ಜನಸ್ಪಂದನ ನ್ಯೂಸ್, ನವದೆಹಲಿ : ಮನೆಯಲ್ಲಿ ಪತಿ ಇಲ್ಲದ ವೇಳೆ ಸೊಸೆಯೋರ್ವಳು ಅತ್ತೆ ಮೇಲೆ ಅಮಾನುಷ ಹಲ್ಲೆ ಮಾಡಿರುವ ಘಟನೆಯ ಸಿಸಿಟಿವಿ (CCTV) ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಈ CCTV ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಸೊಸೆಯೊಬ್ಬಳು ತನ್ನ ಅತ್ತೆ ಹಲ್ಲೆ ನಡೆಸಿದ ಘಟನೆ ಸಿಸಿಟಿವಿ (CCTV) ಯಲ್ಲಿ ಸೆರೆಯಾಗಿದೆ. ಈ ಘಟನೆ ದೊಡ್ಡ ಚರ್ಚೆಯ ವಿಷಯವಾಗಿದ್ದು, ಪತಿ-ಪತ್ನಿ ನಡುವಿನ ಕೌಟುಂಬಿಕ ಕಲಹದಿಂದ ಸಂಭವಿಸಿದೆ ಎನ್ನಲಾಗಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಅಗಷ್ಟ 07 ರ ದ್ವಾದಶ ರಾಶಿಗಳ ಫಲಾಫಲ.!
ಮಾಹಿತಿಯಂತೆ, ಈ ದಂಪತಿಗೆ ಕಳೆದ ಕೆಲ ಸಮಯದಿಂದ ಪರಸ್ಪರ ಭಿನ್ನಾಭಿಪ್ರಾಯಗಳಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತಿ ತಾಯಿಯೊಂದಿಗೆ ವಾಸವಿದ್ದರೆ, ಪತ್ನಿ ಬೇರೆ ಬಾಡಿಗೆ ಮನೆಯಲ್ಲಿ ಬದುಕುತ್ತಿದ್ದಳು. ಪತ್ನಿಗೆ ಸಾಸು ತನ್ನ ಗಂಡನಿಗೆ ತನ್ನ ವಿರುದ್ಧ ಕಿವಿಮಾತು ಹೇಳುತ್ತಿದ್ದಾಳೆ ಎಂಬ ಅನುಮಾನವಿದ್ದುದರಿಂದ, ಈ ಘಟನೆಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.
ಅತ್ತೆ ಮನೆಯೊಳಗೆ ನುಗ್ಗಿದ ಸೊಸೆ :
ಪತಿ ಮನೆಯಲ್ಲಿಲ್ಲದಿದ್ದ ಸಂದರ್ಭದಲ್ಲಿ ಸೊಸೆ ತಕ್ಷಣವೇ ಅತ್ತೆ ಮನೆಗೆ ತೆರಳಿ ಬಾಗಿಲು ತಟ್ಟಿದ್ದಳು. ಅತ್ತೆ ಬಾಗಿಲು ತೆರೆದ ಕೂಡಲೇ ಸೊಸೆ ಗಾಬರಿಯಾಗಿ ಮನೆಯೊಳಗೆ ನುಗ್ಗಿದ್ದಳು. ಬಳಿಕ ಮಾತಿನ ಚಕಮಕಿ ಆರಂಭವಾಗಿ, ಅದೇ ಕ್ಷಣದಲ್ಲಿ ವಿಷಯ ಕೈಮೀರಿ ಸೊಸೆ ಹಲ್ಲೆಗೆ ಮುಂದಾಗಿದ್ದಳು.
ಇದನ್ನು ಓದಿ : Affair : ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆ ಹತ್ಯೆ : ಬಳಿಕ ಆರೋಪಿ ನೇಣಿಗೆ ಶರಣು.!
ಅತ್ತೆಯನ್ನು ನೆಲಕ್ಕೆ ತಳ್ಳಿ ತೀವ್ರ ಗಾಯಗಳಾಗುವಂತೆ ಹಲ್ಲೆ ನಡೆಸಿದ್ದಾಳೆ. ಅತ್ತೆಯ ತಲೆಯ ಕೂದಲನ್ನು ಹಿಡಿದು ಎಳೆದು ಎಳೆದು ನೆಲದ ಮೇಲೆ ತಳ್ಳುತ್ತಿರುವ ದೃಶ್ಯಗಳು ಮನೆಯಲ್ಲಿನ ಸಿಸಿ ಟಿವಿ (CCTV) ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ.
ಪ್ರಕರಣ ದಾಖಲಿಸಿ ತನಿಖೆ ಆರಂಭ :
ಶಬ್ದ ಕೇಳಿ ಪಕ್ಕದ ಮನೆಯವರು ಓಡಿ ಬರುತ್ತಿದಂತೆಯೇ ಸೊಸೆ ಸ್ಥಳದಿಂದ ಓಡಿ ಹೋಗಿದ್ದಾಳೆ. ಗಾಯಗೊಂಡ ಅತ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳೀಯ ನಿವಾಸಿಗಳಿಂದ ದೊರೆತ ಮಾಹಿತಿ ಹಾಗು CCTV ಯ ಆಧಾರದಲ್ಲಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿ : Saliva : ಮೊಡವೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ; ಬೆಳಗಿನ ಎಂಜಲಿನಿಂದ ನಿಜವಾಗಿಯೂ ಪರಿಹಾರ ಸಿಗುತ್ತಾ.?
ಸದ್ಯ, ಆರೋಪಿ ಸೊಸೆಯನ್ನು ಬಂಧಿಸಲು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಅತ್ತೆ ನೀಡಿದ ದೂರಿನ ಪ್ರಕಾರ, ಇತರೆ ಸಂದರ್ಭದಲ್ಲಿಯೂ ಸಹ ಸೊಸೆ ಹಲವಾರು ಬಾರಿ ಚುಚ್ಚುಮಾತು ಮತ್ತು ಶಾರೀರಿಕ ಕಿರುಕುಳ ನೀಡಿದ್ದಾಳೆ ಎಂದು ಆರೋಪಿಸಿದ್ದಾರೆ.
CCTV ದೃಶ್ಯಾವಳಿಯ ವಿಡಿಯೋ :
Daughter-in-law attacked her mother-in-law by entering the house when the husband was not around.
Husband and wife are living separately. pic.twitter.com/pri5xxU0l0
— ShoneeKapoor (@ShoneeKapoor) August 5, 2025
Affair : ಅಕ್ರಮ ಸಂಬಂಧಕ್ಕೆ ಒಪ್ಪದ ಮಹಿಳೆ ಹತ್ಯೆ : ಬಳಿಕ ಆರೋಪಿ ನೇಣಿಗೆ ಶರಣು.!

ಜನಸ್ಪಂದನ ನ್ಯೂಸ್, ಬೆಂಗಳೂರು : ವ್ಯಕ್ತಿಯೋರ್ವ ಅಕ್ರಮ ಸಂಬಂಧ (Affair) ಕ್ಕೆ ಒಪ್ಪದ ಮಹಿಳೆಯ ಕುತ್ತಿಗೆಯನ್ನು ತರಕಾರಿ ಕತ್ತರಿಸುವ ಚಾಕುವಿನಿಂದ ಸೀಳಿ ಕೊಂದು ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆಂಬ ಸಂಶಯದ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತಿರುಪಾಳ್ಯ ಪ್ರದೇಶದಲ್ಲಿ ಈ ದಾರುಣ ಘಟನೆ ನಡೆದಿದೆ. ಅಕ್ರಮ ಸಂಬಂಧ (Affair) ನಿರಾಕರಿಸಿದ ಮಹಿಳೆಯೊಬ್ಬರು ಹತ್ಯೆಯಾಗಿದ್ದು, ಆರೋಪಿ ನಂತರ ಆತ್ಮಹತ್ಯೆಗೆ ಶರಣಾದ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನು ಓದಿ : Saliva : ಮೊಡವೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ; ಬೆಳಗಿನ ಎಂಜಲಿನಿಂದ ನಿಜವಾಗಿಯೂ ಪರಿಹಾರ ಸಿಗುತ್ತಾ.?
ಮೃತ ಮಹಿಳೆಯನ್ನು ಪಶ್ಚಿಮ ಬಂಗಾಳ (WB) ಮೂಲದ ಮಂದಿರಾ ಮಂಡಲ್ (27) ಎಂದು ಗುರುತಿಸಲಾಗಿದೆ. ಹತ್ಯೆಯ ಶಂಕಿತ ವ್ಯಕ್ತಿ ಗಂಡನ ಸ್ನೇಹಿತ ಸುಮನ್ ಮಂಡಲ್ (28) ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಪತಿ ಮತ್ತು ಆರೋಪಿತ ವ್ಯಕ್ತಿ ಇಬ್ಬರೂ ಈ ಹಿಂದೆ ಒಟ್ಟಾಗಿ ಅಂಡಮಾನ್ (Andaman) ನಲ್ಲಿ ಕೆಲಸ ಮಾಡುತ್ತಿದ್ದರೆಂದು ಹೇಳಲಾಗುತ್ತದೆ.
ಘಟನೆಯ ವಿವರ :
ಮಂದಿರಾ ಮಂಡಲ್ ಅವರು ಗಂಡನಿಂದ ಬೇರ್ಪಟ್ಟು ಕಳೆದ ಎರಡು ವರ್ಷಗಳಿಂದ ತಿರುಪಾಳ್ಯದಲ್ಲಿ ತಮ್ಮ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಿನ್ನೆ ಸಂಜೆಯ ವೇಳೆ ಅವರು ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದರು. ಈ ವೇಳೆ ಆರೋಪಿ ಸುಮನ್ ಅವರು ಆಕೆಯ ಮನೆಗೆ ಬಂದು ಬಾಗಿಲು ಲಾಕ್ ಮಾಡಿ ಒಳಗೆ ನುಗ್ಗಿ ಅಕ್ರಮ ಸಂಬಂಧ (Affair) ಕ್ಕೆ ನಿರಾಕರಿಸಿದ ಹಿನ್ನಲೆಯಲ್ಲಿ ಹತ್ಯೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.
ಕೆಲ ಸಮಯದ ನಂತರ ಹೊರಗಡೆ ಆಟವಾಡುತ್ತಿದ್ದ ಮಗು ಮನೆಯ ಬಾಗಿಲು ತಟ್ಟಿದೆ. ಬಾಗಿಲು ತೆಗೆಯದ ಹಿನ್ನಲೆಯಲ್ಲಿ ಅಜ್ಜಿಯೋರ್ವಳು ಕಿಟಕಿ ಮೂಲಕ ಒಳಗೆ ನೋಡಿದಾಗ, ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಪೊಲೀಸರ ಪರಿಶೀಲನೆ ವೇಳೆ, ಮಂದಿರಾ ಮಂಡಲ್ ಅವರು ಚಾಕುವಿನಿಂದ ಕತ್ತು ಸೀಳಿ ಕೊಂದು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಹತ್ಯೆಗೆ ಶಂಕಿತ (Affair) ಹಿನ್ನೆಲೆ :
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿ ಸುಮನ್ ಅವರು ಅಕ್ರಮ ಸಂಬಂಧಕ್ಕೆ (Affair) ಒಪ್ಪದ ಹಿನ್ನೆಲೆಯಲ್ಲಿ ಕೋಪಗೊಂಡು ಮನೆಯಲ್ಲೇ ಇದ್ದ ಚಾಕುವಿನಿಂದ ಮಂದಿರಾ ಅವರನ್ನು ಬರ್ಬರವಾಗಿ ಹತ್ಯೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಇದನ್ನು ಓದಿ : ಬೆಳಗಾವಿಯಲ್ಲಿ 5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ; maulvi ಬಂಧನ.!
ಎಂಟು ವರ್ಷದ ಹಿಂದೆ ಬಿಜೋನ್ ಮಂಡಲ್ ಜೊತೆ ಮೃತ ಮಂದಿರಾ ಮದುವೆ ಆಗಿದ್ದು 6 ವರ್ಷದ ಗಂಡು ಮಗು ಇದೆ. ಆದರೆ ಎರಡು ವರ್ಷದ ಹಿಂದೆ ಗಂಡನಿಂದ ದೂರವಾಗಿ ಇಲ್ಲಿನ ತಿರುಪಾಳ್ಯದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು.
ಪೊಲೀಸರು ತನಿಖೆ ಮುಂದುವರಿಸಿದ್ದಾರೆ :
ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆ ಅಕ್ರಮ (Affair) ಕ್ಕೆ ನಡೆದಿದೆಯೋ ಅಥವಾ ಇನ್ಯಾವುದರ ಕಾರಣಕ್ಕೆ ನಡೆದಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ತನಿಖೆ ಮುಂದುವರಿದಿದೆ. ಸದ್ಯಕ್ಕೆ ಘಟನೆಯ ಇತರೆ ಅಂಶಗಳನ್ನು ಸ್ಪಷ್ಟಪಡಿಸಲು ಪೊಲೀಸರು ಸಾಕ್ಷ್ಯ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದಾರೆ.





