Sunday, July 20, 2025

Janaspandhan News

HomeGeneral News"ಈ ಲಕ್ಷಣಗಳು ಕಂಡುಬಂದರೆ ನಿಮ್ಮ Kidney ಅಪಾಯದಲ್ಲಿದೆ ಎಂದೇ ಅರ್ಥ.!"
spot_img
spot_img

“ಈ ಲಕ್ಷಣಗಳು ಕಂಡುಬಂದರೆ ನಿಮ್ಮ Kidney ಅಪಾಯದಲ್ಲಿದೆ ಎಂದೇ ಅರ್ಥ.!”

- Advertisement -

ಜನಸ್ಪಂದನ ನ್ಯೂಸ್, ಆರೋಗ್ಯ : ಮೂತ್ರಪಿಂಡ (Kidney) ಗಳು ನಮ್ಮ ದೇಹದಲ್ಲಿ ಉಂಟಾಗುವ ಕಶ್ಮಲಗಳನ್ನು ಶೋಧಿಸುವ ಪ್ರಮುಖ ಅಂಗಾಂಗಗಳಲ್ಲೊಂದು. ರಕ್ತದಲ್ಲಿರುವ ತ್ಯಾಜ್ಯಗಳನ್ನು ಮತ್ತು ಅಗತ್ಯವಿಲ್ಲದ ದ್ರವಗಳನ್ನು ಶುದ್ಧಗೊಳಿಸಿ, ಅವುಗಳನ್ನು ಮೂತ್ರದ ಮೂಲಕ ಹೊರಹಾಕುವ ಕಾರ್ಯ ಈ ಅಂಗಾಂಗ (Kidney) ಗಳು ನಿರ್ವಹಿಸುತ್ತವೆ.

ಒಂದು ವೇಳೆ ಮೂತ್ರಪಿಂಡ (Kidney) ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ದೇಹದಲ್ಲಿ ಕಶ್ಮಲಗಳು ಸಂಗ್ರಹವಾಗಲು ಆರಂಭವಾಗುತ್ತವೆ. ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.

ಇದನ್ನು ಓದಿ : Girl : ಶಾಲೆಯಿಂದ ಮನೆಗೆ ಹೊರಟ 10 ವರ್ಷದ ಬಾಲಕಿ ಅಪಹರಿಸಿ ದೌರ್ಜನ್ಯಕ್ಕೆ ಯತ್ನ.!

ಈ ರೀತಿಯ ಸ್ಥಿತಿಯನ್ನು ದೀರ್ಘಕಾಲದ ಮೂತ್ರಪಿಂಡ (Kidney) ಕಾಯಿಲೆ ಅಥವಾ ಕ್ರೋನಿಕ್ ಕಿಡ್ನಿ ಡಿಸೀಸ್ (CKD) ಎಂದು ಕರೆಯಲಾಗುತ್ತದೆ.

ಇದು ನಿಧಾನವಾಗಿ ಬೆಳೆಯುವ ರೋಗವಾಗಿದ್ದು, ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾದ್ಯವಾಗಬಹುದು.

ಇದನ್ನು ಓದಿ : DRDO ನೇಮಕಾತಿ 2025 : 148 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಇವು ಮೂತ್ರಪಿಂಡ (Kidney) ವೈಫಲ್ಯವನ್ನು ಸೂಚಿಸಬಹುದಾದ ಕೆಲವು ಪ್ರಮುಖ ಸಂಕೇತಗಳು :
1. ಮೂತ್ರದಲ್ಲಿ ಬದಲಾವಣೆಗಳು :
  • ಸಾಮಾನ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ.
  • ರಾತ್ರಿಯ ವೇಳೆ ಮಿಕ್ಕಷ್ಟು ಬಾರಿ ಮೂತ್ರದ ಅವಶ್ಯಕತೆ.
  • ಮೂತ್ರದಲ್ಲಿ ನೊರೆ, ರಕ್ತ ಅಥವಾ ಬದಲಾಗಿದ ಬಣ್ಣ.
  • ಮೂತ್ರ ವಿಸರ್ಜನೆ ವೇಳೆ ಗಂಭೀರ ತೊಂದರೆ.
2. ದೇಹದ ಅವಯವಗಳಲ್ಲಿ ಊತ :
  • ಕಾಲುಗಳು, ಪಾದಗಳು, ಕೈಗಳು ಮತ್ತು ಕಣ್ಣುಗಳ ಸುತ್ತಲೂ ಉಂಟಾಗುವ ಊತ.
  • ದೇಹದಲ್ಲಿ ನೀರಿನ ಶೇಖರಣೆಯಿಂದ ಉಂಟಾಗುವ ಶ್ವಾಸದ ತೊಂದರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 20 ರ ದ್ವಾದಶ ರಾಶಿಗಳ ಫಲಾಫಲ.!
3. ದಣಿವು ಮತ್ತು ಅಶಕ್ತತತೆ :
  • ಮೂತ್ರಪಿಂಡಗಳ ಕಾರ್ಯ ಕ್ಷೀಣಗೊಂಡಾಗ, ರಕ್ತಹೀನತೆ ಉಂಟಾಗಬಹುದು.
  • ಕಡಿಮೆ ಶ್ರಮದಲ್ಲಿಯೇ ದಣಿವು ಅನುಭವಿಸುವುದು.
4. ತುರಿಕೆ ಮತ್ತು ಸ್ನಾಯು ಸೆಳೆತ :
  • ರಕ್ತದಲ್ಲಿ ತ್ಯಾಜ್ಯ ಪದಾರ್ಥಗಳು ಮತ್ತು ಖನಿಜಗಳ ಅಸಮತೋಲನದಿಂದ ತುರಿಕೆ.
  • ವಿಶೇಷವಾಗಿ ರಾತ್ರಿ ವೇಳೆ ಹೆಚ್ಚು ಕಿರಿಕಿರಿ.
  • ಕಾಲುಗಳಲ್ಲಿ ಸ್ನಾಯು ಸೆಳೆತ ಮತ್ತು ನೋವು.
5. ಇತರ ಲಕ್ಷಣಗಳು :
  • ಊಟದ ಮೇಲೆ ಆಸೆ ಕಡಿಮೆಯಾಗುವುದು.
  • ವಾಕರಿಕೆ ಅಥವಾ ಒಮ್ಮೆ ಎದೆಯಲ್ಲಿ ತೀವ್ರ ಒತ್ತಡ.
  • ಏಕಾಏಕಿ ತೂಕ ಇಳಿಕೆ ಅಥವಾ ಹೆಚ್ಚಳ.
ಇದನ್ನು ಓದಿ : ಕೋರ್ಟ್ ಆವರಣದಲ್ಲೇ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡ ಮಹಿಳಾ Lawyers ; ವಿಡಿಯೋ.!

ಆರೋಗ್ಯ ಸಲಹೆ : ಮೇಲ್ಕಂಡ ಲಕ್ಷಣಗಳಲ್ಲಿ ಯಾವುದಾದರೂ ಕಾಣಿಸಿದರೆ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಅಗತ್ಯ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪ್ರಾರಂಭಿಸಿದರೆ, ಮೂತ್ರಪಿಂಡ (Kidney) ದ ಸಮಸ್ಯೆಗಳನ್ನು ನಿಯಂತ್ರಣದಲ್ಲಿರಿಸಬಹುದು.

Kidney : In humans, the kidneys are two reddish-brown bean-shaped blood-filtering organs that are a multilobar, multipapillary form of mammalian kidneys, usually without signs of external lobulation.

They are located on the left and right in the retroperitoneal space, and in adult humans are about 12 centimetres (4+1⁄2 inches) in length. They receive blood from the paired renal arteries; blood exits into the paired renal veins. Each kidney is attached to a ureter, a tube that carries excreted urine to the bladder.

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.


ಕೋರ್ಟ್ ಆವರಣದಲ್ಲೇ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡ ಮಹಿಳಾ Lawyers ; ವಿಡಿಯೋ.!

lawyers

ಜನಸ್ಪಂದನ ನ್ಯೂಸ್‌,ಡೆಸ್ಕ್‌ : ಕೋರ್ಟ್ ಆವರಣದಲ್ಲಿಯೇ ಸಾರ್ವಜನಿಕವಾಗಿ ಇಬ್ಬರು ಮಹಿಳಾ ವಕೀಲೆಯರ (lawyers) ನಡುವಿನ ಜಟಾಪಟಿಯಲ್ಲಿ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡಿರುವ ಘಟನೆಯೊಂದು ನಡೆದಿದೆ.

ನ್ಯಾಯಮಂದಿರ ಆವರಣ ಶಾಂತಿಯ ತಾಣವಾಗಬೇಕೆಂಬ ನಿರೀಕ್ಷೆಗೆ ಇದು ತೀವ್ರ ಧಕ್ಕೆ ನಡೆದಿದ್ದು, ಈ ಘಟನೆ ಮಥುರಾ ಕೋರ್ಟ್‌ ಆವರಣದಲ್ಲಿ ಮೈ ಮೇಲಿನ ಬಟ್ಟೆ ಹಿರಿದುಕೊಳ್ಳುವಷ್ಟರ ಮಟ್ಟಿಗೆ ಇಬ್ಬರು ಮಹಿಳಾ lawyers ನಡೆದುಕೊಂಡಿದ್ದಾರೆ.

ಇದನ್ನು ಓದಿ :

ಕೋರ್ಟ್‌ ಆವರಣದಲ್ಲೇ ಇಬ್ಬರು ಮಹಿಳಾ ವಕೀಲರು (lawyers) ಪರಸ್ಪರ ಜುಟ್ಟು ಹಿಡಿದು ಎಳೆದಾಡಿದ ಘಟನೆ ಇಂದು ಬೆಳಕಿಗೆ ಬಂದಿದೆ. ಈ ಘರ್ಷಣೆಯ ದೃಶ್ಯಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ.

ವೈರಲ್ ವಿಡಿಯೋದಲ್ಲೇನಿದೆ.?

ಸದ್ಯ ವೈರಲ್‌ ಆಗಿರುವ ವಿಡಿಯೋದಲ್ಲಿ, ಸಾರ್ವಜನಿಕವಾಗಿ ಇಬ್ಬರು ಮಹಿಳಾ ವಕೀಲರು ಪರಸ್ಪರ ಇಬ್ಬರನ್ನೋಬ್ಬರು ಬೈದಾಡುತ್ತ ಜಗಳವಾಡುತ್ತಿದ್ದು, ಜಗಳದ ಅಬ್ಬರದಿಂದ ಇಬ್ಬರು ಮಹಿಳಾ ವಕೀಲರು (lawyers) ಕೂದಲು ಎಳೆದಾಡುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇದನ್ನು ಓದಿ : Allegations of relationship with monks : 100‌ ಕೋಟಿ ಹಣ, 80,000 ಪೋಟೋ ; ಮಹಿಳೆಯ ಬಂಧನ.!

ಗಲಾಟೆ ನೋಡಲು ಕೋರ್ಟ್ ಆವರಣದಲ್ಲಿ ಜನತೆ ಕೂಡ ಜಮಾಯಿಸಿರುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣಿಸುತ್ತಿದೆ.

ಜಗಳದ ಹಿನ್ನಲೆ ಏನು.?

ನಾನು ಮತ್ತು ಅವಳು ಇಬ್ಬರು ಆತ್ಮೀಯ ಸ್ನೇಹಿತೆವಾಗಿದ್ದೇವು. ಆಕೆ ನನ್ನ ಸಹಚರಿಯಾಗಿದ್ದು, ನಾನು ಎಂದು ನಿನಗೆ ಮೋಸ ಮಾಡಲ್ಲ ಅಂತ ಹೇಳಿದ್ದಳು. ಹೀಗಾಗಿ ನಾನು ಅವಳ ಮಾತು ನಂಬಿ ಚೇಂಬರ್‌ ಸ್ಥಾಪನೆಗೆ ಹಣ ಹೂಡಿಕೆ ಮಾಡಿದ್ದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 19 ರ ದ್ವಾದಶ ರಾಶಿಗಳ ಫಲಾಫಲ.!

ಆದರೆ ಇಂದು ಬೆಳಗ್ಗೆ ನಾನು ಕುಳಿತುಕೊಳ್ಳಲು ಕುರ್ಚಿಗಳನ್ನು ಇಡುತ್ತಿದ್ದಾಗ, ಅವಳು ಅವುಗಳನ್ನು ಒದ್ದು ಒಡೆಯಲು ಪ್ರಾರಂಭಿಸಿದಳು. ಜೊತೆಗೆ ನನ್ನ ಸ್ಕೂಟರ್‌ಗೂ ಒದ್ದಳು. ಈ ಕೊಠಡಿಗೆ ನಾನು ಮಾಲಕಿ, ನೀನು ಇಲ್ಲಿಂದ ಹೋಗಬೇಕು ಎಂದು ಅವಮಾನಿಸಿ ಗದರಿಸಿದಳು. ಎಂದು ವಕೀಲೆ ಸ್ನೇಹಲತಾ ಆರೋಪಿಸುತ್ತಿದ್ದಾರೆ.

ಪೊಲೀಸ್ ಪ್ರತಿಕ್ರಿಯೆ :

ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿರುವಂತೆ, “ಇಬ್ಬರು ಮಹಿಳಾ ವಕೀಲರ (lawyers) ನಡುವೆ ಜಗಳ ಸಂಭವಿಸಿದೆ. ಘಟನೆ ಸಂಬಂಧಿತ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈವರೆಗೆ ಯಾರೂ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಅವರು (lawyers) ದೂರು ನೀಡಿದರೆ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.” ಎಂದಿದ್ದಾರೆ.

ಇದನ್ನು ಓದಿ : ಬೆಳಗಾವಿ : 30 ವರ್ಷದ ಹಿಂದಿನ ಬಿಲ್ ಬಾಕಿ ; DC ಕಾರು ಜಪ್ತಿ.!
ನ್ಯಾಯತಂತ್ರದಲ್ಲೇ ಗಲಾಟೆ ; ಸಾರ್ವಜನಿಕ ಆಕ್ರೋಶ :

ವಕೀಲರು ಸಾರ್ವಜನಿಕವಾಗಿ ಕಿತ್ತಾಡಿದ ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹಾಗೂ ಆಶ್ಚರ್ಯ ವ್ಯಕ್ತವಾಗಿದೆ. ಕಾನೂನು ಮತ್ತು ನ್ಯಾಯಕ್ಕಾಗಿ ಹೋರಾಡಬೇಕಾದವರೇ ಇಂತಹ ವರ್ತನೆ ತೋರಿರುವುದು ಸಮರ್ಥನೀಯವಲ್ಲವೆಂಬ ಮಾತುಗಳು ಕೇಳಿಬರುತ್ತಿವೆ.

ಮಹಿಳಾ lawyers ವಿಡಿಯೋ :

Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments