : ವೇಶ್ಯಾವಾಟಿಕೆ ಆರೋಪ : ಯುವತಿಗೆ ಹಲ್ಲೆ ; 5 ಆರೋಪಿಗಳ ಬಂಧನ.

ಈ ಹಣ್ಣನ್ನು ಸಂಗ್ರಹಿಸುವ ವಿಧಾನದಲ್ಲೂ ಎಚ್ಚರಿಕೆ ಅಗತ್ಯವಿದೆ. ಹಣ್ಣನ್ನು ಕತ್ತರಿಸಿ ದೀರ್ಘಕಾಲ ಫ್ರಿಡ್ಜ್‌ನಲ್ಲಿ ಇಡುವುದರಿಂದ ಅದರಲ್ಲಿರುವ ವಿಟಮಿನ್ ಸಿ ಸೇರಿದಂತೆ ಪ್ರಮುಖ ಪೋಷಕಾಂಶಗಳು ಕಡಿಮೆಯಾಗುವ ಸಾಧ್ಯತೆ ಇದೆ.

ಜೊತೆಗೆ, ಕತ್ತರಿಸಿದ ಭಾಗಗಳಲ್ಲಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಬೆಳೆಯುವ ಸಾಧ್ಯತೆಯೂ ಇರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಇನ್ನೊಂದೆಡೆ, ಕಲ್ಲಂಗಡಿ (Watermelon) ಯಲ್ಲಿ ಲೈಕೋಪೀನ್ ಮತ್ತು ಬೀಟಾ-ಕ್ಯಾರೋಟಿನ್ ಎಂಬ ಪೋಷಕಾಂಶಗಳು ಸಮೃದ್ಧವಾಗಿವೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿಯಾಗುತ್ತವೆ.

ಇದನ್ನು ಓದಿ : ಚಿತ್ರರಂಗದ ಖ್ಯಾತ ನಟಿ ಮಂಜು ವಾರಿಯರ್‌ಗೆ ಮುತ್ತಿಟ್ಟ ಅಭಿಮಾನಿ ; ವಿಡಿಯೋ ವೈರಲ್.!

ಈ ಲಾಭಗಳನ್ನು ಸಂಪೂರ್ಣವಾಗಿ ಪಡೆಯಬೇಕಾದರೆ, ಕಲ್ಲಂಗಡಿಯನ್ನು ಫ್ರಿಡ್ಜ್‌ನಿಂದ ತೆಗೆದ ತಕ್ಷಣ ಸೇವಿಸುವುದನ್ನು ತಪ್ಪಿಸಿ, ಸ್ವಲ್ಪ ಸಮಯ ಕೋಣೆಯ ಉಷ್ಣಾಂಶಕ್ಕೆ ಬಂದು ಬಳಿಕ ಸೇವಿಸುವುದು ಉತ್ತಮ ಕ್ರಮವೆಂದು ತಜ್ಞರು ಸಲಹೆ ನೀಡುತ್ತಾರೆ.


ಗಮನಿಸಿ : ಮೇಲಿನ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಾಮಾನ್ಯ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.

Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments