Wednesday, May 22, 2024
spot_img
spot_img
spot_img
spot_img
spot_img
spot_img

Mobile ಹೆಚ್ಚು ಬಳಸಬೇಡ ಅಂದ ಅಣ್ಣನಿಗೆ ಅಪ್ರಾಪ್ತ ತಂಗಿ ಮಾಡಿದ್ದೇನು ಗೊತ್ತೇ.?

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಯಾವಾಗಲೂ ಮೊಬೈಲ್ ಫೋನ್‌ನಲ್ಲಿ ಹುಡುಗರ ಜೊತೆ ಮಾತಾಡುತ್ತಿದ್ದ ತಂಗಿಗೆ ಅಣ್ಣ ಹೆಚ್ಚು ಮೊಬೈಲ್ ಫೋನ್ ಬಳಸದಂತೆ ತಾಕೀತು ಮಾಡಿದ್ದಕ್ಕೆ ಆತನನ್ನು 14 ವರ್ಷದ ತಂಗಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.

ಬುದ್ದಿ ಮಾತು ಹೇಳಿದ್ದಕ್ಕೆ ಅಣ್ಣನನ್ನೇ ತಂಗಿ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಛತ್ತೀಸ್‌ಘಡ ರಾಜ್ಯದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಇದನ್ನು ಓದಿ : Video : ದಿಢೀರ್ ಅಂತ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ಮಾಜಿ ಪ್ರಿಯತಮ ; ಶಾಕ್ ಆದ ವಧು ; ಮುಂದೆ.?

ಛತ್ತೀಸ್‌ಘಡದ ಕೆಸಿಜಿ ಖೈರಾಘರ್ ಚುಯಿಖಾದನ್ ಗಂಡೈ ಜಿಲ್ಲೆಯಲ್ಲಿ ಮೇ. 3 ರಂದು ಘಟನೆ ನಡೆದಿದ್ದು, ಬಾಲಕಿಯನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಇನ್ನೂ ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ ಘಟನೆ ನಡೆಯುವ ವೇಳೆ ಆಕೆ ಹಾಗೂ ಆಕೆಯ 18 ವರ್ಷದ ಅಣ್ಣ ಮಾತ್ರ ಮನೆಯಲ್ಲಿದ್ದರು. ಕುಟುಂಬದ ಇತರ ಸದಸ್ಯರು ಬೇರೆ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಿದ್ದರು.

ಈ ವೇಳೆ ಆಕೆ ಹುಡುಗರ ಜೊತೆ ಫೋನ್‌ನಲ್ಲಿ ಲಲ್ಲೆ ಹೊಡೆಯುತ್ತಿದ್ದಿದ್ದನ್ನು ನೋಡಿದ ಅಣ್ಣ ಹುಡುಗರೊಂದಿಗೆ ಫೋನ್‌ನಲ್ಲಿ ಹರಟುವುದನ್ನು ನಿಲ್ಲಿಸುವಂತೆ ಹೇಳಿ ಬಳಿಕ ಸ್ವಲ್ಪ ಹೊತ್ತಿನಲ್ಲಿ ನಿದ್ದೆಗೆ ಜಾರಿದ್ದಾನೆ.

ಆದರೆ ಆತನ ಮಾತುಗಳಿಂದ ಆಕ್ರೋಶಗೊಂಡ ತಂಗಿ ಮಾತ್ರ ಅಣ್ಣ ಮಲಗಿದ್ದ ಸಮಯ ನೋಡಿ ಕೊಡಲಿ ತಂದು ಸೀದಾ ಆತನ ಕತ್ತಿಗೆ ಕಡಿದಿದ್ದಾಳೆ. ಪರಿಣಾಮ ಆತ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.

ಇದನ್ನು ಓದಿ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ; ಪರಾರಿಯಾಗಲೆತ್ನಿಸಿದ ಆರೋಪಿಗೆ ಗುಂಡೇಟು ಕೊಟ್ಟ Police.!

ನಂತರ ಸ್ನಾನ ಮಾಡಿದ ಆಕೆ ರಕ್ತಸಿಕ್ತವಾದ ಬಟ್ಟೆಯನ್ನು ತೊಳೆದು ಹಾಕಿದ್ದಾಳೆ. ಇದಾದ ಬಳಿಕ ಮೆಲ್ಲನೆ ಪಕ್ಕದ ಮನೆಯವರಿಗೆ ತನ್ನ ಸೋದರನ ಕೊಲೆ ಆಗಿದೆ ಎಂದು ತಿಳಿಸಿದ್ದಾಳೆ. ಬಳಿಕ ಗ್ರಾಮಸ್ಥರು ಪೊಲೀಸರಿಗೆ ವಿಚಾರ ತಿಳಿಸಿದ್ದಾಳೆ.

ಸ್ಥಳಕ್ಕೆ ಬಂದ ಪೊಲೀಸರು ಘಟನೆ ಬಗ್ಗೆ ಪ್ರಶ್ನಿಸಿದ್ದಾರೆ. ವಿಚಾರಣೆ ವೇಳೆ ಬಾಲಕಿ ಸೋದರನನ್ನು ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಸಂಪೂರ್ಣ ವಿವರ ಪಡೆಯಲು ಮುಂದಾಗಿದ್ದಾರೆ. ಅಲ್ಲದೇ ಬಾಲಕಿಯನ್ನು ಬಂಧಿಸಿ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂದು ವರದಿ ತಿಳಿಸಿದೆ

spot_img
spot_img
spot_img
- Advertisment -spot_img