ಜನಸ್ಪಂದನ ನ್ಯೂಸ್, ಡೆಸ್ಕ್ : ಮೊಸಳೆಯೊಂದು (crocodile) ದಿಢೀರ್ ಅಂತ ಸಿಬ್ಬಂದಿ ಮೇಲೆ ದಾಳಿ ನಡೆಸಿ ನೀರಿಗೆ ಎಳೆದೊಯ್ದ ವಿಡಿಯೋವೊಂದು ವೈರಲ್ ಆಗಿದೆ.
ಇನ್ನೂ ಈ ದೃಶ್ಯ ಕಂಡ ಪಕ್ಕದಲ್ಲಿದ್ದ ವ್ಯಕ್ತಿ ನೆರವಿಗೆ ಧಾವಿಸಿ, ನೀರಿಗೆ ಹಾರಿ ಮೊಸಳೆಯನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಕೆಲ ಹೊತ್ತಿನ ಬಳಿಕ ಸಿಬ್ಬಂದಿಯನ್ನು ಮೊಸಳೆ ಬಾಯಿಯಿಂದ (mouth) ರಕ್ಷಿಸುವಲ್ಲಿ ಆತ ಯಶಸ್ವಿಯಾಗಿದ್ದು, ಈ ಭಯಾನಕ ವಿಡಿಯೋ ಭಾರಿ ಸಂಚಲನ ಉಂಟುಮಾಡಿದೆ.
ಇದನ್ನು ಓದಿ : ಅಮ್ಮನ ಬೆನ್ನೇರಿ ಮರಿ ಕರಡಿಗಳ ತುಂಟಾಟ ; ಪುಟಾಣಿಗಳ ವಿಡಿಯೋ ನೋಡಿ.!
ವಿಡಿಯೋದಲ್ಲಿರುವ ದೃಶ್ಯ :
ಈ ವಿಡಿಯೋದಲ್ಲಿ ನೀರಿನ ಟ್ಯಾಂಕ್ನಲ್ಲಿ ಮೊಸಳೆಯನ್ನು ಬಿಡಲಾಗಿದೆ. ಈ ಮೊಸಳೆಗೆ ಸಿಬ್ಬಂದಿ ಆಹಾರವನ್ನು ನೀಡುತ್ತಿದ್ದಾರೆ. ಹೀಗೆ ಮೊಸಳೆಯ ಬಳಿಗೆ ಬಂದ ಸಿಬ್ಬಂದಿ ಇನ್ನೇನು ಆಹಾರ ನೀಡಲು ತಯಾರಿ (preparation) ನಡೆಸಿದ್ದಾರೆ. ಅಷ್ಟರಲ್ಲೇ ಮೊಸಳೆ ಸಿಬ್ಬಂದಿಯ ಕೈಯನ್ನು ಕಚ್ಚಿದೆ. ಮೊಸಳೆ ದಾಳಿ ಬೆನ್ನಲ್ಲೇ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ.
ಇನಯ ಮೊಸಳೆ ಸಿಬ್ಬಂದಿಯನ್ನು ನೀರಿನ ಟ್ಯಾಂಕ್ಗೆ ಎಳೆದೊಯ್ದು ದಾಳಿ (attack) ಮಾಡಲು ಯತ್ನಿಸಿದೆ. ಒಂದೆರೆಡು ಸುತ್ತು ಪಲ್ಟಿ ಹೊಡೆದ ಮೊಸಳೆ ಸಿಬ್ಬಂದಿ ಮೇಲೆ ಭೀಕರ ದಾಳಿ ನಡೆಸಿದೆ.
ಇದನ್ನು ಕಂಡ ವ್ಯಕ್ತಿ ತಕ್ಷಣವೇ ಸಿಬ್ಬಂದಿಯ ನೆರವಿಗೆ ಧಾವಿಸಿದ್ದಾನೆ. ಇದೇ ವೇಳೆ ಸಿಬ್ಬಂದಿ ಕೈ ಸೆನ್ನೆ ಮೂಲಕ ಮೊಸಳೆ ಮೇಲೆ ಹತ್ತಿ ಹಿಡಿಯುವಂತೆ ಸೂಚಿಸಿದ್ದಾನೆ. ಧೈರ್ಯ (courage) ಮಾಡಿದ ಪ್ರವಾಸಿಗ ಮೊಸಳೆಯ ಮೇಲೆ ಹತ್ತಿ ಗಟ್ಟಿಯಾಗಿ ಹಿಡಿದಿದ್ದಾನೆ. ಕೆಲ ಹೊತ್ತು ಈ ಸಾಹಸ ಮುಂದುವರಿದಿದೆ.
ಇದನ್ನು ಓದಿ : ಮೈಮೇಲೆ ನೀರು ಎರಚಿದ ವ್ಯಕ್ತಿ ; ಕುಣಿದು ಕುಪ್ಪಳಿಸಿದ ನಾಯಿ (ವಿಡಿಯೋ ನೋಡಿ).
ಮೊಸಳೆಯನ್ನು ಹಿಡಿದು ಅದರ ಬಾಯಿಯನ್ನು ಅಗಲಿಸುವ ಪ್ರಯತ್ನ ಮಾಡಲಾಗಿದೆ. ಕೆಲ ಹೊತ್ತುಗಳ ಬಳಿಕ ಸಿಬ್ಬಂದಿಯ ಕೈಯನ್ನು ಮೊಸಳೆ ಬಾಯಿಯಿಂದ ರಕ್ಷಿಸಲಾಗಿದೆ. ಅಷ್ಟು ಹೊತ್ತಿಗೆ ಸಿಬ್ಬಂದಿ ಪ್ರಜ್ಞೆ ತಪ್ಪಿದ್ದಾನೆ (unconscious) ಎಂದು ವರದಿಯಿಂದ ತಿಳಿದು ಬಂದಿದೆ.
Crocodile attacks zoo keeper and a visitor jumps in the cage to help pic.twitter.com/IFUonmU18g
— non aesthetic things (@PicturesFoIder) March 1, 2024