ಜನಸ್ಪಂದನ ನ್ಯೂಸ್, ಬೆಂಗಳೂರು : ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, 19 ವರ್ಷದ ಯುವಕನೊಬ್ಬ ಮಹಿಳೆ (Woman) ಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.
ಕಳೆದ ನವೆಂಬರ್ 7 ರಂದು ರಾತ್ರಿ ಸುಮಾರು 10:30 ಗಂಟೆಗೆ ಮಹಿಳೆ (Woman) ತಮ್ಮ ಸಾಕು ನಾಯಿಯೊಂದಿಗೆ ಉಪಕಾರ್ ಲೇಔಟ್‌ನಲ್ಲಿ ವಾಕಿಂಗ್‌ಗೆ ತೆರಳಿದ್ದಾಗ, ಆರೋಪಿತ ವಿಘ್ನೇಶ್ (ಬ್ಯಾಡರಹಳ್ಳಿ ನಿವಾಸಿ) ಮಹಿಳೆಗೆ ಹತ್ತಿರ ಹೋಗಿದ್ದಾನೆ.
ಇದನ್ನು ಓದಿ : ರಾಜ್ಯದಲ್ಲಿ ಚಳಿ ಜೊತೆ ಮತ್ತೆ ಮಳೆ – ಮುಂದಿನ 5 ದಿನಗಳ Weather ಮುನ್ಸೂಚನೆ ಬಿಡುಗಡೆ.
ಆರೋಪಿ ಆರಂಭದಲ್ಲಿ “ನಿಮ್ಮ ನಾಯಿ ತುಂಬಾ ಚೆನ್ನಾಗಿದೆ, ಮುಟ್ಟಬಹುದೇ?” ಎಂದು ಕೇಳಿದ್ದಾನೆ. ಮಹಿಳೆ (Woman) ಯ ಸಮ್ಮತಿಯ ನಂತರ ನಾಯಿಯನ್ನೇ ಮುಟ್ಟುವ ನೆಪದಲ್ಲಿ ಮಹಿಳೆ (Woman) ಯ ದೇಹದ ಸೂಕ್ಷ್ಮ (ಖಾಸಗಿ) ಭಾಗಗಳನ್ನು ಮುಟ್ಟುವ ಮೂಲಕ ಲೈಂಗಿಕ ಕಿರುಕುಳ ನಡೆಸಿದ್ದಾನೆ.
ಕೇವಲ 19 ವರ್ಷದ ಯುವಕನ ದುರ್ವರ್ತಗೆ ಮಹಿಳೆ ಗಾಬರಾಗಿ ಕೈಯಲ್ಲಿದ್ದ ಮೊಬೈಲ್ ಫೋನ್ ಕೆಳಗೆ ಬಿಟ್ಟಿದ್ದಾರೆ. ಆದರೆ ಆರೋಪಿ ಕೆಳಗೆ ಬಿದ್ದ ಫೋನ್ ಅನ್ನು ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ತಕ್ಷಣವೇ ಮಹಿಳೆ (Woman) ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯ ಮತ್ತು ತಾಂತ್ರಿಕ ಮಾಹಿತಿಯ ಮೂಲಕ ಆರೋಪಿಯನ್ನು ಗುರುತಿಸಿ ಬಂಧಿಸಿದ್ದಾರೆ.
ಇದನ್ನು ಓದಿ : Heart : ನೀವು ಮಹಿಳೆಯರ ಮನಸ್ಸು ಗೆಲ್ಲಬೇಕೆ? ಈ ಗುಣಗಳಿದ್ದರೆ ಸಾಕು.
ಪೊಲೀಸ್ ತನಿಖೆಯಲ್ಲಿ, ವಿಘ್ನೇಶ್ ಇದೇ ರೀತಿಯ ಯಾವುದೇ ಮತ್ತೊಂದು ಕಿರುಕುಳ ಅಥವಾ ಕಳ್ಳತನ ಪ್ರಕರಣಗಳಿಗೆ ಬೇಕಾಗಿದ್ದಾನೆಯೇ ಎಂದು ಕೂಡ ಪರಿಶೀಲಿಸಲಾಗುತ್ತಿದೆ.
ಪತಿಯ ಎರಡನೇ Marriage ವೇಳೆ ಮೊದಲ ಪತ್ನಿ ಎಂಟ್ರಿ; ಮುಂದೆನಾಯ್ತು ವಿಡಿಯೋ ನೋಡಿ.

ಜನಸ್ಪಂದನ ನ್ಯೂಸ್, ಬಸ್ತಿ (ಉತ್ತರ ಪ್ರದೇಶ) : ಬಸ್ತಿ ಜಿಲ್ಲೆಯ ಪೈಕೌಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಪಿರೈಲಾ ಗ್ರಾಮದಲ್ಲಿ, ವ್ಯಕ್ತಿಯೋರ್ವ ಎರಡನೇ ಮದುವೆ (Marriage) ಮಾಡಿಕೊಳ್ಳಲು ಹೊರಟ ವೇಳೆ ಮೊದಲ ಪತ್ನಿ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾಳೆ.
ಹೀಗೆ ಪೊಲೀಸ್ ಜತೆಗೆ ಮೊದಲ ಪತ್ನಿ (Marriage) ಮಂಟಪಕ್ಕೆ ಎಂಟ್ರಿ ನೀಡುತ್ತಿರುವ ಈ ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ದೈನಿಕ್ ಭಾಸ್ಕರ್‌ನಲ್ಲಿ ವರದಿಯಾಗಿದೆ.
ವಿನಯ್ ಅಂಗದ್ ಶರ್ಮಾ ಪೈಕೌಲಿಯಾ ಗ್ರಾಮದ ಯುವತಿಯೊಂದಿಗೆ ಮದುವೆ (Marriage) ಯಾಗಲು ಮುಂದಾಗಿದ್ದಾಗ, ಮೊದಲ ಪತ್ನಿ ರೇಷ್ಮಾ ಪೊಲೀಸರಿಗೆ ಜೊತೆಯಾಗಿಯೇ ಮಂಟಪಕ್ಕೆ ಬಂದಿದ್ದಾಳೆ. ನ.17ರ ರಾತ್ರಿ 11.30ರ ವೇಳೆಗೆ ಮದುವೆ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಮೊದಲ ಪತ್ನಿಯ ಆಗಮನದಿಂದ ಹೈಡ್ರಾಮಾ ನಡೆದಿದೆ.
ಇದನ್ನು ಓದಿ : ಕರ್ನಾಟಕದ ಈ 4 Railway ನಿಲ್ದಾಣಗಳಿಗೆ ಹೊಸ ಹೆಸರು ; ನಿಮ್ಮ ನಿಲ್ದಾಣದ ಹೆಸರೇನು?
ಮೊದಲ ಪತ್ನಿ ಜೀವಂತ ಇರುವಾಗಲೇ ಇನ್ನೊಂದು ಮದುವೆ (Marriage) ಯಾಕೆ ಮಾಡಿಕೊಳ್ಳುತ್ತಿರುವೆ ಎಂದು ಕೇಳಿದ್ದಾರೆ.
ರೇಷ್ಮಾ, ತನ್ನ ಹಿನ್ನಲೆ ಹಿಸ್ಟರಿಯನ್ನು ಪ್ರಸ್ತಾಪಿಸಿ, “ನಾನು ಜೀವಂತ ಇರುವಾಗ ಮತ್ತೊಬ್ಬರೊಂದಿಗೆ ಮದುವೆ (Marriage) ಮಾಡುವುದು ಹೇಗೆ ಸಾಧ್ಯ? ನನ್ನ ಬಳಿ ಇದಕ್ಕೆ ಬೇಕಾದ ಕಾನೂನು ಪುರಾವೆ ಇದೆ ಎಂದು ವಿನಯ್ ಶರ್ಮಾ ನನ್ನು ಪ್ರಶ್ನಿಸಿದ್ದಾಳೆ.
ವೈರಲ್ ವಿಡಿಯೋದಲ್ಲಿ ಮಂಟಪದಲ್ಲಿ ನಡೆದ ಈ ಘರ್ಷಣೆಯನ್ನು ಸ್ಪಷ್ಟವಾಗಿ ನೋಡಬಹುದು. ರೇಷ್ಮಾ ತನ್ನ ಫೋಟೋಗಳು ಮತ್ತು ಮದುವೆ ನೋಂದಣಿ ದಾಖಲೆಗಳನ್ನು ಪ್ರದರ್ಶಿಸಿ, “ನಾನು ಈ ವ್ಯಕ್ತಿಯೊಂದಿಗೆ ಮದುವೆಯಾಗಿದ್ದೆ, ನಮಗೆ ವಿಚ್ಛೇದನ ಕೂಡ ಆಗಿಲ್ಲ. ಇನ್ನು ನಾನು ಪತಿಗೆ ಬೇರೆ ಮದುವೆಗೆ ಒಪ್ಪಿಗೆ ಕೂಡ ನೀಡಿಲ್ಲ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ, ವಿನಯ್‌ನೊಂದಿಗೆ ಮದುವೆಯಾಗಲು ಹೊರಟ ವಧು ಮಂಟಪದಿಂದ ಎದ್ದು ಕೋಣೆಗೆ ಹೋಗಿದ್ದಾಳೆ. ಈ ವೇಳೆ ವಧುವಿನ ಮನೆಯವರು ಅವಳನ್ನು ಸಮಾಧಾನಪಡಿಸಿ, ಮದುವೆಯನ್ನು ರದ್ದುಗೊಳಿಸಿದ್ದಾರೆ.
ಇದನ್ನು ಓದಿ : “ನೀವು Night ಲೈಟ್ ಆನ್ ಇಟ್ಟು ಮಲಗ್ತೀರಾ? ಹಾಗಾದ್ರೆ ಈ ಸುದ್ದಿ ಓದಿ.”
ಹಿನ್ನೆಲೆ :
ರೇಷ್ಮಾ ಮತ್ತು ವಿನಯ್ ನಡುವೆ ಸುಮಾರು ಒಂಬತ್ತು ವರ್ಷಗಳ ಸಂಬಂಧವಿತ್ತು ಎಂದು ರೇಷ್ಮಾ ಹೇಳಿರುವುದಾಗಿ ದೈನಿಕ್ ಭಾಸ್ಕರ್ ವರದಿ ಮಾಡಿದೆ. ಇಬ್ಬರೂ 30 ಮಾರ್ಚ್ 2022 ರಂದು ನ್ಯಾಯಾಲಯದಲ್ಲಿ ವಿವಾಹ (Marriage) ವಾಗಿದೆ. ನಂತರ 8 ಡಿಸೆಂಬರ್ 2022 ರಂದು ಕುಟುಂಬದ ಸದಸ್ಯರ ಮುಂದೆ ಮದುವೆ ಆಚರಿಸಲಾಗಿದೆ.
ಎರಡು ವರ್ಷದ ನಂತರ ಇಬ್ಬರೂ ವಿಚ್ಛೇದನ ಅರ್ಜಿ ಹಾಕಿರುವಾಗ, ವಿನಯ್ ಎರಡನೇ ಮದುವೆಗೆ ಮುಂದಾಗಿದ್ದಾನೆ. ರೇಷ್ಮಾ ಆಭರಣಗಳೊಂದಿಗೆ ಓಡಿಹೋಗಿರುವುದಾಗಿ ಆರೋಪಿಸಿ ಕಾನೂನು ನೋಟಿಸ್ ವಿನಯ್ ಕಳಿಸಿದ್ದಾನೆ. ಪ್ರಕರಣದ ವಿಚಾರಣೆ ಕುರಿತು ಈಗ ಪೊಲೀಸ್ ಮಧ್ಯಸ್ಥತೆ ನಡೆದಿದೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ತನಿಖೆ ಮಾಡುತ್ತಿದ್ದು, ಇದೀಗ ಪೊಲೀಸರು ಮಧ್ಯಪ್ರವೇಶಿಸಿ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ವಿಡಿಯೋ :
View this post on Instagram
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







