Wednesday, May 22, 2024
spot_img
spot_img
spot_img
spot_img
spot_img
spot_img

Health : ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಲೇಬೇಡಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಹಣ್ಣುಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ (sanguinely) ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಆದರೆ, ಖಾಲಿ ಹೊಟ್ಟೆಯಲ್ಲಿ (Empty stomach) ಕೆಲವು ಹಣ್ಣುಗಳನ್ನು ತಿನ್ನುವುದು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಕೆಲವು ಹಣ್ಣುಗಳನ್ನು ತಿನ್ನಬಾರದು.

ಇದನ್ನು ಓದಿ : ರೆಸ್ಟೋರೆಂಟ್‌ನಲ್ಲಿ ಬ್ಯೂಟಿ ಕ್ವೀನ್ ಗುಂಡಿಕ್ಕಿ ಬರ್ಬರ ಹತ್ಯೆ ; CCTV ಯಲ್ಲಿ ಭಯಾನಕ ದೃಶ್ಯ ಸೆರೆ.!

ಬಾಳೆಹಣ್ಣು :
ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ತಿನ್ನಲೇಬಾರದು. ಅದರಲ್ಲೂ ಬೆಳಗಿನ ಸಮಯದ ಉಪಹಾರದ ಮೊದಲು ಸೇವನೆ ಮಾಡಲೇಬಾರದು. ಏಕೆಂದರೆ ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೀಸಿಯಂ ಅಂಶ ಇರುವುದರಿಂದ ಇದು ರಕ್ತ ಸಂಚಾರವನ್ನು ಹೆಚ್ಚು ಮಾಡಿ ಹೃದಯ ಬಡಿತ (Heart beat) ಹೆಚ್ಚಾಗುವಂತೆ ಮಾಡುತ್ತದೆ. ಮೊದಲು ರಕ್ತದ ಒತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಗಳನ್ನು ಹೊಂದಿದವರಿಗೆ ಇದು ತುಂಬಾ ಅಪಾಯಕಾರಿ ಎನ್ನಬಹುದು.

ಪಿಯರ್ ಹಣ್ಣು :
ಪಿಯರ್ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವನೆ ಮಾಡುವುದರಿಂದ ಹೊಟ್ಟೆಯ ಭಾಗದ ಸಿಂಬಳದ ಪದರ ಹಾನಿಯಾಗುತ್ತದೆ ಎಂದು ಹೇಳುತ್ತಾರೆ. ಅಲ್ಲದೇ ಇದು ದೇಹದ ಜೀರ್ಣಾಂಗ ವ್ಯವಸ್ಥೆಯ (Digestive system) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೇಹಕ್ಕೆ ಸಾಕಷ್ಟು ಅನಾರೋಗ್ಯ ಉಂಟುಮಾಡುತ್ತದೆ. ಆನಂತರದಲ್ಲಿ ನಾವು ಸೇವನೆ ಮಾಡುವ ಆಹಾರಗಳು ಸರಿಯಾಗಿ ಜೀರ್ಣವಾಗಲು ಸಾಧ್ಯವಾಗುವುದಿಲ್ಲ.

ದ್ರಾಕ್ಷಿಹಣ್ಣು :
ದ್ರಾಕ್ಷಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಅದರಲ್ಲಿರುವ ಆಮ್ಲೀಯ ಅಂಶ (Acidity factor) ನಿಮ್ಮ ಹೊಟ್ಟೆಯ ಒಳಪದರದ ಮೇಲೆ ಕೆಟ್ಟ ಪ್ರಭಾವಬೀರಿ ಹೊಟ್ಟೆ ಹುಣ್ಣುಗಳು ಮತ್ತು ಎದೆಯುರಿ ಸಮಸ್ಯೆಗೆ ಕಾರಣವಾಗುತ್ತದೆ.

ಅತಿಯಾದ ಗ್ಯಾಸ್ಟಿಕ್ ಮತ್ತು ಎದೆಯುರಿ ಹೃದಯಘಾತಕ್ಕೆ ಕಾರಣ ಮತ್ತು ಪಾರ್ಶ್ವವಾಯು ಸಮಸ್ಯೆಗೆ ನಾಂದಿ ಎಂಬುದನ್ನು ಮರೆಯಬಾರದು.

ಲಿಚಿ ಹಣ್ಣು :
ಯಾವುದೇ ಕಾರಣಕ್ಕೂ ಲಿಚ್ಚಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಲಿಚಿ ಹಣ್ಣಿನ ರಸ ಕೂಡ ಖಾಲಿ ಹೊಟ್ಟೆಯಲ್ಲಿ ತುಂಬಾ ಅಪಾಯಕಾರಿ. ವಿಶೇಷವಾಗಿ ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಈ ಹಣ್ಣು ತಿನ್ನುವುದರಲ್ಲಿ ಜಾಗ್ರತೆ ವಹಿಸಬೇಕು.

ಇದು ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಧಿಕವಾಗಿ ಏರುಪೇರು ಮಾಡುತ್ತದೆ. ಇದರಿಂದ ಗ್ಯಾಸ್ಟಿಕ್ ಸಮಸ್ಯೆ ಉಂಟಾಗುವುದು ಮಾತ್ರವಲ್ಲದೆ ಹೊಟ್ಟೆನೋವು ಕೂಡ ಕಂಡುಬರಬಹುದು.

ಮಾವಿನ ಹಣ್ಣು :
ಖಾಲಿಹೊಟ್ಟೆಯಲ್ಲಿ ಮಾವಿನ ಹಣ್ಣು ತಿನ್ನುವುದರಿಂದ ರಕ್ತ ಸಂಚಾರದಲ್ಲಿ ಇದ್ದಕ್ಕಿದ್ದಂತೆ ಸಕ್ಕರೆ ಪ್ರಮಾಣ ತುಂಬಾ ಹೆಚ್ಚಾಗುತ್ತದೆ.

ಇದರ ಜೊತೆಗೆ ಇನ್ನಿತರ ಆಹಾರಗಳಲ್ಲಿ ಸಿಗುವಂತಹ ಕಾರ್ಬೋಹೈಡ್ರೆಟ್ ಅಂಶ ಕೂಡ ದೇಹ ಸೇರುವುದರಿಂದ ಮಧುಮೇಹ ಸಮಸ್ಯೆ ನಿಯಂತ್ರಣ (Control) ತಪ್ಪುತ್ತದೆ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಎದುರಾಗುತ್ತದೆ.

ಇದನ್ನು ಓದಿ : Video : ದಿಢೀರ್ ಅಂತ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ಮಾಜಿ ಪ್ರಿಯತಮ ; ಶಾಕ್ ಆದ ವಧು ; ಮುಂದೆ.?

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

 

spot_img
spot_img
spot_img
- Advertisment -spot_img