Wednesday, February 5, 2025
HomeHealth and FitnessHealth : ಕಡಿಮೆ ಮಾತ್ರವಲ್ಲ, ನೀರು ಹೆಚ್ಚು ಕುಡಿಯುವುದು ಒಳ್ಳೆಯದಲ್ಲ; ಯಾಕೆ ಗೊತ್ತಾ?
spot_img
spot_img
spot_img
spot_img

Health : ಕಡಿಮೆ ಮಾತ್ರವಲ್ಲ, ನೀರು ಹೆಚ್ಚು ಕುಡಿಯುವುದು ಒಳ್ಳೆಯದಲ್ಲ; ಯಾಕೆ ಗೊತ್ತಾ?

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮ ದೇಹಕ್ಕೆ ನೀರು ಅತ್ಯಗತ್ಯವಾಗಿದೆ. ದಿನವೂ ಕನಿಷ್ಠ 2-3 ಲೀಟರ್ ನೀರು ಕುಡಿಯಬೇಕು (Drink at least 2-3 liters of water). ಆದರೆ ಮಳೆಗಾಲ, ಚಳಿಗಾಲದಲ್ಲಿ ಅಷ್ಟು ನೀರು ಕುಡಿಯಲು‌ ಕಷ್ಟಸಾಧ್ಯ. ಇದರಿಂದ ದೇಹದಲ್ಲಿ ನೀರಿನ ಕೊರತೆ ಕಾಡುತ್ತದೆ..

ಇನ್ನೂ ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಡೀಹೈಡ್ರೇಷನ್ ಸಮಸ್ಯೆ (Dehydration is a problem) ಉಂಟಾಗುತ್ತದೆ. ಆದರೆ ನಿಮಗ ಗೊತ್ತಾ.? ಹೆಚ್ಚು ನೀರು ಕುಡಿದರೂ ಸಹ ಜೀವಕ್ಕೆ ಕುತ್ತು ತರುತ್ತದೆ ಅಂತ.

ಹೌದು, ನೀರು ಕಡಿಮೆ ಕುಡಿಯುವ ಅಭ್ಯಾಸ ಎಷ್ಟು ಒಳ್ಳೆಯದಲ್ಲವೋ? ನೀರು ಜಾಸ್ತಿ ಕುಡಿಯುವುದು ಸಹ ಅಷ್ಟೇ ಒಳ್ಳೆಯದಲ್ಲ. ಇದರಿಂದ ವಾಟರ್ ಇನ್‌ಟಾಕ್ಸಿಕೇಷನ್ (Water intoxication) ಸಮಸ್ಯೆ ನಿಮ್ಮನ್ನು ಪೀಡಿಸಬಹುದು.

ಇದನ್ನು ಓದಿ : ಮನೆಯ ಟೆರಸ್‌ ಮೇಲೆ lover ಜೊತೆ ಸಿಕ್ಕಿಬಿದ್ದ ಪತ್ನಿ; ಡಿಸೈನ್ ಡಿಸೈನಾಗಿ ಹೊಡೆದ ಪತಿ.!

ವಾಟರ್ ಇನ್‌ಟಾಕ್ಸಿಕೇಷನ್ ಅಂದರೆ ನೀರಿನ ವಿಷ ಅಥವಾ Hyper Hydration ಎಂದರ್ಥ. ಕನ್ನಡದಲ್ಲಿ ಹೇಳಬೇಕೆಂದರೆ ನೀರಿನ ಅಮಲು (Water intoxication) ಎಂದರ್ಥ. ನಾವು ಕಡಿಮೆ ಟೈಮ್ ನಲ್ಲಿ ಹೆಚ್ಚಿನ ಪ್ರಮಾಣದ ನೀರು ಕುಡಿದರೆ, ಶರೀರದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ (Electrolyte imbalance) ಕಾರಣವಾಗುತ್ತದೆ.

ಇದರಿಂದಾಗಿ ನಮ್ಮ ಸಾಮಾನ್ಯ ಶಾರೀರಿಕ ಕ್ರಿಯೆಗಳಿಗೆ ಅಡ್ಡಿಯಾಗಿ (Impairment of physiological functions), ಜೀವಕ್ಕೆ ಮಾರಕವಾಗಬಹುದು. ದೇಹಕ್ಕೆ ನೀರು ಅಗತ್ಯವಿದೆ ಎಂದು ಹೆಚ್ಚು ನೀರು ಕುಡಿಯುವುದು ಕೂಡ ಸರಿಯಲ್ಲ ಎಂಬುದನ್ನು ತಿಳಿದಿರಬೇಕು.

ನಾವು ಮೂತ್ರ ಹಾಗೂ ಬೆವರಿನ ಮೂಲಕ ದೇಹದಿಂದ ಹೆಚ್ಚುವರಿ ನೀರನ್ನು (Excess water from the body through urine and sweat) ಹೊರಹಾಕಲಾಗುತ್ತದೆ. ಒಂದು ದಿನಕ್ಕೆ ಇದು ಸುಮಾರು 1-2 ಲೀಟರ್‌ಗಳಿಗೆ ಸಮ. ಆದರೆ, ಕೆಲ ಜನರು ಒಂದು ಅಥವಾ ಎರಡು ಗಂಟೆಯೊಳಗಡೆ 3 ರಿಂದ 4 ಲೀಟರ್ ನೀರು ಸೇವಿಸುತ್ತಾರೆ. ಈ ವೇಳೆ ವಾಟರ್ ಇನ್‌ಟಾಕ್ಸಿಕೇಷನ್ ಸಮಸ್ಯೆ ಕಾಡಿಸುತ್ತದೆ.

ಇದನ್ನು ಓದಿ : ಕೋಣದ DNA ಪರೀಕ್ಷೆಗೆ ಮುಂದಾದ ಕರ್ನಾಟಕ- ಆಂಧ್ರಪ್ರದೇಶ ಗ್ರಾಮಸ್ಥರು ; ಅಂತದ್ದೇನಾಯ್ತು ಗೊತ್ತಾ.?

ಹೈಪರ್ ಹೈಡ್ರೇಷನ್ ಲಕ್ಷಣಗಳು :
* ತಲೆನೋವು
* ವಾಂತಿ
* ಹೊಟ್ಟೆಯುಬ್ಬರ
* ತೂಕಡಿಕೆ
* ಕೈಗಳು, ಪಾದಗಳು ಮತ್ತು ಹೊಟ್ಟೆಯಲ್ಲಿ ತೀವ್ರವಾದ ಊತ
* ಸ್ನಾಯು ದೌರ್ಬಲ್ಯ (Muscle weakness), ನೋವು ಮತ್ತು ಸೆಳೆತ
ಗೊಂದಲ, ಕಿರಿಕಿರಿ ಮತ್ತು ತಲೆತಿರುಗುವಿಕೆ
* ಮಾನಸಿಕ ಸ್ಥಿತಿಯಲ್ಲಿ ಪರಿವರ್ತನೆ (Change in mental status)

ಮುನ್ನೆಚ್ಚರಿಕೆ ಕ್ರಮಗಳು :
ಬಾಯಾರಿಕೆ ನೀಗಿದ ನಂತರ ನೀರು ಕುಡಿಯುವುದನ್ನು ನಿಲ್ಲಿಸುವುದು ಉತ್ತಮ.
ವಾಕರಿಕೆ, ವಾಂತಿ, ಹೊಟ್ಟೆಯುಬ್ಬರವಿದ್ದರೆ (Stomach bloating) ನೀರು ಕುಡಿಯುವುದನ್ನು ನಿಲ್ಲಿಸಬೇಕು.
ಬಾಯಾರಿಕೆಯಾದ್ರೆ ಮಾತ್ರ ನೀರು ಕುಡಿಯಬೇಕು.
ನಿಮ್ಮನ್ನು ನೀವು ನೀರು ಕುಡಿಯುವಂತೆ ಒತ್ತಾಯಿಸುವುದನ್ನು ತಡೆಯುವುದು

ಹಿಂದಿನ ಸುದ್ದಿ : ತನ್ನ ಮೂವರು ಮಕ್ಕಳನ್ನು ಕೊಂದವನಿಗೆ ಮರಣದಂಡನೆ ಶಿಕ್ಷೆ.!

ಜನಸ್ಪಂದನ ನ್ಯೂಸ್, ಮಂಗಳೂರು : ಮಂಗಳೂರು ನ್ಯಾಯಾಲಯವು (Mangalore Court) ಮೂವರು ಮಕ್ಕಳನ್ನು ಕೊಂದ ಆರೋಪಿಯೋರ್ವನಿಗೆ ಮರಣ ದಂಡನೆ (death penalty) ವಿಧಿಸಿ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.

ಆರೋಪಿ ಹಿತೇಶ್ ಶೆಟ್ಟಿಗಾರ್‌ ಎಂಬಾತ ತನ್ನ ಮೂವರು ಮಕ್ಕಳನ್ನು ಬಾವಿಯಲ್ಲಿ ದೂಡಿ ಕೊಂದಿದ್ದ, ಅಲ್ಲದೇ ಪತ್ನಿಯನ್ನು ಬಾವಿಗೆ ತಳ್ಳಿ ಕೊಲ್ಲಲು ಯತ್ನಿಸಿದ್ದ (attempt to murder).

ಇದನ್ನು ಓದಿ : Special news : ಚಳಿಗಾಲದಲ್ಲಿ ನಿಮ್ಮ ಮುಖಕ್ಕೆ ಅಪ್ಪಿತಪ್ಪಿಯೂ ಇವುಗಳನ್ನು ಹಚ್ಚಿಕೊಳ್ಳಬೇಡಿ.!

2022ರ ಜೂನ್ 23ರಂದು ಸಂಜೆ ವೇಳೆ ತಾಳಿಪಾಡಿ ಗ್ರಾಮದ ಪದ್ಮನೂರಿನಲ್ಲಿ ಹಿತೇಶ್ ಶೆಟ್ಟಿಗಾರ್ ತನ್ನ ಮಕ್ಕಳಾದ ರಶ್ಮೀತಾ (13), ಉದಯ ಕುಮಾರ (11), ದಕ್ಷೀತ್ (5) ಎಂಬ ಮಕ್ಕಳನ್ನು ಬಾವಿಗೆ ನೂಕಿ ಕೊಲೆ ಮಾಡಿದ್ದಲ್ಲದೆ ತನ್ನ ಪತ್ನಿ ಲಕ್ಷ್ಮಿ ಅವರನ್ನು ಬಾವಿಗೆ ನೂಕಿ ಕೊಲೆಗೆ ಯತ್ನಿಸಿದ್ದ.

ಮಕ್ಕಳನ್ನು ಬಾವಿಗೆ ತಳ್ಳಿದ ವೇಳೆ ರಶ್ಮೀತಾ ಎಂಬ ಬಾಲಕಿ ಬಾವಿಗೆ ಅಳವಡಿಸಿದ್ದ ಪಂಪಿನ ಪೈಪನ್ನು ಹಿಡಿದುಕೊಂಡಿದ್ದಳು (The girl was holding the pump pipe attached to the well). ಇದನ್ನು ಕಂಡ ಪಾಪಿ ಹಿತೇಶ್ ಶೆಟ್ಟಿಗಾರ್ ಕತ್ತಿಯಿಂದ ಪೈಪನ್ನು ತುಂಡರಿಸಿದ್ದ.

ಯಾವುದೇ ಕೆಲಸ ಕಾರ್ಯ ಇಲ್ಲದೇ ಆರೋಪಿ ಹಿತೇಶ್ ತನ್ನ ಪತ್ನಿಯ ಜೊತೆ ಜಗಳವಾಡುತ್ತಿದ್ದ. ಇದೇ ಸಿಟ್ಟಲ್ಲಿ ಆತ ತನ್ನ ಮೂವರು ಮಕ್ಕಳನ್ನು ಬಾವಿಗೆ ನೂಕಿ ಕೊಲೆಗೈದಿದ್ದ. ಸಂಜೆ ಹೊಟೇಲಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ತನ್ನ ಹೆಂಡತಿಯನ್ನು ಮನೆಯ ಪಕ್ಕದ ಬಾವಿಗೆ ದೂಡಿದ್ದ. ಲಕ್ಷ್ಮಿಯ ಚೀರಾಟ ಕೇಳಿ ಸ್ಥಳಿಯ ವ್ಯಕ್ತಿಯೋರ್ವರು ಆಕೆಯನ್ನು ರಕ್ಷಿಸಿದ್ದರು.

ಇದನ್ನು ಓದಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 9,871 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ Green signal.!

ಲಕ್ಷ್ಮಿ ನೀಡಿದ ದೂರಿನ ಆಧಾರದ ಮೇಲೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ (Mulki Police Station) ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ (Inspector of Police) ಕುಸುಮಾಧರ ತನಿಖೆ ನಡೆಸಿ ಅರೋಪಿಯ ವಿರುದ್ಧ ದೋಷರೋಪಣಾ ಪಟ್ಟಿಯನ್ನು (charge sheet) ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಆರೋಪಿಯು ಕೊಲೆ ಹಾಗೂ ಕೊಲೆ ನಡೆಸಿರುವುದು ಸಾಬೀತಾದ (proven) ಹಿನ್ನೆಲೆ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ (3rd Additional District and Sessions Court Judge) ಸಂಧ್ಯಾ ಆರೋಪಿಗೆ ಮರಣ ದಂಡನೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!