Friday, June 21, 2024
spot_img
spot_img
spot_img
spot_img
spot_img
spot_img

ಶ್ರೀಮಂತ ವೇಶ್ಯೆಯರ ಪಾತ್ರದಲ್ಲಿ ಫೇಮಸ್​ ನಟಿಯರ ‘ಹೀರಾಮಂಡಿ’.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಿರ್ದೇಶಕ (director) ಸಂಜಯ್​ ಲೀಲಾ ಬನ್ಸಾಲಿ ಅವರ ಬಹು ನಿರೀಕ್ಷಿತ ‘ಹೀರಾಮಂಡಿ’ ವೆಬ್​ ಸರಣಿಯ ಫಸ್ಟ್​ ಲುಕ್​ ವಿಡಿಯೋ ಬಿಡುಗಡೆ ಆಗಿದೆ. ‘ಹೀರಾಮಂಡಿ’ ಶೀರ್ಷಿಕೆಯ ಜೊತೆ ‘ದಿ ಡೈಮಂಡ್​ ಬಜಾರ್​’ (the diamond bazaar) ಎಂಬ ಟ್ಯಾಗ್​ ಲೈನ್​ ಗಮನ ಸೆಳೆಯುತ್ತದೆ.

ನೆಟ್​ಫ್ಲಿಕ್ಸ್​ನಲ್ಲಿ ಈ ವೆಬ್​ ಸಿರೀಸ್​ (web series) ಬಿಡುಗಡೆ ಆಗಲಿದೆ. ವೈಭವದಿಂದ ಕೂಡಿರುವ ಫಸ್ಟ್​ ಲುಕ್​ ವಿಡಿಯೋದಲ್ಲಿ ಸೋನಾಕ್ಷಿ ಸಿನ್ಹಾ, ರಿಚಾ ಚಡ್ಡಾ, ಅದಿತಿ ರಾವ್​ ಹೈದರಿ, ಮನೀಶಾ ಕೊಯಿರಾಲಾ ಮುಂತಾದ ನಟಿಯರ ಗೆಟಪ್​ (get up) ಗಮನ ಸೆಳೆಯುತ್ತಿದೆ. ಇದನ್ನು ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ
(Sanjay Leela Bhansali) ಅವರ ಪ್ರತಿ ಸಿನಿಮಾ ಕೂಡ ವೈಭವದಿಂದ (With glory) ಕೂಡಿರುತ್ತದೆ. ಏನೇ ಮಾಡಿದರೂ ಅಲ್ಲೊಂದು ವಿಶೇಷ (special) ಇದ್ದೇ ಇರುತ್ತದೆ. ಇದೇ ಮೊದಲ ಬಾರಿಗೆ ಸಂಜಯ್​ ಲೀಲಾ ಬನ್ಸಾಲಿ ಅವರು ವೆಬ್​ ಸಿರೀಸ್​ ನಿರ್ದೇಶನ ಮಾಡಿದ್ದಾರೆ.

ರೈಲ್ವೆ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.!

‘ಹೀರಾಮಂಡಿ’ (Heeramandi) ಶೀರ್ಷಿಕೆಯ ಈ ಸೀರಿಸ್​ನಲ್ಲಿ ಬಾಲಿವುಡ್​ನ (Bollywood) ಅನೇಕ ನಟಿಯರು (heroine’s) ಬಣ್ಣ ಹಚ್ಚಿದ್ದಾರೆ. ಮನೀಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ರಿಚಾ ಚಡ್ಡಾ, ಅದಿತಿ ರಾವ್​ ಹೈದರಿ ಸೇರಿದಂತೆ ಅನೇಕ ನಟಿಯರು ಈ ಸಿರೀಸ್​ನಲ್ಲಿ ನಟಿಸಿದ್ದಾರೆ. ಅವರೆಲ್ಲ ಶ್ರೀಮಂತ ವೇಶ್ಯೆಯರ (of prostitutes) ಪಾತ್ರ (character) ಮಾಡಿದ್ದಾರೆ ಎಂಬುದು ವಿಶೇಷ. ನೆಟ್​ಫ್ಲಿಕ್ಸ್​ (Netflix) ಮೂಲಕ ‘ಹೀರಾಮಂಡಿ’ ಬಿಡುಗಡೆ ಆಗಲಿದೆ. ಈಗ ಇದರ ಫಸ್ಟ್​ ಲುಕ್​ (first look) ವಿಡಿಯೋ ರಿಲೀಸ್​ ಮಾಡಲಾಗಿದೆ.

ಈ ಮೂವಿ ಗತ ಕಾಲದ ಕಹಾನಿಯನ್ನು (kahani) ಇದು ಒಳಗೊಂಡಿದೆ. ಹೀರಾಮಂಡಿ’ ವೆಬ್​ ಸರಣಿಯ ಫಸ್ಟ್​ ಲುಕ್​ ವಿಡಿಯೋ ನೋಡಿದ ಪ್ರೇಕ್ಷಕರಿಗೆ ಸಖತ್​ ಇಷ್ಟ (like) ಆಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀಮಂತ ಗಿರಾಕಿಗಳನ್ನು ಹೊಂದಿದ್ದ ವೇಶ್ಯೆಯರ ಬದುಕಿನ (life) ಬಗ್ಗೆ ‘ಹೀರಾಮಂಡಿ’ ವೆಬ್​ ಸರಣಿಯಲ್ಲಿ ತೋರಿಸಲಾಗುವುದು. ಅವರ ಜೀವನದಲ್ಲಿನ ಪ್ರೀತಿ ಮತ್ತು ದ್ರೋಹದ ಕಥೆ (A story of love and betrayal) ಇದರಲ್ಲಿ ಇರಲಿದೆ. ಶರ್ಮಿನ್​ ಸೇಗಲ್​, ಸಂಜೀದಾ ಶೇಖ್​ ಕೂಡ ಇದರಲ್ಲಿ ನಟನೆ ಮಾಡಿದ್ದಾರೆ.

ಹೀರಾಮಂಡಿ’ ಶೀರ್ಷಿಕೆಗೆ ‘ದಿ ಡೈಮಂಡ್​ ಬಜಾರ್​’ ಎಂಬ ಟ್ಯಾಗ್​ ಲೈನ್​ (tagline) ಇದೆ. ಈ ಸಿರೀಸ್​ ಯಾವಾಗ ರಿಲೀಸ್​ ಆಗಲಿದೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಆದಷ್ಟು ಬೇಗ ಇದನ್ನು ಬಿಡುಗಡೆ (release) ಮಾಡಿ ಎಂದು ಫ್ಯಾನ್ಸ್​ (fan’s) ಕಮೆಂಟ್​ (comments) ಮಾಡುತ್ತಿದ್ದಾರೆ.

ಮುಂಬೈನಿಂದ ಅಯೋಧ್ಯೆವರೆಗೆ ಪಾದಯಾತ್ರೆ ಕೈಗೊಂಡ ಮುಸ್ಲಿಂ ಯುವತಿ ; ಜ್ಞಾನವಾಪಿ ಬಗ್ಗೆ ಹೇಳಿದ್ದೇನು.

ಫಸ್ಟ್​ ಲುಕ್​ ವಿಡಿಯೋದಲ್ಲಿ (video) ಸೋನಾಕ್ಷಿ ಸಿನ್ಹಾ, ಮನೀಶಾ ಕೊಯಿರಾಲಾ, ರಿಚಾ ಚಡ್ಡಾ, ಅದಿತಿ ರಾವ್​ ಹೈದರಿ ಮುಂತಾದ ನಟಿಯರ ಗೆಟಪ್​ ಗಮನ ಸೆಳೆಯುವಂತಿದೆ (attraction). ಒಟಿಟಿಯಲ್ಲಿ ಈ ಸೀರಿಸ್​ ಹೊಸ ದಾಖಲೆ ಬರೆಯಲಿದೆ ಎಂದು ಫ್ಯಾನ್ಸ್​ ನಿರೀಕ್ಷಿಸುತ್ತಿದ್ದಾರೆ.

ದೇವದಾಸ್​’, ‘ಪದ್ಮಾವತ್​’, ‘ಬಾಜಿರಾವ್​ ಮಸ್ತಾನಿ’, ‘ಗಂಗೂಬಾಯಿ ಕಾಠಿಯಾವಾಡಿ’ ಮುಂತಾದ ಕ್ಲಾಸಿಕ್​ ಸಿನಿಮಾಗಳನ್ನು ನೀಡಿರುವ ಸಂಜಯ್​ ಲೀಲಾ ಬನ್ಸಾಲಿ ಅವರು ಇದೇ ಮೊದಲ ಬಾರಿಗೆ ವೆಬ್​ ಸಿರೀಸ್​ ನಿರ್ದೇಶನ ಮಾಡಿರುವುದರಿಂದ ‘ಹೀರಾಮಂಡಿ’ ಬಗ್ಗೆ ನಿರೀಕ್ಷೆ (expectation) ಹೆಚ್ಚಾಗಿದೆ. ಅದ್ದೂರಿ ಬಜೆಟ್​ನಲ್ಲಿ ಇದು ನಿರ್ಮಾಣ ಆಗಿದೆ. ಬನ್ಸಾಲಿ ಅವರ ಸಿನಿಮಾಗಳಲ್ಲಿ ಇರುವಂತಹ ಅದ್ದೂರಿತನ ‘ಹೀರಾಮಂಡಿ’ ಫಸ್ಟ್​ ಲುಕ್​ ವಿಡಿಯೋದಲ್ಲೂ ಕಾಣಿಸಿದೆ.

ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಶರ್ಮಿನ್ ಸೆಗಲ್ ಮತ್ತು ಸಂಜೀದಾ ಶೇಖ್ ತಮ್ಮ ಅನೂಹ್ಯ ಕಲಾಪ್ರತಿಭೆಯನ್ನು ಚಿತ್ರದಲ್ಲಿ ತುಂಬಿದ್ದು ಹೀರಾಮಂಡಿಯ ಸಂಕೀರ್ಣ ಕಥಾಪಾತ್ರಗಳಲ್ಲಿ (In the storylines) ಚೆನ್ನಾಗಿಯೇ ನಟಿಸಿದ್ದಾರೆ. ಚಿತ್ರ ತೆರೆಗೆ ಬಂದ ಮೇಲೆ ಅವರ ನಟನೆಯ ನಿರೀಕ್ಷೆ ಇನ್ನಷ್ಟು ಮುಗಿಲು ಮುಟ್ಟಬಹುದು.

ಚಿತ್ರದ ಫಸ್ಟ್ ಲುಕ್‌ನಲ್ಲೇ ಸಿನಿ ಪ್ರೇಕ್ಷಕರು (Cinema audience) ಹೀರಾಮಂಡಿಯ ಒಂದು ಝಲಕ್ ಅನ್ನು ಸವಿದಿದ್ದು, ಬನ್ಸಾಲಿ ತಮ್ಮ ಎಂದಿನ ಶೈಲಿಯಲ್ಲೇ ಪ್ರೇಕ್ಷಕ ವರ್ಗವನ್ನು ಹಿಡಿದಿಡುವ ಪ್ರಯತ್ನದಲ್ಲಿ (effort) ಯಶಸ್ಸು (success) ಪಡೆದುಕೊಂಡಿದ್ದಾರೆ.

spot_img
spot_img
- Advertisment -spot_img