ಜನಸ್ಪಂದನ ನ್ಯೂಸ್, ಡೆಸ್ಕ್ : ಆಹಾರವು ಮಾನವನ ಮೂಲಭೂತ ಅಗತ್ಯ. ಆದರೆ ಈ ಆಹಾರ (Food) ಪದಾರ್ಥಗಳನ್ನು ಅತಿಯಾಗಿ ತಿನ್ನಲೇಬೇಡಿ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಿರಿ.
ನಾವು ಸರಿಯಾದ ವೇಳೆಗೆ ಆರೋಗ್ಯಕರ ಆಹಾರ (Food) ವನ್ನು ಸೇವಿಸಬೇಕು. ನಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು ಕೆಲವು ಮುನ್ನೆಚ್ಚರಿಕೆ ವಹಿಸಬೇಕು.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 02 ರ ದ್ವಾದಶ ರಾಶಿಗಳ ಫಲಾಫಲ.!
ಅತಿಯಾದರೆ ಅಮೃತವು ವಿಷ (If too much nectar is poison) ಎನ್ನುವ ಗಾದೆ ಮಾತಿನಂತೆ ಆಹಾರ (Food) ಪದಾರ್ಥಗಳಿಗೆ ಸಂಬಂಧಿಸಿದಂತೆ ಈ ಹತ್ತು ಆಹಾರ ಪದಾರ್ಥಗಳನ್ನು ಅತಿಯಾಗಿ ಅಥವಾ ಹೆಚ್ಚು ಸೇವಿಸದಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ.
ಹಾಗಾದರೆ ಆ ಹತ್ತು ಆಹಾರ ಪದಾರ್ಥಗಳು ಯಾವುವು ಅಂತ ತಿಳಿಯೋಣ :

* ಉಪ್ಪಿಗಿಂತ (Salt) ರುಚಿಯಿಲ್ಲ ಎಂದು ಉಪ್ಪನ್ನು ಹೆಚ್ಚು ಸೇವಿಸಿದರೆ ಅದರಿಂದ ಅನಾರೋಗ್ಯವೇ ಜಾಸ್ತಿ. ಉಪ್ಪನ್ನು ಹೆಚ್ಚಾಗಿ ತಿನ್ನುವುದರಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.
ಇದನ್ನು ಓದಿ : Video : ವಾಷಿಂಗ್ ಮಷಿನ್‍ನೊಳಗೆ ಕಲ್ಲು ಹಾಕಿದ ಯುವಕ ; ಆಮೇಲೆನಾಯ್ತು ಗೊತ್ತಾ?
* ಆಲೂಗಡ್ಡೆ ಚಿಪ್ಸ್ ನಂತಹ (Potato chips) ಹಾನಿಕಾರಕ ತಿಂಡಿ/ಆಹಾರ (Food) ಗಳನ್ನು ಅತಿಯಾಗಿ ತಿನ್ನುವುದರಿಂದ ಹೆಚ್ಚಿನ ಮಟ್ಟದ ಕೊಬ್ಬಿನ ಅಂಶ ಶೇಖರಣೆಗೊಂಡು (Fat storage) ನಮ್ಮ ದೇಹದಲ್ಲಿ ಅನೇಕ ತೊಂದರೆಗಳು ಉಂಟಾಗಲು ಕಾರಣವಾಗಬಹುದು.
* ಬೆಳಿಗ್ಗೆ ಎದ್ದು ಕುಡಿಯುವ ಕಾಫಿಯನ್ನು (Coffee) ಪದೇ ಪದೇ ಸೇವಿಸಬಾರದು ಎಂದು WHO ತಿಳಿಸಿದೆ. ಕಾಫಿಯಲ್ಲಿ ಕೆಫೀನ್ ಅಧಿಕವಾಗಿರುತ್ತದೆ. ಇದು ಅಧಿಕ ರಕ್ತದೊತ್ತಡ, ತಲೆನೋವು, ಖಿನ್ನತೆ ಮತ್ತು ನಿದ್ರಾಹೀನತೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಕಾಫಿಯನ್ನು ಸಹ ಮಿತಿಯಾಗಿ ಸೇವಿಸಬೇಕು.
ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!
* ಕರಿದ ಆಹಾರಗಳು (Fried foods) ಕ್ಯಾಲೋರಿಗಳು, ಉಪ್ಪು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ. ಇದರಿಂದ ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು.
* ತಾಳೆ ಎಣ್ಣೆ (Palm oil) ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಧಿಕ ಕೊಲೆಸ್ಟ್ರಾಲ್ (High cholesterol) ದೀರ್ಘಕಾಲೀನ ಸಮಸ್ಯೆಗಳನ್ನು ಉಂಟುಮಾಡಬಹುದು.
ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!
* ಪಿಜ್ಜಾ ಮತ್ತು ಬರ್ಗರ್ ಗಳನ್ನು (Pizza and Burger) ಸಹ ಹೆಚ್ಚು ತಿನ್ನುವುದನ್ನು ತಪ್ಪಿಸಬೇಕು. ಅಂತಹ ಆಹಾರ (Food) ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.
* ಚೀಸ್ (Cheese) ಅಧಿಕವಾಗಿರುವ ಆಹಾರ (Food) ವನ್ನು ಸೇವಿಸುವುದರಿಂದ ಹೃದಯದ ಸಮಸ್ಯೆಗಳು ಉಂಟಾಗಬಹುದು. ಇದು ಬೊಜ್ಜಿಗೆ ಕಾರಣವಾಗುವುದರಿಂದ ಇವುಗಳನ್ನು ತಪ್ಪಿಸಬೇಕು.
ಇದನ್ನು ಓದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!
* ಸಕ್ಕರೆ (Sugar) ಬೊಜ್ಜಿಗೆ ಕಾರಣವಾಗಬಹುದು. ಅತಿಯಾದ ಸಕ್ಕರೆಯ ಬಳಕೆಯಿಂದ ಯಕೃತ್ತು, ಮೇದೋಜ್ಜೀರಕ ಗ್ರಂಥಿ ಮತ್ತು ಅಜೀರ್ಣ ಸಮಸ್ಯೆಗಳು ಉಂಟಾಗಬಹುದು. ಸಕ್ಕರೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಂತಲ್ಲ. ಸ್ವಲ್ಪ ತೆಗೆದುಕೊಂಡರೆ ಸಾಕು.
* ಪಾಸ್ತಾ ಮತ್ತು ಬ್ರೆಡ್ ನಲ್ಲಿರುವ (Pasta and Bread) ಪದಾರ್ಥಗಳು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ. ಅವು ಇನ್ಸುಲಿನ್ ಮಟ್ಟವನ್ನು ಸಹ ಹೆಚ್ಚಿಸುತ್ತವೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿ, ವರದಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.
ಹಿಂದಿನ ಸುದ್ದಿ : Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಬಹುದು.?

ಜನಸ್ಪಂದನ ನ್ಯೂಸ್, ಡೆಸ್ಕ್ : ಈಗಂತೂ ಸ್ಮಾರ್ಟ್ ಫೋನ್ ಎಲ್ಲರ ಕೈಯಲ್ಲಿರುತ್ತದೆ. ಆದರೆ Charge ಇಟ್ಟಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ಸ್ಮಾರ್ಟ್ಫೋನ್ ಬ್ಲಾಸ್ಟ್ ಆಗಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಿರಿ.
ಸ್ಮಾರ್ಟ್ಫೋನ್ ಚಾರ್ಜ್ ಮಾಡುವುದು ಎಲ್ಲರ ಬದುಕಿನ ದೈನಂದಿನ ಭಾಗವಾಗಿ (Daily part of life) ಬಿಟ್ಟಿದೆ. ಸ್ಮಾರ್ಟ್ಫೋನ್ ಬಳಕೆ ಮಾಡುವವರಲ್ಲಿ ಹೆಚ್ಚಿನವರಿಗೆ ಕಾಡುವ ಸಮಸ್ಯೆಯೆಂದರೆ ಬ್ಯಾಟರಿ ಸಮಸ್ಯೆ.
ಎಷ್ಟೇ ಜಾಗರೂಕತೆಯಿಂದ ಇದ್ದರೂ ಸಹ ಸ್ಮಾರ್ಟ್ಫೋನ್ ಬ್ಯಾಟರಿ ಒಂದಲ್ಲಾ ಒಂದು ದಿನ ಅದರ ಅವಧಿ ಮುಗಿಯುತ್ತದೆ. ಬ್ಯಾಟರಿ ಹಾಳಾದಂತೆ ಮೊಬೈಲ್ ಚಾರ್ಜ್ ಆಗುವುದು ಸಹ ನಿಧಾನವಾಗುತ್ತದೆ.
ನೀವು ಹೊರಗಿರುವಾಗ ಮತ್ತು ಚಾರ್ಜರ್ ನಿಮ್ಮೊಂದಿಗೆ ಇಲ್ಲದಿದ್ದಾಗ, ತೊಂದರೆ ಹೆಚ್ಚಾಗುತ್ತದೆ. ಇದರಿಂದಾಗಿ ಹಲವು ಪ್ರಮುಖ ಕೆಲಸಗಳನ್ನು ಸಹ ಮಾಡಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಫೋನಿನ ಬ್ಯಾಟರಿ ಸ್ವಲ್ಪ ಹೆಚ್ಚು ಬಾಳಿಕೆ ಬರುವಂತೆ ಹೇಗೆ ಮಾಡುವುದು ಎಂಬುದನ್ನು ತಿಳಿಯುವುದು ಅಗತ್ಯ.
ಇದನ್ನು ಓದಿ : Mobile ಕಸೆದುಕೊಂಡ ಅಧ್ಯಾಪಕಿ ; ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ ; ವಿಡಿಯೋ ವೈರಲ್.!
* ಚಾರ್ಜ್ ಗೆ ಇಟ್ಟು ಮೊಬೈಲ್‌ನಲ್ಲಿ ವಿಡಿಯೋ ನೋಡುವುದು, ಗೇಮ್ ಆಡುವುದು, ಕರೆ ರಿಸೀವ್ ಮಾಡುವುದು ಹೆಚ್ಚು ಅಪಾಯಕಾರಿ. ಇದರಿಂದ ಫೋನ್‌ಗಳು ಹೆಚ್ಚು ಬಿಸಿಯಾಗುತ್ತವೆ. ಯಾವಾಗ ಬೇಕಾದರೂ ಸ್ಫೋಟಗೊಂಡು (blast) ಭಾರಿ ಅಪಾಯ ಸಂಭವಿಸಬಹುದು. ಇದನ್ನು ತಪ್ಪಿಸಿ.
* ಫೋನ್ ಪಡೆದ ಕೆಲವು ವರ್ಷಗಳ ನಂತರವೂ ಮೂಲ ಚಾರ್ಜಿಂಗ್ ಕೇಬಲ್ ಮತ್ತು ಪ್ಲಗ್ ಹೊಂದಿದ್ದರೆ ಅದನ್ನು ಬದಲಾಯಿಸುವುದು ಉತ್ತಮ. ಅಗ್ಗದ ಬದಲಿಗೆ ಹೆಚ್ಚು ಗುಣಮಟ್ಟದ ಚಾರ್ಜಿಂಗ್ ಕೇಬಲ್ ಮತ್ತು ಪ್ಲಗ್ ಖರೀದಿಸಿ (Buy a quality charging cable and plug).
* ಆಧುನಿಕ ಫೋನ್‌ಗಳು ಬಹುತೇಕವಾಗಿ ಪುನರ್ ಭರ್ತಿ ಮಾಡಬಹುದಾದ ಲಿಥಿಯಂ- ಐಯಾನ್ ಬ್ಯಾಟರಿಗಳನ್ನು ಬಳಸುತ್ತವೆ. ಈ ಬ್ಯಾಟರಿಗಳಿಗೆ ಹೆಚ್ಚು ಸಂಗ್ರಹ ಸಾಮರ್ಥ್ಯ ಇದೆ. ಆದರೆ ಇವು ಕೆಲವು ಮಿತಿಗಳನ್ನು ಹೊಂದಿವೆ. ನಿರ್ದಿಷ್ಟವಾಗಿ ಹೇಳುವುದಾದರೆ ಸಂಪೂರ್ಣವಾಗಿ ಬರಿದಾಗಲು ಅಥವಾ ಈಗಾಗಲೇ ತುಂಬಿರುವಾಗ ಚಾರ್ಜ್ ಆಗಲು ಈ ಬ್ಯಾಟರಿಗಳು ಸೂಕ್ತವಲ್ಲ.
* ನಿರ್ದಿಷ್ಟ ಗಂಟೆಗಳ ಕಾಲ ಮಾತ್ರ ಫೋನ್ ಅನ್ನು ಚಾರ್ಜ್ ಮಾಡಿ. ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ಚಾರ್ಜ್ (Do not charge for longer than the specified time) ಮಾಡಲು ಇಡದಿರಿ. ಬ್ಯಾಟರಿ ಶೇ. 100 ಆದಾಗ ಕೂಡಲೇ ಅನ್ ಪ್ಲಗ್ ಮಾಡಿ.
ಇದನ್ನು ಓದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!
ಬಹಳಷ್ಟು ಫೋನ್‌ಗಳು ತುಂಬಿದ ಅನಂತರ ಚಾರ್ಜ್ ಆಗುವುದನ್ನು ನಿಲ್ಲಿಸುವ ಸಿಸ್ಟಮ್‌ಗಳನ್ನು ಒಳಗೊಂಡಿವೆ. ಆದರೆ ಇವುಗಳ ಕಾರ್ಯ ವಿಧಾನದ ಮೇಲೆ ನೀವು ಅನ್ ಪ್ಲಗ್ ಮಾಡದೇ ಇದ್ದರೆ ಋಣಾತ್ಮಕ ಪರಿಣಾಮ ಬೀರಬಹುದು.
* ಮೊಬೈಲ್‌ನಲ್ಲಿ ಕೆಲವು ಆಪ್‌ಗಳು ಮೊಬೈಲ್ ಬ್ಯಾಟರಿ ಲೈಫ್ ಅನ್ನು ಉಳಿಸುತ್ತದೆ. ಇಂತಹ ಆಪ್‌ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ. ಸಾಧ್ಯವಾದಷ್ಟು ಮೊಬೈಲ್‌ನಲ್ಲಿ ಬ್ಯಾಟರಿ ಸೇವ್ ಮೋಡ್ ಬಳಸಿ. ಅನಗತ್ಯವಾದ ಆಪ್‌ಗಳ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ.
ಇದನ್ನು ಓದಿ : 500 ರೂ. ಉತ್ತರ ಪತ್ರಿಕೆಯಲ್ಲಿಟ್ಟು, ಪಾಸಾದ್ರಷ್ಟೇ ಹುಡುಗಿ ಲವ್ ಮಾಡುತ್ತಾಳೆ ಎಂದ SSLC ವಿದ್ಯಾರ್ಥಿ.!
* ಇನ್ನು ಪೋನ್ ನ್ನು ಬೆಚ್ಚಗಿನ ಸ್ಥಳದಲ್ಲಿ ಇಟ್ಟು ಚಾರ್ಜ್ ಮಾಡಬೇಡಿ (Do not keep in a warm place). ಯಾಕೆಂದರೆ ಬ್ಯಾಟರಿಯ ಆರೋಗ್ಯಕ್ಕಿಂತ ನಿಮ್ಮ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ನೀಡಿ. ಫೋನ್‌ಗಳನ್ನು ಹೆಚ್ಚು ಚಾರ್ಜ್ ಮಾಡುವುದರಿಂದ ಬ್ಯಾಟರಿ ತುಂಬಿ ಗಮನಾರ್ಹವಾದ ಉಷ್ಣತೆಗೆ ಕಾರಣವಾಗುತ್ತದೆ. ಇದು ಮೊಬೈಲ್ ಸ್ಫೋಟಕ್ಕೂ ಕಾರಣವಾಗಬಹುದು. ಹೀಗಾಗಿ ಮೊಬೈಲ್ ಅನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟು ಚಾರ್ಜ್ ಮಾಡುವುದು






