ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ವಾರಾಂತ್ಯ ಬಂದ ತಕ್ಷಣ ಪಾರ್ಟಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಆಹಾರ, ಪಾನೀಯಗಳು, ಸಂಗೀತ, ಮೋಜು – ಮಸ್ತಿ ಇವುಗಳ ಜೊತೆಗೆ ಮದ್ಯಪಾನ (Drink) ವೂ ಅನೇಕರ ಪಾರ್ಟಿಗಳ ಅವಿಭಾಜ್ಯ ಭಾಗವಾಗಿದೆ. “ಒಮ್ಮೆ ಕುಡಿದರೆ ಏನು ಆಗುತ್ತದೆ?”, “ವೇಕೆಂಡ್‌ನಲ್ಲಿ ಮಾತ್ರ ಕುಡಿಯುತ್ತಿದ್ದೇನೆ, ಅದರಲ್ಲಿ ಏನು ತೊಂದರೆ ಇಲ್ಲ” ಎಂಬ ನಂಬಿಕೆ ಇನ್ನೂ ಹಲವರಲ್ಲಿದೆ.
ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಮದ್ಯಪಾನ (Drink) ದ ಯಾವ ಪ್ರಮಾಣವೂ ಸಂಪೂರ್ಣ ಸುರಕ್ಷಿತವಲ್ಲ ಮತ್ತು ಅದು ದೇಹದ ಮೇಲೆ ಬರುವ ಪರಿಣಾಮವು ನೀವು ಎಷ್ಟು ಬಾರಿ ಮತ್ತು ಯಾವ ಪ್ರಮಾಣದಲ್ಲಿ ಕುಡಿಯುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.
ಮುಂಬೈನ ಮೂಳೆ ಶಸ್ತ್ರಚಿಕಿತ್ಸಕ ಡಾ. ಮನನ್ ವೋರಾ ಅವರು ತಮ್ಮ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ “ಸುರಕ್ಷಿತ ಆಲ್ಕೋಹಾಲ್ (Drink) ಪ್ರಮಾಣ ಎಂಬುದು ಅಸ್ತಿತ್ವದಲ್ಲೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಮದ್ಯಪಾನ ಮಾಡಿದೊಡನೆ ದೇಹವು ಅದನ್ನು ಜೀರ್ಣಿಸಿಕೊಳ್ಳಲು ಹೆಚ್ಚುವರಿ ಶ್ರಮ ಪಡುತ್ತದೆಯೇ ವಿನಃ, ದೇಹಕ್ಕೆ ಯಾವುದೇ ದೀರ್ಘಕಾಲಿಕ ಲಾಭವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ : ಕಾಫಿ ತೋಟದಲ್ಲಿ ನಾಪತ್ತೆಯಾದ 2 ವರ್ಷದ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಿದ ಸಾಕು Dog.
ತಿಂಗಳಿಗೊಮ್ಮೆ ಮದ್ಯಪಾನ (Drink) : ದೇಹದ ಮೇಲಿನ ಪರಿಣಾಮ?
ತಿಂಗಳಿಗೊಮ್ಮೆ ಮಾತ್ರ ಕುಡಿಯುವವರಿಗೂ ಮದ್ಯದ ತಕ್ಷಣದ ಪರಿಣಾಮ ಕಂಡುಬರುತ್ತದೆ. ಆ ದಿನ ಮೆದುಳಿನ ಚಟುವಟಿಕೆ ನಿಧಾನವಾಗುವುದು, ದೇಹ ನಿರ್ಜಲೀಕರಣಗೊಳ್ಳುವುದು, ಹಾಗೆಯೇ ಲಿವರ್ ಮೇಲೆ ಹೆಚ್ಚುವರಿ ಒತ್ತಡ ಬೀರುವುದು ಸಾಮಾನ್ಯ.
ಕುಡಿದ ಮರುದಿನ ತಲೆನೋವು, ಆಯಾಸ, ನಿದ್ರೆಯ ಅಸ್ವಸ್ಥತೆ ಮತ್ತು ಗಾಬರಿಯ ಅನುಭವ ಉಂಟಾಗಬಹುದು. ಇದು ದೇಹದ ಸಾಮಾನ್ಯ ಚಕ್ರವನ್ನೇ ತಾತ್ಕಾಲಿಕವಾಗಿ ಅವ್ಯವಸ್ಥೆಗೆ ದೂಡುತ್ತದೆ.
ವಾರಕ್ಕೊಮ್ಮೆ ಕುಡಿಯುವವರ ಅಪಾಯ :
“ವಾರಕ್ಕೊಮ್ಮೆ ಮದ್ಯಪಾನ (Drink) ಮಾಡುವ ಅಭ್ಯಾಸ ಹೊಂದಿದವರಲ್ಲಿ ಫ್ಯಾಟಿ ಲಿವರ್ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ.” ಲಿವರ್ ನಿರಂತರವಾಗಿ ವಿಷಕಾರಕ ಪದಾರ್ಥಗಳನ್ನು ಹೊರಹಾಕಲು ಕೆಲಸ ಮಾಡಬೇಕಾಗಿರುವುದರಿಂದ ಅದರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.
ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.
ಬೆಳಗಿನ ಜಾವ ಹೆಚ್ಚು ತೀವ್ರವಾದ ಹ್ಯಾಂಗೊವರ್, ದೇಹದ ಭಾರ, ಅಶಾಂತಿ ಮತ್ತು ಜೀರ್ಣಕ್ರಿಯೆ ಅಸ್ಥಿರತೆ ಸಾಮಾನ್ಯ. ಕಾಲಕ್ರಮೇಣ ಇದು ಲಿವರ್‌ನ ಕೊಬ್ಬಿನ ಅಂಶವವು ಹೆಚ್ಚಿಸಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ವಾರಕ್ಕೆ 3–5 ಬಾರಿ ಮದ್ಯಪಾನ (Drink) : ದೀರ್ಘಕಾಲದ ಹಾನಿ :
ವಾರದಲ್ಲಿ ಹಲವಾರು ದಿನ ಕುಡಿಯುವವರು ತಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡುವುದಿಲ್ಲ. ಇದರಿಂದ:
- ಚಯಾಪಚಯ ಕ್ರಿಯೆ ನಿಧಾನವಾಗುವುದು.
- ಲಿವರ್ ಉಬ್ಬುವಿಕೆ.
- ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಅಸ್ಥಿರಗೊಳ್ಳುವುದು.
- ಗುಣಮಟ್ಟದ ನಿದ್ರೆ ಕಡಿಮೆ ಆಗುವುದು.
- ದೇಹದ ಉರಿಯೂತ ವೇಗವಾಗಿ ಹೆಚ್ಚಾಗುವುದು.
ಈ ಹಂತದಲ್ಲಿ ದೇಹವು ಮದ್ಯದ ಒತ್ತಡದಿಂದ ಹೊರಬರಲು ಸಾಧ್ಯವಿಲ್ಲದ ಮಟ್ಟಕ್ಕೆ ಹೋದಂತೆ ಆಗುತ್ತದೆ.
ಇದನ್ನು ಓದಿ : ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.
ಪ್ರತಿದಿನ ಮದ್ಯಪಾನ ; ಅತ್ಯಂತ ಅಪಾಯಕಾರಿ ಹಂತ :
ಪ್ರತಿದಿನ ಮದ್ಯಪಾನ (Drink) ಮಾಡುವವರು ತೀವ್ರ ಅಪಾಯದ ವರ್ಗಕ್ಕೆ ಸೇರುತ್ತಾರೆ. ಇವರಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳು:
- ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು.
- ಲಿವರ್ ಫೈಬ್ರೋಸಿಸ್ ಮತ್ತು ಸಿರೋಸಿಸ್ ಅಪಾಯ ಹೆಚ್ಚಾಗುವುದು.
- ಕೆಲವು ವಿಧದ ಕ್ಯಾನ್ಸರ್ ಸಂಭವನೀಯತೆ ಏರಿಕೆ.
- ಹೃದಯಕ್ಕೆ ಹಾನಿ.
- ಇನ್ಸುಲಿನ್ ಪ್ರತಿಕ್ರಿಯೆ ಕುಂದಿದ್ದು, ಡಯಾಬಿಟಿಸ್ ಅಪಾಯ.
- ಮಾನಸಿಕ ಆರೋಗ್ಯಕ್ಕೆ ಹಾನಿ, ನಿದ್ರೆಯ ಗೊಂದಲ.
ತಜ್ಞರ ಪ್ರಕಾರ, ಪ್ರತಿದಿನ ಕುಡಿಯುವುದರಿಂದ ದೇಹದ ಯಾವುದೇ ಅಂಗಾಂಗವೂ ನಿಷ್ಕ್ರಿಯವಾಗದೆ ಕೆಲಸ ಮಾಡಲು ಸಾಧ್ಯವಿಲ್ಲ.
ಸಾರಾಂಶ :
ವಾರಾಂತ್ಯದ ಮೋಜು, ಒತ್ತಡ ನಿವಾರಣೆ ಅಥವಾ ಅಭ್ಯಾಸ—ಯಾವ ಕಾರಣವಾಗಿರಲಿ, ಮದ್ಯಪಾನ (Drink) ದೇಹದ ಮೇಲಿನ ಹಾನಿಯನ್ನು ಶೇ.100 ತಡೆಯಲು ಸಾಧ್ಯವಿಲ್ಲ. ಕುಡಿಯುವ ಅವಧಿ ಮತ್ತು ಪ್ರಮಾಣ ಹೆಚ್ಚಾದಂತೆ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ಮದ್ಯಪಾನವನ್ನು ಸಂಪೂರ್ಣವಾಗಿ ತೊರೆಯುವುದು ಅಥವಾ ಕಡಿಮೆ ಮಾಡುವುದು ಆರೋಗ್ಯಕ್ಕಾಗಿ ಅತ್ಯುತ್ತಮ ಮಾರ್ಗ.
ಗಮನಿಸಿ : ಇಲ್ಲಿನ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ತಜ್ಞರ ಅಭಿಪ್ರಾಯದ ಆಧಾರಿತವಾಗಿದೆ. ಯಾವುದೇ ಆರೋಗ್ಯ ಸಂಬಂಧಿತ ನಿರ್ಧಾರ ಕೈಗೊಳ್ಳುವ ಮೊದಲು ವೈದ್ಯರ ಸಲಹೆ ಕಡ್ಡಾಯ.
ಕಾಫಿ ತೋಟದಲ್ಲಿ ನಾಪತ್ತೆಯಾದ 2 ವರ್ಷದ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಿದ ಸಾಕು Dog.

ಜನಸ್ಪಂದನ ನ್ಯೂಸ್, ಮಡಿಕೇರಿ : ಕೊಡಗು ಜಿಲ್ಲೆಯ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕಿಯನ್ನು, ಮರುದಿನ ಸಾಕು ನಾಯಿ (Dog) ಯ ಬುದ್ಧಿವಂತಿಕೆಯೊಂದು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದೆ. ಶನಿವಾರ ಮಧ್ಯಾಹ್ನ ಕಾಣೆಯಾಗಿದ್ದ ಮಗು, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಂಯುಕ್ತ ಹುಡುಕಾಟದ ನಂತರ ಪೋಷಕರ ಮಡಿಲಿಗೆ ಮರಳಿದ್ದು ಘಟನೆಯ ಅಂತ್ಯ ಸಂತೋಷದಲ್ಲಿ ಕೊನೆಗೊಂಡಿದೆ.
ಇಡೀ ರಾತ್ರಿ ಕತ್ತಲಾದ ತೋಟದಲ್ಲಿ ಒಂಟಿಯಾಗಿ ಕಳೆದಿದ್ದ ಮಗು, ಮರುದಿನ ಬೆಳಿಗ್ಗೆ ಹುಡುಕಾಟ ನಡೆಸಿದ ಸಂದರ್ಭದಲ್ಲಿ ನಾಯಿ (Dog) ಯೊಂದು ಪತ್ತೆಹಚ್ಚಿ ತಾಯಿಯ ಮಡಿಲಿಗೆ ತಲುಪಿಸಿದೆ.
ಇದನ್ನು ಓದಿ : Free ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದ ಮಹಿಳೆ ; ಪ್ರಶ್ನಿಸಿದ ಕಂಡಕ್ಟರ್ ಮೇಲೆ ಹಲ್ಲೆ ; ವಿಡಿಯೋ ವೈರಲ್.
ನಾಪತ್ತೆಯಾಗಿದ್ದ ಮಗು :
ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದ ದಂಪತಿ ಒಬ್ಬರ 2 ವರ್ಷದ ಮಗು ಸುನನ್ಯಾ, ಶನಿವಾರ ಮಧ್ಯಾಹ್ನ ಕಾಫಿ ತೋಟದಲ್ಲಿ ಕಾಣೆಯಾಗಿತ್ತು. ಮಗು ಆಕೆಯ ಪೋಷಕರೊಂದಿಗೆ ಶರಿ ಗಣಪತಿ ಎಂಬವರ ತೋಟಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ.
ಮೊಬೈಲ್ ನೋಡುತ್ತಿದ್ದಾಗ ಮಗು ನಾಪತ್ತೆ :
ಶನಿವಾರ ಮಧ್ಯಾಹ್ನ ತೋಟದಲ್ಲಿ ನೆಟ್‌ವರ್ಕ್ ಸಿಗುವ ಜಾಗದಲ್ಲಿ ಸುನನ್ಯಾ ತಾಯಿ ಮೊಬೈಲ್ ನೋಡುತ್ತಾ ಕುಳಿತಿದ್ದರು. ಇದೇ ವೇಳೆ ಮಗು ಶೌಚಕ್ಕೆಂದು ಹತ್ತಿರದ ಕಾಫಿ ಗಿಡಗಳ ಕಡೆಗೆ ಹೋಗಿತ್ತು. ನಂತರ ಮಗು ಹಿಂದಿರುಗದೆ ತೋಟದ ಒಳಭಾಗದಲ್ಲಿ ದಾರಿ ತಪ್ಪಿ ನಡೆದುಕೊಂಡು ಹೋಗಿದೆ ಎಂದು ಶಂಕಿಸಲಾಗಿದೆ.
ಇದನ್ನು ಓದಿ : ಚಿನ್ನಾಭರಣ ದರೋಡೆ ಪ್ರಕರಣ : ಓರ್ವ PSI ವಜಾ, ಇನ್ನೋರ್ವ ಸಸ್ಪೆಂಡ್.
ರಾತ್ರಿ ತುಂಬಾ ಹುಡುಕಾಟ — ಸಿಗದ ಸುಳಿವು :
ಮಗು ನಾಪತ್ತೆಯಾಗುತ್ತಿದ್ದಂತೇ ಪೋಷಕರು, ಸ್ಥಳೀಯರು, ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಹುಡುಕಾಟ ನಡೆಸಿದರೂ ಸುಳಿವೂ ಸಿಗಲಿಲ್ಲ. ಮಗು ಅಳದೇ ಇದ್ದದ್ದರಿಂದ ಹುಡುಕುವುದು ಇನ್ನಷ್ಟು ಕಷ್ಟವಾಗಿತ್ತು ಎನ್ನಲಾಗಿದೆ. ಹುಲಿ ದಾಳಿ ಕೂಡ ಸಂಭವಿಸಿರಬಹುದೆಂಬ ಭಯದಿಂದ ಅರಣ್ಯ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದರು.
ಅರಣ್ಯ ಇಲಾಖೆ, ಪೊಲೀಸರು ಹಾಗೂ ಗ್ರಾಮಸ್ಥರು ಸೇರಿ ಸುಮಾರು 70–80 ಸದಸ್ಯರ ತಂಡ ರಾತ್ರಿ ಹೊತ್ತಿಗೂ ಹುಡುಕಾಟ ಮುಂದುವರೆಸಿದರು.
ಮರುದಿನ ನಾಯಿ (Dog) ಯೊಂದು ಪತ್ತೆ ಮಾಡಿ ಜೀವ ಉಳಿಸಿದ ಕ್ಷಣ :
ಭಾನುವಾರ ಬೆಳಿಗ್ಗೆ, ಸುನನ್ಯಾ ಇರುವ ಸ್ಥಳದಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಅನಿಲ್ ಕಾಳಪ್ಪ ಅವರ ತೋಟದಲ್ಲಿ ಸಾಕಲಾದ ‘ಓರಿಯೋ’ ಎಂಬ ನಾಯಿ (Dog) ಏಕಾಏಕಿ ಬೊಗಳಲಾರಂಭಿಸಿತು. ಅನುಮಾನಗೊಂಡ ತೋಟದ ಮಾಲೀಕರು ಅಲ್ಲಿಗೆ ಹೋಗಿ ನೋಡಿದಾಗ, ಮಗು ಕಾಫಿ ಗಿಡಗಳ ಮಧ್ಯದಲ್ಲಿ ಕುಳಿತಿರುವುದು ಕಂಡುಬಂದಿದೆ.
ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್ : ಚಲಿಸಿದ ಗೂಡ್ಸ್ ರೈಲು ; ಮುಂದೆನಾಯ್ತು? Video ನೋಡಿ.
ನಾಯಿ (Dog) ಪತ್ತೆ ಹಚ್ಚಿದ ಮಗು ಅಳದೆ, ಕೇವಲ ಆಯಾಸಗೊಂಡ ಸ್ಥಿತಿಯಲ್ಲಿ ಮಾತ್ರ ಕಂಡುಬಂತು. ನಂತರ ಸ್ಥಳೀಯರು ಮಗುವನ್ನು ಎತ್ತಿಕೊಂಡು ಪೋಷಕರ ಬಳಿ ತಲುಪಿಸಿದರು. ಮಗಳನ್ನ ಮತ್ತೆ ನೋಡಿದ ಪೋಷಕರು ಭಾವೋದ್ರಿಕ್ತರಾದರು.
ಸ್ಥಳೀಯರ ಧೈರ್ಯ ಮತ್ತು ನಾಯಿಯ ಜಾಣ್ಮೆಗೆ ಪ್ರಶಂಸೆ :
ಸುನನ್ಯಾ ಪತ್ತೆಯಾದ ಸುದ್ದಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಾಯಿ (Dog) ಯ ಜಾಣ್ಮೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಳದೆ, ಶಾಂತವಾಗಿದ್ದ ಮಗುವನ್ನು ಪತ್ತೆ ಮಾಡುವುದು ಕಷ್ಟಕರವಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಆರೋಗ್ಯ ಸ್ಥಿತಿ :
ನಾಯಿ (Dog) ಪತ್ತೆ ಹಚ್ಚಿದ ಮಗು ಸದ್ಯ ಸುರಕ್ಷಿತವಾಗಿದೆ ಮತ್ತು ವೈದ್ಯಕೀಯ ತಪಾಸಣೆಯ ನಂತರ ಮನೆಗೆ ಕರೆದೊಯ್ಯಲಾಗಿದೆ. ಯಾವುದೇ ಗಂಭೀರ ಗಾಯಗಳಿಲ್ಲ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ






