ಜನಸ್ಪಂದನ ನ್ಯೂಸ್, ಬಾರಾಬಂಕಿ (ಉ.ಪ್ರ) : ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದ ಮದುವೆ (Wedding) ಯಲ್ಲಿ ಎಲ್ಲರನ್ನೂ ಬೆಚ್ಚಿಬೀಳಿಸುವಂತಹ ಘಟನೆಯೊಂದು ಸಂಭವಿಸಿದೆ.
ಮದುವೆಯ ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡ ಕೆಲವೇ ಗಂಟೆಗಳಲ್ಲಿ ವಧುವು ಇದ್ದಕ್ಕಿದ್ದಂತೆ ಮಂಟಪದಿಂದ ಪರಾರಿ ಆಗಿದ್ದು, ಈ ಹಿನ್ನಲೆಯಲ್ಲಿ ಆಕ್ರೋಶದಿಂದ ವರನ ಕುಟುಂಬವು ವಧುವಿನ ಮನೆಯರ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.
ಮೂರು ತಿಂಗಳ ಹಿಂದೆ ಪಲ್ಲವಿ ಮತ್ತು ಸುನಿಲ್ ಕುಮಾರ್ ಗೌತಮ್ ಅವರ ಮದುವೆ ನಿಶ್ಚಯವಾಗಿತ್ತು. ನವೆಂಬರ್ 18ರ ರಾತ್ರಿ, ವರನ ಕಡೆಯ ಸುಮಾರು 90 ಅತಿಥಿಗಳೊಂದಿಗೆ ದಿಬ್ಬಣ ಬಾರಾಬಂಕಿ ಮಂಗಳವಾರ (ನ.18) ತಲುಪಿತ್ತು.
ಇದನ್ನು ಓದಿ : Kiss ಕೊಡಲು ಮುಂದಾದ ಪ್ರಿಯಕರ ; ನಾಲಿಗೆಯನ್ನೇ ಕಚ್ಚಿ ಕತ್ತರಿಸಿದ ಪ್ರಿಯತಮೆ.
ಎಲ್ಲಾ ಧಾರ್ಮಿಕ ವಿಧಿಗಳು, ಹೂಮಾಲೆ ವಿನಿಮಯ ಮತ್ತು ಕನ್ಯಾದಾನ ಸೇರಿದಂತೆ ಸಂಪೂರ್ಣ ಸಂಭ್ರಮಾತ್ಮಕವಾಗಿ ತಡರಾತ್ರಿಯಲ್ಲಿ ವಿವಾಹ (Wedding) ವು ಶಾಸ್ತ್ರೋಕ್ತವಾಗಿ ನಡೆಯಿತು. ಈ ವೇಳೆ ವಧು – ವರ ವರ್ಮಾಲಾ ಸಮಾರಂಭದಲ್ಲಿ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ.
ಮಾರನೇ ದಿನ ಬುಧವಾರ ಮುಂಜಾನೆ ಆರತಕ್ಷತೆ (ವಿದಾಯ) ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭವಾಗುತ್ತಿದ್ದಂತೆಯೇ, ವಧು ಪಲ್ಲವಿ ತನ್ನ ಕೊಠಡಿಯಲ್ಲಿ ಕಾಣಿಸಿಕೊಳ್ಳದಿರುವುದು ಮನೆಯವರಿಗೆ ಕಂಡುಬಂದಿದೆ.
ಪ್ರಾರಂಭದಲ್ಲಿ ಸಮೀಪದಲ್ಲೇ ಇರುವಳೇನೋ ಎಂದು ಊಹಿಸಿದ ಕುಟುಂಬಸ್ಥರು, ಹಲವಾರು ಗಂಟೆಗಳ ಹುಡುಕಾಟ ನಡೆಸಿದರೂ, ಪಲ್ಲವಿ ಎಲ್ಲೂ ಪತ್ತೆಯಾಗಲಿಲ್ಲ. ಮಧ್ಯಾಹ್ನಕ್ಕೆ ವಧು ಪರಾರಿ ಆಗಿರುವುದು ಖಚಿತವಾಗಿ, ಪರಿಸ್ಥಿತಿ ಗಂಭೀರಗೊಂಡಿದೆ.
ಇದನ್ನು ಓದಿ : “ಪಾರ್ಕಿಂಗ್‌ನಲ್ಲಿ ನಿಂತ Car ಮೇಲೆ ಶಕ್ತಿ ಪ್ರದರ್ಶಿಸಿದ ನಾಯಿ ; ವೈರಲ್ ವಿಡಿಯೋ ನೋಡಿ!”
ವರನ ಕುಟುಂಬದವರು, ಪಲ್ಲವಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿರಬಹುದು ಎಂದು ಶಂಕಿಸಿದ್ದಾರೆ. ಮದುವೆ (Wedding) ಯಲ್ಲಿದ್ದ ಗದ್ದಲ ಮತ್ತು ಗದಲವನ್ನು ಬಳಸಿಕೊಂಡು, ಮದುವೆ (Wedding) ಯ ರಾತ್ರಿಯಲ್ಲೇ ಪರಾರಿಯಾಗಿರಬಹುದೆಂದು ಪೊಲೀಸರು ಪ್ರಾಥಮಿಕ ಮಾಹಿತಿ ಆಧಾರದಲ್ಲಿ ಶಂಕಿಸುತ್ತಿದ್ದಾರೆ.
ಇತ್ತ, ವಧುವಿಲ್ಲದೆ ಮದುವೆಯಾಗದೇ ಮರಳಬೇಕಾದ ವರನ ಕುಟುಂಬದವರು ಗೌರವ ಹಾನಿಯಾಗಿದೆ ಎಂದು ಆರೋಪಿಸಿ ವಧು ಕುಟುಂಬದ ವಿರುದ್ಧ ಅಧಿಕೃತ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ, ಪಲ್ಲವಿಯ ಮೊಬೈಲ್ ಫೋನ್ ಲೊಕೇಶನ್, ಸಿಸಿಟಿವಿ ದೃಶ್ಯಗಳು ಹಾಗೂ ಸಾಧ್ಯವಾದ ಸಂಚಾರ ಮಾರ್ಗಗಳನ್ನು ಪರಿಶೀಲಿಸುವ ಕಾರ್ಯ ಆರಂಭಿಸಿದ್ದಾರೆ. ಶೀಘ್ರದಲ್ಲೇ ಪತ್ತೆ ಕಾರ್ಯ ಪೂರ್ಣಗೊಳ್ಳಲಿದ್ದು, ವಧು ಪತ್ತೆಯಾದಂತೆ ಪೊಲೀಸ್ ಇಲಾಖೆ ಮಾಹಿತಿ ಹಂಚಿಕೊಳ್ಳಲಿದೆ ಎಂದು ತಿಳಿಸಿದೆ.
Disclaimer :
ಈ ಲೇಖನ ಸುದ್ದಿಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದ್ದು, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧದ ಆರೋಪಗಳನ್ನು ದೃಢಪಡಿಸುವ ಉದ್ದೇಶ ಹೊಂದಿಲ್ಲ. ಕಾನೂನು ವಿಚಾರಣೆ ಮತ್ತು ತನಿಖೆಯ ಅಂತಿಮ ಫಲಿತಾಂಶಕ್ಕೆ ಗೌರವ ಸೂಚಿಸಲಾಗುತ್ತದೆ.
ಪತಿಯ ಎರಡನೇ Marriage ವೇಳೆ ಮೊದಲ ಪತ್ನಿ ಎಂಟ್ರಿ; ಮುಂದೆನಾಯ್ತು ವಿಡಿಯೋ ನೋಡಿ.

ಜನಸ್ಪಂದನ ನ್ಯೂಸ್, ಬಸ್ತಿ (ಉತ್ತರ ಪ್ರದೇಶ) : ಬಸ್ತಿ ಜಿಲ್ಲೆಯ ಪೈಕೌಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಪಿರೈಲಾ ಗ್ರಾಮದಲ್ಲಿ, ವ್ಯಕ್ತಿಯೋರ್ವ ಎರಡನೇ ಮದುವೆ (Marriage) ಮಾಡಿಕೊಳ್ಳಲು ಹೊರಟ ವೇಳೆ ಮೊದಲ ಪತ್ನಿ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾಳೆ.
ಹೀಗೆ ಪೊಲೀಸ್ ಜತೆಗೆ ಮೊದಲ ಪತ್ನಿ (Marriage) ಮಂಟಪಕ್ಕೆ ಎಂಟ್ರಿ ನೀಡುತ್ತಿರುವ ಈ ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ದೈನಿಕ್ ಭಾಸ್ಕರ್‌ನಲ್ಲಿ ವರದಿಯಾಗಿದೆ.
ವಿನಯ್ ಅಂಗದ್ ಶರ್ಮಾ ಪೈಕೌಲಿಯಾ ಗ್ರಾಮದ ಯುವತಿಯೊಂದಿಗೆ ಮದುವೆ (Marriage) ಯಾಗಲು ಮುಂದಾಗಿದ್ದಾಗ, ಮೊದಲ ಪತ್ನಿ ರೇಷ್ಮಾ ಪೊಲೀಸರಿಗೆ ಜೊತೆಯಾಗಿಯೇ ಮಂಟಪಕ್ಕೆ ಬಂದಿದ್ದಾಳೆ. ನ.17ರ ರಾತ್ರಿ 11.30ರ ವೇಳೆಗೆ ಮದುವೆ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ಮೊದಲ ಪತ್ನಿಯ ಆಗಮನದಿಂದ ಹೈಡ್ರಾಮಾ ನಡೆದಿದೆ.
ಇದನ್ನು ಓದಿ : ಕರ್ನಾಟಕದ ಈ 4 Railway ನಿಲ್ದಾಣಗಳಿಗೆ ಹೊಸ ಹೆಸರು ; ನಿಮ್ಮ ನಿಲ್ದಾಣದ ಹೆಸರೇನು?
ಮೊದಲ ಪತ್ನಿ ಜೀವಂತ ಇರುವಾಗಲೇ ಇನ್ನೊಂದು ಮದುವೆ (Marriage) ಯಾಕೆ ಮಾಡಿಕೊಳ್ಳುತ್ತಿರುವೆ ಎಂದು ಕೇಳಿದ್ದಾರೆ.
ರೇಷ್ಮಾ, ತನ್ನ ಹಿನ್ನಲೆ ಹಿಸ್ಟರಿಯನ್ನು ಪ್ರಸ್ತಾಪಿಸಿ, “ನಾನು ಜೀವಂತ ಇರುವಾಗ ಮತ್ತೊಬ್ಬರೊಂದಿಗೆ ಮದುವೆ (Marriage) ಮಾಡುವುದು ಹೇಗೆ ಸಾಧ್ಯ? ನನ್ನ ಬಳಿ ಇದಕ್ಕೆ ಬೇಕಾದ ಕಾನೂನು ಪುರಾವೆ ಇದೆ ಎಂದು ವಿನಯ್ ಶರ್ಮಾ ನನ್ನು ಪ್ರಶ್ನಿಸಿದ್ದಾಳೆ.
ವೈರಲ್ ವಿಡಿಯೋದಲ್ಲಿ ಮಂಟಪದಲ್ಲಿ ನಡೆದ ಈ ಘರ್ಷಣೆಯನ್ನು ಸ್ಪಷ್ಟವಾಗಿ ನೋಡಬಹುದು. ರೇಷ್ಮಾ ತನ್ನ ಫೋಟೋಗಳು ಮತ್ತು ಮದುವೆ ನೋಂದಣಿ ದಾಖಲೆಗಳನ್ನು ಪ್ರದರ್ಶಿಸಿ, “ನಾನು ಈ ವ್ಯಕ್ತಿಯೊಂದಿಗೆ ಮದುವೆಯಾಗಿದ್ದೆ, ನಮಗೆ ವಿಚ್ಛೇದನ ಕೂಡ ಆಗಿಲ್ಲ. ಇನ್ನು ನಾನು ಪತಿಗೆ ಬೇರೆ ಮದುವೆಗೆ ಒಪ್ಪಿಗೆ ಕೂಡ ನೀಡಿಲ್ಲ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ, ವಿನಯ್‌ನೊಂದಿಗೆ ಮದುವೆಯಾಗಲು ಹೊರಟ ವಧು ಮಂಟಪದಿಂದ ಎದ್ದು ಕೋಣೆಗೆ ಹೋಗಿದ್ದಾಳೆ. ಈ ವೇಳೆ ವಧುವಿನ ಮನೆಯವರು ಅವಳನ್ನು ಸಮಾಧಾನಪಡಿಸಿ, ಮದುವೆಯನ್ನು ರದ್ದುಗೊಳಿಸಿದ್ದಾರೆ.
ಇದನ್ನು ಓದಿ : “ನೀವು Night ಲೈಟ್ ಆನ್ ಇಟ್ಟು ಮಲಗ್ತೀರಾ? ಹಾಗಾದ್ರೆ ಈ ಸುದ್ದಿ ಓದಿ.”
ಹಿನ್ನೆಲೆ :
ರೇಷ್ಮಾ ಮತ್ತು ವಿನಯ್ ನಡುವೆ ಸುಮಾರು ಒಂಬತ್ತು ವರ್ಷಗಳ ಸಂಬಂಧವಿತ್ತು ಎಂದು ರೇಷ್ಮಾ ಹೇಳಿರುವುದಾಗಿ ದೈನಿಕ್ ಭಾಸ್ಕರ್ ವರದಿ ಮಾಡಿದೆ. ಇಬ್ಬರೂ 30 ಮಾರ್ಚ್ 2022 ರಂದು ನ್ಯಾಯಾಲಯದಲ್ಲಿ ವಿವಾಹ (Marriage) ವಾಗಿದೆ. ನಂತರ 8 ಡಿಸೆಂಬರ್ 2022 ರಂದು ಕುಟುಂಬದ ಸದಸ್ಯರ ಮುಂದೆ ಮದುವೆ ಆಚರಿಸಲಾಗಿದೆ.
ಎರಡು ವರ್ಷದ ನಂತರ ಇಬ್ಬರೂ ವಿಚ್ಛೇದನ ಅರ್ಜಿ ಹಾಕಿರುವಾಗ, ವಿನಯ್ ಎರಡನೇ ಮದುವೆಗೆ ಮುಂದಾಗಿದ್ದಾನೆ. ರೇಷ್ಮಾ ಆಭರಣಗಳೊಂದಿಗೆ ಓಡಿಹೋಗಿರುವುದಾಗಿ ಆರೋಪಿಸಿ ಕಾನೂನು ನೋಟಿಸ್ ವಿನಯ್ ಕಳಿಸಿದ್ದಾನೆ. ಪ್ರಕರಣದ ವಿಚಾರಣೆ ಕುರಿತು ಈಗ ಪೊಲೀಸ್ ಮಧ್ಯಸ್ಥತೆ ನಡೆದಿದೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ತನಿಖೆ ಮಾಡುತ್ತಿದ್ದು, ಇದೀಗ ಪೊಲೀಸರು ಮಧ್ಯಪ್ರವೇಶಿಸಿ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ವಿಡಿಯೋ :
View this post on Instagram
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







