ಜನಸ್ಪಂದನ ನ್ಯೂಸ್, ಡೆಸ್ಕ್ : ಈಗಂತು ರೀಲ್ಸ್‌ಗಾಗಿ ಯು ಜನತೆ ಪ್ರಾಣಾಪಾಯ ತಂದೊಡ್ಡುವ ಅನೇಕ ಸಾಹಸಗಳನ್ನು ಮಾಡುತ್ತಿದ್ದಾರೆ.
ಇದೀಗ ಅದೇ ರೀತಿಯಲ್ಲಿ ಸಾಹಸ ಮಾಡಲು ಯುವಕನೊಬ್ಬ ಕಡಲಬ್ಬರದ ಅಲೆಗಳ ನಡುವೆ ಸ್ಕೂಟರ್ ಜೊತೆಗೆ ನೀರಿಗೆ ಇಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ಇದನ್ನು ಓದಿ : Banned : ರಾಜ್ಯಾಧ್ಯಂತ ಶಾಲಾ-ಕಾಲೇಜುಗಳಲ್ಲಿ “ಮೊಬೈಲ್” ಬಳಕೆ ನಿಷೇಧ.!
ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪರ-ವಿರೋಧ ಕಾಮೆಂಟ್‌ಗಳು ಬರುತ್ತಿವೆ.
ಆದರೆ ಯುವಕನ ವಿಡಿಯೋ ನೊಡಿದ ನೆಟ್ಟಿಗರು ಈ ರೀತಿಯ ಸಾಹಸಕ್ಕೆ ಯಾರೂ ಕೈ ಹಾಕಬೇಡಿ ಎಂಬುದಾಗಿ ಮನವಿ ಮಾಡಿಕೊಂಡಿದ್ದಾರೆ.
ವೀಡಿಯೋದಲ್ಲಿ ಏನಿದೆ..? :
ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಯುವಕನೊಬ್ಬ ತನ್ನ ಸ್ಕೂಟರ್‌ನಲ್ಲಿ ಕುಳಿತಿದ್ದಾನೆ. ಆತ ಹೆಲ್ಮೆಟ್ ಕೂಡ ಹಾಕಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಬಳಿಕ ತನ್ನ ಸ್ಕೂಟರ್ ಅನ್ನು ಯಾವುದೇ ರಸ್ತೆಯಲ್ಲಿ ಓಡಿಸದೆ ಸಮುದ್ರದ ನೀರಿನಲ್ಲಿ ಓಡಿಸಿದ್ದಾನೆ.
ಇದನ್ನು ಓದಿ : 7ನೇ ತರಗತಿ ಪಾಸಾದವರಿಗೆ ಗುಡ್ ನ್ಯೂನ್ : KSRTCಯಲ್ಲಿ 13,000 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಂದೇ ಅರ್ಜಿ ಸಲ್ಲಿಸಿ.!
ಯುವಕ ಸಮುದ್ರದತ್ತ ಚಲಿಸುತ್ತಿದ್ದಾಗ ಮುಂಭಾಗದಿಂದ ಬರುವ ಅಲೆಗಳನ್ನು ಸಹ ನೋಡಬಹುದು. ಅಲೆಗಳು ಅಪ್ಪಳಿಸಿದ್ರೂ ಯುವಕ ಕಿಂಚಿತ್ತೂ ಅಂಜದೆ ಸ್ಕೂಟರ್ ಚಾಲನೆ ಮಾಡಿದ್ದಾನೆ.
ಈ ಬೆನ್ನಲ್ಲೇ ಮತ್ತೊಂದು ದೊಡ್ಡದಾದ ಅಲೆ ಬಂದಿದೆ. ಈ ವೇಳೆ ಯುವಕ ತನ್ನ ಸ್ಕೂಟರ್ ಅನ್ನು ದಡದತ್ತ ತಿರುಗಿಸಿದ್ದಾನೆ. ಅಲೆಯು ಕೂಡ ಯುವಕನನ್ನು ದಡದತ್ತ ನೂಕಿದೆ.
ಇದನ್ನು ಓದಿ : PNBಯಲ್ಲಿ 2,700 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಒಟ್ಟಿನಲ್ಲಿ ಯುವಕ ಸೇಫ್ ಆಗಿ ದಡ ಸೇರಿದ್ದು, ಯಾವುದೇ ಹಾನಿಯಾಗಿಲ್ಲ. ಆದರೆ ಈ ವೀಡಿಯೋವನ್ನು ಯಾವಾಗ ಮತ್ತು ಎಲ್ಲಿ ತೆಗೆಯಲಾಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ.
When you pay attention to Google Maps.
— Figen (@TheFigen_) July 1, 2024