ಜನಸ್ಪಂದನ ನ್ಯೂಸ್, ಡೆಸ್ಕ್ : ಓರ್ವ ಪೊಲೀಸ್ ಕಾನ್ಸ್‌ಟೇಬಲ್ (Constable) 16 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಪೊಲೀಸ್ ಕಾನ್ಸ್‌ಟೇಬಲ್ (Constable) 16 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾನೆ. ಆರೋಪಿ ಕಾನ್ಸ್‌ಟೇಬಲ್ (Constable) ನನ್ನು ಸೇವೆಯಿಂದ ಅಮಾನತುಗೊಳಸಲಾಗಿದೆ ಹಾಗೂ ಆತನ (Constable) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಬುಧವಾರ ನವಾಬ್‌ಗಂಜ್ ಪ್ರದೇಶದಲ್ಲಿ 11 ನೇ ತರಗತಿಯ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿನಿಯ ಮೇಲೆ ಈ ನೀಚ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ : Forest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!
ಬಾಲಕಿ ಶಾಲೆಯನ್ನು ಮುಗಿಸಿ ಮನೆಗೆ ಹಿಂತಿರುಗದಿದ್ದಾಗ, ಬಾಲಕಿಯ ಕುಟುಂಬ ಸದಸ್ಯರು ಅವಳನ್ನು ಹುಡುಕಲು ಪ್ರಾರಂಭಿಸಿದರು. ಈ ವೇಳೆ ಕಾನ್ಸ್‌ಟೇಬಲ್ (Constable) ವಿನಯ್ ಎಂಬುವವರ ಅವರ ಕಾರಿನಲ್ಲಿ ತನ್ನ ಮಗಳನ್ನು ನೋಡಿದೆ ಎಂದು ಹುಡುಗಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
ಈ ಹಿಂದೆ ನವಾಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದ ಕಾನ್ಸ್‌ಟೇಬಲ್ (Constable) ಚೌಹಾಣ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನ್ಸ್‌ಟೇಬಲ್ (Constable) ನಿಂದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುವ ಜವಾಬ್ದಾರಿಯನ್ನು ವೃತ್ತ ಅಧಿಕಾರಿ ರಾಜೇಶ್ ದ್ವಿವೇದಿ ಅವರಿಗೆ ವಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆರತಿ ಸಿಂಗ್ ತಿಳಿಸಿದ್ದಾರೆ.
Courtesy : PTI
Astrology : ಹೇಗಿದೆ ಗೊತ್ತಾ.? ಜುಲೈ 03 ರ ದ್ವಾದಶ ರಾಶಿಗಳ ಫಲಾಫಲ.!
ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 03 ರ ಗುರುವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :
*ಮೇಷ ರಾಶಿ*
ಮೇಷರಾಶಿಯವರಿಗೆ ಸೋಮವಾರದ ಹತಾಶೆಯು ಇಂದು ಚರ್ಚಿಸಿ ಫಲವಿಲ್ಲದ್ದು. ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಈ ದಿನ ಪೂರ್ತಿ ಹರ್ಷ, ನಗು ಮತ್ತು ನೆಮ್ಮದಿಯನ್ನು ಗಣೇಶ ನಿಮಗೆ ದಯಪಾಲಿಸುತ್ತಾರೆ. ಹಣಕಾಸು ವಿಚಾರಗಳಲ್ಲಿ ಒಲವು ಹೆಚ್ಚಾಗುವುದರೊಂದಿಗೆ ಇಂದು ಲಕ್ಷ್ಮೀದೇವಿಯು ನಿಮ್ಮನ್ನು ಅನುಗ್ರಹಿಸುತ್ತಾರೆ ಮತ್ತು ಪರಿಣಾಮವಾಗಿ ನೀವು ಏಳಿಗೆಯನ್ನು ಕಾಣಬಹುದು.
*ವೃಷಭ ರಾಶಿ*
ನಿಮ್ಮ ಮಾತಿನ ಸಿಹಿ, ಮತ್ತು ಉದ್ವೇಗಗಳು ನಿಮ್ಮ ಸುತ್ತಲಿನ ಜನರನ್ನು ಖುಷಿಗೊಳಿಸಲು ಮತ್ತು ಕಾಣುವಂತೆ ಪ್ರಭಾವ ಬೀರಲು ಸಾಕಾಗುತ್ತವೆ. ನಿಮ್ಮ ಮುಂಜೆ ಸಂದರ್ಶನ, ನಿರೂಪಣೆ ಅಥವಾ ತಂಡದ ಚಟುವಟಿಕೆ ಇದ್ದರೆ ನೀವು ಮತ್ತಷ್ಟು ಎತ್ತರಕ್ಕೇರುವಿರಿ. ನಿಮ್ಮ ಸಂಪರ್ಕಕ್ಕೆ ಬಂದ ವ್ಯಕ್ತಿಗಳೊಂದಿಗೆ ನಿಮ್ಮ ಸಂಬಂಧವನ್ನು ಬಲಗೊಳಿಸುವಿರಿ. ಬೌದ್ಧಿಕವಾಗಿ ನೀವು ಜ್ಞಾನ ಗಳಿಸುವಿರಿ ಮತ್ತು ಅದರಿಂದ ಮೇಲೇರಿದ ಅನುಭವ ಪಡೆಯುವಿರಿ.
*ಮಿಥುನ ರಾಶಿ*
ನಿಮ್ಮ ಮನದಲ್ಲಿ ಹರಿಯುತ್ತಿರುವ ಚಿಂತನೆಗಳಿಂದಾಗಬಲ್ಲ ಪ್ರತಿಫಲವನ್ನು ಒಮ್ಮೆಲೆ ಕಲ್ಪಿಸಿದಾಗ ಯೋಚನೆಗಳ ಉನ್ಮಾದಗಳು ನಿಮ್ಮನ್ನು ಗೊಂದಲಗೊಳಿಸುತ್ತದೆ ಅಥವಾ ಹಿಗ್ಗಿಸುತ್ತದೆ. ಬೌದ್ಧಿಕವಾಗಿ ಉತ್ತೇಜಿಸಲ್ಪಡುವ ಒಂದು ಯೋಜನೆ ನಿಮ್ಮ ಕೈಯಲ್ಲಿದೆ. ಆದರೆ ನೀವು ಹೋಗುವ ದಾರಿ ಅನಿರೀಕ್ಷಿತ ಚರ್ಚೆಗಳಿಂದ ಹೊರತಾಗಿರುತ್ತದೆ. ತಾಯಿ, ಸಹೋದರಿ ಮತ್ತು ಪತ್ನಿಯೊಂದಿಗಿನ ನಿಮ್ಮ ಸಂಬಂಧ ಬಾವನಾತ್ಮಕವಾಗಿರುತ್ತದೆ.
*ಕಟಕ ರಾಶಿ*
ನೀವು ಯೋಚಿಸುತ್ತಿದ್ದ ಹೊಸ ಯೋಜನೆಯನ್ನು ಪ್ರಾರಂಭಿಸಲು ಇಂದು ಸುದಿನ. ನೀವು ಹಳೆ ಸ್ನೇಹಿತರ ಬಳಗವನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಮತ್ತು ಇಂದಿನ ದಿನ ಮೊದಲ ಭೇಟಿಯ ದಿನವಾಗಬಹುದು. ಒಳ್ಳೆಯ ಗೆಳೆಯರ ಕೂಡುವಿಕೆ ಮತ್ತು ಅವರೊಂದಿಗಿನ ಮೋಜಿನ ಕ್ಷಣಗಳು ನಿಮ್ಮ ಹೃದಯ ಸೂರೆಗೊಳ್ಳುತ್ತದೆ ಮತ್ತು ನೀವು ಏನೋ ಸಾಧಿಸಿದ ಅನುಭವ ಪಡೆಯುವಿರಿ.
ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!
*ಸಿಂಹ ರಾಶಿ*
ಖರ್ಚಗಳು ತಾತ್ಕಾಲಿಕವಾಗಿ ಸ್ವಲ್ಪ ಹೆಚ್ಚಾಗುವಂತಿದ್ದರೂ ಆರ್ಥಿಕವಾಗಿ ಎಲ್ಲವೂ ಸಮಸ್ಯಾರಹಿತವಾಗಿರುತ್ತದೆ. ಜನರೊಂದಿಗಿನ ಮಾತುಕತೆ, ಸಂವಹನದಿಂದ ಮತ್ತು ವಿದೇಶಿ ಸಂಬಂಧಗಳಿಂದ ಲಾಭವಿದೆ. ಕೌಟುಂಬಿಕ ಮತ್ತು ಪ್ರೀತಿಪಾತ್ರರ ಸಹಕಾರ ನಿಮ್ಮನ್ನು ಹಗುರವಾಗಿ ಹಾಗೂ ಸಂತೋಷವಾಗಿಡಬಲ್ಲದು. ಗೆಳತಿಯರು ಕೂಡಾ ಇಂದು ಹೆಚ್ಚು ಸಹಾಯ ಹಸ್ತ ಚಾಚಬಲ್ಲರು.
*ಕನ್ಯಾ ರಾಶಿ*
ನೀವು ತೊಡಗಿಸಿಕೊಳ್ಳುವ ಎಲ್ಲಾ ಉಪಯುಕ್ತ ಮತ್ತು ಆಸಕ್ತಿಯ ಮಾತುಕತೆಗಳಿಂದ ನಿಮ್ಮ ವಿಚಾರಗಳು ಪೋಷಿಸಲ್ಪಡುತ್ತವೆ ಮತ್ತು ಉತ್ಕೃಷ್ಟಗೊಳ್ಳುವುದನ್ನು ನೀವು ಕಾಣುವಿರಿ. ಇದು ನಿಮ್ಮನ್ನು ಖುಷಿಪಡಿಸುತ್ತದೆ ಮತ್ತು ಇತರರ ಮುಂದೆ ಸಂತಸದಿಂದ ಕಾಣುತ್ತೀರಿ. ಈ ದಿನವು ಆರ್ಥಿಕ ಮತ್ತು ಹಣಕಾಸಿನ ದೃಷ್ಟಿಯಿಂದ ಸುದಿನವಾಗಿದೆ. ಮತ್ತು ನಿಮ್ಮ ಪರಿಶ್ರಮಕ್ಕೆ ಫಲವನ್ನು ಬೇಗನೆ ಪಡೆಯುವಿರಿ.
*ತುಲಾ ರಾಶಿ*
ಇವತ್ತಿನ ದಿನದಲ್ಲಿ ನೀವು ನಿಮ್ಮ ದಿನಚರಿಯನ್ನು ಮತ್ತೆ ಪರೀಕ್ಷಿಸುವ ಮತ್ತು ದಿನಚರಿಯಲ್ಲಿ ಆರೋಗ್ಯ ಮತ್ತು ದೇಹ ದೃಢತೆಗಳನ್ನು ನೋಡುವುದು ಅಗತ್ಯವಾಗಿದೆ. ನಿಮ್ಮ ದಿನಚರಿಯಲ್ಲಿ ಇದು ಇದ್ದರೆ, ಸ್ವಲ್ಪ ನವೀಕರಣ ಮತ್ತು ಹೊಸರುಚಿ ಸೇರಿಸುವುದು ಅಗತ್ಯ. ಇಲ್ಲದಿದ್ದರೆ ಅದಕ್ಕೆ ಪ್ರಾಮುಖ್ಯ ಕೊಡಲು ಈಗ ಪ್ರಶಸ್ತ ಸಮಯ. ನೀವು ಸ್ವಲ್ಪ ಅನ್ಯಮನಸ್ಕರಂತೆ ವರ್ತಿಸುತ್ತೀರಿ. ಅದಕ್ಕೆ ನಿಮ್ಮ ಆರೋಗ್ಯವೇ ಕಾರಣ.
*ವೃಶ್ಚಿಕ ರಾಶಿ*
ನಿಮ್ಮ ಪ್ರಯತ್ನಗಳಿಂದ ನೀವು ಲಾಭ ಪಡೆಯುವಿರಿ. ಅದು ಕೆಲಸದಲ್ಲಾಗಿರಲಿ ಅಥವಾ ವ್ಯಾಪಾರ ಮತ್ತು ವ್ಯವಹಾರ ಸಂಬಂಧಗಳಲ್ಲಾಗಲಿ ಅಥವಾ ಮನೆ ಕುಟುಂಬ ಅಥವಾ ವೈಯಕ್ತಿಕ ವಿಷಯಗಳಲ್ಲಾಗಲಿ. ನೀವು ಗೆಳೆಯರು ಅಥವಾ ಪ್ರೀತಿಪಾತ್ರರನ್ನು ಭೇಟಿ ಮಾಡುವಿರಿ. ಮತ್ತು ಪ್ರಯಾಣ ಮತ್ತು ವಿಹಾರಗಳು ಆನಂದದಾಯಕವಾಗಿರುತ್ತದೆ. ಜನರೊಂದಿಗೆ ಬೆರೆಯಲು ಇಚ್ಛಿಸುವ ಏಕಾಂಗಿಗಳಿಗೆ ಇದು ಸಕಾಲ. ಅನೇಕರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೀರಿ.
ಇದನ್ನು ಓದಿ : Romance on bike : ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್ ಮೇಲೆ ಪ್ರೇಮಿಗಳ ರೋಮ್ಯಾನ್ಸ್.!
*ಧನುಸ್ಸು ರಾಶಿ*
ನಿಮ್ಮ ಗೃಹಜೀವನವು ಅತ್ಯಂತ ಹರ್ಷದಾಯಕವಾಗಿರುತ್ತದೆ ಮತ್ತು ನೀವು ಏನೇ ಮಾಡಿದರೂ ಉತ್ತಮ ರೀತಿಯಲ್ಲೇ ಮಾಡಿ ಎಂಬುದಾಗಿ ಗಣೇಶ ಹೇಳುತ್ತಾರೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಸಂತೋಷಪಡುತ್ತಾರೆ. ನಿಮ್ಮ ತಂದೆಯಿಂದ ಅಥವಾ ಮನೆಯ ಹಿರಿಯರಿಂದ ನಿಮಗೆ ಲಾಭ ದೊರೆಯುವ ಸಾಧ್ಯತೆಯಿದೆ. ವ್ಯವಹಾರ ಸಂಬಂಧ ಪ್ರಯಾಣ ಬೆಳೆಸುವ ಸಂಭವವಿದೆ.
*ಮಕರ ರಾಶಿ*
ನೀವು ಅತ್ಯಂತ ಸೃಜನಶೀಲ ಮತ್ತು ನಾವೀನ್ಯದಿಂದ ಕೂಡಿರುತ್ತೀರಿ. ಅಗತ್ಯವಿದ್ದಲ್ಲಿ ನಿಮ್ಮ ಈ ಸೃಜನಶೀಲತೆಯನ್ನು ಬಳಸಿಕೊಳ್ಳುತ್ತೀರಿ ಮತ್ತು ನಿಮ್ಮ ಕೆಲಸವು ಅತ್ಯುತ್ತಮ ರೀತಿಯಲ್ಲಿರುತ್ತದೆ. ಏನೇ ಆದರೂ ಮಾನಸಿಕವಾಗಿ ಅಸ್ವಸ್ಥರಾಗಬಹುದು. ಮಕ್ಕಳಿಗೆ ಸಂಬಂಧಿಸಿದ ಅಥವಾ ಅವರ ಕೊರತೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ದಿನವಿಡೀ ಕಾಡಬಹುದು. ದುಂದುವೆಚ್ಚವನ್ನು ತಪ್ಪಿಸಿ.
*ಕುಂಭ ರಾಶಿ*
ನಿಮ್ಮ ಪ್ರೀತಿಪಾತ್ರರೊಂದಿಗೆ ಮತ್ತು ಮುಖ್ಯವಾಗಿ ನಿಮ್ಮೊಂದಿಗೆ ಪ್ರಾಮಾಣಿಕರಾಗಿರಿ. ನಿಮ್ಮ ಸುತ್ತಲೂ ಸಂಭವಿಸುತ್ತಿರುವ ಎಲ್ಲಾ ವಿಚಾರಗಳ ಬಗ್ಗೆ ಗಮನವಿರಿಸಿ. ಇದು ಮನೆಯಲ್ಲಿ ಉಂಟಾದ ಗಂಭೀರ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ನೆರವಾಗಬಹುದು. ನಿಮ್ಮ ಖರ್ಚುವೆಚ್ಚಗಳನ್ನು ನಿಯಂತ್ರಿಸುವ ನಿಮ್ಮ ಅಸಾಮರ್ಥ್ಯವು ಹಣಕಾಸು ಬಿಕ್ಕಟ್ಟಿಗೆ ಕಾರಣವಾಗಬಹುದು.
*ಮೀನ ರಾಶಿ*
ನಿಮ್ಮ ಯೋಜನೆಯನ್ನು ಇನ್ನಷ್ಟು ಖುಷಿಗೊಳಿಸಲು ನಿಮ್ಮ ಕುಟುಂಬ ಸದಸ್ಯರನ್ನು ಮತ್ತು ಸ್ನೇಹಿತರನ್ನೂ ನಿಮ್ಮೊಂದಿಗೆ ಸೇರಿಸಿಕೊಳ್ಳುತ್ತೀರಿ. ಅವರು ನಿಮ್ಮ ಪ್ರಯತ್ನವನ್ನು ಗುರುತಿಸುತ್ತಾರೆ ಮತ್ತು ಶ್ಲಾಘಿಸುತ್ತಾರೆ. ಆರೋಗ್ಯಕ್ಕೆ ಸಂಬಂಧಿಸಿ ಉತ್ತಮ ದಿನ. ದೈಹಿಕವಾಗಿ ಅಥವಾ ಮಾನಸಿಕವಾಗಿ ಯಾವುದೇ ತೊಂದರೆಯಿಲ್ಲ.