Sunday, September 8, 2024
spot_img
spot_img
spot_img
spot_img
spot_img
spot_img
spot_img

Lunch Time : ಮಧ್ಯಾಹ್ನದ ಊಟಕ್ಕೆ ಸರಿಯಾದ ಸಮಯ ಯಾವ್ದು ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮಧ್ಯಾಹ್ನದ ಊಟವು (lunch) ದಿನದ ಪ್ರಮುಖ ಊಟವಾಗಿದೆ. ಇದು ಸ್ಥಿರವಾದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಮಧ್ಯಾಹ್ನದ ಊಟವು ಶಕ್ತಿಯ ಕುಸಿತ (Energy collapse) ಮತ್ತು ಕಿರಿಕಿರಿಯನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ನಿಯಮಿತವಾಗಿ ಒಂದೇ ಸಮಯಕ್ಕೆ ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.

ಬ್ಯಾಂಕ್‌ ಆಫ್‌ ಇಂಡಿಯಾ (BOI) ದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ದಿನದ ಚಟುವಟಿಕೆಗೆ ಮಧ್ಯಾಹ್ನದ ಊಟ ಅತಿ ಪ್ರಮುಖವಾಗಿದ್ದು, ಇದನ್ನು ಬಿಡುವುದು ಅಥವಾ ತಡವಾಗಿಸುವುದು (late) ಆರೋಗ್ಯದ ಮೇಲೆ ನೇರವಾದ ಪರಿಣಾಮ ಬೀರುತ್ತದೆ.

ಮಧ್ಯಾಹ್ನ ಊಟದ ಸಮಯ :

ಆಹಾರ ಮತ್ತು ಪೌಷ್ಟಿಕಾಂಶದ ಬಗ್ಗೆ ಅನೇಕ ಭಾರತೀಯ ಸೆಲೆಬ್ರಿಟಿಗಳಿಗೆ ಸಲಹೆ ನೀಡಿದ ಪೌಷ್ಟಿಕ ತಜ್ಞರು, ಉತ್ತಮ ಮಧ್ಯಾಹ್ನದ ಊಟದ ಸಮಯ (Good lunch time) ಮಧ್ಯಾಹ್ನ 11 ರಿಂದ 1 ರವರೆಗೆ ಎಂದು ಹೇಳುತ್ತಾರೆ. ಅಂದರೆ ಈ ಅವಧಿಯ ಮಧ್ಯದಲ್ಲಿ ತಿನ್ನಬೇಕು.

ಯಾವುದೇ ಕಾರಣಕ್ಕಾಗಿ ಮಧ್ಯಾಹ್ನ 11 ರಿಂದ 1 ರ ನಡುವೆ ಊಟ ಮಾಡಲು ಸಾಧ್ಯವಾಗದಿದ್ದರೆ, ಈ ಸಮಯದಲ್ಲಿ ಬಾಳೆಹಣ್ಣನ್ನು ತಿನ್ನಬೇಕು ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ನಂತರ ಸಮಯ ಸಿಕ್ಕಾಗ ಊಟ ಮಾಡಿ.

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ; ಅರ್ಜಿ ಸಲ್ಲಿಸಲು ಡೈರೆಕ್ಟ್ Link ಇಲ್ಲಿದೆ ನೋಡಿ..!

ಏನು ಸೇವಿಸಿದರೆ ಉತ್ತಮ :

ದಿನಕ್ಕೆ ಮೂರು ಊಟ ಬಹಳ ಮುಖ್ಯ. ಮಧ್ಯಾಹ್ನದ ಊಟದಲ್ಲಿ ಕ್ಯಾಲೊರಿಗಳು, ಪ್ರೋಟೀನ್ ಗಳು (protein’s), ಕಾರ್ಬ್ಸ್, ಫೈಬರ್, ಕೊಬ್ಬುಗಳು, ವಿಟಮಿನ್ ಗಳು ಇತ್ಯಾದಿಗಳ ಬಗ್ಗೆ ಕಾಳಜಿ ವಹಿಸಬೇಕು.

ಮಧ್ಯಾಹ್ನ ಊಟ ಇಲ್ಲದೇ ಇದ್ದರೆ, ಬೇರೆ ಪೌಷ್ಟಿಕಾಂಶಗಳನ್ನು ಸೇವಿಸುವಂತಹ ಉತ್ತಮ ಅಭ್ಯಾಸ ಅಳವಡಿಸಿಕೊಳ್ಳುವುದರಿಂದ ಆಮ್ಲೀಯತೆ (acidity) ಮತ್ತು ತಲೆನೋವು ಬರುವುದಿಲ್ಲ.

ಉಪಯೋಗ :

ಸರಿಯಾದ ಮಧ್ಯಂತರದಲ್ಲಿ ಆಹಾರವನ್ನು ತಿನ್ನುವುದು ಚಯಾಪಚಯ ಕ್ರಿಯೆಯನ್ನು ಸಕ್ರಿಯವಾಗಿರಿಸುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡುವುದರಿಂದ ಕಳೆದುಹೋದ ಶಕ್ತಿಯನ್ನು ಮರಳಿ (return) ತರುತ್ತದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img