Saturday, July 13, 2024
spot_img
spot_img
spot_img
spot_img
spot_img
spot_img

ಪರ ಸ್ತ್ರೀಯೊಂದಿಗೆ ಲಾಡ್ಜ್​​ಗೆ ಹೋದ ವ್ಯಕ್ತಿ ಸಂಶಯಾಸ್ಪದ ಸಾವು ; ಅಂಥದ್ದೇನಾಯ್ತು.?

spot_img

ಜನಸ್ಪಂದನ ನ್ಯೂಸ್, ಚಿತ್ರದುರ್ಗ : ಚಿತ್ರದುರ್ಗ ನಗರದಲ್ಲಿ ಪರ ಸ್ತ್ರೀಯೊಂದಿಗೆ ಲಾಡ್ಜ್​​ಗೆ ಹೋಗಿದ್ದ ವಿವಾಹಿತ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತಪಟ್ಟ ವ್ಯಕ್ತಿ ಹರಿಹರ ಮೂಲದ ಗೋಪಾಲ ಟಿ. ಎಂದು ತಿಳಿದು ಬಂದಿದ್ದು, ಈತ ವಿವಾಹಿತ ಮಹಿಳೆಯೊಬ್ಬರ ಜೊತೆ ಗೋಪಾಲ ಲಾಡ್ಜ್​​ಗೆ ಬಂದಿದ್ದ ಎನ್ನಲಾಗಿದೆ.

ಇದನ್ನು ಓದಿ : ನಿಮಗಿದು ಗೊತ್ತೇ : ಮುರಿದ ಮೂಳೆಯನ್ನೇ ಜೋಡಿಸುತ್ತೇ ಈ ಸಸ್ಯ ; ಬನ್ನಿ ಇದರ ಉಪಯೋಗ ತಿಳಿಯೋಣ.!

ಹಾವೇರಿ ಮೂಲದ ಮಹಿಳೆ ಕಳೆದ ಒಂದು ವರ್ಷದ ಹಿಂದೆ ಗೋಪಾಲ್​​ಗೆ ಪರಿಚಯವಾಗಿದ್ದಳು. ಪರಿಚಯ ಪ್ರೀತಿಗೆ ತಿರುಗಿತ್ತು. ಕಳೆದ 6 ತಿಂಗಳಿಂದ‌ ಪರಸ್ಪರ ದೈಹಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

ಜುಲೈ 4ರಂದು ಮಧ್ಯಾಹ್ನ 3:11ಕ್ಕೆ ಸಿಟಿ ಬಸ್ ನಿಲ್ದಾಣದ ಸಮೀಪ ಲಾಡ್ಜ್​ಗೆ ಬಂದಿದ್ದರು.

ಇನ್ನೂ ಅದೇ ದಿನ ಸಂಜೆ ಲಾಡ್ಜ್​​ನಲ್ಲಿ ಗೋಪಾಲ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ. ಎದೆ ನೋವಿನಿಂದ ಕುಸಿದು ಬಿದ್ದಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಗೋಪಾಲ ಕಳೆದ 5 ವರ್ಷದ ಹಿಂದೆ ದಾವಣಗೆರೆಯ ದುರ್ಗಮ್ಮ ಎಂಬವಳನ್ನ ಮದುವೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : Video : ರೀಲ್ಸ್‌ಗಾಗಿ ಬೈಕ್ ಸಮೇತ ಸಮುದ್ರದ ನೀರಿಗಿಳಿದ ಯುವಕ ; ಇಂಥಾ ದುಸ್ಸಾಹಸಕ್ಕೆ ಕೈಹಾಕಬೇಡಿ ಅಂದ ನೆಟ್ಟಿಗರು.

ಗೋಪಾಲ- ಪವಿತ್ರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನೂ ಗೋಪಾಲನ ಕುಟುಂಬ ಹೆಚ್ಚಿನ ತನಿಖೆಗೆ ಆಗ್ರಹಿಸಿದೆ. ಪೊಲೀಸರು ಪವಿತ್ರಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

spot_img
spot_img
- Advertisment -spot_img