Monday, July 14, 2025

Janaspandhan News

HomeGeneral NewsClient : ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಕೀಲರಿಂದ ತಮ್ಮದೇ ಕಕ್ಷಿದಾರ ಮೇಲೆ ಹಲ್ಲೆ.!
spot_img
spot_img

Client : ನ್ಯಾಯಾಲಯದ ಆವರಣದಲ್ಲಿ ಮಹಿಳಾ ವಕೀಲರಿಂದ ತಮ್ಮದೇ ಕಕ್ಷಿದಾರ ಮೇಲೆ ಹಲ್ಲೆ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನ್ಯಾಯಾಲಯದ ಆವರಣದಲ್ಲಿಯೇ ತಮ್ಮದೇ ಕಕ್ಷಿದಾರ/ಕ್ಲೈಂಟ್ (Client) ಮೇಲೆ ಓರ್ವ ಮಹಿಳಾ ವಕೀಲರಿಂದ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

ಬಿಲಾಸಪುರ ಕುಟುಂಬ ನ್ಯಾಯಾಲಯ ಆವರಣದಲ್ಲಿ ಶನಿವಾರದಂದು ಸಂಭವಿಸಿದ ಈ ಘಟನೆಯು ಸಾರ್ವಜನಿಕರಲ್ಲಿ ಆಕ್ರೋಶದ ಹೊಗೆ ಎಳೆದಿದೆ. ಮಹಿಳಾ ವಕೀಲ ಲೀನಾ ಅಗ್ರಹಾರಿ ತಮ್ಮದೇ ಕ್ಲೈಂಟ್ (Client) ಸುಮನ್ ಠಾಕೂರ್ ಮತ್ತು ಅವರ ಕುಟುಂಬದ ಮೇಲೆ ನೇರವಾಗಿ ಶಾರೀರಿಕ ಹಲ್ಲೆ ನಡೆಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!

ಕುತೂಹಲದ ಸಂಗತಿಯೆಂದರೆ, ಈ ಘಟನೆ ನಡೆಯುತ್ತಿರುವಾಗ ಸ್ಥಳದಲ್ಲೇ ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆ ಇತರ ಪೊಲೀಸ್ ಇದ್ದರೂ ಕಕ್ಷಿದಾರರ (Client) ಮೇಲೆ ಹಲ್ಲೆ ನಡೆದರೂ ಸಹ ಯಾವುದೇ ತಕ್ಷಣದ ಕ್ರಮ ಕೈಗೊಂಡಿಲ್ಲದೆ ಇರುವುದು.

ಹಲ್ಲೆಗೊಳಗಾದ ಸುಮನ್ ಠಾಕೂರ್ ತಮ್ಮ ಪತಿ ವಿರುದ್ಧ ಕುಟುಂಬ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಬಂದಿದ್ದರು. ಅವರೊಂದಿಗೆ ತಾಯಿ ಸಾವಿತ್ರಿ ದೇವಿ (ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರು) ಮತ್ತು ತಮ್ಮ ಸಹೋದರ ಮಕುಂದ್ ಠಾಕೂರ್ ಇದ್ದರು.

ಇದನ್ನು ಓದಿ : Krishna River : ಫೋಟೋಶೂಟ್ ನೆಪದಲ್ಲಿ ಪತಿಯನ್ನೇ ಕೃಷ್ಣಾ ನದಿಗೆ ತಳ್ಳಿದ ಪತ್ನಿ.?

ಕಕ್ಷಿದಾರೆ (Client) ಸುಮನ್ ಠಾಕೂರ್ ಅವರ ಆರೋಪದ ಪ್ರಕಾರ, ವಕೀಲೆ ಲೀನಾ ಅಗ್ರಹಾರಿ ಈಗಾಗಲೆ ಪ್ರಕರಣಕ್ಕೆ ಸಂಬಂಧಿಸಿದ ಮೊತ್ತವನ್ನು ತೆಗೆದುಕೊಂಡಿದ್ದರೂ ಸಹ ಪ್ರಕರಣವನ್ನು ಮುಂದುವರಿಸಲು ನಿರಾಕರಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ವಕೀಲೆ ಲೀನಾ ಆಕ್ರೋಶಗೊಂಡು ದೌರ್ಜನ್ಯಕ್ಕೆ ಮುಂದಾದರೆಂದು ಕುಟುಂಬದವರು ಹೇಳಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ವಕೀಲೆ ಲೀನಾ ಅಗ್ರಹಾರಿ, ಕಕ್ಷಿದಾರೆ (Client) ಸುಮನ್‌ನ್ನು ಕೂದಲಿನಿಂದ ಎಳೆದು ತಳ್ಳಿ ನೆಲಕ್ಕೆ ಹಾಕಿ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಮಧ್ಯಪ್ರವೇಶ ಮಾಡಲು ಬಂದ ಅವರ ತಾಯಿಯನ್ನು ಕೂಡ ತಳ್ಳಿದಳು. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಾವಿತ್ರಿ ದೇವಿಗೆ ಈ ವೇಳೆ ತೀವ್ರ ಹೊಡೆತ ಬಿದ್ದಿದೆ.

ಇದನ್ನು ಓದಿ : Bath scene : ಮಹಿಳೆಯರ ಸ್ನಾನದ ದೃಶ್ಯ ಚಿತ್ರೀಕರಿಸುತ್ತಿದ್ದ ವ್ಯಕ್ತಿ ಬಂಧನ.!

ಹಲ್ಲೆಯ ದೃಶ್ಯವನ್ನು ಮೊಬೈಲ್‌ನಲ್ಲಿ ದಾಖಲೆ ಮಾಡುತ್ತಿದ್ದ ಮಕುಂದ್ ಠಾಕೂರ್ ಅವರ ಮೇಲೂ ವಕೀಲರು ತೀವ್ರವಾದ ಹಲ್ಲೆ ಮಾಡುವಂತೆ ನಡೆದುಕೊಂಡು ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

ಘಟನೆ ನಡೆದ ವೇಳೆ ಸ್ಥಳದಲ್ಲಿದ್ದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ಪ್ರಶ್ನೆಯಾಗಿಯೇ ಉಳಿದಿದೆ.  ಅಲ್ಲದೆ, ಇತರ ಕೆಲ ವಕೀಲರು ಲೀನಾ ಅಗ್ರಹಾರಿಯ ಪರವಾಗಿ ನಿಂತು ದೂರುದಾರ (Client) ರ ವಿರುದ್ಧವೇ ಮಾತನಾಡಿದ್ದಾರೆ ಎಂಬ ವರದಿಯೂ ಬಂದಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಿವಿಲ್ ಲೈನ್ಸ್ ಪೊಲೀಸ್ ಠಾಣಾಧಿಕಾರಿ, “ವಕೀಲ ಮತ್ತು ದೂರುದಾರ (Client) ಕುಟುಂಬದ ನಡುವೆ ಜಗಳ ಮತ್ತು ಘರ್ಷಣೆ ನಡೆದಿದ್ದು, ಎರಡು ಪಕ್ಷಗಳ ಮಾತು ಕತೆಯ ನಂತರ ಸಮಸ್ಯೆ ಇತ್ಯರ್ಥವಾಘಿದೆ ಎಂದಿದ್ದಾರೆ.

ತಮ್ಮದೇ ಕಕ್ಷಿದಾರರ/ಕ್ಲೈಂಟ್ (Client) ಮೇಲೆ ಹಲ್ಲೆ ಮಾಡುವ ವಿಡಿಯೋ :


ನ್ಯಾಯಾಲಯದ ಆವರಣದಲ್ಲಿ ಹಲ್ಲೆ? ಪದೇಪದೇ ಮರುಕಳಿಸುತ್ತಿರುವ ಘಟನೆಗಳು :

ಇದೇ ತಿಂಗಳ ಕೊನೆಗೆ, ಜುಲೈ 5ರಂದು ಬಿಲಾಸಪುರದ ಟಿಫ್ರಾ ಪ್ರದೇಶದ ಕುಟುಂಬ ನ್ಯಾಯಾಲಯದಲ್ಲಿ ಮತ್ತೊಬ್ಬ ವಕೀಲ ಕುಂತಿ ಪವಾರ್ ವಿರುದ್ಧ, ಪತಿಯನ್ನು ಬಂಧನದಿಂದ ಬಿಡುಗಡೆಗೊಳಿಸಲು ಹಣ ನೀಡಿದ್ದರೂ ಜಾಮೀನು ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ದೂರುದಾರ ಪ್ರಿಯಾ ದ್ವಿವೇದಿಯ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿತ್ತು.

ಈ ಮೂಲಕ ನ್ಯಾಯಾಲಯದ ಆವರಣದಲ್ಲಿ ವಕೀಲರಿಂದ ಸಾಮಾನ್ಯ ನಾಗರಿಕರ ಮೇಲಿನ ದೌರ್ಜನ್ಯ ಪದೇಪದೇ ನಡೆಯುತ್ತಿರುವ ಪೈಕಿ ಇತ್ತೀಚಿನ ಉದಾಹರಣೆಯಿದು. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಘಟನೆಗಳು ಸಂಭವಿಸುವುದು ಕಾನೂನು ವ್ಯವಸ್ಥೆಯ ಮೇಲೆ ಅನುಮಾನ ಹುಟ್ಟಿಸುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಕಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.


Krishna River : ಫೋಟೋಶೂಟ್ ನೆಪದಲ್ಲಿ ಪತಿಯನ್ನೇ ಕೃಷ್ಣಾ ನದಿಗೆ ತಳ್ಳಿದ ಪತ್ನಿ.?

Krishna River

ಜನಸ್ಪಂದನ ನ್ಯೂಸ್, ರಾಯಚೂರು : ಫೋಟೋಶೂಟ್ ನೆಪದಲ್ಲಿ ಪತಿಯನ್ನೇ ಕೃಷ್ಣಾ ನದಿ (Krishna River) ಗೆ ಪತ್ನಿಯೋರ್ವಳು ತಳ್ಳಿದ್ದಾಳೆಂಬ ಆರೋಪ ಕೇಳಿ ಬಂದಿದೆ.

ರಾಯಚೂರು ತಾಲ್ಲೂಕಿನ ಗುರ್ಜಾಪುರ ಹತ್ತಿರದ ಕೃಷ್ಣಾ ನದಿ (Krishna River) ಸೇತುವೆ ಬಳಿ ಅಚ್ಚರಿಯ ಘಟನೆಯೊಂದು ನಡೆದಿದೆ. ನವದಂಪತಿಗಳು ಫೋಟೊಶೂಟ್ ಮಾಡುವ ನೆಪದಲ್ಲಿ ಕೃಷ್ಣಾ ನದಿ (Krishna River) ಯ ಸೇತುವೆಯ ಮೇಲೆ ಹೋಗಿದ್ದಾರೆ. ಆದರೆ ಈ ಸಂದರ್ಭದಲ್ಲಿ ಪತಿಯನ್ನು ನದಿಗೆ ತಳ್ಳಿದ ಆರೋಪ ಪತ್ನಿಯ ಮೇಲೆ ಕೇಳಿಬಂದಿದೆ.

ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!

ಸ್ಥಳೀಯರ ಮಾಹಿತಿಯ ಪ್ರಕಾರ, ಪತ್ನಿ ಮೊದಲಿಗೆ ಕೃಷ್ಣಾ ನದಿ (Krishna River) ಸೇತುವೆ ಮೇಲೆ ನಿಂತು ಫೋಟೋ ತೆಗೆಸಿಕೊಂಡಿದ್ದಾಳೆ. ಬಳಿಕ, ಪತಿಗೆ “ನೀನು ಸೇತುವೆ ತುದಿಗೆ ನಿಲ್ಲು, ನಿನ್ನ ಫೋಟೋ ತೆಗೆಸ್ತೀನಿ” ಎಂದು ಹೇಳಿದ್ದಾಳೆ. ಆಗ ಪತಿ ಸೇತುವೆಯ ತುದಿಯಲ್ಲಿ ನಿಂತ ಕ್ಷಣದಲ್ಲಿ, ಪತ್ನಿಯು ಆತನನ್ನು ಕೃಷ್ಣಾ ನದಿಗೆ ತಳ್ಳಿದ್ದಾಳೆ ಎನ್ನಲಾಗುತ್ತಿದೆ.

ಘಟನೆಯ ಸಮಯದಲ್ಲಿ ಕೃಷ್ಣಾ ನದಿ (Krishna River) ಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದ ಹಿನ್ನಲೆಯಲ್ಲಿ ವ್ಯಕ್ತಿ ತುಸು ದೂರ ಕೊಚ್ಚಿಕೊಂಡು ಹೋಗಿ ಅಪಾಯದ ಸ್ಥಿತಿಗೆ ಸಿಲುಕಿದ್ದಾರೆ. ಆದರೆ ವ್ಯಕ್ತಿ (ಪತಿ) ಗೆ ಈಜು ಬರುತ್ತಿರುವ ಕಾರಣದಿಂದ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಅವರು, ಮಧ್ಯ ಭಾಗದ ಬಂಡೆಯೊಂದರ ಮೇಲೆ ಏರಿ ಕುಳಿತು ಸಹಾಯಕ್ಕಾಗಿ ಕೂಗಿದ್ದಾರೆ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!

ಈ ಸಂದರ್ಭದಲ್ಲಿ, ಕೃಷ್ಣಾ ನದಿ (Krishna River) ಹತ್ತಿರದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಆ ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ್ದರು. ತಕ್ಷಣವೇ ಹಗ್ಗದ ಸಹಾಯದಿಂದ ನಿರಂತರ ಎರಡು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಸ್ಥಳೀಯರು ವ್ಯಕ್ತಿಯನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ.

ಪತ್ನಿಯೇ ನದಿಗೆ ತಳ್ಳಿದಳೇ? ಅಥವಾ ಪತಿಯೇ ಕಾಲು ಜಾರಿ Krishna River ಗೆ ಬಿದ್ದರೇ? ಎಂಬುದರ ಬಗ್ಗೆ ದ್ವಂದ್ವ ಉಂಟಾಗಿದೆ. ಆದರೆ ಪತಿ, ಪತ್ನಿಯೇ ಉದ್ದೇಶ ಪೂರ್ವಕವಾಗಿ ತಳ್ಳಿದ್ದಾಳೆ ಎಂದು ಆರೋಪಿಸಿದ್ದಾರೆ. ಇತ್ತ ಪತ್ನಿ ಮಾತ್ರ “ಅವರು ಕಾಲು ಜಾರಿ ಪತಿ ಬಿದ್ದರು” ಎಂಬ ವಿವರಣೆ ನೀಡಿದ್ದಾರೆ.

ಇದನ್ನು ಓದಿ : Humaira : ನಟಿ ಹುಮೈರಾ ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ.!

ಕೆಲವರ ಹೇಳಿಕೆಗಳ ಪ್ರಕಾರ ಪತ್ನಿಯು ಈ ಕೃತ್ಯವನ್ನು ಜಾಣ್ಮೆಯಿಂದ ಮಾಡಿದ್ದಾಳೆ ಎಂದು ಶಂಕೆ ವ್ಯಕ್ತವಾಗಿದೆ. ಈ ದಂಪತಿ ಯಾರು.? ಯಾವ ಗ್ರಾಮದಿಂದ ಬಂದಿದ್ದರು.? ಏತಕ್ಕಾಗಿ ಬಂದಿದ್ದರು.? ಈ ಘಟನೆಯ ಹಿಂದಿರುವ ನಿಖರ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ಮಾಹಿತಿ ಕಲೆಹಾಕಲು ತನಿಖೆ ಮುಂದುವರೆಸಿದ್ದಾರೆ.

Note : ಇತ್ತೀಚಿನ ದಿನಗಳಲ್ಲಿ ಪತಿಯ ಮೇಲೆ ಪತ್ನಿಯಿಂದ ನಡೆಯುತ್ತಿರುವ ಹಲ್ಲೆಗಳ ಅಥವಾ ಹತ್ಯೆಯಂತಹ ಘಟನೆಗಳು ತುಂಬಾನೇ ಹೆಚ್ಚುತ್ತಿವೆ. ಈ ಘಟನೆಗಳು ಸಮಾಜಕ್ಕೆ ಏನು ಸಂದೇಶ ಕೊಡುತಿವೆ ಅಂತ ಯೋಚಿಸಬೇಕಾಗಿದೆ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments