Tuesday, October 14, 2025

Janaspandhan News

HomeHealth & FitnessBrain Stroke : ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ; ಸಮಯಕ್ಕೆ ಚಿಕಿತ್ಸೆಯಿಂದ ಜೀವ ಉಳಿಸಬಹುದು.!
spot_img
spot_img
spot_img

Brain Stroke : ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ ; ಸಮಯಕ್ಕೆ ಚಿಕಿತ್ಸೆಯಿಂದ ಜೀವ ಉಳಿಸಬಹುದು.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಮೆದುಳಿನ ಪಾರ್ಶ್ವವಾಯು (Brain Stroke) ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಗಂಭೀರ ಆರೋಗ್ಯ ತೊಂದರೆಗಳಲ್ಲಿ ಒಂದಾಗಿದೆ. ಮೆದುಳಿಗೆ ರಕ್ತ ಪೂರೈಕೆ ಹಠಾತ್ ನಿಲ್ಲುವಾಗ ಈ ಸ್ಥಿತಿ ಉಂಟಾಗುತ್ತದೆ. ರಕ್ತ ಪ್ರವಾಹ ಕಡಿಮೆಯಾದಾಗ ಅಥವಾ ಸಂಪೂರ್ಣ ನಿಂತಾಗ ಮೆದುಳಿನ ಜೀವಕೋಶಗಳು ಹಾನಿಗೊಳಗಾಗುತ್ತವೆ.

ಈ ಹಾನಿ ಕೆಲವೇ ನಿಮಿಷಗಳಲ್ಲಿ ಪ್ರಾರಂಭವಾಗಬಹುದು. ಆದ್ದರಿಂದ ಪಾರ್ಶ್ವವಾಯು ಬಂದಾಗ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅತ್ಯಂತ ಮುಖ್ಯ.

ವೈದ್ಯರ ಪ್ರಕಾರ, ಅನೇಕ ಜನರು ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಇವುಗಳನ್ನು ತಕ್ಷಣ ಗುರುತಿಸುವುದರಿಂದ ಜೀವ ಉಳಿಸಲು ಸಾಧ್ಯವಾಗುತ್ತದೆ.

ಪಾರ್ಶ್ವವಾಯು (Brain Stroke) ವಿನ ಪ್ರಮುಖ ಆರಂಭಿಕ ಲಕ್ಷಣಗಳು :
  1. ಮುಖದ ಜೋಲು ಬೀಳುವಿಕೆ :
    ಮುಖದ ಒಂದು ಬದಿ ಕುಸಿಯುವುದು, ನಗಲು ಪ್ರಯತ್ನಿಸಿದಾಗ ನಗು ಸರಿಯಾಗಿಲ್ಲದಂತೆ ಕಾಣುವುದು.
  2. ತೋಳು ಮತ್ತು ಕಾಲುಗಳಲ್ಲಿ ದುರ್ಬಲತೆ :
    ದೇಹದ ಒಂದು ಬದಿಯಲ್ಲಿ ತೋಳು ಅಥವಾ ಕಾಲು ಹಠಾತ್ ದುರ್ಬಲಗೊಳ್ಳುವುದು, ಮರಗಟ್ಟುವಿಕೆ ಕಾಣುವುದು.
  3. ದೃಷ್ಟಿ ಸಮಸ್ಯೆಗಳು :
    ಹಠಾತ್ ದೃಷ್ಟಿ ಮಂದವಾಗುವುದು, ಒಂದು ಕಣ್ಣಿನಲ್ಲಿ ದೃಷ್ಟಿ ಕಳೆದುಕೊಳ್ಳುವುದು ಅಥವಾ ಎರಡು ದೃಶ್ಯ ಕಾಣುವುದು.
  4. ತಲೆತಿರುಗುವಿಕೆ ಮತ್ತು ಅಸ್ಥಿರತೆ :
    ಯಾವುದೇ ಕಾರಣವಿಲ್ಲದೆ ತಲೆ ಸುತ್ತುವುದು, ನಡೆಯಲು ತೊಂದರೆ, ನಿಲ್ಲುವಲ್ಲಿ ಅಸಮರ್ಥತೆ.
ಲಕ್ಷಣಗಳನ್ನು ಗುರುತಿಸಲು F.A.S.T ವಿಧಾನ :

ಪಾರ್ಶ್ವವಾಯುವಿನ (Brain Stroke) ಲಕ್ಷಣಗಳನ್ನು ತ್ವರಿತವಾಗಿ ಗುರುತಿಸಲು ವೈದ್ಯರು F.A.S.T (Face, Arm, Speech, Time) ವಿಧಾನವನ್ನು ಶಿಫಾರಸು ಮಾಡುತ್ತಾರೆ :

  • F (Face – ಮುಖ) : ವ್ಯಕ್ತಿಗೆ ನಗಲು ಹೇಳಿ. ಒಂದು ಬದಿ ಕುಸಿದಿದ್ದರೆ ಪಾರ್ಶ್ವವಾಯು ಸೂಚನೆ.
  • A (Arm – ತೋಳು) : ಎರಡೂ ತೋಳುಗಳನ್ನು ಮೇಲಕ್ಕೆತ್ತಲು ಹೇಳಿ. ಒಂದು ತೋಳು ಕೆಳಗೆ ಬಿದ್ದರೆ ಅಪಾಯ.
  • S (Speech – ಮಾತು) : ಮಾತು ಅಸ್ಪಷ್ಟವಾಗಿದ್ದರೆ ಅಥವಾ ಅರ್ಥವಾಗದಿದ್ದರೆ ಎಚ್ಚರಿಕೆ.
  • T (Time – ಸಮಯ) : ತಕ್ಷಣ ಆಸ್ಪತ್ರೆಗೆ ತೆರಳಬೇಕು. ಪ್ರತಿಯೊಂದು ನಿಮಿಷವೂ ಅಮೂಲ್ಯ.
ಪಾರ್ಶ್ವವಾಯು (Brain Stroke) ತಡೆಗಟ್ಟುವ ಮಾರ್ಗಗಳು :

ಪಾರ್ಶ್ವವಾಯುವನ್ನು ಸಂಪೂರ್ಣ ತಡೆಯಲು ಸಾಧ್ಯವಿಲ್ಲದಿದ್ದರೂ, ಕೆಲವು ಉತ್ತಮ ಜೀವನಶೈಲಿ ಬದಲಾವಣೆಗಳ ಮೂಲಕ ಅಪಾಯವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು:

  • ರಕ್ತದೊತ್ತಡ ಮತ್ತು ಸಕ್ಕರೆ ನಿಯಂತ್ರಣ :
    ನಿಯಮಿತ ಪರೀಕ್ಷೆ ಮಾಡಿ, ಅಗತ್ಯವಿದ್ದರೆ ಔಷಧ ಸೇವಿಸಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.
  • ಧೂಮಪಾನ ಮತ್ತು ಮದ್ಯಪಾನ ತ್ಯಾಗ :
    ಇವು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುವುದರಿಂದ ಸಂಪೂರ್ಣ ನಿಲ್ಲಿಸುವುದು ಉತ್ತಮ.
  • ಆರೋಗ್ಯಕರ ಆಹಾರ ಪದ್ಧತಿ :
    ತಾಜಾ ಹಣ್ಣು-ತರಕಾರಿ, ಸಂಪೂರ್ಣ ಧಾನ್ಯಗಳು, ಕಡಿಮೆ ಕೊಬ್ಬಿನ ಆಹಾರ ಸೇವಿಸುವುದು ಉತ್ತಮ.
  • ನಿಯಮಿತ ವ್ಯಾಯಾಮ :
    ದಿನನಿತ್ಯ ಕನಿಷ್ಠ 30 ನಿಮಿಷ ನಡೆಯುವುದು ಅಥವಾ ಸರಳ ವ್ಯಾಯಾಮ ಮಾಡುವುದರಿಂದ ಹೃದಯ ಆರೋಗ್ಯ ಉತ್ತಮವಾಗುತ್ತದೆ.
  • ಸರಿಯಾದ ನಿದ್ರೆ :
    ದಿನಕ್ಕೆ 6-8 ಗಂಟೆಗಳ ಸಮರ್ಪಕ ನಿದ್ರೆ ಪಡೆಯುವುದು ಮುಖ್ಯ.
  • ವೈದ್ಯಕೀಯ ತಪಾಸಣೆಗಳು :
    ಹೃದಯ, ಕೊಲೆಸ್ಟ್ರಾಲ್ ಹಾಗೂ ರಕ್ತದೊತ್ತಡ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಬೇಕು.
ವೈದ್ಯರ ಸಲಹೆ :

ವೈದ್ಯರ ಪ್ರಕಾರ, ಪಾರ್ಶ್ವವಾಯು (Brain Stroke) ಬಂದ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸಿದರೆ ಬದುಕುಳಿಯುವ ಮತ್ತು ಶೇ.100 ರಷ್ಟು ಗುಣಮುಖವಾಗುವ ಸಾಧ್ಯತೆ ಹೆಚ್ಚುತ್ತದೆ. ಚಿಕಿತ್ಸೆ ವಿಳಂಬವಾದರೆ ಮೆದುಳಿನ ಹಾನಿ ಹೆಚ್ಚಾಗಿ, ದೀರ್ಘಕಾಲದ ಪಾರ್ಶ್ವವಾಯು ಅಥವಾ ಜೀವಾಪಾಯ ಸಂಭವಿಸಬಹುದು.

ಸಮಾರೋಪ :

ಮಿದುಳಿನ ಪಾರ್ಶ್ವವಾಯು (Brain Stroke) ಯಾವಾಗ ಬೇಕಾದರೂ, ಯಾರಿಗಾದರೂ ಬರಬಹುದು. ಆದ್ದರಿಂದ ಅದರ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಜೀವ ಉಳಿಸುವ ಪ್ರಮುಖ ಮಾರ್ಗವಾಗಿದೆ. ನೆನಪಿಡಿ – ಸಮಯವೇ ಜೀವ.


Meal : ರೆಸ್ಟೋರೆಂಟ್‌ನಲ್ಲಿ ಊಟಕ್ಕೆ ಕುಳಿತ ಕ್ಷಣವೇ ಹೃದಯಾಘಾತ ; ವ್ಯಕ್ತಿ ಸಾವನ್ನಪ್ಪಿದ ದೃಶ್ಯ ವೈರಲ್.!

Meal

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದಕ್ಕೆ ಸಾಕ್ಷಿಯಾಗುವಂತೆ, ಮಧ್ಯಪ್ರದೇಶದ ಇಂದೋರ್ ನಗರದಲ್ಲಿರುವ ರೆಸ್ಟೋರೆಂಟ್‌ ಒಂದರಲ್ಲಿ ಊಟಕ್ಕೆ (Meal) ಕುಳಿತ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ನಡೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕರು ಆಘಾತಕ್ಕೊಳಗಾಗಿದ್ದಾರೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ರೆಸ್ಟೋರೆಂಟ್‌ನಲ್ಲಿ ಜನರು ಸಾಮಾನ್ಯವಾಗಿ ಊಟ (Meal) ಮಾಡುತ್ತಿದ್ದರು. ಅಷ್ಟರಲ್ಲೇ, ಕನ್ನಡಕ ಧರಿಸಿದ್ದ ವ್ಯಕ್ತಿಯೊಬ್ಬರು ತಮ್ಮ ಕುರ್ಚಿಯಲ್ಲಿ ಕುಳಿತು ಫೋನ್ ನೋಡುತ್ತಾ ಇದ್ದರು.

Heart Attack ಬರುವ ಮುನ್ನ ಕಾಣಿಸುವ 7 ಪ್ರಮುಖ ಎಚ್ಚರಿಕೆ ಲಕ್ಷಣಗಳು.!

ಕೆಲವೇ ಕ್ಷಣಗಳಲ್ಲಿ ಅವರು ತೀವ್ರ ಅಸ್ವಸ್ಥತೆಯಿಂದ ಎದೆ ಹಿಡಿದುಊಟ (Meal) ದ ಮೇಜಿನ ಮೇಲೆ ಬಿದ್ದು ಬಿಟ್ಟಿದ್ದಾರೆ. ಕುಟುಂಬ ಸದಸ್ಯರು ಹಾಗೂ ಹತ್ತಿರ ಕುಳಿತವರು ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳದೆ ಪ್ರಜ್ಞಾಹೀನಗೊಂಡಿದ್ದರು. ಬಳಿಕ ಅವರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಹಲವರು ಈ ರೀತಿಯ ಹಠಾತ್ ಸಾವುಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

LIC : 5 ವರ್ಷ ಹೂಡಿದ್ರೆ ಸಾಕು, ಜೀವನಪರ್ಯಂತ ತಿಂಗಳಿಗೆ 15 ಸಾವಿರ ರೂ. ಲಭ್ಯ.

ಕೆಲವು ಬಳಕೆದಾರರು, “ಇತ್ತೀಚೆಗೆ ಹೃದಯಾಘಾತದಿಂದ ಹಠಾತ್ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಿಜವಾದ ಕಾರಣ ಪತ್ತೆಹಚ್ಚಲು ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವೈದ್ಯರ ಪ್ರಕಾರ, ಅನಿಯಮಿತ ಜೀವನಶೈಲಿ, ಒತ್ತಡ, ಒಳ್ಳೆಯ ಊಟ (Meal)ದ ಬದಲಾಗಿ ಅತಿಯಾದ ಫಾಸ್ಟ್ ಫುಡ್ ಸೇವನೆ ಹಾಗೂ ವ್ಯಾಯಾಮದ ಕೊರತೆ ಹೃದಯಾಘಾತಕ್ಕೆ ಪ್ರಮುಖ ಕಾರಣಗಳಾಗಬಹುದು. ತೀವ್ರ ಎದೆನೋವು, ಉಸಿರಾಟದ ತೊಂದರೆ, ಬೆವರು ಇವು ಹೃದಯಾಘಾತದ ಆರಂಭಿಕ ಎಚ್ಚರಿಕೆ ಲಕ್ಷಣಗಳಾಗಿದ್ದು, ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಜೀವ ಉಳಿಸಲು ಸಹಾಯಕ.

ಗರ್ಭಪಾತ Pill ಸೇವಿಸಿದ ನಂತರ ಅಪ್ರಾಪ್ತೆಯ ಸಾವು ; ಟ್ಯೂಷನ್ ಶಿಕ್ಷಕನ ಬಂಧನ.!
ಊಟಕ್ಕೆ (Meal) ಕುಳಿತ ವ್ಯಕ್ತಿಯ ಹೃದಯಾಘಾತದ ವಿಡಿಯೋ :

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments