ಜನಸ್ಪಂದನ ನ್ಯೂಸ್ ಡೆಸ್ಕ್ : ವಿದ್ಯಾರ್ಥಿನಿಯೋರ್ವಳು ಶಿಕ್ಷಕನ ಕಿರುಕುಳ (Harassment) ಕ್ಕೆ ಬೇಸತ್ತು ಕಾಲೇಜಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಘಟನೆಯೊಂದು ನಡೆದಿದೆ.
ಒಡಿಶಾ ರಾಜ್ಯದ ಬಾಲಸೋರ್‌ನಲ್ಲಿ ದೌರ್ಜನ್ಯ (Harassment) ಪ್ರಕರಣದ ಹಿನ್ನಲೆಯಲ್ಲಿ ವಿದ್ಯಾರ್ಥಿನಿ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಈ ಘಟನೆ ಇಡೀ ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಹಾಗೂ ನಾಗರಿಕ ಸಮಾಜವನ್ನು ತೀವ್ರ ಆಘಾತಕ್ಕೊಳಪಡಿಸಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 13 ರ ದ್ವಾದಶ ರಾಶಿಗಳ ಫಲಾಫಲ.!
ವಿದ್ಯಾರ್ಥಿನಿಯೋರ್ವಳು ನ್ಯಾಯಕ್ಕಾಗಿ ಹೋರಾಡುತ್ತ, ನ್ಯಾಯ ಸಿಗದ್ದಿದ್ದಾಗ ಕೊನೆಗೆ ತಾನು ಓದುತ್ತಿದ್ದ ಕಾಜೇಜಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ದುರ್ದೈವದ ಸಂಗತಿಯಾಗಿದೆ.
ಕಾಲೇಜ್ ಒಂದರಲ್ಲಿ ಇಂಟಿಗ್ರೇಟೆಡ್ B.Ed ಕೋರ್ಸ್ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಲೈಂಗಿಕ ಕಿರುಕುಳ (Harassment) ನೀಡಿದ ಕಾಲೇಜ್ ಶಿಕ್ಷಕನ ವಿರುದ್ಧ ದೂರು ನೀಡಿದ್ದಾಳೆ. ಆದರೆ ಕಿರುಕುಳ (Harassment) ನೀಡಿದ ಶಿಕ್ಷಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಕಾಲೇಜು ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ.
ಇದನ್ನು ಓದಿ : Heart Attack ಕ್ಕೆ 1 ಗಂಟೆ ಮೊದಲೇ ದೇಹ ಕೊಡುತ್ತೆ ಈ ಎಚ್ಚರಿಕೆ ಸಂಕೇತ : ಈ ಲಕ್ಷಣಗಳನ್ನು ಕಡೆಗಣಿಸಬೇಡಿ.!
ಹೀಗೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ತನಗೆ ನ್ಯಾಯ ಸಿಗದಿರುವ ಪರಿಣಾಮವಾಗಿ, ತನ್ನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಘಟನೆಯ ವಿವರ :
ವರದಿಯ ಪ್ರಕಾರ, ಕಾಲೇಜಿನ ಅಧ್ಯಾಪಕ ಹಾಗೂ ಮುಖ್ಯ ವಿಭಾಗದ ಮುಖ್ಯಸ್ಥರಾದ ಸಮೀರ್ ಕುಮಾರ್ ಸಾಹು ವಿದ್ಯಾರ್ಥಿನಿಗೆ ಅನುಚಿತ ನಡವಳಿಕೆ ತೋರಿಸಿದ್ದಾನೆ. ವಿಧ್ಯಾರ್ಥಿನಿಗೆ ಲೈಂಗಿಕವಾಗಿ ಕಿರುಕುಳ (Harassment) ನೀಡಿದ್ದಾನೆ ಎಂದು ಆರೋಪಿಸಿದ್ದಲ್ಲದೆ, ಆಕೆಯ ಭವಿಷ್ಯವನ್ನು ಹಾಳು ಮಾಡುವುದಾಗಿ ಬೆದರಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : 7 ಬಾಲಕಿಯರ ಮೇಲೆ Sexual assault ; ಹೊಡೆದು ಕೊಂದ ಸ್ಥಳೀಯರು.!
ವಿದ್ಯಾರ್ಥಿನಿ ಜುಲೈ 1 ರಂದು ಕಾಲೇಜಿನ ಪ್ರಾಂಶುಪಾಲರಿಗೆ ಕಿರುಕುಳದ (Harassment) ವಿಷಯವಾಗಿ ದೂರು ಸಲ್ಲಿಸಿದ್ದರೂ, ಯಾವುದೇ ಶಿಸ್ತು ಕ್ರಮ ಕೈಗೊಳ್ಳಲಿಲ್ಲ. ಅವಳಿಗೆ “ಏಳು ದಿನಗಳಲ್ಲಿ ಕ್ರಮ” ಎಂದು ಹೇಳುತ್ತಿದ್ದರೂ, ವಿದ್ಯಾರ್ಥಿನಿಯ ದೂರಿಗೆ ಯಾವುದೇ ಪ್ರಗತಿ ಕಾಣದೆ ಇದ್ದದ್ದು ಆಕೆಯ ನಿರಾಶೆಗೆ ಕಾರಣವಾಗಿದೆ.
ಪ್ರತಿಬಂಧನೆಯ ಪ್ರಯತ್ನವೂ ವಿಫಲ :
ಇದರಿಂದ ಮನನೊಂದ ಸಂತ್ರಸ್ಥ ವಿದ್ಯಾರ್ಥಿನಿ, ಸ್ನೇಹಿತೆಯರೊಂದಿಗೆ ಪ್ರಾಂಶುಪಾಲರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದಾಳೆ. ಇಷ್ಟಾದರೂ ಸಹ ಯಾವುದೆ ಪ್ರತಿಕ್ರಿಯೆ ಇಲ್ಲದಿದ್ದ ಪರಿಣಾಮ ವಿದ್ಯಾರ್ಥಿನಿ ಪೆಟ್ರೋಲ್ ಸುರಿದುಕೊಂಡು ಸಾರ್ವಜನಿಕವಾಗಿ ಕಾಲೇಜಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನು ಓದಿ : KRCL-2025 : ಪಾಯಿಂಟ್ಸ್ ಮ್ಯಾನ್ & ಟ್ರ್ಯಾಕ್ ಮೇಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಬೆಂಕಿ ಹಚ್ಚಿಕೊಂಡ ವೇಳೆ ಸ್ಥಳದಲ್ಲಿದ್ದ ಸಹ ವಿದ್ಯಾರ್ಥಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಸಹ ಗಂಭೀರವಾದ ಸುಟ್ಟ ಗಾಯಗಳಿಂದ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ.
ಕಿರುಕುಳ (Harassment) ನೀಡಿದ ಆರೋಪಿತ ಶಿಕ್ಷಕನ ಬಂಧನ, ತನಿಖೆ ಆರಂಭ :
ಘಟನೆಯ ನಂತರ ಓಡಿಶಾ ರಾಜ್ಯದ ಉನ್ನತ ಶಿಕ್ಷಣ ಸಚಿವ ಸೂರ್ಯಬಂಶಿ ಸೂರಜ್, ಶಿಕ್ಷಕ ಸಮೀರ್ ಕುಮಾರ್ ಸಾಹು ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದು, ಆರೋಪಿತನನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಕರಣ ದಾಖಲಾಗಿ ನಂತರ ತನಿಖೆ ಮುಂದುವರೆದಿದೆ.
ರಾಜ್ಯದಲ್ಲಿ ಪ್ರತಿಭಟನೆ, ನ್ಯಾಯಕ್ಕಾಗಿ ಒತ್ತಾಯ :
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ವಿದ್ಯಾರ್ಥಿನಿಗೆ ನ್ಯಾಯ ಒದಗಿಸಬೇಕೆಂಬ ಒತ್ತಾಯಗಳು ರಾಜ್ಯದ ವಿವಿಧೆಡೆ ಕೇಳಿ ಬರುತ್ತಿವೆ. ಮಹಿಳಾ ಮತ್ತು ವಿದ್ಯಾರ್ಥಿ ಸಂಘಟನೆಗಳು ಆರೋಪಿಗೆ ತಕ್ಕ ಶಿಕ್ಷೆ ಆಗಬೇಕೆಂದು ಆಗ್ರಹಿಸುತ್ತಿವೆ.
ವಿಡಿಯೋ :
#ओडिशा के बालासोर जिले में स्थित एफएम कॉलेज में एक बेहद चौंकाने वाली घटना सामने आई है। यहां कॉलेज की एक छात्रा ने कथित रूप से एक प्राध्यापक द्वारा उत्पीड़न से तंग आकर कॉलेज परिसर के बाहर खुद को आग लगा ली। इस हैरान कर देने वाले सीसीटीवी वीडियो को देखकर किसी की भी रूह कांप जाएगी। pic.twitter.com/9YOvwkxSCV
— Ramdeep Mishra (@ramdeepmishra11) July 12, 2025
KRCL-2025 : ಪಾಯಿಂಟ್ಸ್ ಮ್ಯಾನ್ & ಟ್ರ್ಯಾಕ್ ಮೇಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಜನಸ್ಪಂದನ ನ್ಯೂಸ್, ನೌಕರಿ : ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (Konkan Railway Corporation Limited/ KRCL) 2025ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಪಾಯಿಂಟ್ಸ್ ಮ್ಯಾನ್ ಮತ್ತು ಟ್ರ್ಯಾಕ್ ಮೇಂಟೇನರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕಾತಿಯು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವನ್ನೂ ನೀಡುತ್ತದೆ.
ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!
KRCL ಹುದ್ದೆಗಳ ವಿವರ :
- ಒಟ್ಟು ಹುದ್ದೆಗಳ ಸಂಖ್ಯೆ : 79
- ಹುದ್ದೆಯ ಹೆಸರುಗಳು :
-
ಟ್ರ್ಯಾಕ್ ನಿರ್ವಹಣೆ (Track Maintainer) – 35 ಹುದ್ದೆಗಳು.
-
ಪಾಯಿಂಟ್ಸ್ ಮ್ಯಾನ್ (Pointsman) – 44 ಹುದ್ದೆಗಳು.
-
- ಉದ್ಯೋಗ ಸ್ಥಳ : ಮಹಾರಾಷ್ಟ್ರ, ಗೋವಾ, ಕರ್ನಾಟಕ.
- ಅಪ್ಲಿಕೇಶನ್ ಮೋಡ್ : ಆನ್‌ಲೈನ್ (Online).
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 13 ರ ದ್ವಾದಶ ರಾಶಿಗಳ ಫಲಾಫಲ.!
ವಯೋಮಿತಿ :
- ಕನಿಷ್ಟ ವಯಸ್ಸು: 18 ವರ್ಷ (ಅಧಿಸೂಚನೆಯ ಪ್ರಕಾರ).
- ಗರಿಷ್ಟ ವಯಸ್ಸು: 45 ವರ್ಷ (ಅಧಿಸೂಚನೆಯ ಪ್ರಕಾರ).
ವಯೋಮಿತಿ ಸಡಿಲಿಕೆ :
- ಮಾಜಿ ಸೈನಿಕ ಅಭ್ಯರ್ಥಿಗಳು : 3 ವರ್ಷ.
- SC/ST ಅಭ್ಯರ್ಥಿಗಳು : 5 ವರ್ಷ.
- ಮಾಜಿ ಸೈನಿಕ (SC/ST) ಅಭ್ಯರ್ಥಿಗಳು : 8 ವರ್ಷ.
ಶೈಕ್ಷಣಿಕ ಅರ್ಹತೆ :
- ಕನಿಷ್ಠ ವಿದ್ಯಾರ್ಹತೆ : 10ನೇ ತರಗತಿ ಪಾಸ್ / SSLC (ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ)
ಇದನ್ನು ಓದಿ : Heart Attack ಕ್ಕೆ 1 ಗಂಟೆ ಮೊದಲೇ ದೇಹ ಕೊಡುತ್ತೆ ಈ ಎಚ್ಚರಿಕೆ ಸಂಕೇತ : ಈ ಲಕ್ಷಣಗಳನ್ನು ಕಡೆಗಣಿಸಬೇಡಿ.!
ಆಯ್ಕೆ ವಿಧಾನ :
- ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತು ವಿವರಗಳು ಅಧಿಕೃತ KRCL ಅಧಿಸೂಚನೆಯಲ್ಲಿ ಲಭ್ಯವಿವೆ.
ಅರ್ಜಿ ಶುಲ್ಕ :
-
ರೂ.885/- (ಎಲ್ಲಾ ಅಭ್ಯರ್ಥಿಗಳಿಗೂ ಅನ್ವಯಿಸುತ್ತದೆ)
ವೇತನ ಶ್ರೇಣಿ :
- ಆಯ್ಕೆಯಾದ ಅಭ್ಯರ್ಥಿಗಳಿಗೆ KRCL ನಿಯಮಾನುಸಾರ ರೂ. 18,000/- ಪ್ರತಿ ತಿಂಗಳು ವೇತನ ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್ (KRCL Website) ಅಥವಾ ಲಿಂಕ್ (Link) ಗೆ ಭೇಟಿ ನೀಡಿ.
- ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
- ಆನ್‌ಲೈನ್ ಅರ್ಜಿ Form ನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
- ಫೋಟೋ ಹಾಗೂ ಸಹಿಯನ್ನು Upload ಮಾಡಿ.
- ಅರ್ಜಿ ಸಲ್ಲಿಸಿ ಮತ್ತು ಪ್ರತಿಯನ್ನು ಮುದ್ರಿಸಿ (Print) ಇಟ್ಟುಕೊಳ್ಳಿ.
ಇದನ್ನು ಓದಿ : 7 ಬಾಲಕಿಯರ ಮೇಲೆ Sexual assault ; ಹೊಡೆದು ಕೊಂದ ಸ್ಥಳೀಯರು.!
ಪ್ರಮುಖ ದಿನಾಂಕಗಳು :
- ಅರ್ಜಿಯ ಪ್ರಾರಂಭ ದಿನಾಂಕ : 23 ಜುಲೈ 2025.
- ಅರ್ಜಿಯ ಕೊನೆಯ ದಿನಾಂಕ : 12 ಆಗಸ್ಟ್ 2025.
ಪ್ರಮುಖ ಲಿಂಕ್‌ಗಳು :
- 🔗 ಅಧಿಕೃತ KRCL ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ
- 🔗 ಅರ್ಜಿಗೆ ಲಿಂಕ್ : ಇಲ್ಲಿ ಅರ್ಜಿ ಸಲ್ಲಿಸಿ
- 🌐 ಅಧಿಕೃತ ವೆಬ್‌ಸೈಟ್ : www.konkanrailway.com
📌 ಸೂಚನೆ : ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿಕೊಳ್ಳಬೇಕು.