ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯೋರ್ವಳು ರಿಯಾಯಿತಿ ಬಸ್ ಪಾಸ್ ಇಲ್ಲದೆ ಪ್ರಯಾಣಿಸುತ್ತಿದ್ದ ಹಿನ್ನಲೆಯಲ್ಲಿ ಬಸ್ಸಿನಿಂದ ಕೆಳಗಿಳಿಸಿದ್ದ ಹಿನ್ನಲೆಯಲ್ಲಿ ಬಸ್ಸಿನಲ್ಲಿಯೇ ಕಂಡಕ್ಟರ್ (Conductor) ನನ್ನು ಹಿಗ್ಗಾ-ಮುಗ್ಗಾ ತೀಳಿಸಿರು ಘಟನೆಯೊಂದು ನಡೆದಿದೆ.
ಕೇರಳದ ಕಣ್ಣೂರಿನಲ್ಲಿ ಈ ಘಟನೆ ಸಂಭವಿಸಿದ್ದು, ಬಸ್ಸಿನಲ್ಲಿ ಪ್ರಯಣಿಸುತ್ತಿದ್ದ ಪ್ರಯಾಣಿಕರಿಗೆ Conductor ಗೆ ಹೊಡೆದಿರುವ ಘಟನೆ ಶಾಕ್ ನೀಡಿದ್ದು, ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.
ಇದನ್ನು ಓದಿ :
ಬಸ್ಸಿನಲ್ಲಿ ಮಹಿಳೆಯೋರ್ವಳು ರಿಯಾಯಿತಿ ಬಸ್ ಪಾಸ್ ಇಲ್ಲದೆ ಪ್ರಯಾಣಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಮಹಿಳೆಯನ್ನು ಬಸ್ಸಿನಿಂದ ಕಂಡಕ್ಟರ್ (Conductor) ಕೆಳಗಿಳಿಸಿದ್ದಾರೆ. ಪರಿಣಾಮವಾಗಿ ಕಂಡಕ್ಟರ್‌ನ ಮೇಲೆ ಆಕೆಯ ಪತಿ ಮತ್ತು ಸ್ನೇಹಿತರು ಹಲ್ಲೆ ನಡೆಸಿದ್ದಾರೆ.
ಘಟನೆ ನಿನ್ನೆ ಸಂಜೆ 6:30ರ ಸುಮಾರಿಗೆ ಪೆರಿಂಗತ್ತೂರು ಬಳಿಯ ತಲಶ್ಶೇರಿ-ತೊಟ್ಟಿಲ್ ಪಾಲಂ ಮಾರ್ಗದಲ್ಲಿ ನಡೆದಿದೆ. ಕಣ್ಣೂರಿನಿಂದ ತಲಶ್ಶೇರಿ ಕಡೆಗೆ ಚಲಿಸುತ್ತಿದ್ದ ಜಗನ್ನಾಥ್ ಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಷ್ಣು ಎಂಬ ಕಂಡಕ್ಟರ್ (Conductor) ರಿಯಾಯಿತಿ ಪಾಸ್ ಇಲ್ಲದ ಕಾರಣ ಮಹಿಳೆಯೊಂದಿಗಿನ ವಾಗ್ವಾದದಲ್ಲಿ ತೊಡಗಿದ್ದರು. ಈ ವೇಳೆ ಮಹಿಳೆಯ ಫೋನ್ ಕೆಳಗೆ ಬಿದ್ದು ಜಖಂ ಆಗಿದ್ದದರಿಂದ, ನಂತರ ಆಕೆಯನ್ನು ಬಸ್ಸಿನಿಂದ ಕೆಳಗಿಳಿಸಿದ್ದಾರೆ.
ಇದನ್ನು ಓದಿ :
ಈ ವಿಷಯವನ್ನು ಮಹಿಳೆ ತನ್ನ ಪತಿಗೆ ತಿಳಿಸಿದ್ದಾರೆ. ಆಕ್ರೋಶಗೊಂಡ ಪತಿ ತನ್ನ ಸ್ನೇಹಿತರೊಂದಿಗೆ ಬಸ್ಸಿಗೆ ಹತ್ತಿ, ಸಾರ್ವಜನಿಕರ ಮುಂದೆಯೇ ಕಂಡಕ್ಟರ್‌ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ಬಸ್ಸಿನಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗಂಭೀರವಾಗಿ ಗಾಯಗೊಂಡ ಕಂಡಕ್ಟರ್ (Conductor) ವಿಷ್ಣುವನ್ನು ತಕ್ಷಣವೇ ತಲಶ್ಶೇರಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆಯ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಕಳವಳ ಮೂಡಿಸಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ಓದಿ :
ಕಂಡಕ್ಟರ್ (Conductor) ಮೇಲಿನ ಹಲ್ಲೆಯ ವಿಡಿಯೋ ಇಲ್ಲಿದೆ :
കണ്ണൂരില് സ്വകാര്യബസില് കണ്ടക്ടര്ക്ക് ക്രൂര മര്ദ്ദനം pic.twitter.com/BPeJBYUGaZ
— Samakalika Malayalam (@samakalikam) July 29, 2025
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
Married-woman : ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿ, ಬಳಿಕ ದೈಹಿಕ ಸಂಬಂಧ ; ಮದುವೆಗೆ ನಿರಾಕರಣೆ, ನದಿಗೆ ಹಾರಿದ ವಿವಾಹಿತೆ.!
ಜನಸ್ಪಂದನ ನ್ಯೂಸ್, ವಿಜಯನಗರ : ವಿವಾಹಿತೆ (married-woman) ಯೋರ್ವಳು ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಗೆಳೆಯನ ಪ್ರೀತಿ-ಪ್ರೇಮ ಅಂತ ಮೋಸ ಹೋಗಿ, ಕೊನೆಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ಹೌದು, ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕನ ಮೋಹಕ್ಕೆ ಒಳಗಾದ ವಿವಾಹಿತೆ (married-woman), ಸುಂದರ ಸಂಸಾರವಿದ್ದರೂ ಪ್ರಿಯಕರನೊಂದಿಗೆ ಲವ್ ಹೆಸರಿನಲ್ಲಿ ಸುತ್ತಾಡಿದ್ದಳು. ಅಲ್ಲದೇ ಮದುವೆಯ ಭರವಸೆ ನೀಡಿದ್ದ ಯುವಕ, ವಿವಾಹಿತ ಮಹಿಳೆಯೊಂದಿಗೆ ಸಾಕಷ್ಟು ಬಾರಿ ಲೈಂಗಿಕ ಕ್ರಿಯೆ ಕೂಡ ನಡೆಸಿದ್ದಾರೆ.
ಇದನ್ನು ಓದಿ : ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ambulance ನಲ್ಲಿ ಯುವತಿಯ ಮೇಲೆ ದೌರ್ಜನ್ಯ ; ಇಬ್ಬರ ಬಂಧನ.!
ಮಹಿಳೆ (married-woman) ಗೆ ಆದಷ್ಟು ಬೇಗ ಮದುವೆಯಾಗೋಣ ಎಂದು ಹೇಳಿದ್ದ, ಯಾವಾಗ ಆತ ಮದುವೆಗೆ ನಿರಾಕರಣೆ ಮಾಡಿದನೋ ಆಗ ಬೇರೆ ದಾರಿಕಾಣದೇ ಕೊನೆಗೆ ಮಹಿಳೆ (married-woman) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೇತುವೆಯ ಮೇಲಿನಿಂದ ನದಿಗೆ ಹಾರಿದ್ದನ್ನು ದಾರಿಹೋಕರು ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಮೀನುಗಾರರು ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ, ಆದರೆ ಮಹಿಳೆ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಮಹಿಳೆಯ ಶವವನ್ನು ನದಿಯಿಂದ ತೆಗೆದಿದ್ದಾರೆ.
ಇದನ್ನು ಓದಿ : RRB Recruitment : 6,238 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನ.!
ಈ ಘಟನೆ ಹಡಗಲಿ ತಾಲ್ಲೂಕಿನ ಮದಲಗಟ್ಟಿ ಗ್ರಾಮದಲ್ಲಿ ನಡೆದಿದ್ದು, ಆತ್ಮಹತ್ಯೆಗೆ ಶರಣಾದ ವಿವಾಹಿತೆ (married-woman) ಯನ್ನು ಎಂಬ 27 ವರ್ಷದ ಮಹಿಳೆ ಎಂದು ತಿಳಿದು ಬಂದಿದೆ. ಈ ವಿವಾಹಿತೆ ತುಂಗಭದ್ರಾ ನದಿಯ ಸೇತುವೆಯಿಂದ ಹಾರಿ ಜೀವ ಬಿಟ್ಟಿದ್ದಾರೆ. ಆಕೆಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ಸುಗೂರು ಮೂಲದ ಬಸವರಾಜ (ವಿನಯ್) ಎಂಬಾತನೇ ತನ್ನ ಸಾವಿಗೆ ಕಾರಣವೆಂದು ಮಹಿಳೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಪ್ರಾರಂಭವಾದ ಪ್ರೀತಿ :
ಇನ್ ಸ್ಟಾಗ್ರಾಂನಲ್ಲಿ ಯುವಕನೋರ್ವ ವಿವಾಹಿತ ಮಹಿಳೆಗೆ ಮೊದಲು ಮೆಸೇಜ್ ಮಾಡಿದ್ದ. ಹೀಗೆ ಮೆಸೇಜ್ ಮೂಲಕ ಪರಿಚಯವಾಗಿದ್ದ ಯುವಕ ಮಹಿಳೆ (married-woman) ಯ ಹಿಂದೆ ಬಿದ್ದಿದ್ದ. ಪ್ರೀತಿಯ ಹೆಸರಲ್ಲಿ ಮಹಿಳೆಗೆ ಸುಂದರ ಸಂಸಾರವಿದ್ದರೂ ಕೂಡ ಅವರನ್ನು ಪ್ರೀತಿಸುತ್ತಿದ್ದೆನೆಂದು ಭರವಸೆ ನೀಡಿದ್ದ. ಕಳೆದ 2024 ರ ಆಗಸ್ಟ್‌ನಿಂದ ಪ್ರೀತಿಯ ಆರಂಭವಾಗಿತ್ತು ಎನ್ನಲಾಗಿದೆ.
ಇದನ್ನು ಓದಿ : Plane AA3023 : ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ಬೆಂಕಿ : ವಿಡಿಯೋ.!
ದೋಖಾ ಮತ್ತು ಡೆತ್ ನೋಟ್ :
ಡೆತ್ ನೋಟ್ ಪ್ರಕಾರ, ಆತನಿಗೆ ನಂಬಿಕೆ ಇಟ್ಟುಕೊಂಡ ಮಹಿಳೆ, ಆತ ಮತ್ತೆ ಬೇರೆ ಹುಡುಗಿಯರೊಂದಿಗೆ ಸಂಪರ್ಕದಲ್ಲಿದ್ದ ವಿಷಯ ತಿಳಿದು ನಿರಾಸೆಗೊಂಡಿದ್ದರು. ಮಹಿಳೆ ಆತನ ಸಾಮಾಜಿಕ ಜಾಲತಾಣಗಳ ಖಾತೆಗಳನ್ನೇ ಹ್ಯಾಕ್ ಮಾಡಿ ದೃಢಪಡಿಸಿದ್ದರು. ಮದುವೆಗೆ ಯುವಕ ನಿರಾಕರಣೆ ನೀಡಿದ ಪರಿಣಾಮವಾಗಿ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
Married-woman ಡೆತ್ ನೋಟ್‌ನಲ್ಲಿರುವ ಪ್ರಮುಖ ವಿಷಯಗಳು :
– ಇಬ್ಬರೂ ಹಲವಾರು ಬಾರಿ ಲಾಡ್ಜ್‌ಗಳಿಗೆ ಭೇಟಿ ನೀಡಿದ ವಿಚಾರವನ್ನು ಅವರು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
– ಆತ ತನ್ನ ಪತಿಯನ್ನೂ ಸಾಯಿಸಿ ಆಕೆಯ ಹೆಸರಿನಲ್ಲಿ ಆಸ್ತಿಯನ್ನು ಪಡೆಯುವ ಯೋಜನೆ ಕೂಡ ಒತ್ತಿಸಿದ್ದೆಂದು ಆರೋಪಿಸಿದ್ದಾರೆ.
– ತಾವು ಮಾಡಿದ ರೆಕಾರ್ಡಿಂಗ್‌ಗಳು, ಫೋಟೋಗಳು, ಮೆಸೇಜ್‌ಗಳು ಮೊಬೈಲ್‌ನಲ್ಲಿ ಸಂಗ್ರಹವಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 29 ರ ದ್ವಾದಶ ರಾಶಿಗಳ ಫಲಾಫಲ.!
ಪೊಲೀಸರ ಕ್ರಮ :
ಪೊಲೀಸರು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಸಂಬಂಧಿತ ಡೆತ್ ನೋಟ್ ಹಾಗೂ ಮೊಬೈಲ್‌ನಲ್ಲಿ ಇದ್ದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.